ಗಗನ ಸಖಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಲು 82 ಕೆಜಿ ತೂಕ ಇಳಿಸಿಕೊಂಡ ಯುವಕ!

Published : Apr 03, 2025, 03:36 PM ISTUpdated : Apr 03, 2025, 03:44 PM IST
ಗಗನ ಸಖಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಲು 82 ಕೆಜಿ ತೂಕ ಇಳಿಸಿಕೊಂಡ ಯುವಕ!

ಸಾರಾಂಶ

ದಪ್ಪಗಿದ್ದ ಯುವಕನೊಬ್ಬ ವಿಮಾನದಲ್ಲಿ ಮುಜುಗರ ಅನುಭವಿಸಿ, ತೂಕ ಇಳಿಸಲು ನಿರ್ಧರಿಸಿದನು. ಬಾಲ್ಯದ ನೋವಿನಿಂದಾಗಿ ಹೆಚ್ಚಾಗಿ ತಿನ್ನುತ್ತಿದ್ದ ಆತ, ಜಂಕ್ ಫುಡ್ ತ್ಯಜಿಸಿ, ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಿದನು. ವ್ಯಾಯಾಮದೊಂದಿಗೆ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿ, ಒಂದು ವರ್ಷದಲ್ಲಿ 82 ಕೆಜಿ ತೂಕ ಇಳಿಸಿ, ಸದೃಢನಾದನು. ಈಗ ಆತ ಸಂತೋಷದಿಂದ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧನಾಗಿದ್ದಾನೆ. (52 ಪದಗಳು)

ಜನಸಾಮಾನ್ಯರು ವಿಮಾನದಲ್ಲಿ ಹೋಗಬೇಕು ಎಂಬುದನ್ನೇ ಕನಸು ಕಾಣುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಆರ್ಥಿಕವಾಗಿ ಶ್ರೀಮಂತನಾಗಿದ್ದರೂ ತಾನು ತುಂಬಾ ದಪ್ಪವಾಗಿದ್ದರಿಂದ ವಿಮಾನದಲ್ಲಿ ಹೋಗುವಾಗ ಚಿಕ್ಕ ಸೀಟಿನಲ್ಲಿ ಕುಳಿತುಕೊಂಡು ತುಂಬಾ ಅನುಮಾನ ಎದುರಿಸಿದ್ದನು. ಆಗ, ಗಗನ ಸಖಿಯರು ನಕ್ಕಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ಯುವಕ ಒಂದು ವರ್ಷದಲ್ಲಿ ಬರೋಬ್ಬರಿ 82 ಕೆಜಿ ತೂಕ ಇಳಿಸುವ ಮೂಲಕ ಪುನಃ ವಿಮಾನದಲ್ಲಿ ಹೋಗಲು ಸಿದ್ಧನಾಗಿದ್ದಾನೆ.

ತೂಕ ಇಳಿಕೆಯ ಕಥೆ: ಸಾಮಾಬ್ಯವಾಗಿ ತೂಕ ಹೆಚ್ಚಳ ದೇಹಕ್ಕೆ ತುಂಬಾ ತೊಂದರೆ ಉಂಟುಮಾಡುತ್ತದೆ. ಅದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು ಬಂದರೆ ಅಂಥವರ ಚಿಂತೆ ತುಂಬಾ ಹೆಚ್ಚಾಗುತ್ತದೆ. ಆದರೆ, ಇಲ್ಲೊಬ್ಬ 30 ವರ್ಷದ ಯುವಕ ತಾನು ದಪ್ಪಗಿದ್ದರಿಂದ ವಿಮಾನದ ಸೀಟಿನಲ್ಲಿ ಕೂರಲು ಆಗದೇ ಇದ್ದಾಗ ಮುಜುಗರಕ್ಕೆ ಒಳಗಾಗಿದ್ದಾಗ, ತೂಕ ಇಳಿಸಲು ನಿರ್ಧರಿಸಿದ್ದಾನೆ. ನಂತರ, ತಾನು 175 ಕೆಜಿ ಇದ್ದ ತೂಕವನ್ನು ಒಂದೇ ವರ್ಷದಲ್ಲಿ 82 ಕೆಜಿಗೆ ಇಳಿಕೆ ಮಾಡಿದ್ದಾನೆ. ಇದೀಗ 100 ಕೆಜಿಗಿಂತ ಕಡಿಮೆಯಿದ್ದು, ದೇಹವನ್ನು ಸದೃಢಗೊಳಿಸಿಕೊಂಡಿದ್ದಾನೆ. 

