ಗುಂಡಿನ ಗಮ್ಮತ್ತು..ಫುಲ್ ಟೈಟ್‌ ಆಗಿ ತನ್ನದೇ ಮದ್ವೆಗೆ ಬರಲು ಮರೆತ ವರ!

By Vinutha Perla  |  First Published Mar 17, 2023, 3:07 PM IST

ಕುಡಿದ ಮತ್ತಿನಲ್ಲಿ ಮನೆ ದಾರಿ, ಮತ್ತೊಬ್ಬರ ಪರಿಚಯ ಮರೆತು ಹೋಗೋದು ಸಹಜ. ಆದ್ರೆ ಇಲ್ಲೊಬ್ಬಾತ ಅದೆಷ್ಟರಮಟ್ಟಿಗೆ ಎಣ್ಣೆ ಮತ್ತಿನಲ್ಲಿದ್ದ ಅಂದ್ರೆ ಡ್ರಿಂಕ್ಸ್ ಆಗಿ ಟೈಟಾಗಿ ಬಿಟ್ಟು ಇವತ್ತು ತನ್ನ ಮದ್ವೆ ಅನ್ನೋದನ್ನೇ ಮರೀತಿದ್ದಾನೆ. 


ಭಾಗಲ್ಪುರ: ಮದ್ವೆ ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್‌ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಅದೆಷ್ಟು ತಯಾರಿ ನಡೆದರೂ, ಕಾರ್ಯಗಳು ನಡೆದರೂ ತಾಳಿ ಕಟ್ಟುವ ವರೆಗೆ ಮದುವೆಯಾಯ್ತು ಎಂದು ಹೇಳುವಂತೆಯೇ ಇಲ್ಲ. ಹಾಗೆಯೇ ಇಲ್ಲೊಂದು ಮದುವೆ ಮಂಟಪದಲ್ಲಿ ಅರ್ಧದಲ್ಲೇ ನಿಂತು ಹೋಗಿದೆ. ಅದಕ್ಕೆ ಕಾರಣವಾಗಿದ್ದು ಹುಡುಗನ ಬೇಜವಾಬ್ದಾರಿತನ.

ಹುಡುಗಿ ಸುಂದರವಾಗಿ ಸೀರೆಯುಟ್ಟು, ಅಲಂಕಾರ ಮಾಡಿಕೊಂಡು ಮಂಟಪನಿಗಾಗಿ ಕಾಯುತ್ತಿದ್ದಳು. ಸಂಬಂಧಿಕರು, ಸ್ನೇಹಿತರು, ಮಕ್ಕಳು ಎಲ್ಲರೂ ಸಹ ಮದುವೆ (Marriage) ಹಾಲ್‌ನಲ್ಲಿ ಸೇರಿದ್ದರು. ಆದರೆ ಹುಡುಗನ ಪತ್ತೆಯೇ ಇಲ್ಲ. ಕುಡಿದು ಟೈಟಾಗಿದ್ದ ವರನಿಗೆ ಇಂದು ತನ್ನ ಮದ್ವೆ ಅನ್ನೋದೆ ಮರೆತು ಹೋಗಿತ್ತು.

Tap to resize

Latest Videos

ಇಬ್ಬರು ಹೆಂಡಿರ ಮುದ್ದಿನ ಗಂಡ: ಇಬ್ಬರ ಜೊತೆಗೂ ವಾರದಲ್ಲಿ 3 ದಿನ ಕಳೆಯಲು ಆದೇಶಿಸಿದ ಕೋರ್ಟ್‌..!

ಎಣ್ಣೆ ಏಟಿಗೆ ತನ್ನದೇ ಮದುವೆಯನ್ನು ಮರೆತ ವರ!
ಕುಡಿದ ಮತ್ತಿನಲ್ಲಿ ಮನೆ ದಾರಿ, ಮತ್ತೊಬ್ಬರ ಪರಿಚಯ ಮರೆತು ಹೋಗೋದು ಸಹಜ. ಆದ್ರೆ ಇಲ್ಲೊಬ್ಬಾತ ಅದೆಷ್ಟರಮಟ್ಟಿಗೆ ಎಣ್ಣೆ ಮತ್ತಿನಲ್ಲಿದ್ದ ಅಂದ್ರೆ ಡ್ರಿಂಕ್ಸ್ ಆಗಿ ಟೈಟಾಗಿ ಬಿಟ್ಟು ಇವತ್ತು ತನ್ನ ಮದ್ವೆ (Marriage) ಅನ್ನೋದನ್ನೇ ಮರೀತಿದ್ದಾನೆ. ಬಿಹಾರದಲ್ಲಿ ಇಂಥಾ ವಿಲಕ್ಷಣ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಸಿಕ್ಕಾಪಟ್ಟೆ ಡ್ರಿಂಕ್ಸ್ ಮಾಡಿದ ಪರಿಣಾನ ತನ್ನ ಸ್ವಂತ ಮದುವೆಗೆ ಹಾಜರಾಗಲು ಮರೆತಿದ್ದಾನೆ. ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ವರ ಮದ್ಯ (Alcohol) ಸೇವಿಸಿದ್ದ. ಮದ್ಯದ ಅಮಲಿನಲ್ಲಿ ಎಲ್ಲವೂ ಮರೆತು ಹೋಗಿದ್ದು, ಅದರಲ್ಲಿ ತನ್ನ ಮದುವೆಯೇ ಇವತ್ತು ಎಂಬುದು ಸಹ ಮರೆತುಹೋಗಿದೆ. 

