'ಆ ದಿನಗಳ'ಲ್ಲಿ ಏನು ತಿನ್ನಬೇಕು?

By Web Desk  |  First Published May 11, 2019, 3:14 PM IST

ಪೀರಿಯಡ್ಸ್‌ನಲ್ಲಿ ಹೊಟ್ಟೆನೋವು ಒಬ್ಬೊಬ್ಬರಿಗೆ ಅಸಹನೀಯ. ಅದರಲ್ಲೂ ಒಂದೊಂದು ದಿನ ಹಾಸಿಗೆ ಬಿಟ್ಟು ಏಳಲೂ ಆಗದು. ಇದಕ್ಕೆ ನೀವು ತೆಗೆದುಕೊಳ್ಳುವ ಆಹಾರವೂ ಕಾರಣವಿರಬಹುದು. ಹಾಗಾದರೆ, ಪೀರಿಯಡ್ಸ್ ಸಂದರ್ಭದಲ್ಲಿ ನೋವು ಕಡಿಮೆಯಾಗಲು ಯಾವೆಲ್ಲ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ?


ಪೀರಿಯಡ್ಸ್ ಎಂದರೆ ಹೊಟ್ಟೆನೋವು, ಸಂಕಟ, ಭೇದಿ, ಮಲಬದ್ಧತೆ, ಮೂಡ್ ಸ್ವಿಂಗ್ಸ್, ತಲೆನೋವು, ಕಾಲು ನೋವು ಹೀಗೆ ಹಲವಾರು ಕಿರಿಕಿರಿಗಳು. ಆದರೆ, ಇವುಗಳಿಂದ ಒಂದು ಮಟ್ಟಿಗೆ ಪಾರು ಮಾಡುವ ಶಕ್ತಿ ನೀವು ತೆಗೆದುಕೊಳ್ಳುವ ಆಹಾರಕ್ಕಿದೆ. ಋತುಬಂಧದ ಆ ದಿನಗಳಲ್ಲಿ ಏನೇನು ಸೇವಿಸಬೇಕು ಗೊತ್ತಾ? 

ಸಾಲ್ಮೋನ್ 

Latest Videos

undefined

ಈ ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್‌ನಲ್ಲಿ ಹೇರಳ ಆ್ಯಂಟಿ ಆಕ್ಸಿಡೆಂಟ್ಸ್ ಇವೆ. ಇದು ಗರ್ಭಾಶಯವನ್ನು ರಿಲ್ಯಾಕ್ಸ್ ಮಾಡಿ, ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದರಲ್ಲಿ ಪ್ರೋಟೀನ್ ಹಾಗೂ ವಿಟಮಿನ್ ಬಿ ಇದ್ದು, ಆ ಸಮಯದಲ್ಲಿ ಶಕ್ತಿಕುಂದದಂತೆ ನೋಡಿಕೊಳ್ಳುತ್ತವೆ.

ಬಾಳೆಹಣ್ಣು

ಪೀರಿಯಡ್ಸ್ ಸಮಯದಲ್ಲಿ ಡಯಾರಿಯಾ ಕಾಮನ್. ಬಾಳೆಹಣ್ಣು ಇದಕ್ಕೆ ಉತ್ತಮ ಮದ್ದು. ಬಾಳೆಹಣ್ಣಿನಲ್ಲಿರುವ ಮೆಗ್ನೀಷಿಯಂ, ಪೊಟಾಷಿಯಂ, ಹಾಗೂ ಫೈಬರ್ ನಿಮ್ಮ ಬೊವೆಲ್ ಮೂವ್‌ಮೆಂಟ್ ಸರಿಯಾಗಿ ಆಗುವಂತೆ ಮಾಡುತ್ತದೆ. ಜೊತೆಗೆ ಇದು ಮೂಡ್ ರಿಲ್ಯಾಕ್ಸರ್ ಕೂಡಾ ಹೌದು. ಉತ್ತಮ ಸ್ನಾಯು ರಿಲ್ಯಾಕ್ಸರ್ ಆಗಿರುವ ಮೆಗ್ನೀಶಿಯಂ ಹೊಟ್ಟೆನೋವನ್ನೂ ತಗ್ಗಿಸುತ್ತದೆ.

ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

ಡಾರ್ಕ್ ಚಾಕೋಲೇಟ್

ಹೆಚ್ಚು ಹೆಚ್ಚು ಚಾಕೋಲೇಟ್ ತಿನ್ನಲು ಕಾರಣ ಹುಡುಕುವವರು ನೀವಾದರೆ, ಅದಕ್ಕೆ ಪೀರಿಯಡ್ಸ್‌ ಅನ್ನು ಕೂಡಾ ಒಂದು ಕಾರಣ ಮಾಡಿಕೊಳ್ಳಬಹುದು. ಆರ್ಗ್ಯಾನಿಕ್ ಡಾರ್ಕ್ ಚಾಕೋಲೇಟ್ ನಿಮ್ಮನ್ನು ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ಕಂಫರ್ಟ್ ಆಗಿರಿಸುತ್ತದೆ. ಆದರೆ ಇತರೆ ಸ್ವೀಟ್ಸ್ ಹಾಗೂ ಪ್ರೊಸೆಸ್ಡ್ ಕ್ಯಾಂಡಿಯಿಂದ ದೂರವಿರಿ. ಏಕೆಂದರೆ, ಆರ್ಟಿಫಿಶಿಯಲ್ ಶುಗರ್ ಹೊಂದಿದ ಚಾಕೋಲೇಟ್‌ಗಳು ಎಂದಿಗೂ ಒಳ್ಳೆಯವಲ್ಲ. 

‌ಹೂಕೋಸು

ಪೀರಿಯಡ್ಸ್ ಸಮಯದಲ್ಲಿ ಸಿಕ್ಕಾಪಟ್ಟೆ ಸುಸ್ತೆನಿಸುತ್ತದೆಯೇ? ಹಾಗಿದ್ದರೆ, ಹೂಕೋಸಿನ ತಿನಿಸುಗಳನ್ನು ಸೇವಿಸಿ. ಆದರೆ ಅವುಗಳಿಗೆ ಹೆಚ್ಚು ಉಪ್ಪು ಸೇರಿಸಬೇಡಿ. ಇದರಲ್ಲಿ ಫೈಬರ್ ಹಾಗೂ ಐರನ್ ಅಧಿಕವಾಗಿದ್ದು, ಪೀರಿಯಡ್ಸ್‌ನಲ್ಲಿ ಆಗುವ ಬ್ಲೀಡಿಂಗ್‌ನಿಂದ ನಷ್ಟವಾಗುವ ಐರನ್ ಅನ್ನು ತುಂಬಿಕೊಡುತ್ತದೆ. ಜೊತೆಗೆ, ಜೀರ್ಣಕ್ರಿಯೆ ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ.

ಕಿತ್ತಳೆ ಹಣ್ಣುಗಳು

ಕಿತ್ತಳೆಯಲ್ಲಿ ವಿಟಮಿನ್ ಡಿ ಹಾಗೂ ಕ್ಯಾಲ್ಶಿಯಂ ಅಧಿಕವಾಗಿದ್ದು, ಒಟ್ಟಿಗೆ ಸೇವಿಸಿದಾಗ ನೋವನ್ನು ಶಮನಗೊಳಿಸಿ ಆತಂಕ ಹಾಗೂ ಖಿನ್ನತೆಯಿಂದ ಹೊರತರುತ್ತದೆ. ಇನ್ನು ಸಿಟ್ರಸ್ ಹಣ್ಣುಗಳಾದ ನಿಂಬು, ದಾಳಿಂಬೆ, ದ್ರಾಕ್ಷಿಗಳೆಲ್ಲವೂ ಆರೆಂಜ್‌ನಂತೆಯೇ ಮೂಡನ್ನು ಸರಿಪಡಿಸುತ್ತವೆ. ಜೊತೆಗೆ, ಪೀರಿಯಡ್ಸ್ ಸಂದರ್ಭದ ಸಂಕಟಕ್ಕೆ ಮುಕ್ತಿ  ನೀಡುತ್ತದೆ. 

ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

ಮೊಟ್ಟೆಗಳು

ಮೊಟ್ಟೆಯಲ್ಲಿ ಸಿಕ್ಕಾಪಟ್ಟೆ ಐರನ್, ವಿಟಮಿನ್ಸ್, ಫ್ಯಾಟಿ ಆ್ಯಸಿಡ್ಸ್ ಹಾಗೂ ಪ್ರೋಟೀನ್ ಇದೆ. ಇದು ಪೀರಿಯಡ್ಸ್ ಸಂದರ್ಭದಲ್ಲಿ ಶಕ್ತಿಗುಂದದಂತೆ ನೋಡಿಕೊಳ್ಳುತ್ತದೆ.

click me!