ಲೈಫ್ ಚಾಲೆಂಜಿಂಗ್ ಆಗಿ ಸ್ವೀಕರಿಸಿ ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿದ ತಾರೆಯರು

By Web DeskFirst Published May 11, 2019, 3:41 PM IST
Highlights

 ಫ್ಯಾಷನ್ ಲೋಕದಲ್ಲಿ ಮಿಂಚಲು ಆಕರ್ಷಕ ಲುಕ್‌ನೊಂದಿಗೆ ಕಾಲು ಕೈ ನೆಟ್ಟಗಿರಬೇಕು ಅಂದುಕೊಂಡೋರು ಇದನ್ನು ಓದ್ಲೇ ಬೇಕು. ಈ ಸುದ್ದಿಯಲ್ಲಿ ಏನಿದೆ ಅಂತೀರಾ?  ತಮ್ಮ ನ್ಯೂನ್ಯತೆಗಳನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಫ್ಯಾಷನ್ ಲೋಕದಲ್ಲಿ  ಮಿಂಚಿದ ಮಾಡೆಲ್‌ಗಳ ಇವರು...

ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಡಲು ತುಂಬಾ ಸ್ಟೈಲ್‌ ಆಗಿರಬೇಕು, ಆಕರ್ಷಕ ದೇಹಸಿರಿ ಹೊಂದಿರಬೇಕು, ಹೈಟ್‌ ಇರಲೇಬೇಕು, ನೀಳ ಕಾಲು, ಸುಂದರವಾದ ಮುಖ... ಅಂದುಕೊಂಡಿದ್ದೀರಿ. ಆದರೆ ನಿಜವಾಗಲೂ ಇದು ಇರಲೇಬೇಕಾ..? ಇಲ್ಲ ಅನ್ನುತ್ತಾರೆ ಈ ಮಾಡೆಲ್‌ಗಳು. ಈ ಮಾಡೆಲ್‌ಗಳು ತಮ್ಮ ಎಲ್ಲಾ ನ್ಯೂನ್ಯತೆಗಳನ್ನು ಬದಿಗೊತ್ತಿ ಸೂಪರ್ ಮಾಡೆಲ್‌ಗಳಾಗಿ ಮಿಂಚಿದವರು.

ಅಲೆಕ್ಸಾಂಡ್ರಾ ಕುಟಾಸ್: ಹುಟ್ಟುವಾಗಲೇ ಅಂಗ ನ್ಯೂನ್ಯತೆಯಿಂದ ಹುಟ್ಟಿ, ವೀಲ್ ಚೇರ್ ಮೇಲೆ ಬದುಕು ಸಾಗಿಸಿದವಳು. ಈಕೆ ಈಗ ಉಕ್ರೇನ್‌ನ ಪ್ರಖ್ಯಾತ ಡಿಸೈನರ್ ಫ್ಲೋಡೋರ್ ವೋಝಿಯಾನೋವ್‌ನ ಮಾಡೆಲ್. 

ಮೇಡ್ಲೈನ್ ಸ್ಟುವರ್ಟ್: ಈಕೆ ಡೌನ್‌ ಸಿಂಡ್ರೋಮ್‌ ಬಾಧಿತೆ. ಆದ್ರೆ ಈಕೆಯ ಸಾಧನೆಗೆ ಇದು ಅಡ್ಡಿಯಾಗಿಲ್ಲ. ತನ್ನ 18ನೇ ವಯಸ್ಸಿಗೆ ಮಾಡಲಿಂಗ್‌ಗೆ ಕಾಲಿಟ್ಟಳು ಈ ಚೆಲುವೆ.

