ಮನಸ್ಸು ನಾನಾ ಕಾರಣಕ್ಕೆ ಆಘಾತಕ್ಕೊಳಗಾಗುತ್ತದೆ. ಪ್ರೀತಿ ಕಳೆದುಕೊಂಡಾಗ, ಮೋಸ ಹೋದಾಗ, ನಂಬಿದ ವ್ಯಕ್ತಿ ದ್ರೋಹ ಬಗೆದಾಗ ಹೃದಯಕ್ಕೆ ಕಲ್ಲು ಚುಚ್ಚಿದ ಅನುಭವವಾಗುತ್ತದೆ. ಆ ನೋವನ್ನು ಸಹಿಸೋದು ಕಷ್ಟ. ಇದಕ್ಕೆ ಕಾರಣವೇನು ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಪ್ರೀತಿಸಿದ ವ್ಯಕ್ತಿ ಕೈಕೊಟ್ಟಾಗ ಇಲ್ಲವೆ ನಂಬಿದ್ದ ವ್ಯಕ್ತಿ ಮೋಸ ಮಾಡಿದಾಗ ಹೃದಯ ಒಡೆದ ಅನುಭವವಾಗುತ್ತದೆ. ಹೃಯದ ಚೂರಾಗಿದೆಯೇನೋ ಅನ್ನಿಸುತ್ತದೆ. ಪ್ರೀತಿ ಕಳೆದುಕೊಂಡ ಭಗ್ನ ಪ್ರೇಮಿಗಳ ಯಾತನೆ ಬಗ್ಗೆ ನಾವು ಪುಸ್ತಕದಲ್ಲಿ, ಕಥೆಗಳಲ್ಲಿ ಓದುತ್ತೇವೆ, ನೋಡುತ್ತೇವೆ. ಅನೇಕ ಸಿನಿಮಾ ಹಾಡುಗಳು ಭಗ್ನ ಪ್ರೇಮಿಗಳಿಗಾಗಿಯೇ ಸಿದ್ಧವಾಗಿವೆ. ಪ್ರೀತಿಯಲ್ಲಿರುವವರಿಗೆ ಅಥವಾ ಪ್ರೀತಿಯಲ್ಲಿ ಬೀಳದೆ ಇರುವವರಿಗೆ ಭಗ್ನ ಪ್ರೇಮಿಗಳ ಯಾತನೆ ಸರಿಯಾಗಿ ಅರ್ಥವಾಗೋದಿಲ್ಲ. ಇದು ಬರೀ ನಾಟಕ ಎನ್ನುವವರಿದ್ದಾರೆ. ಪ್ರೀತಿ ಮುರಿದಾಗ ನಿಜವಾಗಿ ನೋವಾಗುತ್ತಾ ಎಂದು ಪ್ರಶ್ನೆ ಮಾಡುವವರಿದ್ದಾರೆ.
ಹೃದಯ (Heart) ಒಡೆದಾಗ ಆಗುವ ನೋವೇನು ಎನ್ನುವ ಬಗ್ಗೆ ಇತ್ತೀಚಿಗೆ ಒಂದು ಸಂಶೋಧನೆ (Research) ನಡೆದಿದೆ. ಅದ್ರಲ್ಲಿ ನೋವಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಲಾಗಿದೆ. ನಾವಿಂದು ಪ್ರೀತಿ (Love) ಮುರಿದಾಗ, ಮೋಸವಾದಾಗ ಉಂಟಾಗುವ ನೋವಿಗೆ ಕಾರಣವೇನು ಎಂಬುದನ್ನು ಹೇಳ್ತೇವೆ. ನಾವು ಮನಸ್ಸು ಮುರಿದಿದೆ ಎಂಬ ವಿಷ್ಯವನ್ನು ಸಾಮಾನ್ಯವಾಗಿ ತೆಗೆದುಕೊಳ್ತೇವೆ. ಆದ್ರೆ ಇದು ಸಾಮಾನ್ಯ ವಿಷ್ಯವಲ್ಲ. ಇದನ್ನು ಬ್ರೋಕನ್ ಹಾರ್ಟ್ (Broken Heart) ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ಒಂದು ರೀತಿಯ ಖಾಯಿಲೆ. ಇದರಲ್ಲಿ ಹೃದಯದ ಒಂದು ಭಾಗವು ತಾತ್ಕಾಲಿಕವಾಗಿ ದುರ್ಬಲಗೊಳ್ಳುತ್ತದೆ. ಅದರ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಇದರಿಂದಾಗಿ ಅದರ ಪಂಪ್ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಾನಸಿಕ ಖಿನ್ನತೆ ಹೆಚ್ಚಾದಾಗ ಸಾಮಾನ್ಯವಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ.