ಕೆಟ್ಟ ನೆನಪುಗಳನ್ನು ಮರೆಯಲು ಹೆಚ್ಚು ತಿಂದರು: ಡೈಲಿ ಸ್ಟಾರ್ ಸಂದರ್ಶನದಲ್ಲಿ ಎರಿಕ್ ಚೆಡ್ವಿಕ್ ಎನ್ನುವ ಯುವ, ತನಗೆ ಬಾಲ್ಯದಲ್ಲಿ ಆದ ನೋವಿನಿಂದಾಗಿ ಹೆಚ್ಚು ಹೆಚ್ಚು ತಿನ್ನಲು ಪ್ರಾರಂಭಿಸಿದ. ಜಂಕ್ ಫುಡ್‌ಗಳಾದ ಬರ್ಗರ್ ಮತ್ತು ಚಿಪ್ಸ್‌ನಂತಹ ಹಾಗೂ ಸಂಸ್ಕರಿಸಿದ ಆಹಾರ ತಿನ್ನುತ್ತಿದ್ದರಿಂದ ಈತನ ತೂಕ ಕ್ರಮೇಣ ಭಾರೀ ಹೆಚ್ಚಳವಾಯಿತು. ಈತ ದಪ್ಪವಾಗಿದ್ದರಿಂದ ತನ್ನ ಶೂ ಲೇಸ್ ಕಟ್ಟಿಕೊಳ್ಳಲು, ವೇಗವಾಗಿ ನಡೆಯಲು ಮತ್ತು ಕೂರಲು ಸಹ ತೊಂದರೆಯಾಯಿತು. ಒಂದು ಹಂತದಲ್ಲಿ ಈತನಿಗೆ ತಾನು ಸತ್ತೇ ಹೋಗುತ್ತೇನೆ ಎಂಬ ಭವವೂ ಕಾಡುತ್ತಿತ್ತು. ಆದ್ದರಿಂದ ತೂಕ ಇಳಿಸಲು ನಿರ್ಧರಿಸಿದನು.ಹೀಗಾಗಿ, ಯಾವುದೇ ಸರ್ಜರಿ ಇಲ್ಲದೆ 82 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೊತ್ತೊತ್ತು ಚೆನ್ನಾಗಿ ತಿಂದ್ರು ಸುಸ್ತಾಗ್ತಿದ್ಯಾ?: ದೇಹದ ದಣಿವನ್ನು ನಿವಾರಿಸೋದು ಹೇಗೆ?

ತೂಕ ಇಳಿಕೆಗೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ: ಎರಿಕ್ ತೂಕ ಇಳಿಸಲು ಪಿಜ್ಜಾ, ಬರ್ಗರ್, ಚಿಪ್ಸ್ ತಿನ್ನುವುದನ್ನು ನಿಲ್ಲಿಸಿದರು. ಮನೆಯ ಊಟ ಮತ್ತು ಹಣ್ಣು-ತರಕಾರಿಗಳನ್ನು ತಿನ್ನಲು ಪ್ರಾರಂಭಿಸಿದರು. ಕಡಿಮೆ ಕೊಬ್ಬಿನಾಂಶ ಮತ್ತು ಕ್ಯಾಲೋರಿ ಇರುವ ಆಹಾರ ಸೇವಿಸಿದರು. ವ್ಯಾಯಾಮ ಮತ್ತು ಸರಿಯಾದ ಆಹಾರದಿಂದ ತೂಕ ಇಳಿಸಿದರು. ವ್ಯಾಯಾಮ ಮತ್ತು ಆಹಾರ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಎರಿಕ್ ಹೇಳಿದ್ದಾರೆ. ಇದೀಗ ಗಗನ ಸಖಿಯರೊಂದಿಗೆ ಸಂತಸದಿಂದ ವಿಮಾನದಲ್ಲಿ ಹೋಗಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವ್ಯಾಯಾಮ ಮಾಡಿದ ಬಳಿಕ ಈ ಆಹಾರ ತಿನ್ನಬೇಡಿ.. ವ್ಯರ್ಥವಾಗುತ್ತೆ! ಇಲ್ಲಿದೆ ಡೀಟೇಲ್ಸ್!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
ಬಿಯರ್ ಬಾಟಲಿಗಳು ಕಂದು, ಹಸಿರು ಬಣ್ಣದಲ್ಲೇ ಯಾಕಿರುತ್ತವೆ?, ಅಸಲಿ ಕಾರಣ ಇಲ್ಲಿದೆ