ಸೆಕ್ಸ್ ಬಗ್ಗೆ ಒಂದು ಪುಟದ ಪ್ರಬಂಧ ಬರೆಯಿರಿ: ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌, ಪೋಷಕರ ಆಕ್ರೋಶ

By Vinutha Perla  |  First Published Mar 17, 2023, 1:02 PM IST

ಶಾಲಾ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಜಾಗತಿಕ ತಾಪಮಾನ, ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಪ್ರಬಂಧ ಬರೆಯಲು ಹೇಳುತ್ತಾರೆ. ಆದ್ರೆ ಇಲ್ಲೊಂದು ಶಾಲೆಯಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಸೆಕ್ಸ್ ಬಗ್ಗೆ ಬರೆಯಲು ಅಸೈನ್‌ಮೆಂಟ್ ನೀಡಲಾಗಿತ್ತು. ಇದೇನಪ್ಪಾ ವಿಚಿತ್ರ ಅನ್ಬೇಡಿ. ಇಲ್ಲಿದೆ ಮಾಹಿತಿ.


ಕಾಲ ಅದೆಷ್ಟೇ ಬದಲಾದರೂ ಕೆಲವೊಂದು ವಿಚಾರಗಳು ಬದಲಾಗುವುದೇ ಇಲ್ಲ. ಅದರಲ್ಲೊಂದು ಸೆಕ್ಸ್ ಕುರಿತಾದ ಮಾತುಕತೆ. ಲೈಂಗಿಕತೆಯ ಬಗ್ಗೆ ಇವತ್ತಿಗೂ ಜನರು ಮುಕ್ತವಾಗಿ ಮಾತನಾಡೋಕೆ ಹಿಂಜರಿಯುತ್ತಾರೆ. ಸೆಕ್ಸ್ ಬಗ್ಗೆ ಗುಟ್ಟು ಗುಟ್ಟಾಗಿ ಮಾತ್ರ ಮಾತನಾಡುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಇದರ ಬಗ್ಗೆ ಮಾತನಾಡುವುದು ಸಹ ತಪ್ಪೆಂದುಕ್ಕೊಳ್ಳುತ್ತಾರೆ. ಪುಟ್ಟ ಮಕ್ಕಳ ಎದುರು ಅವರಿಗೆ ತಿಳಿದಿರದ ವಿಷಯಗಳ ಬಗ್ಗೆ ಚರ್ಚಿಸುವುದು ನಿಜವಾಗಿಯೂ ತಪ್ಪಾಗುತ್ತದೆ. ಇದು ಅವರಲ್ಲಿ ಸೆಕ್ಸ್‌ ಬಗೆಗೆ ಕೆಟ್ಟ ಕುತೂಹಲವನ್ನು ಕೆರಳಿಸಬಹುದು. ಹೀಗಾಗಿಯೇ ಮಕ್ಕಳನ್ನು ಇಂಥಾ ಮಾತುಕತೆಗಳಿಂದ ದೂರವಿಡುತ್ತಾರೆ. ಅಶ್ಲೀಲ ವೀಡಿಯೋಗಳನ್ನು ನೋಡದಂತೆ ತಡೆಯುತ್ತಾರೆ. ಆದ್ರೆ ಅಮೇರಿಕಾದಲ್ಲೊಂದು ಶಾಲೆ ಎಂಥಾ ಎಡವಟ್ಟು ಮಾಡಿಕೊಂಡಿದೆ ನೋಡಿ..

ಯುಎಸ್‌ನ ಒರೆಗಾನ್‌ನಲ್ಲಿ ಶಾಲೆ (School)ಯೊಂದರಲ್ಲಿ ಸೆಕ್ಸ್ ಬಗ್ಗೆ ಅಸೈನ್‌ಮೆಂಟ್ ಬರುವಂತೆ ಮಕ್ಕಳಿಗೆ ಸೂಚನೆ (Instruction) ನೀಡಲಾಗಿದೆ. ಲೈಂಗಿಕ ಫ್ಯಾಂಟಸಿಯ ಸಣ್ಣ ಕಥೆಯನ್ನು ರಚಿಸಲು ಶಾಲಾ ಮಕ್ಕಳಿಗೆ ಹೋಂವರ್ಕ್‌ ನೀಡಲಾಗಿತ್ತು. ಶಿಕ್ಷಕರ ಇಂಥಾ ದುರ್ನಡತೆಗೆ ಪೋಷಕರು (Parents) ಆಕ್ರೋಶಗೊಂಡಿದ್ದಾರೆ.