undefined
Health Tips : ದೀರ್ಘಕಾಲದಿಂದ ಕಾಲು ನೋವು ಕಾಡ್ತಿದ್ರೆ ನಿರ್ಲಕ್ಷಿಸ್ಬೇಡಿ
ಈ ಬ್ರೋಕನ್ ಹಾರ್ಟ್ ನಂತ್ರ ಕಾಡುವ ನೋವಿಗೆ ಹಾರ್ಮೋನ್ ಕಾರಣ : ಸಂಶೋಧನೆಯಲ್ಲಿ ಬ್ರೋಕನ್ ಹಾರ್ಟ್ ನೋವಿಗೆ ಹಾರ್ಮೋನ್ ಕಾರಣ ಎಂಬುದು ಪತ್ತೆಯಾಗಿದೆ. ಈ ನೋವು ಹೃದಯಾಘಾತದ ಸಮಯದಲ್ಲಿ ಕಾಡುವ ನೋವಿನಷ್ಟೆ ಭಯಾನಕವಾಗಿರುತ್ತದೆಯಂತೆ. ಸಂಶೋಧನೆಯ ವರದಿಯನ್ನು ಲೈವ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಬ್ರೇಕ್ ಅಪ್ ಆದಾಗ ಅಥವಾ ಬೇರೆ ಶಾಕ್ ಗೆ ಒಳಗಾದಾಗ ಹೃದಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರ್ಟಿಸೋಲ್ (Cortisol) ಹಾರ್ಮೋನ್ ಕಾರಣ. ಇದನ್ನು ಮೆಸೆಂಜರ್ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದು ದೇಹದ ವಿವಿಧ ಭಾಗಗಳಿಗೆ ಸಂದೇಶಗಳನ್ನು ರವಾನಿಸುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಕುಸಿತ ಕಾಣುತ್ತೆ ಆಕ್ಸಿಟೋಸಿನ್, ಡೋಪಮೈನ್ ಮಟ್ಟ : ನೀವು ಪ್ರೀತಿಯಲ್ಲಿ ಬಿದ್ದಾಗ ಸಂತೋಷದಲ್ಲಿ ತೇಲುತ್ತೀರಿ. ಸದಾ ಆನಂದವಾಗಿರಲು ಕಾರಣ ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಹಾಗೂ ಡೋಪಮೈನ್ ಹಾಮೋನ್. ಆದ್ರೆ ನಿಮ್ಮ ಪ್ರೀತಿಗೆ ಮೋಸವಾದ್ರೆ ಆಕ್ಸಿಟೋಸಿನ್ ಮತ್ತು ಡೋಪಮೈನ್ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದೆ. ಯಾವಾಗ ಈ ಹಾರ್ಮೋನ್ ಬಿಡುಗಡೆ ಕಡಿಮೆಯಾಯ್ತೋ ಆಗ ನಿಮ್ಮ ಮನಸ್ಸು ಚಂಚಲವಾಗುತ್ತದೆ. ಮನಸ್ಸಿನಲ್ಲಿ ಅಶಾಂತಿ ನೆಲೆಸುತ್ತದೆ. ಕಿರಿಕಿರಿ, ನಿರಾಸೆ, ನೋವು ಮನೆ ಮಾಡುತ್ತದೆ.
Health Tips: ಹೊಟ್ಟೆ ಸರಿಯಾಗಿಲ್ಲ ಅಂದ್ರೆ ಹೀಗೆಲ್ಲ ಆಗುತ್ತೆ
ಹೃದಯಾಘಾತದಷ್ಟೇ ನೋವು ಕಾಡುತ್ತೆ : ಹೃದಯಾಘಾತ ಹಾಗೂ ಬ್ರೋಕನ್ ಹಾರ್ಟ್ ಸಿಂಡ್ರೋಮಾ ಮಧ್ಯೆ ವ್ಯತ್ಯಾಸ ಕಂಡು ಹಿಡಿಯುವುದು ವೈದ್ಯರಿಗೇ ಸವಾಲು ಎಂದು ಸಂಶೋಧಕರು ಹೇಳಿದ್ದಾರೆ. ಬ್ರೋಕನ್ ಹಾರ್ಟ್ ಸಿಂಡ್ರೋಮ್ ಗೆ ಹಾರ್ಟ್ ಕ್ಯಾತಿಟೆರೈಸೇಶನ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ತೊಡೆಸಂದು, ಹೃದಯ ಅಥವಾ ಕುತ್ತಿಗೆಯ ಮೂಲಕ ಸಣ್ಣ ಕ್ಯಾತಿಟರ್ ಅನ್ನು ಸೇರಿಸಲಾಗುತ್ತದೆ.
ಬ್ರೋಕನ್ ಹಾರ್ಟ್ ಒಂದು ಅಪಾಯಕಾರಿ ಅನುಭವವಾಗಿದೆ. ಕಾರ್ಟಿಸೋಲ್ ಹಾರ್ಮೋನ್ ಇದಕ್ಕೆ ಸಂಪೂರ್ಣ ಕಾರಣವಾಗಿದೆ. ಇದನ್ನು ತಪ್ಪಿಸಲು ಒತ್ತಡ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಉತ್ತಮ ಮಾರ್ಗವಾಗಿದೆ. ಎದೆನೋವು, ಉಸಿರಾಟದ ತೊಂದರೆ, ತಲೆತಿರುಗುವಿಕೆ, ಅತಿಯಾದ ಬೆವರುವಿಕೆ, ಕಡಿಮೆ ರಕ್ತದೊತ್ತಡ, ಅನಿಯಮಿತ ಹೃದಯ ಬಡಿತದಂತಹ ಕೆಲವು ಲಕ್ಷಣಗಳು ಕಾಣಿಸಿಕೊಂಡರೆ ನೀವು ವೈದ್ಯರನ್ನು ಭೇಟಿಯಾಗ್ಬೇಕು.