ಬ್ರೆಸ್ಟ್ ಫೀಡ್ ಮಾಡೋ ಬೆಸ್ಟ್ ಅಮ್ಮಂದಿರಿಗಿದೆ ಅವಾರ್ಡ್!

By Web DeskFirst Published Aug 20, 2018, 4:35 PM IST
Highlights

ತಾಯಿ ಹಾಲು ಮಗುವಿಗೆ ಬಹಳ ಮುಖ್ಯ. ಫಿಸಿಕ್ ಹಾಳಾಗುತ್ತೆ ಎನ್ನೋ ತಪ್ಪು ಕಲ್ಪನೆ ಇರೋ ಅಮ್ಮಂದಿರು ಮಗುವಿಗೆ ಸ್ತನ್ಯಪಾನ ಮಾಡಿಸದೇ, ಮಕ್ಕಳಿಗೂ ಅದ್ಭುತವಾದ ಅನುಭವವನ್ನು ಮಿಸ್ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. 

ಸ್ತನ್ಯಪಾನದ ಮಹತ್ವದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲು ಇಂಗ್ಲೆಂಡ್‌ನಲ್ಲಿ ಸಂಸ್ಥೆಯೊಂದು ಪ್ರಶಸ್ತಿ ನೀಡುತ್ತಿದೆ. ವಿದೇಶದಲ್ಲಿ ಇಂಥದ್ದೊಂದು ಪ್ರಶಸ್ತಿ ನೀಡುತ್ತಿದ್ದರೂ, ಮಗುವನ್ನು ಹೆರುವ, ಹೊರುವ ಪ್ರತಿ ಅಮ್ಮಂದಿರೂ ಈ ಬಗ್ಗೆ ಅರಿತುಕೊಳ್ಳುವುದೊಳಿತು.

ಹಾಲುಣಿಸುವ ತಾಯಿ ತನ್ನ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಮಗು ಪದೇ ಪದೇ ಅನಾರೋಗ್ಯದಿಂದ ಬಳಲುತ್ತದೆ. ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಲು ತಾಯಿ ಮಗುವಿಗೆ ಹಾಲುಣಿಸಲೇ ಬೇಕು. 

ಸ್ತನ್ಯಪಾನಕ್ಕೆ 'ಬೂಬಿ ಅವಾರ್ಡ್' ಏನಿದು?

ಬ್ಯೂಟಿ, ಫಿಸಿಕ್ ಎಂದು ತಲೆ ಕೆಡಿಸಿಕೊಳ್ಳದೇ, ತನ್ನ ಮಗುವಿಗೆ ಹಾಲುಣಿಸುವ ತಾಯಂದಿರಿಗೆ 11 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ತಾಯ್ತನದ ಈ ಅದ್ಭುತ ಅನುಭವ ಪಡೆಯಲು, ತಾಯಂದಿರು ಹೆಣಗಬೇಕು. ಮೊದಲ ಬಾರಿ ಹಾಲುಣಿಸಲು ಪಡೋ ಶ್ರಮ, ಹುಷಾರಿಲ್ಲದ ಮಗು ಹಾಲು ಕುಡಿಯದಿದ್ದರೆ, ಹಾಲು ತುಂಬಿದ ಸ್ತನಗಳಿಂದ ಉಲ್ಬಣಿಸೋ ನೋವು, ದೊಡ್ಡವರಾಗುತ್ತಿದ್ದಂತೆ ಕೊಡೋ ಕಾಟ....ಎಂಥ ನೋವಿನಲ್ಲೂ ತಾಯಿ ಹಾಲುಣಿಸುವ ಸುಖ ಅನುಭವಿಸುತ್ತಾಳೆ. ಒಟ್ಟಿನಲ್ಲಿ ಒತ್ತಡದ ಜೀವನದಲ್ಲಿಯೂ ಹಾಲುಣಿಸುವ ತಾಯಿಯನ್ನು ಪ್ರಶಂಸಿಸುವ ದೃಷ್ಟಿಯಿಂದ ಬ್ರಿಟನ್ ಸಂಸ್ಥೆಯೊಂದು ತಾಯಂದಿರನ್ನು ಗೌರವಿಸಲು ಮುಂದಾಗಿದೆ.