Tap to resize

Latest Videos

ತಾಯಿಯಾಗ್ತಿದ್ದಾರೆ ಹದಿ ವಯಸ್ಸಿನ ಹೆಣ್ಮಕ್ಕಳು: Sex Education ಅನಿವಾರ್ಯ

ಲೈಂಗಿಕತೆಯ ಬಗ್ಗೆ ಸಣ್ಣ ಕಥೆಯನ್ನು ಬರೆಯಲು ಅಸೈನ್‌ಮೆಂಟ್
ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಯುಜೀನ್‌ನಲ್ಲಿರುವ ಚರ್ಚಿಲ್ ಹೈಸ್ಕೂಲ್‌ನ ಆರೋಗ್ಯ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಿಂದ ಅನುಮೋದಿಸಲಾದ ಪಠ್ಯಕ್ರಮದಲ್ಲಿ ಸೂಚಿಸಿದಂತೆ ಲೈಂಗಿಕ ಆಟಿಕೆಗಳನ್ನು ಒಳಗೊಂಡಂತೆ "ಲೈಂಗಿಕ ಫ್ಯಾಂಟಸಿ" ಅನ್ನು ವಿವರಿಸುವ ಸಣ್ಣ ಕಥೆಯನ್ನು (Short story) ಬರೆಯಲು ಹೇಳಲಾಯಿತು.'ನೀವು ಒಂದು ಅಥವಾ ಎರಡು ಪ್ಯಾರಾಗ್ರಾಫ್‌ಗಳ ಸಣ್ಣ ಕಥೆಯನ್ನು ಬರೆಯುತ್ತೀರಿ. ಈ ಕಥೆಯು ಲೈಂಗಿಕ ಫ್ಯಾಂಟಸಿಯಾಗಿದ್ದು ಅದು ಯಾವುದೇ ರೀತಿಯ ಅಥವಾ ಮೌಖಿಕ ಲೈಂಗಿಕತೆಯ ಒಳಹೊಕ್ಕು ಹೊಂದಿರುವುದಿಲ್ಲ' ಎಂದು ಇದರಲ್ಲಿ ಸೂಚನೆ ನೀಡಲಾಗಿತ್ತು.

ಕಥೆಯಲ್ಲಿ ಬಳಸಲು ಪ್ರಣಯ ಸಂಗೀತ, ಮೇಣದಬತ್ತಿಗಳು, ಮಸಾಜ್ ಎಣ್ಣೆ, ಗರಿಗಳು, ಫೆದರ್ ಬೋವಾಸ್, ಸುವಾಸನೆಯ ಸಿರಪ್ ಮೊದಲಾದ ಪದಗಳನ್ನು ನೀವು ಆಯ್ಕೆ (Selection) ಮಾಡಬಹುದು. ಕಥೆಯು ಲೈಂಗಿಕತೆಯನ್ನು ಹೊಂದದೆ ಪ್ರೀತಿಯ ದೈಹಿಕ ಪ್ರೀತಿಯನ್ನು ತೋರಿಸಬಹುದು ಮತ್ತು ಸ್ವೀಕರಿಸಬಹುದು ಎಂದು ತೋರಿಸಬೇಕು' ಎಂದು ಹೇಳಲಾಗಿದೆ. ಶಾಲೆಯ ಹಲವು ಆಕ್ರೋಶಿತ ಪೋಷಕರಲ್ಲಿ ಒಬ್ಬರಾದ ಕ್ಯಾಥರೀನ್ ರೋಜರ್ಸ್, ಶಿಕ್ಷಕ ಕಿರ್ಕ್ ಮಿಲ್ಲರ್ ಅವರು ನೀಡಿದ 'ಲೈಂಗಿಕ ಫ್ಯಾಂಟಸಿ' ಪಾಠವನ್ನು ಖಂಡಿಸಿದರು. ಮಕ್ಕಳಿಗೆ ಇಂಥಾ ಬೋಧನೆಯ ಅಗತ್ಯವಿಲ್ಲ ಎಂದು ತಿಳಿಸಿದರು. ಇನ್ನು ಕೆಲ ಪೋಷಕರು ಪಠ್ಯಕ್ರಮಗಳನ್ನು ಅಂಗೀಕರಿಸುವ ಮೊದಲು ಜಿಲ್ಲಾಡಳಿತ ಪರಿಶೀಲನೆ ನಡೆಸುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Sex Education: ಸಕಾಲಿಕ ಲೈಂಗಿಕ ಶಿಕ್ಷಣ ಹದಿಹರೆಯದವರಿಗೆ ಅಗತ್ಯ ಅನ್ನೋದ್ಯಾಕೆ?

