ಸೆಕೆಂಡ್‌ ಹ್ಯಾಂಡ್‌ ಡ್ರಿಂಕಿಂಗ್‌ ಎಷ್ಟು ಅಪಾಯ ನಿಮಗೆ ಗೊತ್ತಾ?

By Suvarna News  |  First Published Feb 1, 2020, 2:34 PM IST

ಸೆಕೆಂಡ್‌ ಹ್ಯಾಂಡ್‌ ಡ್ರಿಂಕಿಂಗ್‌ ಅಂದರೇನು ಅಂತ ನಿಮಗೆ ಈಗಾಗಲೇ ಗೊತ್ತಾಗಿರಬಹುದು ಅಲ್ಲವೇ. ಸ್ಮೋಕಿಂಗ್ ಮಾಡುವವರ ಹತ್ತಿರ ಇರುವವರು ಸ್ಮೋಕರ್‌ಗಳು ಸೇವಿಸಿ ಬಿಟ್ಟ ಹೊಗೆಯನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಇದು ಸ್ಮೋಕಿಂಗ್‌ಗಿಂತಲೂ ಹೆಚ್ಚು ಹಾಳು. ಹಾಗೆಯೇ ಆಲ್ಕೋಹಾಲ್‌ ಅತಿಯಾಗಿ ಸೇವಿಸಿ, ಅದರ ಪರಿಣಾಮದಿಂದ ಹುಚ್ಚುಚ್ಚಾಗಿ ಆಡುವವರು ತಮ್ಮ ಕುಟುಂಬಸ್ಥರ, ಮನೆಯವರ ಆರೋಗ್ಯದ ಹಾನಿಗೆ ಕಾರಣ ಆಗುತ್ತಾರೆ.


ನಿತಿನ್‌ನ ತಂದೆ ರಾತ್ರಿ ಯಾವಾಗಲೂ ಕುಡಿದು ಬರುತ್ತಾರೆ. ಸಣ್ಣ ಪುಟ್ಟ ಕಾರಣಗಳಿಗೆ ಆತನ ಮೇಲೂ, ಆತನ ತಾಯಿಯ ಮೇಲೂ ರೇಗಾಡುತ್ತಾರೆ. ಹೋಂವರ್ಕ್‌ ಮಾಡಿಲ್ಲ ಅಂತ ಅಟ್ಟಿಸಿಕೊಂಡು ಬಂದು ಕೈಗೆ ಸಿಕ್ಕಿದ್ದರಲ್ಲಿ ಬಾರಿಸುತ್ತಾರೆ. ಕೆಲವೊಮ್ಮೆ ಆತನ ತಾಯಿ ಕೂಡ ಅವರ ಸಿಟ್ಟಿಗೆ ಬಲಿಯಾದದ್ದೂ ಇದೆ. ಇದರಿಂದ ರೋಸಿ ಹೋದ ತಾಯಿ ಯಾವಾಗಲೂ ಕಣ್ಣೀರು ಸುರಿಸುತ್ತಾ ಡೈವೋರ್ಸ್ ಮಾಡ್ಕೋತೀನಿ ಅಂತಾರೆ. ಆದರೆ ನಿತಿನ್‌ನ ಮುಖ ನೋಡಿ ಸುಮ್ಮನಾಗುತ್ತಾರೆ.

ಇಲ್ಲಿ ನಿತಿನ್ ತಂದೆ ಡ್ರಿಂಕಿಂಗ್‌ನ ಬಲಿಪಶುವಾದರೆ, ನಿತಿನ್‌ ಹಾಗೂ ಆತನ ತಾಯಿ ಸೆಕೆಂಡ್‌ ಹ್ಯಾಂಡ್‌ ಡ್ರಿಂಕಿಂಗ್‌ನ ಬಲಿಪಶುಗಳು. ಸೆಕೆಂಡ್‌ ಹ್ಯಾಂಡ್‌ ಡ್ರಿಂಕಿಂಗ್‌ ಅಂದರೇನು ಅಂತ ನಿಮಗೆ ಈಗಾಗಲೇ ಗೊತ್ತಾಗಿರಬಹುದು ಅಲ್ಲವೇ. ಸ್ಮೋಕಿಂಗ್ ಮಾಡುವವರ ಹತ್ತಿರ ಇರುವವರು ಸ್ಮೋಕರ್‌ಗಳು ಸೇವಿಸಿ ಬಿಟ್ಟ ಹೊಗೆಯನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಇದು ಸ್ಮೋಕಿಂಗ್‌ಗಿಂತಲೂ ಹೆಚ್ಚು ಹಾಳು. ಹಾಗೆಯೇ ಆಲ್ಕೋಹಾಲ್‌ ಅತಿಯಾಗಿ ಸೇವಿಸಿ, ಅದರ ಪರಿಣಾಮದಿಂದ ಹುಚ್ಚುಚ್ಚಾಗಿ ಆಡುವವರು ತಮ್ಮ ಕುಟುಂಬಸ್ಥರ, ಮನೆಯವರ ಆರೋಗ್ಯದ ಹಾನಿಗೆ ಕಾರಣ ಆಗುತ್ತಾರೆ. ತಮ್ಮ ಮನೆಯವರು ತಲೆಯೆತ್ತಿ ನಡೆಯಲು ಸಾಧ್ಯವಾಗದಂತೆ ಮಾಡಿಕೊಂಡು ಸಮಾಜದಲ್ಲಿಯೂ ಅವಮಾನ ಅನುಭವಿಸುವಂತೆ ಮಾಡುತ್ತಾರೆ.

