ಇದೊಂದು ವಿಚಿತ್ರ ಪ್ರೇಮ ಕತೆ. ಪ್ರೀತಿ ಅಂದ್ರೆ ಪ್ರೀತಿ ಅಷ್ಟೇ. ಅದಕ್ಕೆ ಜವಾಬ್ದಾರಿಗಳ ಭಾರ ಬೇಡ ಅನ್ನೋ ಯುವ ದಂಪತಿಗಳ ಕತೆ. ಆ ಹುಡುಗನ ನಿರೂಪಣೆಯಲ್ಲೇ ನವಿರಾದ ಈ ಪ್ರೇಮಕತೆ ಓದಿ.
ಇದೊಂದು ವಿಚಿತ್ರ ಪ್ರೇಮ ಕತೆ. ಪ್ರೀತಿ ಅಂದ್ರೆ ಪ್ರೀತಿ ಅಷ್ಟೇ. ಅದಕ್ಕೆ ಜವಾಬ್ದಾರಿಗಳ ಭಾರ ಬೇಡ ಅನ್ನೋ ಯುವ ದಂಪತಿಗಳ ಕತೆ. ಆ ಹುಡುಗನ ನಿರೂಪಣೆಯಲ್ಲೇ ನವಿರಾದ ಈ ಪ್ರೇಮಕತೆ ಓದಿ.
'ಕಾಲೇಜಿಗೆ ಸೇರಿದ ಮೊದಲ ದಿನ ನಮ್ಮ ನಮ್ಮ ಪರಿಚಯ ಮಾಡ್ಕೊಳ್ಳೋ ಹೊತ್ತಿನಲ್ಲಿ ಅವಳು ನನ್ನನ್ನು ಗಮನಿಸಿದ ಹಾಗೆ ಕಾಣಲಿಲ್ಲ. ಆದರೆ ನಾನಂತೂ ಅವಳನ್ನು ಗಮನಿಸಿದ್ದೆ. ಆದರೆ ಆಗ ಅವಳನ್ನು ಕಂಡು ಒಂಚೂರೂ ಇಷ್ಟ ಆಗಲಿಲ್ಲ. ಜೋರಾದ ದನಿಯಲ್ಲಿ ಮಾತಾಡ್ತಾ ಇದ್ದಳು. ತನ್ನ ಬಗ್ಗೆ ಅತೀ ಅನಿಸುವಷ್ಟು ಮಾತಾಡಿದ್ಲು. ಓವರ್ ಅನಿಸಿತು. ಮುಂದೆ ಬ್ಯುಸಿನೆಸ್ ಸ್ಟಡೀಸ್ ಕ್ಲಾಸ್ ನಲ್ಲಿ ನಮ್ಮಲ್ಲಿ ಒಂದಿಷ್ಟು ಗ್ರೂಪ್ ಗಳನ್ನು ಮಾಡಿದ್ರು. ನಾವಿಬ್ಬರೂ ಒಂದೇ ಗ್ರೂಪ್ ನಲ್ಲಿ ಬಂದಿದ್ದೆವು. ಅಸೈನ್ ಮೆಂಟ್ ಪೂರೈಸುವುದಕ್ಕೋಸ್ಕರ ಫೋನ್ ನಂಬರ್ ಶೇರ್ ಮಾಡಲೇ ಬೇಕಿತ್ತು. ನಾವಿಬ್ಬರೂ ಆ ಕೆಲಸ ಮಾಡಿದ್ವಿ.
undefined
ನಾನು ಅವಳ ಹತ್ರ ಫೋನ್ ನಲ್ಲಿ ಮೊದಲ ಸಲ ಮಾತಾಡಿದ್ದು ಅಸೈನ್ಮೆಂಟ್ ಬಗ್ಗೆಯೇ, ಅದಕ್ಕೂ ಮುನ್ನ ಅವಳ ಬ್ಲಾಗ್ ನಲ್ಲಿ ಕಣ್ಣಾಡಿಸಿದ್ದೆ. ನನಗೆ ರಿಲೇಶಿನ್ ಶಿಪ್‌ನಲ್ಲಿ ನಂಬಿಕೆ ಇರಲಿಲ್ಲ. ಅಫ್ ಕೋರ್ಸ್ ನಾನು ಸೋಷಲ್ ಮೀಡಿಯಾಗಳ ಮೂಲಕ ಮಾತಾಡೋದನ್ನು, ಸಂಬಂಧ ಬೆಳೆಸೋದನ್ನ ದ್ವೇಷಿಸುತ್ತಿದ್ದೆ ಅಂತಲೇ ಇದೊಂದು ವಿಚಿತ್ರ ಪ್ರೇಮ ಕತೆ. ಪ್ರೀತಿ ಅಂದ್ರೆ ಪ್ರೀತಿ ಅಷ್ಟೇ. ಅದಕ್ಕೆ ಜವಾಬ್ದಾರಿಗಳ ಭಾರ ಬೇಡ ಅನ್ನೋ ಯುವ ದಂಪತಿಗಳ ಕತೆ. ಆ ಹುಡುಗನ ನಿರೂಪಣೆಯಲ್ಲೇ ನವಿರಾದ ಈ ಪ್ರೇಮಕತೆ ಓದಿ.