ಪೋರ್ನೋಗ್ರಫಿ ಕೋರ್ಸ್‌, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು !
ಭಾರತೀಯ ಸಂಸ್ಕೃತಿ, ಆಚಾರ ವಿಚಾರಕ್ಕೆ ಹೆಚ್ಚು ಮಹತ್ವ ನೀಡುವ ದೇಶ. ಇಲ್ಲಿ ಲೈಂಗಿಕತೆಯ (Sex) ಬಗ್ಗೆ ಮಾತನಾಡುವುದೇನಿದ್ದರೂ ಮುಚ್ಚಿದ ಬಾಗಿಲಿನ ಹಿಂದೆ. ಸೆಕ್ಸ್ ಲೈಫ್‌ ಬಗ್ಗೆ ಓಪನ್ ಆಗಿ ಮಾತನಾಡುವುದೇ ತಪ್ಪೆಂದು ಪರಿಗಣಿಸಲಾಗುತ್ತದೆ. ಅಶ್ಲೀಲ ಚಿತ್ರಗಳಿರುತ್ತವೆ ಎನ್ನೋ ಕಾರಣಕ್ಕಾಗಿ ಮಕ್ಕಳು ಸಿನಿಮಾ (Movie) ನೋಡುವುದನ್ನೂ ವಿರೋಧಿಸಲಾಗುತ್ತದೆ. ಆದರೆ ಅಮೇರಿಕಾ (America)ದಲ್ಲಿ ಹಾಗಿಲ್ಲ. ಅಲ್ಲಿ ಎಲ್ಲವೂ ಸ್ವೇಚ್ಚಾಚಾರ. ಇಲ್ಲೊಂದೆಡೆ ಕಾಲೇಜಿನಲ್ಲಿ ಪೋರ್ನ್ ಕ್ಲಾಸ್ (Porn class) ಆರಂಭಿಸಲಾಗಿದೆ. ಈ ಸ್ಪೆಷಲ್ ಕ್ಲಾಸ್‌ನಲ್ಲಿ ಎಲ್ಲಾ ಮಕ್ಕಳು (Children0 ಜೊತೆಯಾಗಿ ಕುಳಿತು ಅಶ್ಲೀಲ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಯುನೈಟೆಡ್ ಸ್ಟೇಟ್ಸ್‌ನ ಉತಾಹ್‌ನಲ್ಲಿರುವ ಲಿಬರಲ್ ಆರ್ಟ್ಸ್ ಕಾಲೇಜ್ (College) ತನ್ನ ಮುಂಬರುವ ಅವಧಿಗೆ ಅಶ್ಲೀಲತೆಯ ಕೋರ್ಸ್ ಅನ್ನು ನೀಡುತ್ತಿದೆ. ಈ ಕೋರ್ಸ್‌ನಲ್ಲಿ ತರಗತಿಯಲ್ಲಿ ಮಕ್ಕಳೆಲ್ಲರೂ ಜೊತೆಯಾಗಿ ಕುಳಿತು ಪೋರ್ನ್‌ ಮೂವಿಯನ್ನು ನೋಡುತ್ತಾರೆ. ವೆಸ್ಟ್‌ಮಿನಿಸ್ಟರ್ ಕಾಲೇಜ್ ಆಫ್ ಸಾಲ್ಟ್ ಲೇಕ್ ಸಿಟಿ, ಉತಾಹ್ ಫಿಲ್ಮ್ 300O ಪೋರ್ನ್ ಎಂಬ ಶೀರ್ಷಿಕೆಯ ಕೋರ್ಸ್ ಅನ್ನು ಪರಿಚಯಿಸುತ್ತಿದೆ, ಇದು ಕಾಲೇಜಿನ ಜೆಂಡರ್ ಸ್ಟಡೀಸ್ ಕೋರ್ಸ್‌ಗಳ ಅಡಿಯಲ್ಲಿ ಬರುತ್ತದೆ. 

click me!