ಇಲ್ಲೊಂದು ತಾಯಿ ನಾಯಿಯೊಂದು ತನ್ನ ಪುಟ್ಟ ಮರಿಗಳ ಹೊಟ್ಟೆ ತುಂಬಿಸಲು ಬಾಯಿತುಂಬ ಬಿಸ್ಕೆಟ್‌ಗಳನ್ನು ತುಂಬಿಸಿ ತೆಗೆದುಕೊಂಡು ಬಂದು ಮರಿಗಳಿಗೆ ನೀಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ಕರುಳು ಚುರುಕೆನಿಸುತ್ತಿದೆ.
ಪ್ರಾಣಿಗಳೇ ಇರಲಿ ಮನುಷ್ಯರೇ ಇರಲಿ ತಾಯಿ ಎಂದ ಮೇಲೆ ತಾಯಿಯೇ, ತಾಯಿ ತನ್ನ ಮಕ್ಕಳ ಹೊಟ್ಟೆ ತುಂಬಿಸುವುದಕ್ಕಾಗಿ ಏನು ಮಾಡಲು ಸಿದ್ದಳಿರುತ್ತಾಳೆ. ತನ್ನ ಹೊಟ್ಟೆ ಚುರುಗುಟ್ಟಿದರು ತನ್ನ ಮಗು ಹೊಟ್ಟೆ ತುಂಬ ಉಂಡು ಫುಲ್ ಖುಷಿಯಾಗಿ ಓಡಾಡಬೇಕು ಎಂದು ತಾಯಿ ಬಯಸುತ್ತಾಳೆ. ಒಂದು ಹೊತ್ತು ಮಕ್ಕಳು ಊಟ ಮಾಡದಿದ್ದರೂ ಅಮ್ಮ (Mother) ತುಂಬಾ ಚಡಪಡಿಸುತ್ತಾಳೆ. ಈ ತಾಯ್ತನದ ಮಮತೆ ತೋರುವುದರಲ್ಲಿ ಶ್ವಾನಗಳೇನು ಕಡಿಮೆ ಇಲ್ಲ, ಮರಿ ಹಾಕಿದ ನಾಯಿಯೊಂದು ತನ್ನ ಮರಿಗಳ ಹೊಟ್ಟೆ ತುಂಬಿಸಲು ಇನ್ನಿಲ್ಲದ ಕಷ್ಟ ಪಡುತ್ತದೆ. ಇನ್ನು ಬೀದಿ ನಾಯಿಯಾದರೆ ಮುಗಿದೆ ಹೋಯಿತು, ಅದಕ್ಕೆ ಕರೆದು ಊಟ ಹಾಕುವವರು ತೀರಾ ಕಡಿಮೆ, ಇದಕ್ಕಾಗಿ ಅದು ಅಲ್ಲಿಲ್ಲಿ ಅಂಗಡಿ ಶಾಪ್‌ಗಳ ಮುಂದೆ ಜನ ತಿಂದು ಬಿಸಾಕಿದ ತಟ್ಟೆಗಳಲ್ಲಿ ಏನಾದರೂ ಇದೆಯೋ ಎಂದು ಕಾದು ಕುಳಿತು ಅದರಲ್ಲಿದ್ದ ಅಳಿದುಳಿದ ಆಹಾರಗಳನ್ನು ತಿನ್ನುತ್ತದೆ. ಇನ್ನು ತನ್ನ ಮರಿಗಳು ಆಹಾರ ತಿನ್ನಲು ಶುರು ಮಾಡಿದ ನಂತರ ಅದು ತಾನು ತಿನ್ನದೇ ಮರಿಗಳಿಗೆ ತಂದು ಕೊಡುವ ಕೆಲಸ ಮಾಡುತ್ತದೆ. ಅದೇ ರೀತಿ ಇಲ್ಲೊಂದು ತಾಯಿ ನಾಯಿಯೊಂದು ತನ್ನ ಪುಟ್ಟ ಮರಿಗಳ ಹೊಟ್ಟೆ ತುಂಬಿಸಲು ಬಾಯಿತುಂಬ ಬಿಸ್ಕೆಟ್‌ಗಳನ್ನು ತುಂಬಿಸಿ ತೆಗೆದುಕೊಂಡು ಬಂದು ಮರಿಗಳಿಗೆ ನೀಡುತ್ತಿರುವ ವೀಡಿಯೋವೊಂದು ಕರುಳು ಚುರುಕೆನಿಸುತ್ತಿದೆ.
