ಒಂದು ಚಿತ್ರದಲ್ಲಿರುವ ಸಮಸ್ಯೆ ಅಥವಾ ಒಂದು ನಿರ್ಧಿಷ್ಟ ವಸ್ತು ಎಲ್ಲಿದೆ ಅಂತಾ ಹುಡುಕೋದು ಬುದ್ಧಿವಂತಿಕೆ. ಎಲ್ಲರಿಗೂ ಇದನ್ನು ಹುಡುಕೋಕೆ ಸಾಧ್ಯವಾಗೋದಿಲ್ಲ. ಕೆಲವರು ಥಟ್ ಅಂತ ಉತ್ತರ ಹೇಳಿದ್ರೆ ಮತ್ತೆ ಕೆಲವರು ತಡಬಡಿಸ್ತಾರೆ. ಇದು ಅಂಥಹದ್ದೇ ಒಂದು ಫೋಟೋ. ನಿಮ್ಗೆ ಇದನ್ನು ಸಾಲ್ವ್ ಮಾಡೋಕೆ ಆಗುತ್ತಾ ನೋಡೋಣ.
ಆಪ್ಟಿಕಲ್ ಇಲ್ಯೂಶನ್ ಒಂದು ರೀತಿಯ ಕಣ್ಣಿನ ಭ್ರಮೆ ಆಗಿದೆ. ಮನರಂಜನೆ ನೀಡುವ ಹಾಗೂ ಮೋಜಿನ ಆಟ ಇದಾಗಿದ್ದು, ಇದು ನಮ್ಮ ಬುದ್ದಿವಂತಿಕೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ನೀವು ಆಗಾಗ ಇಂಥ ಆಟವನ್ನು ಆಡ್ತಿದ್ದರೆ ನಿಮ್ಮ ಐಕ್ಯೂ ಮಟ್ಟ ಸುಧಾರಿಸುತ್ತದೆ. ಚಿಕ್ಕವರು, ದೊಡ್ಡವರೆನ್ನದೆ ಎಲ್ಲರೂ ಈ ಆಟವನ್ನು ಸುಲಭವಾಗಿ ಆಡಬಹುದು. ಇದನ್ನು ಒಳ್ಳೆ ಟೈಂ ಪಾಸ್ ಅಂದ್ರೆ ತಪ್ಪಾಗೋದಿಲ್ಲ. ನಾವಿಂದು ಆಪ್ಟಿಕಲ್ ಇಲ್ಯೂಶನ್‌ನ ಒಂದು ಚಿತ್ರವನ್ನು ನಿಮಗೆ ನೀಡ್ತೇವೆ. ನಿಮ್ಮ ವೀಕ್ಷಣಾ ಕೌಶಲ್ಯಗಳು ಎಷ್ಟು ಉತ್ತಮವೆಂದು ಪರೀಕ್ಷಿಸಲು ಬಯಸುವಿರಾ? ಹಾಗಿದ್ದಲ್ಲಿ, ಈ ಆಪ್ಟಿಕಲ್ ಭ್ರಮೆಯನ್ನು ಪ್ರಯತ್ನಿಸಿ ಅದು ನಿಮ್ಮ ಕಣ್ಣುಗಳ ಶಾರ್ಪ್‌ನೆಸ್‌ನ್ನು ಅಳೆಯಲು ಸಹಾಯ ಮಾಡುತ್ತದೆ.
ಗೊಂದಲಮಯವಾಗಿರುವ ಪೋಟೋದಲ್ಲಿ ಯಾವುದೇ ನಿರ್ಧಿಷ್ಟ ವಸ್ತುವನ್ನು ಹುಡುಕಲು ಹೇಳಿದರೆ ಕಷ್ಟವಾಗೋದು ಖಂಡಿತ. ಇಂಥಾ ಕೆಲವು ಚಿತ್ರಗಳು ನಮ್ಮ ದೃಷ್ಟಿ ಎಷ್ಟು ಚುರುಕಾಗಿದೆ ಎಂಬುದಕ್ಕೆ ಸವಾಲೊಡ್ಡುತ್ತವೆ. ಇದು ಅಂಥದ್ದೇ ಒಂದು ಚಿತ್ರ. ಗೊಂದಲಮಯವಾಗಿರುವ ಫೋಟೋದಲ್ಲಿ ನೀವು ಸೂಚಿಸಿದ ಪ್ರಾಣಿಯನ್ನು ಹುಡುಕಿದರೆ ಸಾಕು,
ಹತ್ತೇ ಸೆಕೆಂಡಲ್ಲಿ ಈ ಮೂವರಲ್ಲಿ ಮಹಿಳೆಯ ಪತಿ ಯಾರು ಅಂತ ಪತ್ತೆ ಮಾಡಿ!
ಅಡಗಿರುವ ಗೂಬೆಯನ್ನು ಹುಡುಕಿ
ನಿಮ್ಮ ಕೆಲಸವು ಆಪ್ಟಿಕಲ್ ಭ್ರಮೆ (Optical illusion)ಯನ್ನು ಗಮನಿಸುವುದು ಮತ್ತು ಚಿತ್ರದಲ್ಲಿ ವಿವರಿಸಲಾದ ಕಾಡಿನಲ್ಲಿ ಅಡಗಿರುವ ಗೂಬೆ (Owl)ಯನ್ನು ಕಂಡುಹಿಡಿಯುವುದಾಗಿದೆ. ಕಣ್ಣು (Eyes) ಶಾರ್ಪ್ ಆಗಿದ್ದರೆ ಮಾತ್ರ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು ನೋಡಬಹುದು. ಅಡಗಿರುವ ಗೂಬೆಯನ್ನು ನೋಡಲು ನಿಮಗೆ ಸಮಯದ ಮಿತಿಯೂ ಇದೆ. ಕೇವಲ ಹತ್ತು ಸೆಕೆಂಡುಗಳ ಸಮಯದ ಮಿತಿಯಲ್ಲಿ, ನೀವು ಆಪ್ಟಿಕಲ್ ಭ್ರಮೆಯಲ್ಲಿ ಅಡಗಿರುವ ಗೂಬೆಯನ್ನು ಕಂಡುಹಿಡಿಯಬೇಕು.
ಸುಳಿವು
ಆಪ್ಟಿಕಲ್ ಭ್ರಮೆಯಲ್ಲಿ ಗುಪ್ತ ಗೂಬೆಯನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗದಿದ್ದರೆ, ನಿರಾಶೆಗೊಳ್ಳಬೇಡಿ. ಹೆಚ್ಚಿನವರು ಸಕಾಲದಲ್ಲಿ ಕೆಲಸವನ್ನು ಪೂರ್ಣಗೊಳಿಸಲು ವಿಫಲರಾಗುತ್ತಾರೆ. ನಿಮಗೆ ಸಹಾಯ ಮಾಡಲು ಕೆಲವು ಸುಳಿವು ಇಲ್ಲಿದೆ. ಮರದ ತೊಗಟೆಗಳ ಮೇಲಿನ ಉಂಗುರಗಳನ್ನು ಹತ್ತಿರದಿಂದ ನೋಡಿ. ಸುಳಿವು ಸಿಕ್ಕ ನಂತರವೂ ಗೂಬೆ ಎಲ್ಲಿ ಅಡಗಿದೆ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಉತ್ತರ ಇಲ್ಲಿದೆ.