ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​

By Suvarna News  |  First Published Sep 2, 2023, 11:17 AM IST

ದೊಡ್ಡಪತ್ರೆಯ ಹಲವು ಔಷಧೀಯ ಗುಣಗಳ ಕುರಿತು ನಟಿ ಅದಿತಿ ಪ್ರಭುದೇವ ಅವರ ಅಮ್ಮ ಮಾಹಿತಿ ನೀಡಿದ್ದಾರೆ. ಇದರಿಂದ ಇವೆ ಹಲವಾರು ಪ್ರಯೋಜನ.
 


ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಯಶಸ್ ಪಟ್ಲಾ ಅವರ ಪತ್ನಿಯಾಗಿ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ (social media) ಆ್ಯಕ್ಟೀವ್​ ಆಗಿರುವ ನಟಿ ಅದಿತಿ ಪ್ರಭುದೇವ ಈಚೆಗಷ್ಟೇ  ಹೊಸ ಹೇರ್​ಸ್ಟೈಲ್​ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ನಂತರ ಪತಿಗಾಗಿ ಪನ್ನೀರ್​ ರೆಸಿಪಿ ಮಾಡಿ ಅದರ ಬಗ್ಗೆಯೂ ತಿಳಿಸಿಕೊಟ್ಟಿದ್ದರು. ಅದಾದ ಬಳಿಕ ನಟಿ  ಕೆಲವೊಂದು ಆರೋಗ್ಯ ಟಿಪ್ಸ್​ ನೀಡಿದ್ದರು.  ದೈನಂದಿನ ಜೀವನ ಆರೋಗ್ಯವಾಗಿ ಮತ್ತು ಚುರುಕಾಗಿ ಇರಲು ತಾವು ಫಾಲೋ  ಮಾಡುವ Health Tips ಕುರಿತು ಹೇಳಿದ್ದರು.  ಕರಿಬೇವು,  ಬೆಚ್ಚಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ ಅಥವಾ ಅರಿಶಿಣ ಹಾಕಿಕೊಂಡು ಕುಡಿಯುವುದು ಸೇರಿದಂತೆ ದಿನಪೂರ್ತಿ ಚುರುಕಾಗಿ ಇರಲು ಏನು ಮಾಡಬೇಕು ಎಂದು ಕೆಲವೊಂದು ಟಿಪ್ಸ್​ ಕೊಟ್ಟಿದ್ದರು. 

ಇದೀಗ ನಟಿ ಅದಿತಿ ಪ್ರಭುದೇವ ಅವರ ಅಮ್ಮ  ದೊಡ್ಡಪತ್ರೆಯ ಮಹತ್ವ ತಿಳಿಸಿಕೊಟ್ಟಿದ್ದಾರೆ. ದೊಡ್ಡ ಪತ್ರೆ, ಸಾಂಬರ್​ ಸೊಪ್ಪು, ಸಾಸಂಬರ್​ ಸೊಪ್ಪು, ಸಾವಿರ ಸೊಪ್ಪು ಎಂದೆಲ್ಲಾ ಕರೆಸಿಕೊಳ್ಳುವ ಈ ಪುಟ್ಟ ಎಲೆಯಿಂದ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅದ್ಭುತ ಔಷಧಿಯ ಸಸ್ಯಗಳನ್ನು ಬೆಳೆಯುವುದು ಮಾಮೂಲು. ದೊಡ್ಡ ಪತ್ರೆಯ ಚಟ್ನಿ, ತಂಬುಳಿ, ಸಾಸಿವೆ... ಹೀಗೆ ಹಲವಾರು ಅಡುಗೆಗಳನ್ನು ಮಾಡಿ ಆಗಾಗ್ಗೆ ಇದನ್ನು ಅನ್ನದ ಜೊತೆ ಬಳಸುತ್ತಾರೆ. ಆದರೆ ಬೆಂಗಳೂರಿನಂಥ (Bangalore) ಪ್ರದೇಶಗಳಲ್ಲಿ ಹಲವರ ಮನೆಯ ಕುಂಡಗಳಲ್ಲಿ ಇದು ಅಲಂಕರಿಸುತ್ತದೆ. ಆದರೆ ಇದರ ಪ್ರಯೋಜನ ಮಾತ್ರ ತಿಳಿದಿರುವುದು ಕೆಲವೇ  ಜನರಿಗೆ. ಚಿಕ್ಕದೊಂದು ಟೊಂಗೆ ನೆಟ್ಟರೂ ಕೆಲವೇ ದಿನಗಳಲ್ಲಿ ವಿಸ್ತರಿಸಿ ನೋಡಲು ಚೆಂದ ಕಾಣುವ ಕಾರಣದಿಂದ ಹಲವರು ಇದನ್ನು ಕುಂಡದಲ್ಲಿ ಬೆಳೆಯುವುದುಂಟು.  ಆದರೆ ಇದರ ಆರೋಗ್ಯ ಪ್ರಯೋಜನಗಳು ಗೊತ್ತಿರುವುದಿಲ್ಲ. 

