ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರ

By Web Desk  |  First Published Aug 17, 2018, 6:22 PM IST

ಭಾರತದ ಶಿರ ಭಾಗದಲ್ಲಿರುವ ಜಮ್ಮು ಕಾಶ್ಮೀರವನ್ನು ಭೂ ಲೋಕದ ಸ್ವರ್ಗವೆಂದೇ ಪರಿಗಣಿಸಲಾಗುತ್ತದೆ. ಬಹುತೇಕ ಪ್ರವಾಸಿಗರಿಂದಲೇ ಇಲ್ಲಿನ ಜನ ಜೀವನ ನಡೆಯುತ್ತಿದ್ದು, ಮಾನವನಾಗಿ ಹುಟ್ಟಿದ ಮೇಲೆ ಈ ಭೂ ಲೋಕವನ್ನು ಕಣ್ತುಂಬಿಕೊಳ್ಳಲೇ ಬೇಕು.
 


ಭಾರತದ ಶಿರ ಭಾಗದಲ್ಲಿರುವ ಜಮ್ಮು ಕಾಶ್ಮೀರವನ್ನು ಭೂ ಲೋಕದ ಸ್ವರ್ಗವೆಂದೇ ಪರಿಗಣಿಸಲಾಗುತ್ತದೆ. ಬಹುತೇಕ ಪ್ರವಾಸಿಗರಿಂದಲೇ ಇಲ್ಲಿನ ಜನ ಜೀವನ ನಡೆಯುತ್ತಿದ್ದು, ಮಾನವನಾಗಿ ಹುಟ್ಟಿದ ಮೇಲೆ ಈ ಭೂ ಲೋಕವನ್ನು ಕಣ್ತುಂಬಿಕೊಳ್ಳಲೇ ಬೇಕು.

ಕಾಶ್ಮೀರವನ್ನು ಭೂಲೋಕದ ಸ್ವರ್ಗ ಎನ್ನುತ್ತಾರೆ.  ಭಾರತದಲ್ಲಿ ಇದ್ದ ಮೇಲೆ ಈ ತಾಣಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕು. ಇಲ್ಲಿನ ಹಿಮಾಲಯ ಪ್ರದೇಶಗಳು, ಕೂಲ್ ಕೂಲ್ ವಾತಾವರಣ, ಆಕರ್ಷಕ ತಾಣಗಳು ಇವೆಲ್ಲವೂ ಕಾಶ್ಮೀರವನ್ನು ಅದ್ಭುತ ತಾಣವನ್ನಾಗಿಸಿದೆ. ಈ ರಾಜ್ಯದಲ್ಲಿ  ನೋಡಬೇಕಾದ ತಾಣಗಳಿವು..

Tap to resize

Latest Videos

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಇದೆ ಶ್ರೀನಗರ. ಇದನ್ನು ಸರೋವರಗಳ ನಾಡೆನ್ನುತ್ತಾರೆ. ಇಲ್ಲಿ ಹೌಸ್ ಬೋಟ್, ಷಿಕಾರಗಳನ್ನು ಬುಕ್ ಮಾಡಿ ಸುಂದರವಾದ ಸರೋವರದಲ್ಲಿ ಅದ್ಭುತ ಕ್ಷಣಗಳನ್ನು ಕಳೆಯಬಹುದು. ದಾಲ್ ಲೇಕ್, ವುಲರ್ ಲೇಕ್ ಮತ್ತು ನಾಗಿನ್ ಲೇಕ್ ಇಲ್ಲಿನ ಪ್ರಮುಖ ತಾಣಗಳು. 

ಲೇಹ್: ಸೌಂದರ್ಯ ಮತ್ತು ಸಾಹಸಕ್ಕೆ ಹೆಸರಾದ ಪ್ರದೇಶವಿದು. ಇಲ್ಲಿನ ಕಡಿದಾದ ಪರ್ವತಗಳು, ಲೇಕ್ ಸೇರಿ ಲೇಹ್ ಅನ್ನು  ನೋಡಲೇಬೇಕಾದ ತಾಣವಾಗಿ ಪರಿವರ್ತಿಸಿದೆ. 

ಜಮ್ಮು ಸಿಟಿ: ಇದನ್ನು ದೇವಾಲಯಗಳ ನಗರ ಎನ್ನುತ್ತಾರೆ. ಕಾಶ್ಮೀರದಲ್ಲಿ ಶಾಂತಿಯನ್ನು ಹುಡುಕಿ ಹೊರಟವರಿಗೆ ಇದು ಬೆಸ್ಟ್ ತಾಣ. ಅಲ್ಲದೆ ಇಲ್ಲಿ ಬಹು ಫೋರ್ಟ್ ಮತ್ತು ಮುಬಾರಕ್ ಮಂಡಿ ಪ್ರಮುಖ ಆಕರ್ಷಣೆಯಾಗಿದೆ. 

ಗುಲ್ಮರ್ಗ್: ಇದೊಂದು ಸುಂದರವಾದ ಹಿಲ್ ಸ್ಟೇಷನ್. ಇದು ಶ್ರೀನಗರದಿಂದ ಆರು ಕಿಲೋ ಮೀಟರ್ ದೂರದಲ್ಲಿದೆ. ಗುಲ್ ಅಂದರೆ ಹೂವು. ಇಲ್ಲಿ ಎಲ್ಲಾ ಸಮಯಗಳಲ್ಲೂ ವಿವಿಧ ರೀತಿಯ ಹೂವುಗಳು ಅರಳಿರುವುದನ್ನು ಕಾಣಬಹುದು.

ಕಾರ್ಗಿಲ್ : ಟ್ರೆಕ್ಕರ್, ಕ್ಯಾಂಪ್ ಮಾಡುವವರು, ರಾಫ್ಟರ್ ಮತ್ತು ಪರ್ವತಾರೋಹಿಗಳಿಗೆ ಇದು ಹೇಳಿ ಮಾಡಿಸಿದ ತಾಣ. ಗೋಮ ಕಾರ್ಗಿಲ್‌ಗೆ ನಡೆದುಕೊಂಡು ಹೋದರೆ, ಸುಂದರವಾದ ಪ್ರಕೃತಿಯನ್ನು ಕಣ್ತುಂಬಿಕೊಳ್ಳಬಹುದು. 

ಉಧಮ್‌ಪುರ್: ಉಧಮ್‌ಪುರ್ ಜಮ್ಮು ಕಾಶ್ಮೀರದ ಮತ್ತೊಂದು ಪ್ರಮುಖ ಆಕರ್ಷಣೆ. ಈ ತಾಣ ಅಂಡರ್ ಗ್ರೌಂಡ್ ರಿವರ್ ದೇವಿಕಾದಿಂದ ಪ್ರಸಿದ್ಧಿ ಪಡೆದಿದೆ. ಇದನ್ನು ಗಂಗಾ ನದಿಯ ಸಹೋದರಿ ಎನ್ನಲಾಗುತ್ತದೆ. 

ಪಹಲ್ಗಮ್ : ಇದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿದೆ. ವಿಸಿಟ್ ಮಾಡಲೇಬೇಕಾದ ಬೆಸ್ಟ್ ಪ್ಲೇಸ್.

ಮತ್ತಷ್ಟು ಟ್ರಾವೆಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!