ಅತ್ತೆಗೆ ಮಗುವಿನ ಡೈಪರ್ ಬದಲಾಯಿಸಲು ಬಿಡೋಲ್ಲ ಈ ಸೊಸೆ, ಪಾಪು ಪ್ರೈವೆಸಿ ಹೋಗುತ್ತಂತೆ!

Published : Mar 28, 2023, 04:00 PM IST
ಅತ್ತೆಗೆ ಮಗುವಿನ ಡೈಪರ್ ಬದಲಾಯಿಸಲು ಬಿಡೋಲ್ಲ ಈ ಸೊಸೆ, ಪಾಪು ಪ್ರೈವೆಸಿ ಹೋಗುತ್ತಂತೆ!

ಸಾರಾಂಶ

ಪ್ರೈವೆಸಿ ಅನ್ನೋದು ಇತ್ತೀಚಿಗೆ ಹೆಚ್ಚು ಬಳಕೆಯಲ್ಲಿರುವ ಪದ. ಎಲ್ಲಾ ವಿಚಾರದಲ್ಲೂ ಖಾಸಗಿತನ ಉಳಿಸಿಕೊಳ್ಳೋದು ಇವತ್ತಿನ ಟ್ರೆಂಡ್ ಆಗಿದೆ. ಆದ್ರೆ ಇಲ್ಲೊಬ್ಬ ಸೊಸೆ ತನ್ನ ನವಜಾತ ಶಿಶುವಿನ ಪ್ರೈವೆಸಿಗೆ ಧಕ್ಕೆಯಾಗುತ್ತಂತೆ ಅತ್ತೆ ಡೈಪರ್ ಚೇಂಜ್ ಮಾಡೋಕು ಅವಕಾಶ ಮಾಡ್ಕೊಟ್ಟಿಲ್ಲ.

ಪ್ರೈವೆಸಿ ಅಥವಾ ಖಾಸಗಿತನ ಇದು ಪ್ರತಿಯೊಬ್ಬರಿಗೂ ಅತ್ಯಗತ್ಯವಾದುದು. ಒಬ್ಬ ವ್ಯಕ್ತಿಯ ಪರ್ಸನಲ್ ಸ್ಪೇಸ್‌. ಆ ಖಾಸಗಿತನವನ್ನು ಯಾರೂ ಸಹ ಪ್ರಶ್ನಿಸಬಾರದು. ಅದಕ್ಕೆ ಯಾರು ಸಹ ಧಕ್ಕೆ ತರಬಾರದು. ಪ್ರೈವೆಸಿ ಎಂಬ ವಿಚಾರ ಇತ್ತೀಚಿಗೆ ಹೆಚ್ಚು ಟ್ರೆಂಡ್ ಆಗ್ತಿದೆ. ಹಿಂದೆಲ್ಲಾ ಕೂಡು ಕುಟುಂಬ ಇರುತ್ತಿತ್ತು. ಇಪ್ಪತ್ತು ಮೂವತ್ತು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಎಲ್ಲರಿಗೂ ಮಲಗಲು ಪ್ರತ್ಯೇಕ ಕೋಣೆಯೇನಿಲ್ಲ. ಎಲ್ಲರೂ ಉದ್ದಕ್ಕೆ ಹಾಲ್‌ನಲ್ಲಿ ಮಲಗಿದರಾಯಿತು. ಆದರೆ ಈಗಲೂ ಮಕ್ಕಳು (Children) ಹುಟ್ಟಿದ ಒಂದೆರಡು ವರ್ಷಕ್ಕೆ ಅವರಿಗೆ ಪ್ರತ್ಯೇಕ ಕೋಣೆಯನ್ನೇ ಸಿದ್ಧಪಡಿಸಿ ಅವರಿಗೆ ಪ್ರೈವೆಸಿ ನೀಡುತ್ತಾರೆ. ಕೋಣೆಗೆ ಪ್ರತ್ಯೇಕ ಅಟ್ಯಾಚ್ಡ್ ಬಾತ್‌ರೂಮ್ ಬೇರೆ. ಆದರೆ ಹಿಂದೆಲ್ಲಾ ಎಲ್ಲಾ ಮಕ್ಕಳು ಜೊತೆಯಾಗಿ ಕೆರೆನೋ, ಕೊಳಕ್ಕೋ ಹೋಗಿ ಸ್ನಾನ ಮಾಡಿ ಬರುತ್ತಿದ್ದರು.