ವಿಭಿನ್ನ ಹಂತಗಳಲ್ಲಿ ಪ್ರಶಸ್ತಿ.. 

  • ಮಗುವಿನ್ನೂ ಹಾಲು ಚೀಪಲು ಕಲಿಯಲು ಕಷ್ಟಪಡುತ್ತಿರುವಾಗ, ತಾಯಿ ಹಾಲುಣಿಸಲು ಹೆಣಗುತ್ತಾಳೆ.  ಈ ರೀತಿ ಕಷ್ಟಪಟ್ಟು ಹಾಲುಣಿಸುವ ಅಮ್ಮಂದಿರಿಗೆ  'ಅಮೆಥಿಸ್ಟ್ ಬೂಬ್' ಪ್ರಶಸ್ತಿ.
  • 3ನೇ ತಿಂಗಳವರೆಗೂ ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಬ್ರಾನ್ಸ್ ಬೂಬ್ಸ್ ಗೌರವ.
  • ಸಾಮಾನ್ಯವಾಗಿ ಆರು ತಿಂಗಳ ತನಕ ಅಮ್ಮನ ಹಾಲು ಹೊರತುಪಡಿಸಿ, ಬೇರೆ ಆಹಾರ ನೀಡದಂತೆ ವೈದ್ಯರು ಸಲಹೆ ನೀಡುತ್ತಾರೆ. ಈ ಸಲಹೆಯಂತೆ ಆರು ತಿಂಗಳೂ ಮಗುವಿಗೆ  ಹಾಲುಣಿಸುವ ತಾಯಂದಿರಿಗೆ 'ಸಿಲ್ವರ್ ಬೂಬ್ಸ್' ಗೌರವ ನೀಡಲಾಗುತ್ತದೆ.
  • ವರ್ಷದವರೆಗೂ ಹಾಲುಣಿಸಿದರೆ 'ಚಿನ್ನದ ಬೂಬ್ಸ್' ಅವಾರ್ಡ್.
  • 18 ತಿಂಗಳು ಅಥವಾ ಒಂದೂವರೆ ವರ್ಷದವರೆಗೆ ಹಾಲುಣಿಸಿದರೆ 'ಪ್ಲಾಟಿನಮ್ ಬೂಬ್ಸ್' ಪ್ರಶಸ್ತಿ. 
  • ಎರಡು ವರ್ಷದವರೆಗೂ ಹಾಲುಣಿಸುವ ಅಮ್ಮಂದಿರು ನಿಜಕ್ಕೂ ಗ್ರೇಟ್. ಅದರಲ್ಲಿಯೂ ಉದ್ಯೋಗಸ್ಥ ಮಹಿಳೆ ತನ್ನೆಲ್ಲ ಬ್ಯುಸಿ ಕೆಲಸದ ನಡುವೆಯೂ ಮಗುವಿಗೆ ಹಾಲುಣಿಸಲು ಸಮಯ ಮಾಡಿಕೊಂಡರೆ, ಅದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಅಂಥ ಮಹಾನ್ ತಾಯಂದಿರಿಗೆ 'ಡೈಮೆಂಡ್ ಬೂಬ್ಸ್' ಪ್ರಶಸ್ತಿ ನೀಡಿ ಗೌರವಿಸಲಾಗುವುದು.
  • ಎರಡೂವರೆ ವರ್ಷ ಅಥವಾ 30 ತಿಂಗಳು ಹಾಲುಣಿಸಿದರೆ ಅಂಬರ್ ಬೂಬ್ಸ್ ಗೌರವ.
  • ಮೂರು ವರ್ಷ ಕುಡಿಸಿದರೆ ರೂಬೀ ಬೂಬ್ಸ್
  • ನಾಲ್ಕು ವರ್ಷ ಹಾಲುಣಿಸಿದರೆ ಟ್ಯಾನ್ಝನೈಟ್ ಬೂಬ್ಸ್.
  • 5  ವರ್ಷ ಹಾಲು ಕುಡಿಸಿದವರಿಗೆ  ಓಪಾಲ್ ಬೂಬ್ಸ್
  • 6 ವರ್ಷ ಹಾಲು ಕುಡಿಸಿದವರಿಗೆ 'ಸಫೈರ್ ಬೂಬ್ಸ್' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
click me!