ಸೌಂದರ್ಯ, ವ್ಯಕ್ತಿತ್ವ ಎಲ್ಲವೂ ಒಟ್ಟಾದರೆ....

By Web DeskFirst Published Jan 7, 2019, 6:05 PM IST
Highlights

ಕೆಲವರು ಹುಟ್ಟುತ್ತಲೇ ಸುಂದರವಾಗಿರುತ್ತಾರೆ. ಮತ್ತೆ ಕೆಲವರು ತಮ್ಮ ವ್ಯಕ್ತಿತ್ವದಿಂದ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಎರಡೂ ಮೇಳೈಸಿದರೆ....?

ವ್ಯಕ್ತಿತ್ವ ಚೆನ್ನಾಗಿರಬೇಕೆಂದರೆ ಪುರುಷರು ತಮ್ಮ ಬಾಹ್ಯ ಸೌಂದರ್ಯವನ್ನು ಗಮನಿಸಬೇಕು. ಮುಖದ ಮೇಲೆ ಕಲೆ, ಮೊಡವೆ, ಹರಡಿರುವ ಕೂದಲು, ಟ್ರಿಮ್ ಮಾಡದ ಗಡ್ಡ ಇವೆಲ್ಲಾ ಸೇರಿದರೆ ವ್ಯಕ್ತಿತ್ವವೇ ಸರಿ ಇಲ್ಲ ಎನಿಸಿಬಿಡುತ್ತೆ. ಅದಕ್ಕೆ ಏನು ಮಾಡಬೇಕು? 

ಟೈಟ್ ಜಿನ್ಸ್ ಹಾಕೋ ಮುನ್ನ

- ಕೂದಲಿಗೆ ಶ್ಯಾಂಪೂ ಮಾಡೋದು ಹುಡುಗಿಯರಿಗೆ ಮಾತ್ರ ಅನ್ನೋರು ಇದ್ದಾರೆ. ತಲೆಗೆ ಸ್ನಾನ ಮಾಡುವಾಗ ಶ್ಯಾಂಪೂ ಬಳಸಿ. ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯ ಕಾಪಾಡುವಂತೆ ಮಾಡುತ್ತದೆ. ಹೊಟ್ಟಿನಂಥ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಮುಖದ ಲುಕ್ ಅನ್ನೇ ಬದಲಿಸಬಲ್ಲದು. 


-ಅರ್ಜೆಂಟ್‌ನಲ್ಲಿ ಶೇವಿಂಗ್ ಕ್ರೀಮ್ ಇಲ್ಲದೆ ಶೇವ್ ಮಾಡಬೇಡಿ. ಬದಲಾಗಿ ಕ್ರೀಮ್‌ನಿಂದಲೇ ಶೇವ್ ಮಾಡಿ. ಇಲ್ಲವಾದರೆ ಗಾಯ, ಕಲೆಯಾಗುತ್ತದೆ. ಸೌಂದರ್ಯಕ್ಕಿದು ಕಪ್ಪು ಚುಕ್ಕಿಯಾಗಿಬಿಡುತ್ತದೆ.
- ಟ್ರಿಮ್ ಮಾಡದಿರುವುದೂ ತಪ್ಪು. ಉದ್ದ ಗಡ್ಡ, ಕೂದಲು ಬಿಟ್ಟರೆ ರೌಡಿ ಲುಕ್ ತರಿಸುತ್ತದೆ. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಕೂದಲು ಟ್ರಿಮ್ ಮಾಡಿಸುತ್ತೀರಿ. 
- ಇತ್ತೀಚಿಗೆ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯ. ಸೂಕ್ತ ಆರೈಕೆ ಹಾಗೂ ಪ್ರೊಟೀನ್ ಕೊರತೆಯಿಂದ ಇಂಥ ಸಮಸ್ಯೆ ತಲೆದೂರುತ್ತದೆ. ಇದನ್ನು ಕೀಳುವುದರಿಂದ ಇತರೆ ಕೂದಲು ದುರ್ಬಲವಾಗುತ್ತದೆ. ಆದುದರಿಂದ ಅದನ್ನು ಕೀಳಬೇಡಿ. ಬದಲಾಗಿ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ. 

ರೆಡ್ ಫ್ಯಾಷನ್ ಲೋಕದ ಬೆಸ್ಟ್ ಕಲರ್...
- ಮೂಗು ಮತ್ತು ಕಿವಿ ಕೂದಲನ್ನು ಕಡೆಗಣಿಸಬಾರದು. ಅದನ್ನು ಹಾಗೆ ಉದ್ದವಾಗಿ ಬೆಳೆಯಲು ಬಿಟ್ಟರೆ ಅಸಹ್ಯವಾಗಿ ಕಾಣುತ್ತದೆ.
- ಹೆಚ್ಚಿನ ಹುಡುಗರು ಕೂದಲು ಒದ್ದೆ ಮಾಡಿ, ಅದಕ್ಕೆ ಜೆಲ್ ಹಾಕಿ ಜೆಲ್ ಹಚ್ಚುತ್ತಾರೆ. ಹೀಗೆ ಮಾಡಿದರೆ ಕೂದಲು ಡ್ಯಾಮೇಜ್ ಆಗಿ ಕೂದಲು ಉದುರುತ್ತವೆ. 
- ಸಾಧ್ಯವಾದಷ್ಟು ಒಗೆದು, ಐರನ್ ಮಾಡಿರುವ ಬಟ್ಟೆಯನ್ನೇ ಬಳಸಿ. ಗಬ್ಬು ನಾರುತ್ತಿದ್ದರೆ, ಕೊಳಕು ಕೊಳಕಾಗಿದ್ದರೆ ಯಾರೂ ನಿಮ್ಮ ಹತ್ತಿರ ಸುಳಿಯುವುದೇ ಇಲ್ಲವೆಂಬುವುದು ನೆನಪಿರಲಿ.

click me!