ಸಾಕಾಗುವಷ್ಟು ನಿದಿರೆ ಮಾಡು ನೀ, ಏನಂತೀ?

First Published Jun 1, 2018, 4:38 PM IST
Highlights

ಈ ಬ್ಯುಸಿ ಬದುಕಿನಲ್ಲಿ ದೇಹಕ್ಕೆ ಸಾಕಾಗುಷ್ಟು ನಿದ್ರೆ ಮಾಡುವುದು ಸವಾಲೇ ಸರಿ. ದೇಹ ಹಾಗೂ ಮನಸುಗಳ ಸಮತೋಲನ ಕಾಪಾಡಬೇಕೆಂದರೆ ಅಗತ್ಯದಷ್ಟು ನಿದ್ರಿಸುವುದು ಮುಖ್ಯ. ಕಡಿಮೆ ನಿದ್ರೆಯಿಂದ ಸ್ಲೀಪಿಂಗ್ ಡಿಸಾರ್ಡರ್ ಸೇರಿ ದೇಹ ಹಾಗೂ ಮನಸಿನ ಅಸಮತೋಲನವೇ ಏರುಪೇರಾಗುತ್ತದೆ.ದೇಹಕ್ಕೆ ತಕ್ಕಷ್ಟು ನಿದ್ರಿಸಿದರೆ, ಕೂದಲು, ಮುಖದ ಸ್ನಾಯುಗಳು ಕ್ರಿಯಾಶೀಲವಾಗಿ, ಸೌಂದರ್ಯ ಹೆಚ್ಚುತ್ತದೆ. ದೇಹದ ಇನ್ನತರೆ ಭಾಗಗಳಿಗೂ ಸಾಕಷ್ಟು ವಿಶ್ರಾಂತಿ ಸಿಗುವುದರಿಂದ, ಹೆಚ್ಚೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. 

ಸಾಕಾಗುವಷ್ಟು ನಿದಿರೆ ಮಾಡು ನೀ, ಏನಂತೀ?

ಈ ಬ್ಯುಸಿ ಬದುಕಿನಲ್ಲಿ ದೇಹಕ್ಕೆ ಸಾಕಾಗುಷ್ಟು ನಿದ್ರೆ ಮಾಡುವುದು ಸವಾಲೇ ಸರಿ. ದೇಹ ಹಾಗೂ ಮನಸುಗಳ ಸಮತೋಲನ ಕಾಪಾಡಬೇಕೆಂದರೆ ಅಗತ್ಯದಷ್ಟು ನಿದ್ರಿಸುವುದು ಮುಖ್ಯ. ಕಡಿಮೆ ನಿದ್ರೆಯಿಂದ ಸ್ಲೀಪಿಂಗ್ ಡಿಸಾರ್ಡರ್ ಸೇರಿ ದೇಹ ಹಾಗೂ ಮನಸಿನ ಅಸಮತೋಲನವೇ ಏರುಪೇರಾಗುತ್ತದೆ.ದೇಹಕ್ಕೆ ತಕ್ಕಷ್ಟು ನಿದ್ರಿಸಿದರೆ, ಕೂದಲು, ಮುಖದ ಸ್ನಾಯುಗಳು ಕ್ರಿಯಾಶೀಲವಾಗಿ, ಸೌಂದರ್ಯ ಹೆಚ್ಚುತ್ತದೆ. ದೇಹದ ಇನ್ನತರೆ ಭಾಗಗಳಿಗೂ ಸಾಕಷ್ಟು ವಿಶ್ರಾಂತಿ ಸಿಗುವುದರಿಂದ, ಹೆಚ್ಚೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.ಸಂಶೋಧನೆಗಳ ಪ್ರಕಾರ ರಾತ್ರಿ 10ಕ್ಕೆ ಮಲಗಿ ಏಳು ಗಂಟೆಗಳ ಕಾಲ ನಿದ್ರಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ಕಾಫಿ, ಟೀ ಸೇವಿಸುವುದರಿಂದ ನಿದ್ರೆಗೆ ತುಸು ತೊಂದರೆಯಾಗಲಿದ್ದು, ಅವುಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಿದರೆ ಆರೋಗ್ಯದ ದೃಷ್ಟಿಯಿಂದ ಒಳಿತು. 

ಯಾರಿಗೆ ಎಷ್ಟೆಷ್ಟು ನಿದ್ರೆ ಅಗತ್ಯ?

- ಈಗಷ್ಟೇ ಹುಟ್ಟಿದ ಮಗುವಿಗೆ (0-3 ತಿಂಗಳು) 14 ರಿಂದ 17 ತಾಸು ನಿದ್ರಿಸಬೇಕು.

- 4 ರಿಂದ 11 ತಿಂಗಳಿನ ಮಗು 12- 15 ತಾಸು ನಿದ್ರೆ ಅಗತ್ಯ.

- ಮಕ್ಕಳು (1-5 ವರ್ಷ) 11 -13 ತಾಸು ನಿದ್ರಿಸಬೇಕು.

- ಶಾಲೆಗೆ ಹೊಗುವ  ಮಕ್ಕಳು(6- 3 ವರ್ಷ) 9 ರಿಂದ 11 ಗಂಟೆಯಾದರೂ ಮಲಗಲೇ ಬೇಕು.

- ಹದಿಹರೆಯದವರು (14- 17 ವರ್ಷ) 8 ರಿಂದ 10 ತಾಸಾದರೂ ಮಲಗಿದರೆ ಒಳ್ಳೆಯದು.

- ಯುವಕರು (18-15 ವರ್ಷ) 7 ರಿಂದ 9 ತಾಸು ನಿದ್ದೆ ಮಾಡಬೇಕು.

- ವಯಸ್ಕರು (26-64 ವರ್ಷ) 7 ರಿಂದ 9 ತಾಸು ನಿದ್ರಿಸಿದರೆ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು.

- ವೈದ್ಯರು (೬೫ ವರ್ಷದ ಮೇಲೆ)  ೭ ರಿಂದ ೮ ತಾಸು ನಿದ್ದೆ ಮಾಡಬೇಕು.

ಕಡಿಮೆ ನಿದ್ರೆ ಮಾಡಿದ್ರೇನು ಪ್ರಾಬ್ಲಂ?

- ಮಿತಿಮಿರಿದ ತೂಕ

- ಆತಂಕ ಮತ್ತು ಖಿನ್ನತೆ

-ಜೈವಿಕ ಕ್ರಮ ಏರುಪೇರಾಗುವುದು.

-ಅಸ್ತಮದಂಥ ಸಮಸ್ಯೆಗಳು. 

- ನರ ಸಂಬಂಧಿಸಿ ಸಮಸ್ಯೆ.

click me!