ಎಷ್ಟೇ ಬಣ್ಣಗಳಿದ್ದರೂ ಬ್ಲ್ಯಾಕ್ ಆ್ಯಂಡ್ ವೈಟ್ ಬಣ್ಣ ಲೋಕದ ಬೆಸ್ಟ್ ಕಾಂಬಿನೇಷನ್. ಆದರೆ, ರೆಡ್ ಬೆಸ್ಟ್ ಕಲರ್. ನಿಮ್ಮ ವಾಡ್ರೋಬ್‌ನಲ್ಲಿ ರೆಡ್ ಇಲ್ಲವೆಂದರೆ ಜೀವನವೇ ಇನ್‌ಕಂಪ್ಲೀಟ್....
ಹಾಲಿವುಡ್, ಬಾಲಿವುಡ್ ಅಥವಾ ಸ್ಯಾಂಡಲ್‌ವುಡ್ ಆಗಿರಲಿ... ಎಲ್ಲ ಸ್ಟಾರ್‌ಗಳೂ ಇಷ್ಟ ಪಡುವ, ಫ್ಯಾಷನ್ ಜಗತ್ತಿನ ಎವರ್ ಟ್ರೆಂಡಿಂಗ್ ಬಣ್ಣವೆಂದರೆ ಕೆಂಪು. ಸ್ಟೈಲಿಶ್ ಆಗಿ ಕಾಣಬೇಕೆಂದರೆ ರೆಡ್ ಡ್ರೆಸ್ ಇರಲೇಬೇಕು. ಯಾವೆಲ್ಲ ರೀತಿಯ ಡ್ರೆಸ್‌ಗಳು ಇಂದಿನ ದಿನಗಳಲ್ಲಿ ಟ್ರೆಂಡ್‌ನಲ್ಲಿವೆ? ಅವುಗಳ ಮೂಲಕ ಯಾವ ರೀತಿ ಸ್ಟೈಲ್ ಮಾಡಿ ಮಿಂಚಬಹುದು ನೋಡಿ...
ರೆಡ್ ಗೌನ್ : ಪಾರ್ಟಿ ಡ್ರೆಸ್ ರೂಪದಲ್ಲಿ ಇತ್ತೀಚಿಗೆ ಹುಡುಗಿಯರ ಮೊದಲ ಆಯ್ಕೆ ಗೌನ್. ಇದರ ವಿಶೇಷತೆ ಎಂದರೆ ಎಲ್ಲಾ ರೀತಿಯ ಬಾಡಿ ಟೈಪ್‌ಗೂ ಇದು ಒಪ್ಪುತ್ತದೆ. ಆದರೆ ಗೌನ್ಸ್ ಖರೀದಿಸುವಾಗ ಅದರ ಕಟ್ಸ್ ಮೇಲೆ ಗಮನವಿರಲಿ. ಶೋಲ್ಡರ್ ಬ್ರಾಡ್ ಆಗಿದ್ದರೆ ಆಫ್ ಶೋಲ್ಡರ್ ಡ್ರೆಸ್ ಬದಲು V ನೆಕ್ ಡ್ರೆಸ್ ಧರಿಸಿ.
undefined
ರೆಡ್ ಶಾರ್ಟ್ ಡ್ರೆಸ್: ರೆಡ್ ಶಾರ್ಟ್ ಡ್ರೆಸ್ ನಿಜಕ್ಕೂ ಹುಡುಗಿಯರಿಗೆ ಹಾಟ್ ಲುಕ್ ನೀಡುತ್ತದೆ. ಒನ್ ಶೋಲ್ಡರ್ ನೆಕ್‌ಲೈನ್ ಜೊತೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ. ನಿಮ್ಮ ಹೈಟ್ ಕಡಿಮೆ ಇದ್ದರೆ ಮೇಲಿಂದ ಕೆಳಗಿನವರೆಗೂ ಕೇವಲ ರೆಡ್ ಮಾತ್ರ ಇರುವಂತೆ ನೋಡಿಕೊಳ್ಳಿ.
ಹೈ ಸ್ಲಿಟ್ ಡ್ರೆಸ್ : ಈ ಡ್ರೆಸ್ ಹೈಟ್ ಮತ್ತು ಟೋನ್ಡ್ ದೇಹದ ಹುಡುಗಿಯರಿಗೆ ಚೆಂದ. ಇದು ಸೆನ್ಸುಯಲ್ ಲುಕ್ ನೀಡುತ್ತದೆ. ಕಂಫರ್ಟ್ ಫೀಲ್ ಆಗಿದ್ದರೆ ಮಾತ್ರ ಈ ಡ್ರೆಸ್ ಧರಿಸಿ.
ಇಂಡಿಯನ್ ವೇರ್ : ರೆಡ್ ಕಲರ್ ಸೀರೆ ಧರಿಸಿದರೆ ವಾವ್ ಎಷ್ಟೊಂದು ಚೆನ್ನಾಗಿರುತ್ತೆ ಆಲ್ವಾ? ಭಾರತೀಯ ಸಂಪ್ರದಾಯವನ್ನೂ ಬಿಂಬಿಸುವ ಕೆಂಪು ಸೀರೆ ಅಥವಾ ಅನಾರ್ಕಲಿ ಡ್ರೆಸ್ ಚೆನ್ನಾಗಿ ಕಾಣುತ್ತದೆ.
ಆಕ್ಸೆಸರೀಸ್ : ಕೆಂಪು ಬಣ್ಣ ಮತ್ತು ಗೋಲ್ಡ್ ಕಾಂಬಿನೇಷನ್ ಚೆನ್ನಾಗಿ ಕಾಣುತ್ತದೆ. ಒಂದು ನೆಕ್ ಪೀಸ್, ಇಯರಿಂಗ್, ಉಂಗುರ, ಬ್ರೇಸ್ಲೆಟ್ ಹಾಕಿದರೆ ಚೆನ್ನಾಗಿರುತ್ತದೆ.