ಕೆಲವೊಮ್ಮೆ ಯಾಂತ್ರಿಕ ಜೀವನವನ್ನು ನಾವು ನಡೆಸ್ತಿರುತ್ತೇವೆ. ಈ ಸಂಬಂಧದಲ್ಲಿ ಸುಖವಿಲ್ಲ ಎನ್ನುವುದು ತಿಳಿದಿದ್ರೂ ಅದ್ರಿಂದ ಹೊರಬರಲು ಭಯವಾಗ್ತಿರುತ್ತದೆ. ಆದ್ರೆ ಆ ಉಸಿರುಗಟ್ಟಿದ ಜೀವನಕ್ಕಿಂತ ಧೈರ್ಯ ಮಾಡೋದು ಬಹಳ ಮುಖ್ಯ.
ತಮ್ಮ ಬಗ್ಗೆ ಹಾಗೂ ತಮ್ಮ ಆಲೋಚನೆ, ಆಸೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ನಡೆಸುವವರು ಬಹಳ ಅಪರೂಪ. ಬಹುತೇಕ ಎಲ್ಲರೂ, ಬೇರೆಯವರು ಏನು ಹೇಳ್ತಾರೆ, ಬೇರೆಯವರು ಏನು ಆಲೋಚನೆ ಮಾಡ್ತಾರೆ, ಅವರು ನಮ್ಮ ಬಗ್ಗೆ ಏನು ತಿಳಿದುಕೊಳ್ತಾರೆ ಎನ್ನುವ ಬಗ್ಗೆಯೇ ಚಿಂತನೆ ನಡೆಸ್ತಾರೆ. ಬೇರೆಯವರ ಗುಂಗಲ್ಲಿ ತಮ್ಮ ಸುಖ, ಸಂತೋಷವನ್ನು ಮರೆಯುತ್ತೇವೆ. ಪ್ರೀತಿ ಯಾವಾಗ್ಲೂ ಗೊಂದಲವಾಗಿಯೇ ಇರುತ್ತದೆ. ಅದಕ್ಕೆ ಕಟ್ಟಿ ಬಿದ್ರೆ ಜೀವನ ಕಷ್ಟವಾಗುತ್ತದೆ. ಇದನ್ನು ನಾವು ಹೇಳ್ತಿಲ್ಲ, ಇಬ್ಬರ ಜೊತೆ ಲಿವ್ ಇನ್ ನಲ್ಲಿದ್ದ ಹುಡುಗಿ ತನ್ನ ಅನುಭವ ಹೇಳಿದ್ದಾಳೆ.
ಮುಂಬೈ(Mumbai)ನಲ್ಲಿ ಕೆಲಸ ಮಾಡುವ ಹುಡುಗಿಗೆ ಪಾಲಕರು ವಾಸಿಸುವ ನಗರ ಹತ್ತಿರ ಎನ್ನುವ ಕಾರಣಕ್ಕೆ ಮುಂಬೈ ಬಿಡಲು ಮನಸ್ಸಿಲ್ಲ. ಇಲ್ಲಿಯೇ ಕೆಲಸ ನೋಡಿಕೊಂಡಿರುವ ಹುಡುಗಿ ಸಂಪ್ರದಾಯಸ್ತ ಕುಟುಂಬದಿಂದ ಬಂದವಳು. ಮನೆಯ ಗೌರವಕ್ಕೆ ಧಕ್ಕೆ ತರಬಾರದು ಎನ್ನುವ ಮಾತು ಕೇಳ್ತಾನೆ ಬೆಳೆದ ಹುಡುಗಿ ಮೊದಲೊಬ್ಬನ ಪ್ರೀತಿ (Love) ಗೆ ಬಿದ್ದಿದ್ದಳು. ಆದ್ರೆ ಆತ ಲವ್ವಿಂಗ್ ಬಾಯ್. ಒಂದೇ ಬಾರಿ ಇಬ್ಬರನ್ನು ಪ್ರೀತಿಸುತ್ತಿದ್ದ ಹುಡುಗ. ಈ ವಿಷ್ಯ ಗೊತ್ತಿದ್ರೂ ಆತನ ಸಂಬಂಧ ಮುರಿದುಕೊಳ್ಳೋದು ಈಕೆಗೆ ಕಷ್ಟವಾಗಿತ್ತು. ಸ್ನೇಹಿತರ ಸಹಕಾರಿಂದ ಮೊದಲ ಪ್ರೀತಿಯಿಂದ ಹೊರಬಂದಿದ್ದಾಯ್ತು.
