ಮೂತ್ರದ ಬಣ್ಣದಲ್ಲಿದೆ ಆರೋಗ್ಯದ ಗುಟ್ಟು

By Suvarna News  |  First Published Nov 7, 2018, 11:11 AM IST

ಮನುಷ್ಯನ ಆರೋಗ್ಯದ ಸ್ಥಿತಿಯನ್ನು ಮಲ, ಮೂತ್ರಗಳ ಮೂಲಕ ಸುಲಭವಾಗಿ ಕಂಡು ಕೊಳ್ಳಬಹುದು. ಅದರಲ್ಲಿಯೂ ಮೂತ್ರದಿಂದ ಅನಾರೋಗ್ಯದ ಹಲವು ಸೂಚನೆಗಳನ್ನು ಪತ್ತೆ ಹಚ್ಚಬಹುದು? ಹೇಗೆ?
 


ಮನುಷ್ಯನ ಆರೋಗ್ಯದ ಸ್ಥಿತಿಯನ್ನು ಮಲ, ಮೂತ್ರಗಳ ಮೂಲಕ ಸುಲಭವಾಗಿ ಕಂಡು ಕೊಳ್ಳಬಹುದು. ಅದರಲ್ಲಿಯೂ ಮೂತ್ರದಿಂದ ಅನಾರೋಗ್ಯದ ಹಲವು ಸೂಚನೆಗಳನ್ನು ಪತ್ತೆ ಹಚ್ಚಬಹುದು? ಹೇಗೆ?

ಮೂತ್ರ ಮಾಡುವಾಗ ಪೇಲವ ಹಳದಿ ಬಣ್ಣದಲ್ಲಿದ್ದರೆ ಓಕೆ. ಅದು ಬಿಟ್ಟು ಬೇರೆ ಬಣ್ಣವಿದ್ದರೆ ಎಚ್ಚೆತ್ತುಕೊಳ್ಳುವುದು ಸೂಕ್ತ. ಮೂತ್ರದ ಬಣ್ಣ ಬದಲಾದಾಗ ನಿರ್ಲಕ್ಷ್ಯ ಸಲ್ಲದು. ಇದು ಜೀವಕ್ಕೇ ಕುತ್ತುತರೋ ಸಾಧ್ಯತೆ ಇರುತ್ತದೆ.

Tap to resize

Latest Videos

ನೀರಿನ ಬಣ್ಣ: ಮೂತ್ರ ವಿಸರ್ಜನೆ ಮಾಡುವಾಗ ಯಾವುದೇ ಬಣ್ಣ ಇಲ್ಲದೆ ಇದ್ದರೆ ನೀವು ಹೆಚ್ಚಿನ ಪ್ರಮಾಣದ ನೀರು ಕುಡಿಯುತ್ತೀರೆಂದರ್ಥ. ತುಸು ಕಡಿಮೆ ನೀರು ಕುಡಿದರೂ ಓಕೆ. 

ಮೂತ್ರ ಬಂದರೆ ತಡ್ಕೋಬಾರದದು, ಜೀವಕ್ಕೂ ಅಪಾಯವಾಗಬಹುದು

ತಿಳಿ ಹಳದಿ: ಈ ಬಣ್ಣದಲ್ಲಿದ್ದರೆ ಅದು ನಾರ್ಮಲ್. ಆರೋಗ್ಯಯುತವಾಗಿರುವ ಲಕ್ಷಣ. 

ಡಾರ್ಕ್ ಹಳದಿ: ನಾರ್ಮಲ್. ಆದರೆ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಹೆಚ್ಚು ನೀರು ಕುಡಿಯಬೇಕು. 

ಜೇನಿನ ಬಣ್ಣ: ದೇಹಕ್ಕೆ ಬೇಕಾದಷ್ಟು ನೀರು ಸಿಗುತ್ತಿಲ್ಲ. ಆದುದರಿಂದ ಹೆಚ್ಚು ನೀರು ಕುಡಿಯಿರಿ. 

ನಸು ಕಂದು ಬಣ್ಣ : ಲಿವರ್ ಸಮಸ್ಯೆ ಇರುವ ಸಾಧ್ಯತೆ ಇದೆ. ತುಂಬಾ ಕಡಿಮೆ ಪ್ರಮಾಣದಲ್ಲಿ ನೀರಿನ ಸೇವನೆ ಮಾಡುತ್ತಿದ್ದೀರಿ ಎಂದು ಅರ್ಥ. ವೈದ್ಯರನ್ನು ತಕ್ಷಣ ಕಾಣುವುದು ಉತ್ತಮ. 

ಮೂತ್ರಕೋಶದ ಸೋಂಕು ತರುತ್ತೆ ಈ ಬ್ಯಾಕ್ಟೀರಿಯಾ

ಗುಲಾಬಿ ಬಣ್ಣ :  ಬೀಟ್ ರೂಟ್, ಬ್ಲೂ ಬೆರ್ರಿ ತಿಂದರೆ ಈ ರೀತಿ ಬಣ್ಣಗಳಲ್ಲಿ ಮೂತ್ರ ವಿಸರ್ಜನೆ ಆಗುವುದು ಸಾಮಾನ್ಯ. ಅದನ್ನು ತಿನ್ನದೇ ಇದ್ದರೆ ಮೂತ್ರದಲ್ಲಿ ರಕ್ತ ಹೋಗುತ್ತಿದೆ ಎಂದರ್ಥ. ಇದು ಕೆಲವೊಮ್ಮೆ ಕಿಡ್ನಿ ಸಮಸ್ಯೆ, ಮೂತ್ರ ನಾಳದ ಸೋಂಕು, ಟ್ಯೂಮರ್ ಲಕ್ಷಣ ಕೂಡ ಆಗಿರುವ ಸಾಧ್ಯತೆ ಇದೆ. 

ಕೇಸರಿ ಬಣ್ಣ: ಸರಿಯಾಗಿ ನೀರು ಕುಡಿಯದೆ ಇದ್ದರೆ ಅಥವಾ ಕಿಡ್ನಿ ಸಮಸ್ಯೆ ಇದ್ದರೆ ಹೀಗೆ ಆಗುತ್ತದೆ. 

ನೀಲಿ ಅಥವಾ ಹಸಿರು: ಅನುವಂಶೀಯ ಸಮಸ್ಯೆಯಿಂದಾಗಿ ಮೂತ್ರ ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. ಅಥವಾ ಮೂತ್ರ ನಾಳದಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇದ್ದರೂ  ಸಮಸ್ಯೆ ಕಾಡುತ್ತದೆ .  

click me!