ಔಟ್ ಆಪ್ ಕಂಟ್ರೋಲ್ ಲೈಫ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಮರಿಗಳ ಮೇಲಿನ ನಾಯಿ ತಾಯಿಯ ಮಮತೆ ಎಲ್ಲರ ಕಣ್ಣಂಚನ್ನು ತೇವ ಗೊಳಿಸುತ್ತಿದೆ. ತಾಯಿ ಒಂದು ಬೀದಿನಾಯಿಯಾಗಿದ್ದು(Street Dog) ತಾನು ಮಾತ್ರ ಆಹಾರ ತಿನ್ನದೇ ಬಡಕಲಾಗಿದೆ. ಆದರೆ ಅದರ ಪುಟಾಣಿ ಮರಿಗಳು (Puppies)ಗುಂಡುಗುಂಡಾಗಿದ್ದು, ಓಡಾಡುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಇದಕ್ಕೆ ಕಾರಣ ತಾಯಿಯ ಮಮತೆ. ತಾಯಿ ತನಗೆ ಸಿಕ್ಕಿದ ಏನನ್ನು ತಿನ್ನದೇ ಮರಿಗಳಿಗೆ ತಂದು ನೀಡುತ್ತಿರುವುದರ ಪರಿಣಾಮ ಈ ತಾಯಿ ನಾಯಿ ಬಡಕಲಾಗಿದ್ದರೆ, ಇತ್ತ ಮರಿಗಳು ಅಮ್ಮ ತಂದು ಕೊಟ್ಟಿದ್ದನ್ನು ತಿಂದು, ಅಮ್ಮನ ಹಾಲನ್ನು ಕುಡಿದು ಮುದ್ದುಮುದ್ದಾಗಿ ಬೆಳೆದಿವೆ. ಸಹಜ ಮಾನವ ತಾಯಿಯಂತೆಯೇ ಈ ಶ್ವಾನವೂ ಕೂಡ ತನ್ನ ಕಷ್ಟದ ಬಗ್ಗೆ ತನ್ನ ಹೊಟ್ಟೆಪಾಡಿನ ಬಗ್ಗೆ ಚಿಂತೆ ಮಾಡದೇ ಮರಿಗಳ ಹೊಟ್ಟೆ ತುಂಬಿಸುವ ಈ ವೀಡಿಯೋ ಮನಕಲುಕುವಂತಿದ್ದು,ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್(Viral) ಆಗಿದೆ.
undefined
70ರ ಇಳಿ ವಯಸಲ್ಲಿ ಅವಳಿಗೆ ಜನ್ಮವಿತ್ತ ಉಗಾಂಡಾದ ಮಹಿಳೆ
ಈ ವೀಡಿಯೋ ನೋಡಿದ ಜನ ಭಾವುಕರಾಗಿದ್ದು (Emotional Video) ಹೃದಯದ ಇಮೋಜಿಯ ಕಾಮೆಂಟ್ ಮಾಡಿದ್ದಾರೆ. ಕೇವಲ ತಾಯಿ ಮಾತ್ರ ಈ ಜಗತ್ತಿನಲ್ಲಿ ತಾನು ಉಪವಾಸವಿದ್ದರೂ ಮಕ್ಕಳು ಹೊಟ್ಟೆತುಂಬ ತಿನ್ನಬೇಕು ಎಂದು ಬಯಸುತ್ತಾಳೆ ಎಂದು ವೀಡಿಯೋ ನೋಡಿದ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ತಾಯಿ ಮಕ್ಕಳ ಸಂಬಂಧಕ್ಕೆ ಸರಿ ಸಮಾನವಾದ ಸಂಬಂಧ ಈ ಜಗತ್ತಿನಲ್ಲಿ ಬೇರೇನು ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ಕಣ್ಣಿನಲ್ಲಿ ನನಗರಿವಿಲ್ಲದೇ ನೀರು ಬರುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂತಹ ಶ್ವಾನಗಳನ್ನು ಕಂಡರೆ ಸ್ವಲ್ಪ ಆಹಾರ (Food) ನೀಡಿ, ಕಲ್ಲಿನಿಂದ ಹೊಡೆದು ಓಡಿಸಿ ಅವುಗಳ ಜೀವನ ಇನ್ನಷ್ಟು ಹೀನಾಯಗೊಳಿಸಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿನ್ನಂತ ತಾಯಿ ಮುಂದೆ ದೇವರು (God) ಏನು ಅಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ತಾಯಿ ಪ್ರೀತಿಯನ್ನು ತೋರುವ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಭಾವುಕರಾಗಿದ್ದಾರೆ.
ಇದು ಭಾರತದ ಅತೀ ದೊಡ್ಡ ಕೂಡು ಕುಟುಂಬ: ಒಂದೇ ಸೂರಿನಡಿ ಬದುಕ್ತಿದ್ದಾರೆ 150ಕ್ಕೂ ಹೆಚ್ಚು ಜನ!