ವರನಿಗೆ ಪ್ರಜ್ಞೆ ಬಂದಾಗ ವಧು (Bride) ಆತನನ್ನು ಮದುವೆಯಾಗಲು ನಿರಾಕರಿಸಿದಳು. ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯೊಂದಿಗೆ ತನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ ಎಂದು ವಧು (Bride) ಹೇಳಿದಳು. ಮಾತ್ರವಲ್ಲ, ವಧುವಿನ ಮನೆಯವರು ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ವರನ (Groom) ಕುಟುಂಬಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೆಳತಿಯ ಬ್ಲ್ಯಾಕ್‌ಮೇಲ್, ಬೆಂಗಳೂರು ಟ್ರಾಫಿಕ್‌ನಲ್ಲೇ ವಧುವನ್ನು ಬಿಟ್ಟು ಓಡಿಹೋದ ವರ!

ಕುಡಿದು ತೂರಾಡುತ್ತಾ ಮಂಟಪಕ್ಕೆ ಬಂದು ನಿದ್ರೆಗೆ ಜಾರಿದ ವರ
ಮದುವೆ ದಿನ ಮುಹೂರ್ತದ ಸಮಯ ಮೀರುತ್ತಿದೆ ಎನ್ನುವಾಗ ವರ ತೂರಾಡುತ್ತಾ ಮಂಟಪಕ್ಕೆ ಆಗಮಿಸಿದ ಘಟನೆ ಅಸ್ಸಾಂನಲ್ಲಿನಡೆದಿದೆ. ವರನ ಸ್ಥಿತಿಯನ್ನು ನೋಡಿದ ಹುಡುಗಿಯ ಪಿತ್ತ ನೆತ್ತಿಗೇರಿದೆ. ಆದರೆ ಎಲ್ಲವನ್ನೂ ಸಹಿಸಿಕೊಂಡು ಕೂತಿದ್ದಾಳೆ. ಮಂತ್ರಗಳು ಮೊಳಗುತ್ತಿದೆ. ಸಂಪ್ರದಾಯದ ಪ್ರಕಾರ ಒಂದೊಂದೆ ಕಾರ್ಯ ಮಾಡಬೇಕಿದೆ. ಆದರೆ ಕುಡಿದ ಅಮಲಿನಲ್ಲಿ ವರನಿಗೆ ಏನೂ ಅರ್ಥವಾಗುತ್ತಿಲ್ಲ. ಇಷ್ಟೇ ಅಲ್ಲ ನೆಟ್ಟಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊನೆಗೆ ಅಲ್ಲೆ ಪಕ್ಕಕ್ಕೆ ವಾಲಿ ನಿದ್ರೆಗೆ ಜಾರಿದ್ದಾನೆ. ಈ ಅವಾಂತರ ನೋಡಿದ ವಧು ತನಗೆ ಈ ಸಂಬಂಧವೇ ಬೇಡ ಎಂದು ಮದುವೆ ಕ್ಯಾನ್ಸಲ್ ಮಾಡಿದ್ದಾಳೆ. 

ವಧುವಿಗೆ ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್‌, ಮದುವೆ ಕ್ಯಾನ್ಸಲ್ ಮಾಡಿದ ವರ!
ಮತ್ತೊಂದು ಘಟನೆಯಲ್ಲಿ, ವಧುವಿನ 12 ನೇ ತರಗತಿಗಳು ಸಾಕಷ್ಟು ಚೆನ್ನಾಗಿಲ್ಲ ಎಂದು ಭಾವಿಸಿದ ಯುಪಿ ವರನೊಬ್ಬ ತನ್ನ ಮದುವೆಯನ್ನು ರದ್ದುಗೊಳಿಸಿದನು. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಿರ್ವಾ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವರನು ಸಂಬಂಧದಿಂದ ಹಿಂದೆ ಸರಿಯಲು ವಧುವಿನ 12ನೇ ತರಗತಿಯಲ್ಲಿ ಕಳಪೆ ಅಂಕಗಳು ಬಂದಿರುವುದೇ ಕಾರಣ ಎಂದು ತನಗೆ ತಿಳಿಸಲಾಗಿದೆ ಎಂದು ವಧುವಿನ ತಂದೆ ಹೇಳಿದ್ದಾರೆ. ಆದರೆ, ಸಾಕಷ್ಟು ವರದಕ್ಷಿಣೆ ಸಿಗದ ಕಾರಣ ವರನ ನಿರ್ಧಾರ ಹೊರಬಿದ್ದಿದೆ ಎಂದು ವಧುವಿನ ತಂದೆ ಆರೋಪಿಸಿದ್ದಾರೆ.

click me!