ಈಗ ಬ್ರಿಟನ್ ಸೇರಿದಂತೆ ಯುರೋಪ್‌ನ ಎಲ್ಲೆಡೆ ಒಂದೇ ಸುದ್ದಿ- ಬ್ರಿಟಿಷ್ ರಾಜಮನೆತನ ಒಡೆದುಹೋಗಿದೆಯಂತೆ. ಪ್ರಿನ್ಸ್ ಹ್ಯಾರಿ ಮತ್ತು ಅವನ ಹೆಂಡತಿ ಮೆಗನ್ ಮರ್ಕೆಲ್, ಅರಮನೆಯಿಂದ ಹೊರಬಂದು ಉತ್ತರ ಅಮೆರಿಕದ ಕೆನಡಾದಲ್ಲಿ ಸೆಟಲ್ ಆಗಲು ಬಯಸಿದ್ದಾರೆ. ಮೇಗನ್ ಮರ್ಕಲ್ ಬ್ರಿಟಿಷ್ ರಾಜಮನೆತನ ಒಡೆದಳಾ?
ಈಗ ಬ್ರಿಟನ್ ಸೇರಿದಂತೆ ಯುರೋಪ್‌ನ ಎಲ್ಲೆಡೆ ಒಂದೇ ಸುದ್ದಿ- ಬ್ರಿಟಿಷ್ ರಾಜಮನೆತನ ಒಡೆದುಹೋಗಿದೆಯಂತೆ. ಪ್ರಿನ್ಸ್ ಹ್ಯಾರಿ ಮತ್ತು ಅವನ ಹೆಂಡತಿ ಮೆಗನ್ ಮರ್ಕೆಲ್, ಅರಮನೆಯಿಂದ ಹೊರಬಂದು ಉತ್ತರ ಅಮೆರಿಕದ ಕೆನಡಾದಲ್ಲಿ ಸೆಟಲ್ ಆಗಲು ಬಯಸಿದ್ದಾರೆ. ತಮಗೆ ರಾಜ ಮನೆತನದ ಎಲ್ಲ ಹೊಣೆಗಾರಿಕೆಯಿಂದ ಮುಕ್ತಿ ನೀಡುವಂತೆ ರಾಣಿಯನ್ನು ಕೋರಿಕೊಂಡಿದ್ದಾರೆ.
ಹ್ಯಾರಿ ದಂಪತಿ ರಾಜ ಪ್ರಭುತ್ವ ತೊರೆಯಲು ರಾಣಿ ಸಮ್ಮತಿ
ಇದೆಲ್ಲವೂ ನಿಜ. ತಾವು ಹಣಕಾಸಿನ ವಿಷಯದಲ್ಲಿ ಇಂಡಿಪೆಂಡೆಂಟ್ ಆಗುತ್ತೇವೆ. ತಮಗೊಂದಿಷ್ಟು ಪಾಲು ಕೊಟ್ಟುಬಿಡಿ, ಬ್ರಿಟನ್ ಹಾಗೂ ಕೆನಡಾದ ಮಧ್ಯೆ ನಾವು ಓಡಾಡುತ್ತಾ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ. ಆದರೆ ನಮಗೆ ಸಾಮಾಜಿಕ ಸೇವೆಯ ಹೊಣೆಯನ್ನು ಹೆಚ್ಚು ಹೆಚ್ಉಚ ನಿರ್ವಹಿಸುವ ಆಸೆಯಿದೆ. ಇಲ್ಲಿ ಬ್ರಿಟನ್‌ನಲ್ಲಿ ಇದ್ದುಕೊಂಡು ಅದನ್ನು ಮಾಡಲು ಸಾಧ್ಯವಾಗತ್ತಿಲ್ಲ. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಇದು ಹ್ಯಾರ ಮತ್ತು ಮೆಗನ್ ದಂಪತಿಯ ಕೋರಿಕೆ. ಈ ಕೋರಿಕೆಗೂ ಮುನ್ನ ತಮ್ಮ ಮುದ್ದು ಮಗು ಆರ್ಚಿಯನ್ನು ಇಬ್ಬರೂ ಕೆನಡಾದಲ್ಲಿ ಅಜ್ಜಿ ಮನೆಯಲ್ಲಿ ಸೇ್ ಆಗಿ ಬಚ್ಚಿಟ್ಟು ಬಂದಿದ್ದಾರೆ. ಇದು, ರಾಜ ಮನೆತನದ ಬಗ್ಗೆ ಅರಿಗರುವ ಭಯವನ್ನೂ ಸೂಚಿಸುತ್ತದೆ ಎನ್ನುತ್ತಾರೆ ಕೆಲವು ಬ್ರಿಟಿಷ್ ರಾಜಕೀಯ ತಜ್ಞರು.