Tap to resize

Latest Videos

 

ಡೌನ್‌ ಸಿಂಡ್ರೋಮ್‌ ಮಗು ತೋರಿಸೋ ಪ್ರೀತಿ ಮುಂದೆ ಬೇರೇನೂ ಇಲ್ಲ

 

ಕೆಲವು ಸ್ಟಡಿಗಳ ಪ್ರಕಾರ, ಅಮೆರಿಕದ ಸುಮಾರು ೨೫ ಶೇಕಡಾ ಮಂದಿ ಹೀಗೆ ಆಲ್ಕೋಹಾಲ್‌ ಅಬ್ಯೂಸ್‌ಗೆ ಒಳಗಾಗುತ್ತಾರಂತೆ. ಇದರಲ್ಲಿ ಆಲ್ಕೋಹಾಲ್‌ ಸೇವಿಸುವ ವ್ಯಕ್ತಿಗಳು ಹೆಂಡತಿ, ಗಂಡ, ಮಕ್ಕಳು ಎಲ್ಲ ಆ ಇದ್ದಾರೆ. ಸುಮಾರು 21 ಶೇಕಡ ರಸ್ತೆ ಅಪಘಾತಗಳು ಆಗುವುದು ಕುಡಿದ ಮತ್ತಿನಲ್ಲಿ. ಈ ಅಪಘಾತಗಳಲ್ಲಿ ಕುಡಿಯುವುದು ತಾವು ಮಾತ್ರವೇ ಗಾಯಗೊಳ್ಳುವುದಲ್ಲ, ತಮ್ಮ ಜತೆಯಲ್ಲಿರುವವರನ್ನೂ ಜಖಂ ಮಾಡುತ್ತಾರೆ. ಇದೂ ಸಕೆಂಡ್‌ಹ್ಯಾಂಡ್‌ ಡ್ರಿಂಕಿಂಗ್‌ ದುಷ್ಪರಿಣಾಮವೇ. ಅಮೆರಿಕದಲ್ಲಿ ನಡೆಯುವ ಶೇ.18 ಡೈವೋರ್ಸ್ ಕೇಸುಗಳಲ್ಲಿ ಗಂಡನ ಕುಡಿತ ಹಾಗೂ ಆತ ನೀಡುವ ಹಿಂಸೆಯೇ ವಿಚ್ಛೇದನಕ್ಕೆ ಪ್ರಮುಖ ಕಾರಣವಾಗಿದೆ. ಬಾಲ್ಯದಲ್ಲಿ ತಮ್ಮ ತಂದೆ ಅಥವಾ ತಾಯಿಯಿಂದ ಇಂಥ ಆಲ್ಕೋಹಾಲ್‌ ಹಿಂಸೆಗೆ ತುತ್ತಾದವರು ದೊಡ್ಡವರಾಧ ಬಳಿಕ ಮಾನಸಿಕ ಹಿಂಸೆ, ಮನೋರೋಗಗಳಿಂದ ಬಳಲುತ್ತಾರೆ.

