ಹೀಗೂ ಉಂಟಾ? ಬ್ರಾ ಗಾತ್ರದ ಮೇಲೆ ಸಿಗುತ್ತೆ ಈ ಹೋಟೆಲ್’ನಲ್ಲಿ ಡಿಸ್ಕೌಂಟ್!

By Suvarna Web DeskFirst Published Aug 9, 2017, 6:17 PM IST
Highlights

ಚೀನಾದ ಹೋಟೆಲ್ ಒಂದು ಈಗ ಭಾರೀ ಸುದ್ದಿಯಲ್ಲಿದೆ. ಅದು ತನ್ನ ಗ್ರಾಹಕರಿಗೆ ರಿಯಾಯಿತಿ ನೀಡಲು ಆಯ್ಕೆ ಮಾಡಿಕೊಂಡ ಮಾನದಂಡ ವಿವಾದವನ್ನೇ ಸೃಷ್ಟಿಸಿದೆ. ಝೇಜಿಯಾಂಗ್’ನಲ್ಲಿರುವ ಹ್ಯಾಂಗ್ಝೋ ಸಿಟಿ ಮಾಲ್’ನಲ್ಲಿರುವ ರೆಸ್ಟೋರೆಂಟ್, ಮಹಿಳೆಯರಿಗೆ ಅವರ ಬ್ರಾ ಗಾತ್ರದ ಆಧಾರದಲ್ಲಿ ಬಿಲ್ ಮೇಲೆ ರಿಯಾಯಿತಿ ನೀಡುವುದಾಗಿ ಘೋಷಿಸಿಕೊಂಡಿದೆ.

ಚೀನಾದ ಹೋಟೆಲ್ ಒಂದು ಈಗ ಭಾರೀ ಸುದ್ದಿಯಲ್ಲಿದೆ. ಅದು ತನ್ನ ಗ್ರಾಹಕರಿಗೆ ರಿಯಾಯಿತಿ ನೀಡಲು ಆಯ್ಕೆ ಮಾಡಿಕೊಂಡ ಮಾನದಂಡ ವಿವಾದವನ್ನೇ ಸೃಷ್ಟಿಸಿದೆ.

ಝೇಜಿಯಾಂಗ್’ನಲ್ಲಿರುವ ಹ್ಯಾಂಗ್ಝೋ ಸಿಟಿ ಮಾಲ್’ನಲ್ಲಿರುವ ರೆಸ್ಟೋರೆಂಟ್, ಮಹಿಳೆಯರಿಗೆ ಅವರ ಬ್ರಾ ಗಾತ್ರದ ಆಧಾರದಲ್ಲಿ ಬಿಲ್ ಮೇಲೆ ರಿಯಾಯಿತಿ ನೀಡುವುದಾಗಿ ಘೋಷಿಸಿಕೊಂಡಿದೆ.

A ಕಪ್ ಗಾತ್ರವಿರುವ ಮಹಿಳೆಗೆ ಶೇ.5 ರಿಂದ ಆರಂಭಿಸಿ G ಕಪ್ ಇರುವವರಿಗೆ ಬಿಲ್ ಮೇಲೆ ಶೇ. 65 ರಿಯಾಯಿತಿಯನ್ನು ಘೋಷಿಸುವ ಪೋಸ್ಟರ್’ಗಳನ್ನು ರೆಸ್ಟೋರೆಂಟ್ ಎಲ್ಲಾ ಕಡೆ ಹಚ್ಚಿತ್ತು. ಹೆಚ್ಚು ಗಾತ್ರ ಹೊಂದಿದವರಿಗೆ ಹೆಚ್ಚಿನ ರಿಯಾಯಿತಿಯನ್ನು ರೆಸ್ಟೋರೆಂಟ್ ಘೋಷಿಸಿತ್ತು.

ಆದರೆ ರೆಸ್ಟೋರೆಂಟ್ ಈ ಕ್ರಮವು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಅಧಿಕಾರಿಗಳಿಗೆ ದೂರಿತ್ತಿದ್ದಾರೆ. ಜಾಹೀರಾತು ಮಹಿಳೆಯರ ನಡುವೆ ತಾರತಮ್ಯ ಮಾಡುವುದಲ್ಲದೇ, ಮಾನದಂಡವು ಮುಜುಗರ ಉಂಟುಮಾಡುತ್ತದೆ ಹಾಗೂ ಅಶ್ಲೀಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ರೀತಿಯ ಡಿಸ್ಕೌಂಟನ್ನು ಘೋಷಿಸಿದ ಬಳಿಕ ಗ್ರಾಹಕರ ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆಯೆಂದು ರೆಸ್ಟೋರೆಂಟ್ ಹೇಳಿಕೊಂಡಿದೆ. ಗ್ರಾಹಕರು ಹೆಮ್ಮೆಯಿಂದ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆಂದು ಅದು ಹೇಳಿದೆ.

ಈ ರೀತಿಯ ವಿಚಿತ್ರ ಆಫರ್’ಗಳು ಚೀನಾಗೆ ಹೊಸತಲ್ಲವೆಂದು ಹೇಳಲಾಗಿದೆ. ಈ ಹಿಂದೆ ಸುಂದರವಾಗಿ ಕಾಣುವವರಿಗೆ ಉಚಿತ ಉಪಾಹಾರವನ್ನು ಒಂದು ಹೋಟೆಲ್ ಘೋಷಿಸಿದ್ದರೆ, ಇನ್ನೊಂದು ಹೋಟೆಲ್ ಗ್ರಾಹಕರ ತೂಕದ ಆಧಾರದಲ್ಲಿ ಆಫರ್’ಗಳನ್ನು ಪ್ರಕಟಿಸಿತ್ತು.

 

click me!