
ಬೆಂಗಳೂರು(ಫೆ.14): ಇಂದು ವಿಶ್ವ ಪ್ರೇಮಿಗಳ ದಿನ. ನಲ್ಲೆಯ ಪಿಸುಮಾತುಗಳನ್ನು ಹೃದಯ ಕೇಳಿಸಿಕೊಳ್ಳುವ ದಿನ. ನಲ್ಲನ ಬೆಚ್ಚಗಿನ ತೋಳುಗಳಲ್ಲಿ ಬಂಧಿಯಾಗುವ ದಿನ.
ಪ್ರೇಮಿಗಳೆಂದ ಮೇಲೆ ಕೇಳಬೇಕೆ?. ಅಲ್ಲಿ ಮಾತಿಗೆ ಬರವಿಲ್ಲ, ಕನಸುಗಳಿಗೆ ಕೊನೆಯಿಲ್ಲ, ಆಸೆಗಳಿಗೆ ಗಡಿಯಿಲ್ಲ. ಜಗತ್ತಿನ ಆಗುಹೋಗುಗಳಿಗೆ ಬೆನ್ನು ತಿರುಗಿಸಿ ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುವ ಹದಿಹರೆಯದ ಮನಸ್ಸುಗಳು ತಾವಿದ್ದಲ್ಲೇ ಪ್ರೀತಿಯ ಲೋಕವೊಂದನ್ನು ಕಟ್ಟಿಕೊಂಡು ಬಿಡುತ್ತವೆ.
ಅದರಂತೆ ಇಂದಿನ ಪ್ರೇಮಿಗಳ ದಿನಕ್ಕೆ ನಿಮ್ಮ ಸುವರ್ಣನ್ಯೂಸ್.ಕಾಂ ಹತ್ತು ಹಲವು ವಿಶೇಷ ಲೇಖನಗಳನ್ನು ಓದುಗರಿಗೆ ಉಣಬಡಿಸಿತ್ತು. ಬೆಳಗ್ಗೆಯಿಂದಲೇ ಪ್ರೇಮಿಗಳ ದಿನದ ಅಂಗವಾಗಿ ಖ್ಯಾತನಾಮರ ಪ್ರೇಮ್ ಕಹಾನಿಗಳನ್ನು ನಿಮ್ಮ ಮುಂದೆ ಇಡುತ್ತಾ ಪ್ರೀತಿಯ ಮಹತ್ವವನ್ನು ಸಾರಿ ಹೇಳಿತು.
ಪ್ರೇಮಿಗಳ ದಿನ ಎಂದ ಮಾತ್ರಕ್ಕೆ ಅಲ್ಲಿ ಕೇವಲ ಯಶಸ್ವಿ ಪ್ರೇಮ ಕತೆಗಳೇ ಇರಬೇಕು ಎಂದೆನಿಲ್ಲವಲ್ಲ. ಆ ಕಾರಣಕ್ಕೆ ಪ್ರೀತಿಯಲ್ಲಿ ನೋವುಂಡ ಹೃದಯಗಳ ಕೂಗಿಗೂ ನಿಮ್ಮ ಸುವರ್ಣನ್ಯೂಸ್.ಕಾಂ ಧ್ವನಿಯಾಗಿದ್ದು ಸುಳ್ಳಲ್ಲ.
ಒಟ್ಟಿನಲ್ಲಿ ಪ್ರೇಮಿಗಳ ದಿನದ ಅಂಗವಾಗಿ ಪ್ರೀತಿಯ ತಾಕತ್ತಿನ, ಪ್ರೀತಿಯ ವಿಪ್ಪತ್ತಿನ ಮುಖಗಳನ್ನು ಒದುಗರ ಮುಂದಿಡುವಲ್ಲಿ ನಿಮ್ಮ ಸುವರ್ಣನ್ಯೂಸ್.ಕಾಂ ಯಶಸ್ವಿಯಾಗಿದ್ದು, ಇದಕ್ಕೆ ಓದುಗರ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳನ್ನಷ್ಟೇ ಹೇಳಲು ಸಾಧ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.