ನೀರೆಯರ ಬ್ಯೂಟಿ ಹೆಚ್ಚಿಸಲು ಬಂದಿದೆ ಟ್ರೆಂಡಿಂಗ್ ಜುಮ್ಕಾ

ಶಾಹೋಲಿ ಎಯರ್ಸ್: ಈಕೆಗೆ ಹುಟ್ಟಿನಿಂದ ಬಲ ಮುಂಗೈ ಇರಲಿಲ್ಲ. ಆದರೆ ತಂದೆ ತಾಯಿ ಪ್ರೋತ್ಸಾಹದಿಂದ ಯಾವತ್ತೂ ಆಕೆ ಆ ಬಗ್ಗೆ ವ್ಯಥೆ ಪಟ್ಟಿಲ್ಲ. ಅವಳ ಜೀವನೋತ್ಸಾಹ ಇಂದು ಆಕೆಯನ್ನು Nordstrom ಬ್ರಾಂಡ್ ಅಲ್ಲದೆ ಜಿಕ್ಯು ಇಟಾಲಿಯಾ, ಜಿಕ್ಯು ಜಪಾನ್ ಮತ್ತು ಗ್ಲಾಮರ್ ಮ್ಯಾಗಝಿನ್‌ಗಳಲ್ಲಿ ಮಾಡೆಲ್ ಆಗಿ ಮಿಂಚಿದ್ದಾಳೆ. 

ಹರ್ನಾಮ್‌‌ ಕೌರ್‌ : ಈಕೆ ಗಡ್ಡದಾರಿ ಮಾಡೆಲ್‌ ಎಂದೇ ಫೇಮಸ್‌. ಈಕೆಗೆ 11 ವರ್ಷ ಇರೋವಾಗಲೇ ಮುಖದ ಮೇಲೆ ಗಡ್ಡ ಮೀಸೆ ಬೆಳೆಯಲು ಪ್ರಾರಂಭವಾಯಿತ್ತಂತೆ. ಲಂಡನ್‌ನ ಆಭರಣ ಮಳಿಗೆ ಉದ್ಘಾಟನೆ ವೇಳೆ ಬೆಕ್ಕಿನ ನಡಿಗೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ಜಾಕ್ ಎಯರ್ಸ್: ಬ್ರಿಟಿಷ್ ಪರ್ಸನಲ್ ಟ್ರೈನರ್ ಜಾಕ್ ಎಯರ್ಸ್ ನ್ಯೂನ್ಯತೆ ಹೊಂದಿದ ಮೊದಲ ಪುರುಷ ಮಾಡೆಲ್. ಇವರಿಗೆ ಬಲ ಕಾಲು ಇಲ್ಲ. ಬದಲಾಗಿ ಕೃತಕ ಬಲ ಕಾಲಿನ ಮೂಲಕ Ramp ವಾಕ್ ಮಾಡಿ ಸಂಚಲನ ಮೂಡಿಸಿದ್ದರು. 

ಲಕ್ಷ್ಮೀ ಅಗರರ್ವಾಲ್‌: ಈಕೆ ಆಸಿಡ್‌ ಸಂತ್ರಸ್ತೆ. ತನಗಾದ ಅನ್ಯಾಯಕ್ಕೆ ಹೆದರದೇ ಅದೆಷ್ಟೋ ಆಸಿಡ್‌ ಸಂತೃಸ್ತೆಯರ ಧ್ವನಿಯಾಗಿದ್ದಾರೆ. ಲಕ್ಷ್ಮಿ ಇದೀಗ ಭಾರತದ ಉಡುಗೆ ಕಂಪನಿ Viva N Diva ರೂಪದರ್ಶಿ. 

ಬಿಪಿ ಕಂಟ್ರೋಲ್ ಮಾಡೋ ಕಾಲುಂಗರ!

ಡೆಬ್ಬೀ ವ್ಯಾನ್ ಡೇರ್ ಪುಟ್ಟೆನ್ : ಈ ಡಚ್ ಮಹಿಳೆ 22 ನೇ ವಯಸ್ಸಿನಲ್ಲಿ ಅಪಘಾತದಲ್ಲಿ ತನ್ನ ಬಲ ಕೈಯನ್ನು ಕಳೆದುಕೊಂಡಳು. ಮೊದ ಮೊದಲು ಕನ್ನಡಿ ನೋಡಲು ಹೆದರುತ್ತಿದ್ದ ಈಕೆ ಮುಂದೆ ಪ್ಲೇ ಬಾಯ್ ಮ್ಯಾಗಝಿನ್ ನಲ್ಲಿ ಮಿಂಚಿದರು. 

click me!