ಡೈಪರ್ ಚೇಂಜ್ ಮಾಡಿದ್ರೆ ನವಜಾತ ಶಿಶುವಿನ ಪ್ರೈವೆಸಿಗೆ ಧಕ್ಕೆಯಾಗುತ್ತಂತೆ!
ಮಕ್ಕಳಿಗೆ ಅವರದ್ದೇ ಆದ ಪ್ರತ್ಯೇಕ ಕೋಣೆಗಳನ್ನು ಕೊಟ್ಟಿರುವುದರಿಂದ ಪ್ರೈವೆಸಿ ಅನ್ನೋದು ಇತ್ತೀಚಿಗೆ ಹೆಚ್ಚು ವಿಶೇಷವಾಗುತ್ತಿದೆ. ಮಕ್ಕಳು ತಮ್ಮ ಪೋಷಕರಿಗೇ ಅಪರಿಚಿತರಾಗಿ ಉಳಿದುಬಿಡುತ್ತಾರೆ. ಹಾಗೆಯೇ ಪ್ರೈವೆಸಿಯ ಬಗ್ಗೆ ವಿಚಿತ್ರವಾಗಿ ಮಾತನಾಡಿರುವ ಮಹಿಳೆ (Women)ಯೊಬ್ಬರ ವಿಚಾರ ಸದ್ಯ ವೈರಲ್ ಆಗ್ತಿದೆ. ಅಷ್ಟಕ್ಕೂ ಆಕೆ ಮಾಡಿರೋದು ಸಣ್ಣ ಕೆಲಸವೇನಲ್ಲ. ನವಜಾತ ಶಿಶುವಿನ (Infant) ಪ್ರೈವೆಸಿಗೆ ಧಕ್ಕೆಯಾಗುತ್ತೆ ಅನ್ನೋ ಕಾರಣಕ್ಕೆ ಈಕೆ ತನ್ನ ಅತ್ತೆಗೇ ಮಗುವಿನ ಡೈಪರ್ ಚೇಂಜ್ ಮಾಡೋಕೆ ಅವಕಾಶ ಕೊಟ್ಟಿಲ್ಲ. 

ವೀಡಿಯೋ ಗೇಮ್ ಆಡುವ ವೇಳೆ ಸಿಕ್ಕಿಬಿದ್ದ ಮಗ: ಅಪ್ಪ ಕೊಟ್ಟ ಶಿಕ್ಷೆಗೆ ದಂಗಾದ

ಅತ್ತೆ (Mother in law) ನವಜಾತ ಮಗನ ಡೈಪರ್ ಅನ್ನು ಬದಲಾಯಿಸುವಾಗ ಸೊಸೆ ತಡೆದಿದ್ದಾಳೆ. 'ನಾನು ನನ್ನ ಮಗುವಿನ ಗೌಪ್ಯತೆಯನ್ನು ರಕ್ಷಿಸಲು ತುಂಬಾ ಉತ್ಸುಕಳಾಗಿದ್ದೇನೆ. ನಾನು ಹಾಗೂ ನನ್ನ ಗಂಡ ಇಬ್ಬರೇ ಮಗುವಿನ ಡೈಪರ್ ಚೇಂಜ್ ಮಾಡಬೇಕೆಂದು ನಾನು ಬಯಸುತ್ತೇನೆ. ಆದರೆ ನನ್ನ ಅತ್ತೆ ಮಗುವಿನ ನ್ಯಾಪಿಯನ್ನು ಬದಲಾಯಿಸಲು ಬಯಸುತ್ತಾರೆ' ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಇತ್ತೀಚಿಗೆ ಇಂಥಹದ್ದೇ ಘಟನೆಯೊಂದು ನಡೆಯಿತು. ನನ್ನ ಅತ್ತೆ ಮಗುವನ ಡೈಪರ್ ಚೇಂಜ್ ಮಾಡಿದರು. ಮಗು ಡೈಪರ್ ಚೇಂಜ್ ಮಾಡುವ ಅಷ್ಟೂ ಸಮಯದಲ್ಲಿ ಅಳುತ್ತಲೇ ಇತ್ತು. ಇದು ನನಗೆ ನಿಜವಾಗಿಯೂ ಕಿರಿಕಿರಿಯನ್ನುಂಟು ಮಾಡಿತು ಎಂದು ಮಹಿಳೆ ಹೇಳಿದ್ದಾರೆ.