ಆದರೆ ಈ ಮಧ್ಯೆ ಬ್ರಿಟನ್‌ನ ಹಲವು ಮೀಡಿಯಾಗಳು, ಟ್ಯಾಬ್ಲಾಯ್ಡ್‌ಗಳು- ಹ್ಯಾರಿಯ ತ್ನಿ ಮೆಗನ್‌ಳನ್ನು ಖಳನಾಯಕಿ ಎಂಬಂತೆ ಚಿತ್ರಿಸುತ್ತಿವೆ. ಪ್ರಿನ್ಸ್ ಹ್ಯಾರಿ, ರಾಜಕುಮಾರಿ ಡಯಾನಾಳ ಎರಡನೇ ಮಗ. ಆತನ ಅಣ್ಣ ವಿಲಿಯಂ. ಹ್ಯಾರಿ ಕಳೆದೆರಡು ವರ್ಷಗಳ ಹಿಂದೆ ನಟಿ ಮೆಗನ್ ಮರ್ಕೆಲ್‌ಳನ್ನು ಪ್ರೀತಿಸಿ ಮದುವೆಯಾಗಿದ್ದ. ಪ್ರಿನ್ಸ್ ವಿಲಿಯಂ ಕೂಡ ಮದುವೆಯಾಗಿರುವುದು ಕೇಟ್ ಮಿಡಲ್‌ಟನ್ ಎಂಬ ನಟಿಯನ್ನು. ಪ್ರಸ್ತುತ ಹ್ಯಾರಿ-ಮೆಗನ್ ಒಡ್ಡಿರುವ ಬಿಕ್ಕಟ್ಟಿನಿಂದಾಗಿ ವಿಲಿಯಂ ಕೂಡ ಕ್ರುದ್ಧನಾಗಿದ್ದಾನೆ. ಆತನಿಗೂ ತಮ್ಮ ಅರಮನೆಯಿಂದ ಹೊರ ಹೋಗುತ್ತಿರುವುದು ಇಷ್ಟವಿಲ್ಲ. 'ಇಷ್ಟರವೆರಗೂ ಹ್ಯಾರಿಯನ್ನು ಕಾಪಾಡಿದ್ದೆ. ಇನ್ನು ನನ್ನಿಂದ ಸಾಧ್ಯವಿಲ್ಲ' ಎಂದು ಆತ ಹೇಳಿದ್ದಾನೆ.
ಬ್ರಿಟನ್ ರಾಜಪ್ರಭುತ್ವ ತ್ಯಜಿಸಿದ ಪ್ರಿನ್ಸ್ ಹ್ಯಾರಿ ಮತ್ತು ಮೇಗನ್
ಹ್ಯಾರಿ ಮದುವೆಯಾಗಿರುವ ಮೆಗನ್ ಮರ್ಕೆಲ್‌ಳ ಮೂಲ ಕೆನಡಾ. ಈಕೆ ತನ್ನ ಸರಳ ನಡವಳಿಕೆ, ಸಮಾಜ ಸೇವೆ ಇತ್ಯಾದಿಗಳಿಗೆ ಹೆಸರಾದವಳು. ಅದನ್ನೆಲ್ಲ ಮುಂದುವರಿಸಬೇಕು ಎಂಬುದು ಈಕೆಯ ಇಷ್ಟ. ಆದರೆ ಬ್ರಿಟಿಷ್ ಅರಸು ಮನೆತನ ಸೇರಿದ ಮೇಲೆ ಅದೆಲ್ಲ ನಡೆಯದು. ತಮ್ಮ ಅರಸುಗಳು ಬೀದಿಗೆ ಬಂದು ತಮ್ಮ ಹಾಗೇ ನಡೆದಾಡುವುದನ್ನು ಬ್ರಟಿಷ್ ಜನ ಸಹಿಸರು. ಅವರನ್ನು ಅರಮನೆಯಲ್ಲಿ, ದೇವತೆಗಳಂತೆಯೇ ನೋಡಲು ಬಯಸುವವರು ಅಧಿಕ. ಅದಕ್ಕೆ ತಕ್ಕಂತೆ ಅಲ್ಲಿನ ಟ್ಯಾಬ್ಲಾಯ್ಡ್ ಮತ್ತಿತರ ಮೀಡಿಯಾಗಳು ರಾಜಮನೆತನದವರನ್ನು ನಿಗೂಢವಾಗಿಯೂ ಅತಿರಂಜಕವಾಗಿಯೂ ಚಿತ್ರಿಸುತ್ತವೆ. ಅವರ ಪ್ರತಿಯೊಂದು ನಡೆನುಡಿಯನ್ನೂ ವರ್ಣಿಸಿ ವರ್ಣಿಸಿ ಬರೆಯುತ್ತವೆ. ಈಗ ಅವುಗಳಿಗೆ ಸುಲಭ ಆಹಾರವಾಗಿ ಸಿಕ್ಕಿರುವವಳು ಮೆಗನ್.
