
ಚೀನಾದಲ್ಲಿ ಹುಟ್ಟಿಕೊಂಡು ಕೊರೊನಾವೈರಸ್ ಜ್ವರ, ತೀವ್ರವಾಗಿ ಇಡೀ ಜಗತ್ತನ್ನು ವ್ಯಾಪಿಸುತ್ತಾ ಇದೆ. ಮುನ್ನೂರಕ್ಕೂ ಹೆಚ್ಚು ಮಂದಿ ಈಗಾಗಲೇ ನಾನಾ ಕಡೆ ಸತ್ತಿದ್ದಾರೆ. ಭಾರತದಲ್ಲೂ ಮೂರು ಪ್ರಕರಣಗಳು ಕಂಡುಬಂದಿವೆ. ಇವರು ಚೀನಾದಲ್ಲಿ ಸೋಂಕಿತರಾಗಿ ಇಲ್ಲಿಗೆ ಬಂದವರು. ಈ ರೋಗವನ್ನು ಯಾವ ತೀವ್ರ ನಿಗಾ ಘಟಕವಾಗಲೀ ಕ್ವಾರಂಟೈನ್ ಆಗಲೀ ತಡೆಯಲು ಸಾಧ್ಯವಾಗಿಲ್ಲ. ಈ ಕೊರೊನಾವೈರಸ್ ಯಾಕೆ ಇಷ್ಟೊಂದು ಮಾರಕವಾಗಿದೆ? ಅದಕ್ಕೆ. ಇದು ಚೀನಾ ಸರಕಾರವೇ ರಹಸ್ಯವಾಗಿ ಜೈವಿಕ ಅಸ್ತ್ರವಾಗಿ ತಯಾರು ಮಾಡ್ತಾ ಇದ್ದ ವೈರಸ್, ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಅದು ನಿಗಾ ತಪ್ಪಿ ಹೊರಗೆ ಹೋಗಿದೆ. ಈಗ ಜಗತ್ತನ್ನು ಸುತ್ತಲು ಹೊರಟಿದೆ ಅನ್ನುವ ಸಂಚು ಥಿಯರಿಗಳು ಈ ವೈರಸ್‌ನ ಸುತ್ತ ಹಬ್ಬಿಕೊಂಡಿವೆ. ಭಾರತೀಯರಿಬ್ಬರು ಮಾಡಿದ ಸಂಶೋಧನೆಗಳು ಕೂಡ ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ಇವೆ.
ಭಾರತಕ್ಕೂ ಕೊರೋನಾ ವೈರಸ್ ಲಗ್ಗೆ? 80 ಜನರ ಮೇಲೆ ನಿಗಾ!
ಈ ಅನುಮಾನಕ್ಕೆ ಕಾರಣವಿದೆ. ಕೊರೊನಾವೈರಸ್ ಎಂಬುದು ಒಂದೇ ಗುಣದ ವೈರಸ್ ಅಲ್ಲ. ಅದರಲ್ಲಿ ನ್ಯುಮೋನಿಯಾದಿಂದ ಹಿಡಿದು ಸಾರ್ಸ್ ವರೆಗೆ ಹಲವು ಬಗೆಯ ಜ್ವರಗಳ ಗುಣಗಳಿವೆ. ಒಂದೊಂದು ಗುಣವಿರುವ ವೈರಸ್ಸೂ ಒಂದೊಂದು ಜ್ವರವನ್ನು ಉಂಟುಮಾಡುತ್ತದೆ. ಹೊಸದಾಗಿ ಸೃಷ್ಟಿಯಾಗಿರುವ ಕೊರೊನಾವೈರಸ್ ಇದುವರೆಗೆ ಜಗತ್ತಿನ ಬೇರೆ ಎಲ್ಲೂ ಕಂಡುಬಂದಿರಲಿಲ್ಲ, ಕುತೂಹಲಕಾರಿ ಎಂದರೆ, ದಿಲ್ಲಿ ಐಐಟಿಯ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು ಮೊನ್ನೆ ಒಂದು ಸಂಶೋಧನಾ ವರದಿಯನ್ನು ಪ್ರಕಟಿಸಿದರು. ಅದರಲ್ಲಿ, ಹೊಸದಾಗಿ ಉಂಟಾಗಿರುವ ಕೊರೊನಾವೈರಸ್‌ನಲ್ಲಿ, ಅದಕ್ಕೆ ಸಹಜವಲ್ಲದ ನಾಲ್ಕು ರೋಗಕಾರಕ ಗುಣಾಣುಗಳನ್ನು ಕೂರಿಸಲಾಗಿದೆ ಎಂದು ಹೇಳಿದೆ, ಈ ಗುಣಗಳನ್ನು ಅದಕ್ಕೆ ತುಂಬಿದ್ಯಾರು, ಯಾಕೆ, ಎಂಬಿತ್ಯಾದಿ ವಿಚಾರ ನಿಗೂಢವಾಗಿದೆ.