ಗಂಡ ಖುಷಿಯಾಗಿದ್ರಷ್ಟೇ ಸಾಕಂತೆ..ಬೇರೆಯವಳ ಜೊತೆ ಮಲಗೋಕೆ ಹೆಂಡ್ತೀನೆ ಟೈಂ ಕೊಡ್ತಾಳೆ!

ಮಹಿಳೆಯ ಖಾಸಗಿತನದ ವ್ಯಾಖ್ಯಾನಕ್ಕೆ ನೆಟ್ಟಿಗರ ತರಾಟೆ
ಮಹಿಳೆಯ ಪ್ರೈವೆಸಿ ಪೋಸ್ಟ್‌ಗೆ ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಪ್ರೈವೆಸಿ ಬೇಕು ಅನ್ನೋದು ನಿಜ. ಆದರೆ ನವಜಾತ ಶಿಶುವಿಗೆ ಯಾವ ರೀತಿಯ ಪ್ರೈವೆಸಿ ಬೇಕಿದೆ ಅರ್ಥವಾಗುತ್ತಿಲ್ಲ' ಎಂದು ಹೇಳಿದ್ದಾರೆ. ಇನ್ನೊಬ್ಬರು 'ತನ್ನ ಫ್ಯಾಮಿಲಿಯನ್ನೇ ನಂಬದಿರುವುದು ಒಳ್ಳೆಯ ವಿಚಾರವಲ್ಲ. ಪ್ರೈವೆಸಿ ವಿಚಾರಕ್ಕೆ ಇಷ್ಟು ತಲೆಕೆಡಿಸಿಕೊಂಡರೆ ನಾವ್ಯಾರೂ ದೊಡ್ಡವರಾಗಲು ಸಾಧ್ಯವಾಗುತ್ತಿರಲ್ಲಿಲ್ಲ' ಎಂದಿದ್ದಾರೆ. ' ಪ್ರೈವೆಸಿ ಇಲ್ಲದ ಕಾರಣಕ್ಕೆ ಬಾಲ್ಯದಲ್ಲಿ ನಿಮಗೆ ಏನಾದರೂ ಸಂಭವಿಸಿದೆಯೇ? ಹಾಗಿದ್ದಲ್ಲಿ, ವಿಷಯಗಳ ಮೂಲಕ ಮಾತನಾಡಲು ನಿಮಗೆ ಚಿಕಿತ್ಸೆಯ ಅಗತ್ಯವಿದೆ' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

'ಪ್ರೈವೆಸಿಯ ಬಗ್ಗೆ ನಿಮಗೆ ಯಾಕೆ ಹಾಗೆ ಅನಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಆದರೆ ನೀವು ನಿಮ್ಮದೇ ಆದ ಸಮಸ್ಯೆಯನ್ನು ಹೊಂದಿರುವಂತೆ ತೋರುತ್ತಿದೆ. ನ್ಯಾಪಿಯನ್ನು ಬದಲಾಯಿಸಲು ನೀವು ತಕ್ಷಣದ ಕುಟುಂಬವನ್ನು ನಂಬಲು ಸಾಧ್ಯವಾಗದಿದ್ದರೆ, ನಿಮ್ಮ ಮಗು ನಿಮ್ಮೊಂದಿಗೆ ಅಕ್ಷರಶಃ ಗೌಪ್ಯತೆಯ'ಗೀಳಿನಲ್ಲಿ ಬೆಳೆಯುತ್ತದೆ' ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ.

17 ಮಿಸ್ಡ್​​ ಕಾಲ್ ಮಿಸ್ ಮಾಡಿಕೊಂಡ್ಲು ಮಗಳು, ಮತ್ತೆ ಕರೆ ಮಾಡಿದಾಗ ಅಮ್ಮ ಹೆಣವಾಗಿದ್ಲು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