'ಕಾಲೇಜಿಗೆ ಸೇರಿದ ಮೊದಲ ದಿನ ನಮ್ಮ ನಮ್ಮ ಪರಿಚಯ ಮಾಡ್ಕೊಳ್ಳೋ ಹೊತ್ತಿನಲ್ಲಿ ಅವಳು ನನ್ನನ್ನು ಗಮನಿಸಿದ ಹಾಗೆ ಕಾಣಲಿಲ್ಲ. ಆದರೆ ನಾನಂತೂ ಅವಳನ್ನು ಗಮನಿಸಿದ್ದೆ. ಆದರೆ ಆಗ ಅವಳನ್ನು ಕಂಡು ಒಂಚೂರೂ ಇಷ್ಟ ಆಗಲಿಲ್ಲ. ಜೋರಾದ ದನಿಯಲ್ಲಿ ಮಾತಾಡ್ತಾ ಇದ್ದಳು. ತನ್ನ ಬಗ್ಗೆ ಅತೀ ಅನಿಸುವಷ್ಟು ಮಾತಾಡಿದ್ಲು. ಓವರ್ ಅನಿಸಿತು. ಮುಂದೆ ಬ್ಯುಸಿನೆಸ್ ಸ್ಟಡೀಸ್ ಕ್ಲಾಸ್ ನಲ್ಲಿ ನಮ್ಮಲ್ಲಿ ಒಂದಿಷ್ಟು ಗ್ರೂಪ್ ಗಳನ್ನು ಮಾಡಿದ್ರು. ನಾವಿಬ್ಬರೂ ಒಂದೇ ಗ್ರೂಪ್ ನಲ್ಲಿ ಬಂದಿದ್ದೆವು. ಅಸೈನ್ ಮೆಂಟ್ ಪೂರೈಸುವುದಕ್ಕೋಸ್ಕರ ಫೋನ್ ನಂಬರ್ ಶೇರ್ ಮಾಡಲೇ ಬೇಕಿತ್ತು. ನಾವಿಬ್ಬರೂ ಆ ಕೆಲಸ ಮಾಡಿದ್ವಿ.
ನನಗೆ ರಿಲೇಶನ್‌ಶಿಪ್‌ನಲ್ಲಿ ನಂಬಿಕೆ ಇರಲಿಲ್ಲ. ಅಫ್ಕೋರ್ಸ್ ನಾನು ಸೋಷಲ್ ಮೀಡಿಯಾಗಳ ಮೂಲಕ ಮಾತಾಡೋದನ್ನು, ಸಂಬಂಧ ಬೆಳೆಸೋದನ್ನ ದ್ವೇಷಿಸುತ್ತಿದ್ದೆ ಅಂತಲೇ ಹೇಳಬಹುದು. ಆದರೆ ಅವಳಿಗೆ ಟೆಕ್ಸ್ಟ್ ಮಾಡುವಾಗ ಯಾಕೋ ಬೆರಳುಗಳು ನಡುಗುತ್ತಿದ್ದವು, ಎದೆಯಲ್ಲಿ ಕಂಪನ, ಅವಳ ಜೊತೆಗೆ ಮಾತನಾಡುತ್ತಲೇ ಇರಬೇಕು ಅನಿಸುತ್ತಿತ್ತು. ಅಥವಾ ಈ ಜನ್ಮವಿಡೀ ಅವಳು ಮಾತಾಡೋದನ್ನು ಸುಮ್ಮನೆ ಕೂತು ಕೇಳುತ್ತಲೇ ಇರೋಣ ಅನಿಸಲಾರಂಭಿಸಿತು. ಅವಳ ಮಾತಲ್ಲಿ ಅಳವಾದ ಚಿಂತನೆ ಇರುತ್ತಿತ್ತು, ಒಳನೋಟಗಳು ಇರುತ್ತಿದ್ದವು.