ಈಕೆಯೇ ಪ್ರಿನ್ಸ್ ಹ್ಯಾರಿಯನ್ನು ತಲೆಯನ್ನು ತಿರುಗಿಸಿದ್ದಾಳೆ ಎಂಬಂತೆ ಹಲವು ಮೀಡಿಯಾಗಳು ಚಿತ್ರಿಸುತ್ತಿವೆ. ಆಕೆಯ ಚಿತಾವಣೆಯಿಂದಾಗಿಯೇ ಹ್ಯಾರಿ ರಾಜಮನೆತನದ ಹೊಣೆಗಳಿಂದ ಆಚೆ ಹೋಗಿ ಕೆನಡಾದಲ್ಲಿ ಮಜಾ ಮಾಡಿಕೊಂಡಿರಲು ಬಯಸುತ್ತಿದ್ದಾನೆ ಎಂಬಂತೆ ಬರೆಯುತ್ತಿವೆ. ಆದರೆ ಇದು ನಿಜವಲ್ಲ. ಮೆಗನ್ ಬೋಧನೆಯಿಂಧ ಹ್ಯಾರಿ ಬದಲಾಗಬೇಕಾದ ಪ್ರಮೇಯವೇ ಇಲ್ಲ. ಯಾಕೆಂದರೆ ಹ್ಯಾರಿಯ ಮನಸ್ಸೇ ರಾಜಮನೆತನದಲ್ಲಿ ಕಟ್ಟುಪಾಡಿಗೆ ಬೀಳುವಂಥದ್ದೇ ಅಲ್ಲ. ಆತ ಯಾವಾಗಲೂ ಒಂದು ಗೆಯ ರೆಬೆಲ್ ಮನಸ್ಥಿತಯವನು. ಮದುವೆಗೂ ಮುನ್ನವೇ ಆತ ರಾಜಮನೆತನದ ಹೊಣೆಗಳಿಂದ ಆಚೆ ನಿಂತು ಗೆಳೆಯರೊಡನೆ ಪಾರ್ಟಿ ಮಾಡಿಕೊಂಡು ಇರುತ್ತಿದ್ದ.
ಬ್ರಿಟನ್ ಅರಮನೆಯಿಂದ ಚಿನ್ನದ ಕಮೋಡ್ ಕಳ್ಳತನ
ಹ್ಯಾರಿ ಈಗ ಮೆಗನ್ ಮತ್ತು ತನ್ನ ಮಗುವನ್ನು ಕರೆದುಕೊಂಡು ದೂರ ಹೋಗಲು ಬಲು ಮುಖ್ಯ ಕಾರಣ ಬೇರೊಂದಿದೆ ಎಂದು ಕೆಲವು ತಜ್ಞರು ಊಹಿಸುತ್ತಾರೆ. ಅದೇನೆಂದರೆ, ತಮ್ಮ ತಾಯಿಗೆ ಒದಗಿದ ದುರ್ಗತಿಯ ಬಗ್ಗೆ ಅವನಿಗೆ ಈಗಲೂ ಇರುವ ಭೀತಿ. ಪ್ರಿನ್ಸೆಸ್ ಡಯಾನಾ, ಪಾಪರಾಜಿಗಳೆಂದು ಕರೆಸಿಕೊಳ್ಳುವ ಸೆಲೆಬ್ರಿಟಿ ಜರ್ನಲಿಸ್ಟ್‌ಗಳ ಕಣ್ಣಿಗೆ ಬಿದ್ದು, ಅವರಿಂದ ಪಾರಾಗಲು ವೇಗವಾಗಿ ಕಾರು ಓಡಿಸಿ ಆಕ್ಸಿಡೆಂಟ್‌ಗೆ ಬಲಿಯಾಗಿದ್ದಳು. ಆಕೆಯ ಜೀವನವನ್ನು ಪತ್ರಕರ್ತರು ಸದಾ ಹಿಂಬಾಲಿಸಿ ಬರೆದು ಚಿಂದಿಚಿಂದಿ ಮಾಡಿದ್ದರು. ಅದೇ ದುರ್ಗತಿ ತನಗೂ ತನ್ನ ಹೆಂಡತಿಗೂ ಮಗುವಿಗೂ ಬರುವುದು ಬೇಡ ಎಂಬುದು ಹ್ಯಾರಿಯ ದೂರದೃಷ್ಟಿಯಂತೆ. ಇದನ್ನೀಗ ಬ್ರಿಟಿಷ್ ರಾಜಮನೆತನದ ಸೆಕ್ಯುರಿಟಿ ಮುಖ್ಯಸ್ಥನೂ ಖಚಿತಪಡಿಸಿದ್ದಾನೆ.
ಅಂದರೆ ಡಯಾನಾ ಸತ್ತು ಹಲವು ವರ್ಷಗಳಾದರೂ ಆಕೆಯ ಸಾವಿನ ನೆರಳು ಮನೆತನದ ಮೇಲೆ ಇನ್ನೂ ಹಾಗೇ ಕರಾಳವಾಗಿ ಉಳಿದಿದೆ ಎಂದಾಯಿತು. ಹಾಗಾಗಿ ಮೆಗನ್‌ಳನ್ನು ಯಾರೂ ದೂರಬೇಕಿಲ್ಲ.