Health Tips: ಯಾವಾಗ್ಲೂ ಬ್ರೆಡ್ ತಿನ್ನೋದು, ಆಲ್ಕೋಹಲ್ ಕುಡಿಯೋದು ಮಾಡಿದ್ರೆ ಕ್ಯಾನ್ಸರ್ ಬರ್ಬಹುದು!

By Suvarna News  |  First Published Dec 8, 2023, 7:00 AM IST

ಕ್ಯಾನ್ಸರ್ ದಿನ ದಿನಕ್ಕೂ ಹೆಚ್ಚಾಗ್ತಿದೆ. ದೇಹದ ಅನೇಕ ಭಾಗಗಳಲ್ಲಿ ಕ್ಯಾನ್ಸರ್ ಕೋಶವನ್ನು ನಾವು ಕಾಣ್ತಿದ್ದೇವೆ. ಕೆಲ ಕ್ಯಾನ್ಸರ್ ಶುರುವಾಗಲು ನೀವೇ ಕಾರಣ. ನಿಮ್ಮ ಚಟ ಹಾಗೂ ಆಹಾರ ನಿಮ್ಮನ್ನು ಸಾವಿನಂಚಿಗೆ ತಂದು ನಿಲ್ಲಿಸುತ್ತಿದೆ. 
 


ಕ್ಯಾನ್ಸರ್ ಎಂಬ ಶಬ್ದವನ್ನು ಕೇಳಿದರೆ ಸಾಕು ಸಾವು ಕಣ್ಣೆದುರು ಬಂದಂತಾಗುತ್ತದೆ. ಒಮ್ಮೆ ಈ ರೋಗ ಆವರಿಸಿದರೆ ಮನುಷ್ಯನ ಅರ್ಧ ಆಯುಷ್ಯ ಮುಗಿದಂತೆಯೇ. ಅಪರೂಪಕ್ಕೆ ಒಬ್ಬೊಬ್ಬರು ಈ ರೋಗದಿಂದ ಬಚಾವಾಗಿ ಬದುಕುಳಿಯುತ್ತಾರೆ. ಚಿಕ್ಕವರು ದೊಡ್ಡವರೆನ್ನದೆ ಎಲ್ಲರನ್ನು ಬಾಧಿಸುವ ಈ ಕ್ಯಾನ್ಸರ್ ಈಗ ಜಾಗತಿಕ ಸಮಸ್ಯೆಯಾಗಿರುವುದು ಸುಳ್ಳಲ್ಲ.

ಆಧುನಿಕ ಜೀವನಶೈಲಿ (Lifestyle) ಹಾಗೂ ಬದಲಾಗಿರುವ ಆಹಾರ ಪದ್ಧತಿಗಳಿಂದಲೂ ಕ್ಯಾನ್ಸರ್ (Cancer) ಉಂಟಾಗುತ್ತದೆ. ಗಡಿಬಿಡಿಯ ದಿನಚರಿಯಲ್ಲಿ ಇಂದಿನ ಜನರು ಗುಣಮಟ್ಟದ ಆಹಾರದ ಬಗ್ಗೆ ಹೆಚ್ಚು ಗಮನಕೊಡುವುದಿಲ್ಲ. ಬಹುತೇಕ ಜನರು ಕರಿದ ಪದಾರ್ಥ ಹಾಗೂ ಜಂಕ್ ಫುಡ್ ಗಳ ದಾಸರಾಗಿದ್ದಾರೆ ಜೊತೆಗೆ ಮದ್ಯಪಾನಿಗಳು, ಧೂಮಪಾನಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಅನೇಕ ರೀತಿಯ ಕ್ಯಾನ್ಸರ್ ಗಳು ಬರುತ್ತವೆ. ಕ್ಯಾನ್ಸರ್ ನಲ್ಲಿಯೂ ಅನೇಕ ಬಗೆಗಳಿವೆ. ಅದರಲ್ಲೂ ಮುಖ್ಯವಾಗಿ ಕರುಳಿನ ಕ್ಯಾನ್ಸರ್ ಪ್ರಮುಖ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ ಕ್ಯಾನ್ಸರ್ ನಿಂದ ಮೃತಪಟ್ಟವರ ಪೈಕಿ ಬಹುತೇಕ ಮಂದಿ ಕರುಳಿನ ಕ್ಯಾನ್ಸರ್ ಗೆ ಒಳಗಾಗಿದ್ದರು ಎಂದು ಅಧ್ಯಯನಗಳು ಹೇಳಿವೆ.

Latest Videos

undefined

ದೊಡ್ಡ ವೃಷಣ ಇದೆಯೆಂದು ಬೀಗಬೇಡಿ, ಅಂಥವರಿಗೆ ಹೃದಯ ತೊಂದರೆ ಖಚಿತ!