 

ಖಾಲಿ ಹೊಟ್ಟೆಯಲ್ಲಿ ನಿರ್ಧಾರ ಕೈಗೊಂಡ್ರೆ ಎಡವಟ್ಟಾಗಬಹುದು, ಎಚ್ಚರ

 

ಭಾರತದಲ್ಲಿ ಸ್ಥಿತಿಗತಿ ಸಂತೋಷಕರವಾಗಿದೆ ಅಂತೇನೂ ತಿಳಿಯುವುದು ಬೇಡ. ಇಲ್ಲೂ ಕೂಡ, ಆಲ್ಕೋಹಾಲ್‌ ಸೇವಿಸಿದವರು ನಡೆಸುವ ಹುಚ್ಚಾಟಗಳಿಗೆ ರಸ್ತೆಯಲ್ಲಿ ಅಮಾಯಕರು ಬಲಿಯಾಗುವುದು, ಮನೆಯಲ್ಲಿ ಹೆಂಡತಿ ಮಕ್ಕಳು ಕಣ್ಣೀರು ಸುರಿಸುವಂತಾಗುವುದು ಇದ್ದದ್ದೇ. ಇದರ ಬಗ್ಗೆ ಸರಿಯಾದ ಸ್ಟಡಿ ಯಾರೂ ಮಾಡಿಲ್ಲ. ಆದರೆ ನಮ್ಮ ಕಣ್ಣ ಮುಂದೆಯೇ ನಡೆಯುವ ಪ್ರಕರಣಗಳಿಂದ ಇದನ್ನು ಅಳೆಯಬಹುದು. ಇತ್ತೀಚೆಗೆ, ಇಪ್ಪತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೂಡ ಲಿಕ್ಕರ್‌ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡು, ಮನೆಮಂದಿಯ ಶಾಂತಿ ನೆಮ್ಮದಿಗೆ ಕೊಳ್ಳಿ ಇಟ್ಟಿರುವುದನ್ನು ಗಮನಿಸಬಹುದು.

 

ದಯಮಾಡಿ ವಯಸ್ಸಾಗದಂತೆ ವರ ನೀಡಿ!

 

ಇದನ್ನು ತಡೆಯಲು ಏನೂ ದಾರಿಗಳು ಇಲ್ಲವೇ? ಇದೆ. ಆದರೆ ಸರಕಾರ ಹಾಗೂ ಸಮಾಜ ಮನಸ್ಸು ಮಾಡಬೇಕು ಅಷ್ಟೆ. ಆದರೆ ಲಿಕ್ಕರ್‌ನ ಆದಾಯದ ಮೇಲೆ ಬದುಕುತ್ತಿರುವ ಸರಕಾರಗಳು ಇದನ್ನು ಮಾಡುವದು ಕಷ್ಟ. ನಾವೇ ಮನಸ್ಸು ಮಾಡಬೇಕು. ಹೇಗೆ? ಹೇಗೆಂದರೆ, ಆಲ್ಕೋಹಾಲ್‌ ಪರಿಣಾಮದಿಂದ ಉಂಟುಮಾಡುವ ಹಿಂಸೆಯನ್ನು ನಾನು ಸಹಿಸುವುದಿಲ್ಲ ಎಂಬ ಕಠಿಣ ಎಚ್ಚರಿಕೆಯನ್ನು ನೀವು ಶೋಷಕರಿಗೆ ರವಾನಿಸಬೇಕು. ಆಲ್ಕೋಹಾಲ್‌ ಅಬ್ಯೂಸ್‌ ಫ್ಯಾಮಿಲಿಯಲ್ಲಿ ನೀವು ಇದ್ದರೆ, ಅದರಿಂದ ಹೊರಬರಲು ಸಿದ್ಧರಾಗಬೇಕು. ಸ್ವಂತ ಕೆಲಸ, ಆದಾಯ ಇಲ್ಲದವರಿಗೆ ಇದು ಕಷ್ಟವಾಗಬಹುದು. ಅಥವಾ, ಕೊನೇ ಪಕ್ಷ, ಆಲ್ಕೋಹಾಲ್‌ ಅಬ್ಯೂಸ್‌ನ ವಾತಾವರಣದಿಂದ ಹೊರ ಬರುವ ಮಾನಸಿಕ ಸಿದ್ಧತೆಯನ್ನಾದರೂ ನೀವು ಮಾಡಿಕೊಂಡಿರಬೇಕು. ಕುಡಿದು ಗಲಾಟೆ ಮಾಡುವವರು ಸನಿಹಕ್ಕೆ ಬಂದರೆ, ಅಲ್ಲಿಧ ಆ ಕ್ಷಣಕ್ಕೆ ದೂರ ಹೋಗಲು ರೆಡಿಯಾಗುವುದು ನೀವು ಈ ವಿಷಯದಲ್ಲಿ ಇಡಬಹುದಾದ ಮೊದಲ ಹೆಜ್ಜೆ.

click me!