
ಕೆಲವು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಮನುಷ್ಯನನ್ನು ಆಕರ್ಷಿಸಿದರೆ, ಮತ್ತೆ ಕೆಲವು ಮಾನವ ನಿರ್ಮಿತ ಕಟ್ಟಡಗಳಿಗೆ ಆಕರ್ಷಣೀಯ ಕೇಂದ್ರವಾಗಿರುತ್ತದೆ. ಅದರಲ್ಲಿಯೂ ಕೆಲವು ವಿಸ್ಮಯತೆಗಳಿಂದ ಕೂಡಿರುವ ತಾಣಗಳಿವೆ. ಅದರ ಝಲಕ್...
ಭಾಂಗ್ರಾ ಕೋಟೆ: ಈ ಕೋಟೆ ಇಂದಿಗೂ ನಿಗೂಢತೆಯನ್ನು ಹೊಂದಿದೆ. ಬಹಳ ವರ್ಷಗಳ ಹಿಂದೆ ಒಬ್ಬ ಮಂತ್ರವಾದಿ ಇಲ್ಲಿನ ಅರಮನೆಯಲ್ಲಿ ಮಾಟ ಮಾಡಿದ್ದನಂತೆ. ಅದರಿಂದಾಗಿ ಭಾಂಗ್ರಾದಲ್ಲಿದ್ದ ಸುತ್ತಲಿನ ಜನರು ಅಲ್ಲಿಂದ ಬೇರೆಡೆ ಹೋದರಂತೆ. ಇಂದಿಗೂ ಅಲ್ಲಿ ಸಂಜೆಯ ನಂತರ ಆತ್ಮಗಳ ಉಪಟಳ ಇರುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಸಂಜೆಯ ನಂತರ ಈ ಕೋಟೆಗೆ ಯಾರೂ ಹೋಗುವಂತಿಲ್ಲ.
ಜಿಪಿ ಬ್ಲಾಕ್, ಮೀರತ್: ಇಲ್ಲಿ ಹಿಂದೆ ಕುಡಿಯುತ್ತಿದ್ದ ಸ್ನೇಹಿತರ ಆತ್ಮ ಕಂಡು ಬರುತ್ತದೆಯಂತೆ, ಜೊತೆಗೆ ಕೆಂಪು ಬಟ್ಟೆ ಧರಿಸಿದ ಹುಡುಗಿಯರ ಭೂತವೂ ಕಂಡಿದೆ ಎಂದು ಜನರು ಹೇಳುತ್ತಾರೆ.
ದೆಹಲಿ ಕಂಟೋನ್ ಮೆಂಟ್, ದೆಹಲಿ: ಈ ಜಾಗವನ್ನು ಜನರು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದು ಒಂದು ಹಾಂಟೆಡ್ ತಾಣ ಎಂಬುದು ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲ. ಆದರೆ ಅಲ್ಲಿ ರಾತ್ರಿ ಹೊತ್ತು ಬಿಳಿ ಸೀರೆಯುಟ್ಟ ಮಹಿಳೆಯೊಬ್ಬಳು ಲಿಫ್ಟ್ ಕೇಳುತ್ತಾಳಂತೆ. ಒಂದು ವೇಳೆ ನೀವು ನಿಲ್ಲಿಸದಿದ್ದರೆ, ಬೈಕ್ ಅಥವಾ ಕಾರು ಎಷ್ಟು ಸ್ಪೀಡ್ ಹೋಗುತ್ತದೆ ಅಷ್ಟೇ ಸ್ಪೀಡ್‌ನಲ್ಲಿ ಆ ಪ್ರೇತಾತ್ಮ ಹಿಂಬಾಲಿಸುತ್ತಂತೆ.
ಡೌ ಹಿಲ್, ಪಶ್ಚಿಮ ಬಂಗಾಳ: ಇದೊಂದು ಸಾವಿನ ದಾರಿ. ಇಲ್ಲಿ ಜನರು ತಲೆ ಇಲ್ಲದ ಹುಡುಗನ ದೇಹವೊಂದು ಅಟ್ಟಿಸಿಕೊಂಡು ಬಂದು ಮರಗಳಲ್ಲಿ ಕಾಣೆಯಾಗುವುದನ್ನು ನೋಡಿದ್ದಾರೆ. ಇದನ್ನು ಕಂಡ ಕೆಲವರು ಆತ್ಮಹತ್ಯೆ ಮಾಡಿಕೊಂಡ ವರದಿಗಳೂ ಇವೆ.
ಶನೀಶ್ವರವಾಡ ಕೋಟೆ, ಪುಣೆ: ಇಲ್ಲಿ ಹುಣ್ಣಿಮೆ ದಿನ ಅಪರಿಚಿತ ವ್ಯಕ್ತಿಯ ಸ್ವರ ಕೇಳಿಸುತ್ತದೆ. ಅದು ಅಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತದೆ. ಒಬ್ಬ ಸಣ್ಣ ಹುಡುಗ 'ಕಾಕಾ ನನ್ನನು ರಕ್ಷಿಸಿ...' ಎಂದು ಅಳುತ್ತಿರುವ ಶಬ್ದ ಕೇಳಿಸುತ್ತಂತೆ.
ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಯೋ ಪವಾಡಗಳು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.