ಹೊತ್ತೊತ್ತು ಚೆನ್ನಾಗಿ ತಿಂದ್ರು ಸುಸ್ತಾಗ್ತಿದ್ಯಾ?: ದೇಹದ ದಣಿವನ್ನು ನಿವಾರಿಸೋದು ಹೇಗೆ?

Published : Apr 03, 2025, 03:09 PM ISTUpdated : Apr 03, 2025, 03:23 PM IST
ಹೊತ್ತೊತ್ತು ಚೆನ್ನಾಗಿ ತಿಂದ್ರು ಸುಸ್ತಾಗ್ತಿದ್ಯಾ?: ದೇಹದ ದಣಿವನ್ನು ನಿವಾರಿಸೋದು ಹೇಗೆ?

ಸಾರಾಂಶ

ಆಧುನಿಕ ಜೀವನಶೈಲಿಯಲ್ಲಿ ದಣಿವು ಮತ್ತು ಒತ್ತಡ ಸಾಮಾನ್ಯ.ಎನಿಸಿದೆ. ಕೇವಲ ಒಳ್ಳೆಯ ಆಹಾರ ಹಾಗೂ ವ್ಯಾಯಾಮದಿಂದ ನಮ್ಮ ದಣಿವು ನಿವಾರಿಸಿಕೊಳ್ಳಬಹುದೇ. ಅಥವಾ ಅದಲ್ಲದೇ ಇನ್ನೇನಾದರೂ ಬೇರೆ ಉಪಾಯಗಳಿವೆಯೇ, ಕಳೆದು ಹೋದ ದೇಹದ ಶಕ್ತಿಯನ್ನು ನಾವು ಮತ್ತೆ ಗಳಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಪೌಷ್ಠಿಕ ತಜ್ಞೆ ಅಂಜಲಿ ಮುಖರ್ಜಿ ನೀಡಿರುವ ಕೆಲ ಮಾಹಿತಿ ಇಲ್ಲಿದೆ,

ಇಂದಿನ ಆಧುನಿಕ ಜೀವನಶೈಲಿಯಲ್ಲಿ  ಪ್ರತಿಯೊಬ್ಬರನ್ನು ಒತ್ತಡ ಕಾಡುತ್ತಿದೆ. ಒತ್ತಡ ಹಾಗೂ ಖಿನ್ನತೆ ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ.  ಎಷ್ಟೇ ತಿಂದರೂ ಏನೇ ಮಾಡಿದರು ಹಲವು ಪ್ರೊಟಿನ್ ಆಹಾರಗಳು ಡಯಟ್ ಫಾಲೋ ಮಾಡಿದರು ಅನೇಕರಿಗೆ ತಮ್ಮ ಕಚೇರಿ ಹಾಗೂ ಮನೆ ಕೆಲಸ ಮಾಡಿದ ನಂತರ ಸುಸ್ತು, ಬಳಲಿಕೆ ದಣಿವು ಕಾಣಿಸಿಕೊಳ್ಳುತ್ತದೆ. ಕಚೇರಿಯಿಂದ ಮನೆಗೆ ಹೋಗಿ ಮಲಗಿದರೆ ಊಟಕ್ಕೂ ಏಳೋದು ಬೇಡ ಅನ್ನುವಷ್ಟು ದಣಿವು ಅನೇಕ ಯುವ ಸಮೂಹವನ್ನು ಕಾಡುತ್ತಿದೆ. ಇದಕ್ಕೇನು ಕಾರಣ? ಕೇವಲ ಒಳ್ಳೆಯ ಆಹಾರ ಹಾಗೂ ವ್ಯಾಯಾಮದಿಂದ ನಮ್ಮ ದಣಿವು ನಿವಾರಿಸಿಕೊಳ್ಳಬಹುದೇ. ಅಥವಾ ಅದಲ್ಲದೇ ಇನ್ನೇನಾದರೂ ಬೇರೆ ಉಪಾಯಗಳಿವೆಯೇ, ಕಳೆದು ಹೋದ ದೇಹದ ಶಕ್ತಿಯನ್ನು ನಾವು ಮತ್ತೆ ಗಳಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಪೌಷ್ಠಿಕ ತಜ್ಞೆ ಅಂಜಲಿ ಮುಖರ್ಜಿ ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ. ಹಾಗಿದ್ರೆ ಈ ಸಮಸ್ಯೆಗೆ ಅವರು ನೀಡಿರು ಪರಿಹಾರ ಏನು ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

ನೀವು ಸುಸ್ತಾಗಿದ್ದೀರಾ? ಇದು ನಿಮ್ಮ ಆಹಾರಶೈಲಿಯಗಿಂತಲೂ ಹೆಚ್ಚಿನದ್ದಾಗಿದೆ ಎಂದು ಬರೆದು ಅವರು ನಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ದೇಹಕ್ಕೆ ಶಕ್ತಿಯು ನಿದ್ರೆ ಮತ್ತು ಕೇವಲ ಪೂರಕ ಆಹಾರಗಳಿಂದ ಮಾತ್ರ ಬರುವುದಿಲ್ಲ, ಇದು ಕೆಲ ಮಿತಿಗಳನ್ನು ನಿಗದಿಪಡಿಸುವುದು, ನಿಮಗಾಗಿ ನಿಲ್ಲುವುದು ಮತ್ತು ನಿಮ್ಮನ್ನು ಭಾರವಾಗಿಸುವ ಒತ್ತಡಗಳನ್ನು ಕಡಿಮೆ ಮಾಡುವುದರಿಂದ ಬರುತ್ತದೆ ಎಂದು ಅವರು ಹೇಳುತ್ತಾರೆ. 