Tap to resize

Latest Videos

ಫೇಸ್​ಮಾಸ್ಕ್​, ಸ್ಕ್ರಬ್​, ಹೇರ್​ ಆಯಿಲ್ ಮಾಡೋದು ಇಷ್ಟು ಸುಲಭನಾ? ನಟಿ ಅದಿತಿ ಪ್ರಭುದೇವ ಟಿಪ್ಸ್!​

ಇದರ ಆರೋಗ್ಯ ಪ್ರಯೋಜನವನ್ನು ನಟಿ ಅದಿತಿ ಪ್ರಭುದೇವ ಅವರ ಅಮ್ಮ ತಿಳಿಸಿಕೊಟ್ಟಿದ್ದಾರೆ. ಮಗಳ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಮ್ಮನನ್ನು ಅದಿತಿ ಅವರು ಪಾರ್ಕ್​ಗೆ ವಾಕಿಂಗ್​ಗೆ ಕರೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಅಲ್ಲಿರುವ ದೊಡ್ಡಪತ್ರೆಯ ಗಿಡವನ್ನು ನೋಡಿ, ಅಮ್ಮ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಅವರ ಅಮ್ಮನ ಮಾತಿನಲ್ಲಿಯೇ ಹೇಳುವುದಾದರೆ, 'ನನಗೆ ಸಿಕ್ಕಾಪಟ್ಟೆ ಸೀನು ಬರುತ್ತಿತ್ತು. ಅನೇಕ ಮಂದಿ ಹಲವಾರು ರೀತಿಯ ಮಾತ್ರೆಗಳನ್ನು ಹೇಳಿದರು. ಆದರೆ ನೋಡಿಯೇ ಬಿಡೋಣ ಎಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ದೊಡ್ಡಪತ್ರೆ ಎಲೆಯನ್ನು ತಿಂದು ನಸುಬೆಚ್ಚಗಿನ ನೀರನ್ನು ಕುಡಿಯುತ್ತಾ ಬಂದೆ. ಒಂದೇ ತಿಂಗಳಿನಲ್ಲಿ ಸೀನು ಸಂಪೂರ್ಣ ನಿಂತೇ ಹೋಯಿತು ಎಂದಿದ್ದಾರೆ. 

ಆಗ ಅದಿತಿ ಅವರು, ಇನ್ನಷ್ಟು ಪ್ರಯೋಜನದ ಕುರಿತು ಹೇಳಿದ್ದಾರೆ. ಇದನ್ನು ಹಿಂಡಿದಾಗ ರಸ ಬರುತ್ತದೆ. ಇಲ್ಲದೇ ಹೋದರೆ ಗ್ಯಾಸ್​ ಮೇಲೆ ಎಲೆಯನ್ನು ತುಸು ಬೆಚ್ಚಗೆ ಮಾಡಿ ಹಿಂಡಿದರೂ ರಸ ಬರುತ್ತದೆ. ಆ ರಸವನ್ನು ಕುಡಿಯುತ್ತಾ ಬಂದರೆ,  ಕೆಮ್ಮು, ಶೀತ , ಸ್ಕಿನ್​ ಅಲರ್ಜಿ, ಕ್ರಿಮಿ  ಕಡಿದಿದ್ದರೆ ಎಲ್ಲವೂ ಮಾಯವಾಗುತ್ತದೆ. ಬಾಣಲೆಯಲ್ಲಿ ಎಲೆಯನ್ನು ಬಿಸಿ ಮಾಡಿ ನೆತ್ತಿಗೆ  ಹೆಚ್ಚುವುದರಿಂದಲೂ  ನೆಗಡಿ, ಕೆಮ್ಮು ಕಡಿಮೆ ಆಗುತ್ತದೆ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿದ ಅದಿತಿ ಅಮ್ಮ, ಒಂದು ಟೊಂಗೆ ಗಿಡವನ್ನು ಮನೆಯಲ್ಲಿ ನೆಟ್ಟರೆ 10 ಟೈಪ್​ ಮಾತ್ರೆಯನ್ನು (Medicines) ಹೊರಕ್ಕೆ ಹಾಕಬಹುದು ಎಂದರು.  ಇದೇ ಸಂದರ್ಭದಲ್ಲಿ ಅಮ್ಮನಿಗೆ ಸರಕ್ಕೆ ಹಾಕುವ ಒಂದು ಡಾಲರ್​ ಗಿಫ್ಟ್​ ನೀಡಿದರು ಅದಿತಿ.  

Aditi Prabhudeva: ಬೆಳಿಗ್ಗೆ ಕರಿಬೇವು, ನಿಂಬೆರಸ..ಮಧ್ಯಾಹ್ನ ಫುಲ್​ ಕೆಲಸ.. ಆರೋಗ್ಯದ ಗುಟ್ಟು ಹೇಳಿದ ನಟಿ

click me!