ದುಃಖದಿಂದ ನಿಮ್ಮನ್ನು ಮೇಲೆತ್ತುವ ಎರಡು ಕತೆಗಳು
ನಾವಿಬ್ಬರೇ ಕೂತು ಮೊದಲ ಸಲ ಮಾತನಾಡಿದ್ದು ನಮ್ಮ ಕಾಲೇಜ್ ಕ್ಯಾಂಟೀನ್‌ನಲ್ಲಿ. ಅವಳಾಗ ಮಾತನಾಡುತ್ತಲೇ ಇದ್ದಳು - ಸಿನಿಮಾದಿಂದ ಹಿಡಿದು ಪಾಲಿಟಿಕ್ಸ್ ತನಕ. ನಾನು ಇಷ್ಟಪಟ್ಟು ಕೇಳುತ್ತಿದ್ದೆ. ನಮ್ಮಿಬ್ಬರ ನಡುವೆ ವೇವ್ ಲೆನ್ತ್ ಚೆನ್ನಾಗಿ ಸೆಟ್ ಆಗ್ತಿತ್ತು ಅನಿಸುತ್ತೆ. ಹೀಗೇ ಅವಳ ಜೊತೆಗೆ ಚಾಟಿಂಗ್ ಮಾಡ್ತಾ ಇರುವಾಗಲೇ ಅವಳಿಂದ ಒಂದು ಪ್ರೊಪೋಸಲ್ ಬಂತು. ನಾವು ಡೇಟಿಂಗ್ ಮಾಡೋಣ ಅಂತ. ನನಗೆ ಏನು ಹೇಳಲೂ ತೋಚಲಿಲ್ಲ. ಸ್ವಲ್ಪ ಟೈಮ್ ಬೇಕು ಅನ್ನೋದಷ್ಟೇ ಸಾಧ್ಯ ಆಯ್ತು. ಆದರೆ ಮನಸ್ಸು ಮಾತ್ರ ಅವಳಲ್ಲದೇ ಇನ್ಯಾರೂ ನನ್ನ ಲೈಫ್ ಪಾರ್ಟನರ್ ಆಗಲಿಕ್ಕೆ ಸಾಧ್ಯ ಇಲ್ಲ ಅಂತಲೇ ಹೇಳುತ್ತಿತ್ತು. ಮೂರು ತಿಂಗಳ ತನಕವೂ ನನ್ನ ಟೈಮ್ ವಿಸ್ತರಿಸಿತು. ಆದರೆ ಆ ಹೊತ್ತಿಗೆ ಅವಳು ಇನ್ನಷ್ಟು ಮುಂದುವರಿದಿದ್ದಳು. ಅದು ಡೇಟಿಂಗ್ ಪ್ರೊಪೋಸಲ್‌ನಿಂದ ಮ್ಯಾರೇಜ್ ಪ್ರಪೋಸಲ್‌ನ ಹಾದಿ ಹಿಡಿದಿತ್ತು. ಹಾಗಂತ ನಾವಿಬ್ಬರೂ ಮದುವೆ ಬಗ್ಗೆ ಮಾತಾಡೋದು ಸುಲಭ ಇರಲಿಲ್ಲ. ಕಾಲೇಜು ವ್ಯಾಸಂಗ ಮುಗಿಯಲು ಇನ್ನೂ ನಾಲ್ಕೂವರೆ ವರ್ಷ ಕಾಯಬೇಕಿತ್ತು. ಆಮೇಲೆ ಒಂದು ಕೆಲಸ ಹಿಡಿಯಬೇಕಿತ್ತು. ಆ ಬಳಿಕವೇ ಮದುವೆಯ ಬಾಂಡ್ಗೆ ಸೈನ್ ಮಾಡೋದು ಸಾಧ್ಯವಿತ್ತು. ಆದರೆ ಜವಾಬ್ದಾರಿಯ ಹೊರೆಯಲ್ಲಿ ನಮ್ಮ ಪ್ರೀತಿಯನ್ನು ನಲುಗಿಸುವ ಮನಸ್ಸಿರಲಿಲ್ಲ. ಅದನ್ನು ಅರಳಲು ಬಿಡಬೇಕಿತ್ತು.
ನಮ್ಮ ಮದುವೆಗೆ ಅವಳ ಮನೆಯಲ್ಲೇನೋ ಒಪ್ಪಿಗೆ ಸಿಕ್ಕಿತು, ಆದರೆ ಸಮಸ್ಯೆಯಾದದ್ದು ನಮ್ಮ ಮನೆಯಲ್ಲಿ. ನಮ್ಮ ಜಾತಿ ಬೇರೆ ಬೇರೆಯಾದದ್ದು ದೊಡ್ಡ ತೊಡಕು. ಅವಳು ಬ್ಲಾಗ್‌ನಲ್ಲಿ ಬರೆದ ಕ್ರಾಂತಿಕಾರಿ ಬರಹಗಳು, ಸ್ಟ್ರೀವಾದದ ಕುರಿತ ಬರಹಗಳೆಲ್ಲ ನಮ್ಮ ಮನೆಯವರಿಗೆ ಅವಳ ಬಗೆಗಿದ್ದ ಅಸಮಾಧಾನ ಹೆಚ್ಚುವಂತೆ ಮಾಡಿದ್ದವು. ಪಾಪ ಅವಳು ತನ್ನ ಪ್ರೀತಿಗಾಗಿ ಅದನ್ನೆಲ್ಲ ಡಿಲೀಟ್ ಮಾಡಲು ಸಿದ್ಧಳಿದ್ದಳು. ಆದರೆ ನನ್ನ ಜೀವನ ಸಂಗಾತಿಯ ಸ್ವತಂತ್ರದ ವಿಚಾರದಲ್ಲಿ ಇನ್ನೊಬ್ಬರು ಮೂಗು ತೂರಿಸುವುದು ನನಗಿಷ್ಟವಿರಲಿಲ್ಲ. ಮದುವೆಗಾಗಿ ಅವಳ ಫ್ರೀಡಂ ಹತ್ತಿಕ್ಕುವುದು ಅಮಾನವೀಯ ಅನಿಸಲಾರಂಭಿಸಿತು.
