ಕೆಲವು ಸ್ಥಳಗಳು ಹಾಗೆ. ಒಮ್ಮೆ ಹೋದರೆ ಮತ್ತೆ ಮತ್ತೆ ಹೋಗಬೇಕೆನಿಸುವಷ್ಟು ಮುದ ನೀಡುತ್ತದೆ. ಅಂಥ ಸಾವಿರಾರು ಸ್ಥಳಗಳು ಭಾರತದಲ್ಲಿವೆ. ಅವುಗಳಲ್ಲಿ ಕೆಲವು ಇವು.
ಭಾರತದ ಇತಿಹಾಸ ಮತ್ತು ಇಲ್ಲಿನ ಸಾಸ್ಕೃತಿಕ ಹಾಗು ಭೌಗೋಳಿಕ ಹಿನ್ನೆಲೆ ಪ್ರಪಂಚದಾದ್ಯಂತದಿಂದ ಜನರು ಇಲ್ಲಿಗೆ ಆಗಮಿಸುವಂತೆ ಮಾಡುತ್ತದೆ. ಈ ಸುಂದರ ಭಾರತದಲ್ಲಿ ನೋಡಬೇಕಾದ ತಾಣಗಳು ಬಹಳಷ್ಟಿವೆ. ಅವುಗಳಲ್ಲಿ ಕೆಲವೊಂದು ತಾಣಗಳನ್ನು ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇಬೇಕು. ಅವುಗಳಲ್ಲಿ ಕೆಲವು ಇವು.
ತಾಜ್ ಮಹಲ್: ವಿಶ್ವದ ಮೂಲೆ ಮೂಲೆಯಿಂದಲೂ ಪ್ರವಾಸಿಗರನ್ನು ಆಕರ್ಷಿಸುವ ತಾಜ್ ಮಹಲ್ ಸೌಂದರ್ಯವನ್ನು ಸವಿದವನೇ ಬಲ್ಲ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಈ ಅದ್ಭುತ ಮಾನವ ನಿರ್ಮಿತ ಅದ್ಭುತವನ್ನು ನೋಡದಿದ್ದರೆ ಹೇಗೆ?
ವಾರಣಾಸಿ; ಗಂಗಾ ತಟದ ಈ ಊರಲ್ಲಿ ಸಾಕಷ್ಟು ಭೇಟಿ ನೀಡಲೇ ಬೇಕಾದ ದೇವಸ್ಥಾನಗಳಿವೆ.
ಅಜಂತಾ ಗುಹೆ: ಇಲ್ಲಿನ ಅದ್ಭುತ ಶಿಲ್ಪ ಕಲಾಕೃತಿಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಇದು 1819ರವರೆಗೆ ಯಾರಿಗೂ ಗೊತ್ತಿರದ ಸ್ಥಳವಾಗಿತ್ತು. ಅದರ ನಂತರವಷ್ಟೇ ಇದನ್ನು ಕಂಡು ಹಿಡಿದರು.
ಜೈಸಲ್ಮೇರ್: ಇದು ರಾಜಸ್ಥಾನದ ಮೂಲೆಯಲ್ಲಿರುವ ಹಾಗೂ ಪಾಕಿಸ್ತಾನದ ಗಡಿಯಲ್ಲಿರುವಂತಹ ಇಲ್ಲಿ ಲೇಕ್, ಅರಮನೆಗಳು, ಮರಳು.. ಎಲ್ಲವನ್ನೂ ಕಣ್ತುಂಬಿಕೊಳ್ಳಲೇ ಬೇಕು.
ಗೋಲ್ಡನ್ ಟೆಂಪಲ್; ಅಮೃತಸರ ಎಂದರೆ ನೆನಪಾಗುವುದು ಗೋಲ್ಡನ್ ಟೆಂಪಲ್. ಇದನ್ನು 1577ರಲ್ಲಿ 4ನೇ ಗುರು ಸಿಖ್ಖರ ಗುರು ರಾಮ್ ದಾಸ್ ನಿರ್ಮಿಸಿದರು.
ಕೇರಳ : ಕೇರಳ ಬ್ಯಾಕ್ ವಾಟರ್ ನೋಡದೆ ಇದ್ದರೆ ಹೇಗೆ? ಇಲ್ಲಿನ ಬೊಟ್ ಹೌಸ್, ರುಚಿ ರುಚಿಯಾದ ಮೀನಿನ ಖಾದ್ಯಗಳು, ವಲಸೆ ಬಂಡ ಹಕ್ಕಿಗಳನ್ನು ನೋಡಲು ಎರಡು ಕಣ್ಣುಗಳ ಸಾಲದು.