ವಿವಾಹಿತ ಬೇರೊಬ್ಬಳನ್ನು ನಂಬಿಸಿ ದೈಹಿಕ ಸಂಬಂಧ ಬೆಳೆಸುವುದು ಅತ್ಯಾಚಾರ; ಬಾಂಬೆ ಹೈಕೋರ್ಟ್
ನಂತ್ರ ಶುರುವಾಗಿದ್ದು ಎರಡನೇ ಲವ್ ಸ್ಟೋರಿ. ಆಕೆ ಬಾಸ್ ಆಕೆಯ ಪಾರ್ಟನರ್. ಮೊದಲ ಡೇಟಿಂಗ್ (Dating) ನಲ್ಲಿ ರೆಸ್ಟೋರೆಂಟ್ ನಲ್ಲಿ ಅದ್ಭುತ ಅಡುಗೆ ಮಾಡಿ ನೀಡಿದ್ದ ಬಾಯ್ ಫ್ರೆಂಡ್, ರೂಮಿಗೆ ಕರೆದಿದ್ದ. ಹು ಎನ್ನುತ್ತಲೆ ಬಂದವಳು ಅವನ ತೆಕ್ಕೆಗೆ ಬಿದ್ದಿದ್ದಳು. ಆದ್ರೆ ಆತನ ಮುದ್ದಾಟದಲ್ಲಿ ಈಕೆಗೆ ಸುಖ ಸಿಕ್ಕಿರಲಿಲ್ಲ. ಎಲ್ಲ ಇಲ್ಲಗಳ ಮಧ್ಯೆಯೇ ಇಬ್ಬರ ಒಡನಾಟ ಜಾಸ್ತಿಯಾಗಿತ್ತು. ಮನೆ ಬದಲಾವಣೆ ವೇಳೆ ತನ್ನ ಮನೆಯಲ್ಲಿರುವಂತೆ ಕರೆದಿದ್ದ ಬಾಸ್ ಜೊತೆ 2 ವರ್ಷ ಕಳೆದಿದ್ದಳು. ಅತಿಯಾದ ಪ್ರೀತಿ, ಕಾಳಜಿ ತೋರಿಸುತ್ತಿದ್ದ ಬಾಸ್ ಗೆ 45 ವರ್ಷ ವಯಸ್ಸು. ಈಕೆಗಿಂತ 13 ವರ್ಷ ದೊಡ್ಡವನಾದ ಬಾಸ್, ಸೌಂದರ್ಯವಂತನಲ್ಲ. ಹಾಗಂತ ಆತ ಪ್ರೀತಿಗೆ ಬರವಿರಲಿಲ್ಲ. ಡೈಮಂಡ್ ರಿಂಗ್ ನೀಡಿ, ಪ್ರಪೋಸ್ ಮಾಡಿದ್ದ ವ್ಯಕ್ತಿ, ಸ್ನೇಹಿತರಿಗೆ ತನ್ನ ಭಾವಿ ಪತ್ನಿ ಎಂದು ಪರಿಚಯಿಸಿದ್ದ.