ಮಾರಕ ಕೊರೋನಾ ವೈರಸ್‌ಗೆ ಚೀನಾ ತಲ್ಲಣ! ಮತ್ತಷ್ಟು ಬಲಿ
ನಿಮಗೆ ಗೊತ್ತಿರಲಿ- ಈ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾದ ವುಹಾನ್ ನಗರದಲ್ಲಿ, ಇಂಥ ವೈರಸ್‌ಗಳ ಅಧ್ಯಯನಕ್ಕಾಗಿ ಕಟ್ಟಲಾದ ಬೃಹತ್ ಪ್ರಯೋಗಾಲಯ ಇದೆ. ಅದರ ಹೆಸರು ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ. ಇಲ್ಲಿ ಸಾರ್ಸ್ ಮುಂತಾದ ರೋಗಕಾರಕ ವೈರಸ್‌ಗಳ ಅಧ್ಯಯನ ಹಲವು ವರ್ಷಗಳಿಂದ ನಡೆಯುತ್ತಿದೆ. ಸಾರ್ಸ್, ನಿಫಾ ಮುಂತಾದವು ಹಬ್ಬುವುದು ಬಾವಲಿಗಳ ಮೂಲಕ ಎಂಬುದನ್ನು ಇದು ಪ್ರತಿಪಾದಿಸಿತ್ತು. ಇದನ್ನು ಇತರ ಲ್ಯಾಬ್‌ಗಳೂ ತಿಳಿಸಿವೆ. ನಿಜಕ್ಕೂ ಈ ವೈರಾಲಜಿ ಲ್ಯಾಬ್‌ನಲ್ಲಿ ನಡೆಯುವ ಇತರ ಸಂಶೋಧನೆಗಳು ಯಾವುದು ಎಂಬುದು ಜಗತ್ತಿನ ಇತರ ದೇಶಗಳಿಗೆ ಗೊತ್ತಿಲ್ಲ. ಮಾತ್ರವಲ್ಲ, ಚೀನಾದ ಒಳಗೇ ಇರುವವರಿಗೂ ಅದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಹಿಂದೊಮ್ಮೆ ಚೀನಾದ ಯುವ ವಿಜ್ಞಾನಿಯೊಬ್ಬ, ಎಚ್‌ಐವಿ ರೋಗಾಣು ಇಲ್ಲದ ಮಗುವನ್ನು ಸರಕಾರದ ಒಪ್ಪಿಗೆ ಪಡೆಯದೇ ಸೃಷ್ಟಿಸಿದ್ದ. ಇಂಥ ಫ್ರಿಂಜ್ ಎಲಿಮೆಂಟ್‌ಗಳೂ ಚೀನಾದಲ್ಲಿ ಸಾಕಷ್ಟಿವೆ.
ಇದೇ ವುಹಾನ್ ನಗರದಲ್ಲೇ 2002ರಲ್ಲಿ ಇನ್ನೊಂದು ಮಹಾ ರೋಗವಾದ ಸಾರ್ಸ್ ಕಾಣಿಸಿಕೊಂಡಿತ್ತು. ಇದಕ್ಕೆ ಜಗತ್ತಿನಾದ್ಯಂತ 800 ಮಂದಿ ಬಲಿಯಾಗಿದ್ದರು. ಮೊದಲು ಈ ಸುದ್ದಿಯನ್ನು ಚೀನಾ ಮುಚ್ಚಿಟ್ಟಿತ್ತು. ಆದರೆ ಇದು ಚೀನಾದ ಗಡಿಯನ್ನೂ ದಾಟಿ ಇತರ ದೇಶಗಳಿಗೆ ಹಬ್ಬಿದಾಗ ಮಾತ್ರ ಬಾಯಿ ಬಿಡಲೇ ಬೇಕಾಯಿತು. ಚೀನಾ ದೇಶ, ಬೇರೆ ದೇಶಗಳಿಗೆ ತಲೆ ನೋವಾಗಬಹುದಾದ ಜೈವಿಕ ಅಸ್ತ್ರಗಳನ್ನು ತಯಾರು ಮಾಡುತ್ತಾ ಇದೆ ಎಂಬ ಮಾಹಿತಿ ಅಮೆರಿಕದ ಬಳಿ ಇದೆ. ಆದರೆ ಇದು ನಿಜವೇ ಅಲ್ಲವೇ ಎಂಬುದನ್ನು ಸಾಬೀತು ಮಾಡುವುದಕ್ಕೆ ಬೇಕಾದ ಸಾಕ್ಷಿಗಳು ಇಲ್ಲ. ಚೀನಾದಲ್ಲಿ ಏನೇ ನಡೆಯುವುದಿದ್ದರೂ ಅದು ರಹಸ್ಯವಾಗೇ ನಡೆಯುತ್ತದೆ. ಪಾಕಿಸ್ತಾನಕ್ಕೆ ಪರಮಾಣು ಇಂಧನವನ್ನು ರಹಸ್ಯವಾಗಿ ಪೂರೈಸಿದ್ದೇ ಚೀನಾ. ಹೀಗಿರುವಾಗ, ಕೊರೊನಾವೈರಸ್ ತಾನು ಸೃಷ್ಟಿಸಿದ್ದಲ್ಲ ಎಂದು ಚೀನಾ ಹೇಳಿದರೆ ಯಾರು ನಂಬುತ್ತಾರೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.