ಸ್ನಾನ ಮಾಡೋದಕ್ಕೂ ಮುನ್ನ ನೀರು ಕುಡಿದ್ರೆ, ಬಿಪಿ ಕಂಟ್ರೋಲ್ ನಲ್ಲಿ ಇರುತ್ತಾ?

ಅಂಜಲಿ ಮುಖರ್ಜಿ ಹೇಳುವಂತೆ ಅತ್ಯಂತ ಸುಸ್ತು ಆಯಾಸ ಎನಿಸುವ ಭಾವನೆ ಎಂದರೆ ಕೇವಲ ಒತ್ತಡವಲ್ಲ. ಅದು ಶಕ್ತಿಹೀನತೆಯೂ ಹೌದು. ನಿಮ್ಮ ಜೀವನದ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ ಎಂದು ನೀವು ಭಾವಿಸಿದಾಗ, ನಿಮ್ಮ ಮನಸ್ಸು ಮತ್ತು ದೇಹವು ನಿರಂತರ ಆಯಾಸ ಮತ್ತು ಒತ್ತಡದಿಂದ ಬರ್ನೌಟ್ ಆಗುತ್ತದೆ.

ಹಾಗಾದರೆ, ಈ ಸಂದರ್ಭದಲ್ಲಿ ನಾವು ದಣಿವು ಮತ್ತು ಬಳಲಿಕೆಯನ್ನು ನಿಲ್ಲಿಸಲು ಏನು ಮಾಡಬೇಕು? ಎಂಬುದಕ್ಕೆ ಪೌಷ್ಠಿಕ ತಜ್ಞೆ ಅಂಜಲಿ ಮುಖರ್ಜಿ ಅವರು ಕೆಲ ಸಲಹೆಗಳನ್ನು ನೀಡಿದ್ದು, ಅದು ನಿಮಗೆ ಇನ್ನು ಮುಂದೆ ಸುಸ್ತು ಎಂಬುದನ್ನು ಇನ್ನಿಲ್ಲದಂತೆ ಮಾಡಬಹುದು. ಹಾಗಿದ್ರೆ  ಇದಕ್ಕಾಗಿ ನೀವು ಏನ್‌ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಅವರು ನೀಡಿದ ಕೆಲ ಟಿಪ್ಸ್‌

ಆರೋಗ್ಯ ಮೊದಲೋ, ಕೆಲಸ ಮೊದಲೋ? ಆಸ್ಪತ್ರೆ ಐಸಿಯುನಿಂದ ಬೆಂಗಳೂರಿನ ಸಿಇಒ ಸಂದೇಶ

  • ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಯತ್ನಿಸಬೇಕು
  • ನಿಮಗೆ ಇದರಿಂದ ಹೊರಬರಲು ಥೆರಪಿಯ ಅಗತ್ಯವಿದ್ದಲ್ಲಿ ಅದನ್ನು ಪಡೆಯಿರಿ, ಮಾತನಾಡುವುದು ನಿಮಗೆ ಹಲವು ಲಾಭಗಳನ್ನು ನೀಡಬಹುದು.
  • ದೇಹದ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಆಹಾರಕ್ರಮವನ್ನು ಬದಲಾಯಿಸಿ 
  • ನಿಮ್ಮ ಮನಸ್ಸನ್ನು ಬೆಂಬಲಿಸಲು ನಿಮ್ಮ ದೇಹವನ್ನು ಪೋಷಿಸಿ
  • ನೀವು ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳಿ, ಒತ್ತಡಕ್ಕೆ ನೀವು ಪ್ರತಿಕ್ರಿಯಿಸುವ ರೀತಿಯೇ ನಿಮ್ಮ ಯೋಗಕ್ಷೇಮವನ್ನು ನಿರ್ಧರಿಸಬಹುದು.
  • ನೀವು ಅಶಕ್ತರಲ್ಲ. ಇಂದು ಒಂದು ಹೆಜ್ಜೆ ಇರಿಸಿ, ಎಲ್ಲವೂ ಉತ್ತಮಗೊಳ್ಳುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.  ಒಟ್ಟಿನಲ್ಲಿ ನಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಒಳ್ಳೆಯ ಬದಲಾವಣೆ ಆಲೋಚನೆಗಳು ನಮ್ಮ ಒತ್ತಡವನ್ನು ನಿವಾರಿಸಿ ಶಕ್ತಿ ತುಂಬುತ್ತವೆ ಎಂಬುದು ಅಂಜಲಿ ಮುಖರ್ಜಿಯವರ ಮಾತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..