ಇವೆಲ್ಲದರ ನಡುವೆ ನಮ್ಮ ಮದುವೆಗೆ ಡೇಟ್ ಫಿಕ್ಸ್ ಮಾಡಿದೆವು. ಮನೆಯವರನ್ನು ಮದುವೆಯಲ್ಲಿ ಪಾಲ್ಗೊಳ್ಳಲು ಬಲವಂತಪಡಿಸಿದೆವು. ಏಕೆಂದರೆ ಈ ಕಾರಣಕ್ಕಾಗಿ ಭವಿಷ್ಯದಲ್ಲಿ ಯಾರೂ ವಿಷಾದ ಪಡುವುದು ನಮಗೆ ಬೇಕಿರಲಿಲ್ಲ. ಬಹಳ ಸುಂದವರಾಗಿ ನಮ್ಮ ಮದುವೆ ನಡೆಯಿತು, ಆರಂಭದಲ್ಲಿ ಅಸಮಾಧಾನವಿದ್ದರೂ ಮದುವೆಯಲ್ಲಿ ಅದು ಹೊಗೆಯಾಡಲಿಲ್ಲ. ನಮ್ಮಿಬ್ಬರ ಪ್ರೀತಿ ಎಂಥಾದ್ದು ಅಂತ ನಮ್ಮಿಬ್ಬರ ಮನೆಯವರಿಗೂ ಗೊತ್ತಾಯ್ತು.
ನಮ್ಮ ಮದುವೆಯಾಗಿ ಎಂಟು ತಿಂಗಳು ಕಳೆದಿವೆ. ಇನ್ನೂ ಹನಿಮೂನ್ ಮೂಡ್ ನಲ್ಲೇ ಇದ್ದೇವೆ. ಪ್ರತೀ ದಿನ ಅವಳಿಂದ ಏನಾದರೂ ಕಲಿಯುತ್ತಲೇ ಇರುತ್ತೇನೆ. ಅವಳೂ ನನ್ನಿಂದ ಕಲಿಯುತ್ತಿದ್ದಾಳೆ. ನಮ್ಮಿಬ್ಬರ ನಡುವೆ ಫೈಟಿಂಗ್ ಆಗುತ್ತಲೇ ಇರುತ್ತದೆ. ಆ ದಿವಸ ನಾವಿಬ್ರೂ ಯಾವ ಡ್ರೆಸ್ ಹಾಕ್ಬೇಕು ಅನ್ನೋದಕ್ಕೆ ಹೆಚ್ಚು ವಾದ ನಡೆಯುತ್ತೆ, ನಾನು ಚಪ್ಪಲಿ ಹಾಕೋದು ಅವಳಿಗಿಷ್ಟವಿಲ್ಲ. ನನ್ನ ಪಾದಗಳಿಗೆ ಹಿತವಾಗುವ ಶೂಗಳನ್ನು ತಂದುಕೊಟ್ಟಿದ್ದಾಳೆ. ಅವಳು ಅವಳ ಬಗ್ಗೆ ಯೋಚಿಸೋದಕ್ಕಿಂತ ಹೆಚ್ಚು ನನ್ನ ಬಗ್ಗೆ ಯೋಚಿಸುತ್ತಾಳೆ, ನಾನೂ ಹಾಗೇ. ಇಷ್ಟು ಸಾಕಲ್ವಾ ನಾವಿಬ್ಬರೂ ಎಷ್ಟು ಪ್ರೀತಿಸುತ್ತಿದ್ದೇವೆ ಅಂತ ತಿಳಿಯಲು
ಅಪ್ಪುಗೆಯಲ್ಲಿರುವ ಸುಖ ಗೊತ್ತೇ ಇಲ್ಲವಾ? ಒಮ್ಮೆ ತಬ್ಬಿಕೊಂಡು ನೋಡಿ