ಆತನ ಈ ಎಲ್ಲ ಪ್ರೀತಿಯ ಮಳೆಯಲ್ಲೂ ಹುಡುಗಿಗೆ ರಿಂಗ್ ಧರಿಸುವ ಮನಸ್ಸಾಗಿರಲಿಲ್ಲ. ವಯಸ್ಸಿನ ಅಂತರದ ಬಗ್ಗೆ ಮನಸ್ಸಿನಲ್ಲೊಂದು ಭಯ. ನಿರೀಕ್ಷೆಯಂತೆ ಸಿಗದ ದೈಹಿಕ ಸುಖ. ನನಗೆ ಈತ ಸೂಕ್ತನಲ್ಲ ಎನ್ನುವ ಭಾವ ಸದಾ ಮನಸ್ಸಿನಲ್ಲಿತ್ತು. ಆದ್ರೆ ಆತನ ಯಾವುದೇ ಮಾತಿಗೆ ನೋ ಎನ್ನುವ ಮನಸ್ಸು ಮಾಡ್ತಿರಲಿಲ್ಲ. ಇಬ್ಬರು ಒಟ್ಟಿಗೆ ವಾಸ ಮಾಡ್ತಿದ್ದ ಕಾರಣ ಈಕೆ ಖಾತೆಯಲ್ಲಿ ಹಣ ಉಳಿಯುತ್ತಿತ್ತು. ಬಹುಶಃ ಆತನ ಜೊತೆ ಲಿವ್ ಇನ್ ಮುಂದುವರೆಸಲು ಇದೊಂದೇ ಬಲವಾದ ಕಾರಣವಿತ್ತು.
ನಿಮ್ಮ ಕಂಪನಿ ನಿಮ್ಮನ್ನು ಇಗ್ನೋರ್ ಮಾಡ್ತಿದೆ ಎನ್ನೋ ಲಕ್ಷಣಗಳಿವು!
ಒಂದೆರಡು ಸಾರಿ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದ ಹುಡುಗಿ, ಧೈರ್ಯ ಮಾಡಿ ಒಮ್ಮೆ ಸ್ಪೋಟಗೊಂಡಿದ್ದಳು. ನಾನು ಹೇಗಿದ್ರೆ ನಿಮ್ಮೆಲ್ಲರಿಗೂ ಏನು ಎಂದು ಪ್ರಶ್ನೆ ಮಾಡಿದ್ದಳು. ಅಮ್ಮನ ಮುಂದೆ ಎಗರಾಡಿದ್ರೂ ಮನಸ್ಸಿಗೆ ದ್ರೋಹ ಮಾಡ್ತಿದ್ದೇನೆಂಬ ಭಾವನೆ ಆಕೆಯಲ್ಲಿತ್ತು. ಬಾಯ್ ಫ್ರೆಂಡ್ ಜೊತೆ ಕೂಡ ನಾನು ಪ್ರಾಮಾಣಿಕವಾಗಿಲ್ಲ ಎನ್ನುವುದು ಅರಿವಿಗೆ ಬರ್ತಿದ್ದಂತೆ ಆತನ ಮನೆ ಬಿಟ್ಟಿದ್ದಳು. ಸ್ನೇಹಿತರ ಜೊತೆ ವಾಸವಿದ್ದ ಹುಡುಗಿ, ಒಂದು ದಿನ ಬಾಯ್ ಫ್ರೆಂಡ್ ಭೇಟಿ ಮಾಡಿ, ಬ್ರೇಕ್ ಅಪ್ ಘೋಷಣೆ ಮಾಡಿದ್ದಳು. ಆಕೆ ಮಾತು ಕೇಳಿ ನೊಂದ ಬಾಸ್, ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದ. ಎಲ್ಲವನ್ನೂ ತಿರುಗಿ ನೋಡಿದ್ರೆ ನಾನು ಕಲಿಯೋದು ಸಾಕಷ್ಟಿದೆ ಎನ್ನಿಸುತ್ತೆ. ಹೊಸ ಕಲಿಕೆ ಜೊತೆ ಜೀವನ ಸಾಗ್ತಿರಬೇಕು ಎನ್ನುತ್ತಾಳೆ ಹುಡುಗಿ.