ಟೈಟ್ ಜೀನ್ಸ್, ಫಿಟ್ಟಿಂಗ್ ಟಾಪ್ ಹಾಕೋ ಮುನ್ನ....

By Web Desk  |  First Published Jan 5, 2019, 11:20 AM IST

ಫ್ಯಾಷನ್ ಹೆಸರಲ್ಲಿ ಇಂದಿನ ಯುವ ಜನಾಂಗ ಹೇಗೇಗೋ ಡ್ರೆಸ್ ಮಾಡಿಕೊಳ್ಳುತ್ತೆ. ಆದರೆ, ಕೆಲವೊಮ್ಮೆ ಹೀಗೋ ಟೈಟ್, ಟೈಟಾಗಿ ಹಾಕಿ ಕೊಳ್ಳುವ ಡ್ರೆಸ್ ಅನಾರೋಗ್ಯಕ್ಕೂ ದಾರಿ ಮಾಡಿಕೊಳ್ಳಬಹುದು. ಏನಾಗುತ್ತೆ?


ತುಂಬಾ ಟೈಟ್ ಆದ ಅಥವಾ ಫಿಟ್ಟಿಂಗ್ ಡ್ರೆಸ್ ಧರಿಸುವುದು ಈಗ ಟ್ರೆಂಡ್. ಆದರೆ ಈ ರೀತಿ ಡ್ರೆಸ್ ಧರಿಸುವುದು ಆರೋಗ್ಯಕ್ಕೆ ಒಳ್ಳೇಯದಲ್ಲ. ಬಾಡಿ ಫಿಟ್ಟಿಂಗ್ ಡ್ರೆಸ್ ಧರಿಸೋದಕ್ಕೂ, ಆರೋಗ್ಯಕ್ಕೂ ಏನು ಸಂಬಂಧ ಎಂದು ಕೇಳಬಹುದು. ಸಂಬಂಧ ಇದೆ. ಟೈಟ್ ಜೀನ್ಸ್ ಅಥವಾ ಡ್ರೆಸ್ ಧರಿಸಿದರೆ ಜೀವ ಹೋಗುವಂತಹ ಸಮಸ್ಯೆ ಕೂಡ ಕಾಡಬಹುದು. 

ರೆಡ್ ಫ್ಯಾಷನ್ ಲೋಕದ ಬೆಸ್ಟ್ ಕಲರ್

Latest Videos

undefined

- ಟೈಟ್ ಆಗಿರುವ ಜೀನ್ಸ್ ಧರಿಸುವುದರಿಂದ ತೊಡೆಗಳಲ್ಲಿ ಬ್ಲಡ್ ಸರ್ಕ್ಯುಲೇಷನ್ ಸಮರ್ಪಕವಾಗಿ ಆಗುವುದಿಲ್ಲ. ಜೊತೆಗೆ ಕಾಲಿನ ಹಿಂಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಹೀಗೆ ಆದರೆ ಮನುಷ್ಯ ಮೂರ್ಛೆ ಹೋಗುತ್ತಾನೆ. 
- ಹುಡುಗರು ಟೈಟ್ ಜೀನ್ಸ್ ತೊಟ್ಟರೆ ವೀರ್ಯಗಳ ಸಂಖ್ಯೆಯೂ ಕುಂದುತ್ತದೆ.
- ಅಷ್ಟೇ ಅಲ್ಲ ಲೋ ವೆಸ್ಟ್ ಅಥವಾ ಟೈಟ್ ಜೀನ್ಸ್ ಧರಿಸುವುದರಿಂದ ಹೊಟ್ಟೆ ಕೆಳಭಾಗದಲ್ಲಿರುವ ನರದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮೊಣಕಾಲು ಮತ್ತು ತೊಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಟೈಟ್ ಜೀನ್ಸ್ ಸಿಂಡ್ರೋಮ್ ಎನ್ನುತ್ತಾರೆ. 

ಮದುವೇನಾ? ಹಾಗಾದ್ರೆ ಚರ್ಮವನ್ನು ಹೀಗೆ ರಕ್ಷಿಸಿಕೊಳ್ಳಿ

- ಸ್ಕಿನ್ ಟೈಟ್ ಜೀನ್ಸ್ ಧರಿಸುವುದರಿಂದ ತೊಡೆಯ ಮಾಂಸ ಖಂಡಗಳ ಮೇಲೆ ಒತ್ತಡ ಬೀರುತ್ತದೆ. ಇದರಿಂದ ಕಾಲಿನಲ್ಲಿ ರಕ್ತ ಸಂಚಾರ ನಿಧಾನವಾಗುತ್ತದೆ. ದಿನ ಪೂರ್ತಿ ಟೈಟ್ ಜೀನ್ಸ್‌ನಲ್ಲಿದ್ದರೆ ಅಪಾಯ ಖಂಡಿತ. 

2018ರಲ್ಲಿ ಟ್ರೆಂಡ್ ಸೃಷ್ಟಿಸಿದ ಹೇಲ್ ಸ್ಟೈಲ್

- ಜೀನ್ಸ್ ಧರಿಸೋದು ಕೆಟ್ಟದ್ದಲ್ಲ, ಆದರೆ ಹಿಂಬದಿ ತುಂಬಾ ಟೈಟ್ ಆಗಿರುವ ಜೀನ್ಸ್ ಧರಿಸುವುದು ಹಾಗೂ ಟೈಟ್ ಬೆಲ್ಟ್ ಕೂಡ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಯಾವಾಗಲಾದರೂ ಒಂದು ಬಾರಿ ಇದನ್ನು ಧರಿಸಿದರೆ ಸಮಸ್ಯೆ ಇಲ್ಲ, ಪ್ರತಿದಿನ ಧರಿಸುವುದರಿಂದ ಸಮಸ್ಯೆ ಕಾಡುತ್ತದೆ. 
- ಟೈಟ್ ಡ್ರೆಸ್‌ನಿಂದ ಉಸಿರಾಟದ ಸಮಸ್ಯೆ ಕಾಡುವುದು ಕಟ್ಟಿಟ್ಟ ಬುತ್ತಿ.
- ದೇಹಕ್ಕೆ ಅಂಟಿಕೊಂಡಿರುವ ಡ್ರೆಸ್ ಧರಿಸುವುದರಿಂದ ರಕ್ತ ಪರಿಚಲನೆ ಆಗುವುದಿಲ್ಲ, ಜೊತೆಗೆ ಬೆನ್ನಿನ ಮಾಂಸಗಳ ಮೇಲೆ ಪರಿಣಾಮ ಬೀರುತ್ತದೆ. 

ಸೌಂದರ್ಯಕ್ಕೆ ಬೆಲ್ಲ ಮದ್ದು


 

click me!