ಮಾನ್ಸೂನ್‌ನಲ್ಲಿ ಪಾದರಕ್ಷೆ ಕೇರ್..

By Vaishnavi ChandrashekarFirst Published Jun 14, 2018, 3:13 PM IST
Highlights

ಸಾವಿರಾರು ರು. ಕೊಟ್ಟು ಪಾದರಕ್ಷೆ ಕೊಳ್ಳುತ್ತೇವೆ. ಆದರೆ, ಮೆಂಟೇನ್ ಮಾಡೋದೇ ಕಷ್ಟ. ಅದರಲ್ಲಿಯೂ ಬೆಂಗಳೂರಿನಂಥ ಊರಿನಲ್ಲಿ ಸುರಿಯುವ ಮಳೆಗೆ ಸ್ಲಿಪ್ಪರ್ ಅನ್ನುಕಾಪಾಡಿಕೊಳ್ಳುವುದೇ ಒಂದು ದೊಡ್ಡ ಚಾಲೆಂಜ್.

ಸದಾ ನೀರು ಬಿದ್ದರೆ ಸ್ಲಿಪ್ಪರ್ಸ್ ಅಥವಾ ಶೂಸ್ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ. ಕೆಸರು, ಕೊಚ್ಚೆ ಹಾರಿ ಅದು ನೋಡದಂತಾಗಿರುತ್ತದೆ. ಆದರೆ, ಇಂಥ ಚಪ್ಪಲಿಗಳನ್ನೂ ನೀಟಾಗಿ ಮೆಂಟೇನ್ ಮಾಡಿದರೆ ಹಾಳಾಗದಂತೆ ಎಚ್ಚರವಹಿಸಬಹುದು. ಹೇಗೆ?

  • ಶೂ ಅಥವಾ ಚಪ್ಪಲಿಗಳಿಗೆ ಶೂ ಬ್ರಷ್‌ನಿಂದ ಪಾಲಿಷ್ ಮಾಡಿಡಬೇಕು. ಇಲ್ಲವಾದಲ್ಲಿ ಅದಕ್ಕೆ ಅಂಟಿರುವ ಮಣ್ಣು ಹಾಗೂ ತೇವಾಂಶ ಉಳಿದು, ಬೇಗ ಹಾಳಾಗುತ್ತದೆ.
  • ಕೋಣೆಯಲ್ಲಿ ಇಡುವ ಮುನ್ನ ತೇವಾಂಶ ತೆಗೆದಿಡಬೇಕು ಇಲ್ಲವಾದರೆ ಅದರ ಮೇಲೆ ಶಿಲೀಂದ್ರಗಳನ್ನು ಸೃಷ್ಟಿಸುತ್ತದೆ.
  • ವ್ಯಾಕ್ಸಿಂಗ್‌ಗೆ ವೆಚ್ಚವಾದರೂ, ಬೆಲೆ ಬಾಳುವ ಶೂಸ್, ಚಪ್ಪಲಿ ಹಾಳಾಗದಂತೆ ಕಾಪಾಡಿಕೊಳ್ಳಬಹುದು. ಆಗಾಗ ಪಾಲಿಶ್ ಮಾಡುವುದ ತಪ್ಪಿಸಬಾರದು.
  • ಶೊ ರ‍್ಯಾಕ್‌ನಲ್ಲಿಡೋ ಮುನ್ನ ಪೇಪರ್ ಅಥವಾ ಶೂ ಟ್ರೇ ಬಳಿಸಿದರೆ, ತೇವಾಂಶ ಕಡಿಮೆಯಾಗುತ್ತದೆ. 
  • ಶೂ ರ‍್ಯಾಕ್‌‌ನಲ್ಲಿ ತೇವಾಂಶ ನಿರ್ವಹಣೆಗೆಂದೇ ಒಂದು ಯಂತ್ರ ಸಿಗುತ್ತದೆ. ಅದನ್ನು ಫಿಕ್ಸ್ ಮಾಡೋದ್ರಿಂದ ದುಬಾರಿ ಚಪ್ಪಲಿಗಳನ್ನು ಕಾಪಾಡಿಕೊಳ್ಳಬಹುದು.
  • ಶೊ ಸ್ಪ್ರೇ ಬಳಸುವುದರಿಂದ ಕೊಳೆ ತೆಗೆಯಬಹುದು.
click me!