ಅಧ್ಯಯನ ಹೀಗೆ ಹೇಳುತ್ತೆ : 2020 ರಲ್ಲಿ ಜಾಗತಿಕ ಮಟ್ಟದಲ್ಲಿ 1.9 ಮಿಲಿಯನ್ ಗಿಂತಲೂ ಹೆಚ್ಚು ಪ್ರಕರಣಗಳು ಮತ್ತು 9,30,000 ಕ್ಕಿಂತಲೂ ಹೆಚ್ಚಿನ ಸಾವುಗಳು ಕೊಲೊರೆಕ್ಟಲ್ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ನಿಂದ ಉಂಟಾಗಿವೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ.  ಕೊಲೆರೆಕ್ಟಲ್ ಕ್ಯಾನ್ಸರ್ ಗೆ ನಿರ್ದಿಷ್ಟವಾದ ಕಾರಣ ತಿಳಿಯದೇ ಇದ್ದರೂ ಈ ರೋಗದ ಅಪಾಯವನ್ನು ಹೆಚ್ಚಿಸುವ ಹಲವಾರು ಅಂಶಗಳನ್ನು ಪಟ್ಟಿಮಾಡಲಾಗಿದೆ.

Health and Pandemic: ಈಗಿರೋ ನಾಲ್ಕು ವೈರಸ್ಸೇ ಭವಿಷ್ಯದ ದೊಡ್ಡ ಸಾಂಕ್ರಾಮಿಕ!

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಪ್ರಕಾರ, ಗುದನಾಳದಲ್ಲಿ ಜೀವಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುವ ಖಾಯಿಲೆಯಾಗಿದೆ. ಗುದನಾಳವು ಕೊಲೊನ್ ಅನ್ನು ಗುದದ್ವಾರಕ್ಕೆ ಸಂಪರ್ಕಿಸುವ ಮಾರ್ಗವಾಗಿದೆ. ಕೆಲವೊಮ್ಮೆ ಪಾಲಿಪ್ಸ್ ಎಂಬ ಕೋಶಗಳು ಗುದನಾಳದಲ್ಲಿ ಉಂಟಾಗುತ್ತವೆ. ಕೆಲವು ಸಮಯದ ನಂತರ ಈ ಕೋಶಗಳಲ್ಲೇ ಕೆಲವು ಕ್ಯಾನ್ಸರ್ ಕೋಶಗಳಾಗುತ್ತವೆ. ಈ ರೋಗದ ಲಕ್ಷಣವನ್ನು ಮೊದಲೇ ಗುರುತಿಸಿದರೆ ಕ್ಯಾನ್ಸರ್ ಆಗಿ ಬದಲಾಗುವ ಪಾಲಿಪ್ಸ್ ಗಳನ್ನು ತೆಗೆದುಹಾಕಬಹುದು. ಸ್ಕ್ರೀನಿಂಗ್ ಪರೀಕ್ಷೆಗಳು ಆರಂಭಿಕ ಹಂತದಲ್ಲೇ ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಸಹಕಾರಿಯಾಗಿವೆ.

ಮದ್ಯಪಾನ ಮತ್ತು ಬಿಳಿ ಬ್ರೆಡ್ ನಿಂದ ಕರುಳಿನ ಕ್ಯಾನ್ಸರ್ : ಕರುಳಿನ ಕ್ಯಾನ್ಸರ್ ತಡೆಗಟ್ಟಲು ಕೆಲವು ಮುಖ್ಯ ಅಂಶಗಳ ಮೇಲೆ ಗಮನಹರಿಸಬೇಕು. ಅದರಿಂದ ರೋಗದ ಬೆಳವಣಿಗೆಯ ಅಪಾಯವನ್ನು ತಪ್ಪಿಸಬಹುದು. ನ್ಯೂಟ್ರಿಯೆಂಟ್ಸ್ ಜರ್ನಲ್ ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಆನುವಂಶಿಕ ಮತ್ತು ಆಹಾರ ಪದ್ಧತಿಗಳೆರಡೂ ಕೊಲೊರೆಕ್ಟಲ್ ಕ್ಯಾನ್ಸರ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಮೆರಿಕದ ಬಯೋಬ್ಯಾಂಕ್ ನಲ್ಲಿ ನಡೆಸಿದ ಅಧ್ಯಯನದಲ್ಲಿ 139 ವಿಭಿನ್ನ ಆಹಾರಗಳು ಮತ್ತು ಪೋಷಕಾಂಶಗಳು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಅವು ಹೇಗೆ ರೋಗದ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲಾಯಿತು. ಈ ಅಧ್ಯಯನದಲ್ಲಿ ಸುಮಾರು 1,18,210 ಮಂದಿ ಪಾಲ್ಗೊಂಡಿದ್ದರು. 12.8 ವರ್ಷಗಳಲ್ಲಿ ಕರುಳಿನ ಕ್ಯಾನ್ಸರ್ ನ ಒಟ್ಟೂ 1466 ಘಟನೆಗಳನ್ನು ಗುರುತಿಸಲಾಗಿದೆ ಎಂದು ಅಧ್ಯಯನ ಹೇಳಿದೆ.

ಕೆಲವು ಆಹಾರ ಮತ್ತು ಅವುಗಳಿಂದ ಉಂಟಾಗುವ ರೋಗದ ಅಪಾಯವನ್ನು ಅಧ್ಯಯನವು ತೋರಿಸಿದೆ. ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಮತ್ತು ಬಿಳಿ ಬ್ರೆಡ್ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನೆಗಳ ಪ್ರಕಾರ ವ್ಯಕ್ತಿಯ ಆಹಾರದ ಆಯ್ಕೆಯೇ ಆತನ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
 

click me!