ಸಿಂಪಲ್ ಮ್ಯಾಥ್ಸ್‌ ಪಝಲ್; ಐದು ನಿಮಿಷದಲ್ಲಿ ಉತ್ತರ ಸಿಕ್ರೆ ನೀವು ಜಾಣರು ಅಂತರ್ಥ

Published : Nov 17, 2023, 12:44 PM IST
ಸಿಂಪಲ್ ಮ್ಯಾಥ್ಸ್‌ ಪಝಲ್; ಐದು ನಿಮಿಷದಲ್ಲಿ ಉತ್ತರ ಸಿಕ್ರೆ ನೀವು ಜಾಣರು ಅಂತರ್ಥ

ಸಾರಾಂಶ

ಬ್ರೈನ್ ಟೀಸರ್‌ಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಸರಳವಾದ ಆದ್ರೆ ತುಂಬಾ ಇಂಟ್ರೆಸ್ಟಿಂಗ್ ಆದ ಮ್ಯಾಥ್ಸ್‌ ಕೊಶ್ಚನ್ ಸದ್ಯ ವೈರಲ್ ಆಗ್ತಿದೆ. ನೀವೂ ಸಹ ಇದನ್ನು ಸಾಲ್ವ್ ಮಾಡೋಕೆ ಆಗುತ್ತಾ ಟ್ರೈ ಮಾಡಿ.

ಗಣಿತ ಅನ್ನೋದು ಕೆಲವೊಬ್ಬರ ಪಾಲಿಗೆ ಕಬ್ಬಿಣದ ಕಡಲೆ. ಇನ್ನು ಕೆಲವರ ಪಾಲಿಗೆ ನೀರು ಕುಡಿದಷ್ಟೇ ಸಲೀಸು. ಆದ್ರೆ ಮೆದುಳಿಗೆ ಕೆಲಸ ಕೊಡೋ ಇಂಥಾ ಲೆಕ್ಕಗಳನ್ನು ಸಾಲ್ವ್‌ ಮಾಡೋದು ಮಾತ್ರ ಮಜವಾಗಿರುತ್ತೆ. ಸ್ಪಲ್ಪ ತಲೆಕೆಡಿಸಿಕೊಂಡು, ಇನ್ನೇನು ಉತ್ತರ ಸಿಕ್ಕೇ ಬಿಡ್ತು ಅನ್ನೋವಷ್ಟರಲ್ಲಿ ತಪ್ಪು ಉತ್ತರ ಅನ್ನೋದು ಅರಿವಾಗಿ ಮತ್ತೆ ಸಾಲ್ವ್‌ ಮಾಡೋಕೆ ಟ್ರೈ ಮಾಡೋದು ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತೆ. ಹೀಗಾಗಿಯೇ ಇಂಥಾ ಬ್ರೈನ್ ಟೀಸರ್‌ಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಸರಳವಾದ ಆದ್ರೆ ತುಂಬಾ ಇಂಟ್ರೆಸ್ಟಿಂಗ್ ಆದ ಮ್ಯಾಥ್ಸ್‌ ಕೊಶ್ಚನ್ ಸದ್ಯ ವೈರಲ್ ಆಗ್ತಿದೆ. ನೀವೂ ಸಹ ಇದನ್ನು ಸಾಲ್ವ್ ಮಾಡೋಕೆ ಆಗುತ್ತಾ ಟ್ರೈ ಮಾಡಿ.

ನೀವು ಮೆದುಳಿನ ಕಸರತ್ತುಗಳು ಮತ್ತು ಒಗಟುಗಳನ್ನು ಪರಿಹರಿಸಲು ಸುಲಭ ಎಂದು ಭಾವಿಸುವ ವ್ಯಕ್ತಿಯೇ? ಹೌದು ಎಂದಾದರೆ, ಇಲ್ಲೊಂದು ಇಂಟ್ರೆಸ್ಟಿಂಗ್ ಪ್ರಶ್ನೆಯಿದೆ. ಇದು ನೋಡೋಕೆ ಸರಳವೆನಿಸಿದರೂ ಉತ್ತರ ಹುಡುಕೋಕೆ ಸ್ಪಲ್ಪ ತಡಕಾಡುವಂತೆ ಮಾಡುವ ಕೊಶ್ಚನ್‌. ಬ್ರೈನ್ ಟೀಸರ್ ಅನ್ನು Instagram ಹ್ಯಾಂಡಲ್ EaseToLearn ಮೂಲಕ ಹಂಚಿಕೊಳ್ಳಲಾಗಿದೆ.  ಗಣಿತದ ಒಗಟುಗಳನ್ನು 5 ಸೆಕೆಂಡುಗಳಲ್ಲಿ ಪರಿಹರಿಸಿ ಎಂದು ಇದರಲ್ಲಿ ಹೇಳಲಾಗಿದೆ. ಪ್ರಶ್ನೆ ಹೀಗಿದೆ.

ಪ್ರಶ್ನೆ:  2+3 = 10, 8+4 = 96, 7+2 = 63, 6+5 = 66 ಮತ್ತು 9+5 = ?

ಈ ಬ್ರೈನ್ ಟೀಸರ್‌ನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು ಹಲವಾರು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಹಲವರು ಕಾಮೆಂಟ್‌ಗಳ ವಿಭಾಗದಲ್ಲಿ ಉತ್ತರವನ್ನು ಹಂಚಿಕೊಂಡಿದ್ದಾರೆ. ನೀವು ನಿಮ್ಮ ಮೆದುಳಿಗೆ ಕೆಲಸ ಕೊಡಿ ಮತ್ತು ಸರಿಯಾದ ಉತ್ತರ ಯಾವುದೆಂದು ಕಂಡು ಹಿಡಿಯಲು ಟ್ರೈ ಮಾಡಿ.

ಇಲ್ಲಿ ನಿಮಗೆ ಕಾಣೋ ನಂಬರ್ ಯಾವುದು? ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆದ ಬ್ರೇನ್‌ ಟೀಸರ್‌!

ಉತ್ತರ:
ಬಹಳಷ್ಟು ಪ್ರಯತ್ನಗಳ ನಂತರವೂ ನೀವು ಸರಿಯಾದ ಉತ್ತರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದ್ದರೆ ಇಲ್ಲಿದೆ ಈ ಬ್ರೈನ್‌ ಟೀಸರ್‌ನ ಸರಿಯಾದ ಆನ್ಸರ್‌. ಕಾಮೆಂಟ್‌ಗಳಲ್ಲಿ ಹಲವರು ಈ ಪ್ರಶ್ನೆಗೆ 126 ಸರಿಯಾದ ಉತ್ತರ ಎಂದು ಹೇಳಿದ್ದಾರೆ. ಅದು ಯಾಕೆ ಎಂಬುದಕ್ಕೆ ಕಾರಣವನ್ನು ಸಹ ವಿವರಿಸಿದ್ದಾರೆ. ಅದರ ವಿವರಣೆ ಇಲ್ಲಿದೆ.

2+2=10 ( 2*2+3*2) , 8+4=96 ( 8*8+4*8) , Therefore 9+5= ( 9*9+5*9 ) = 126.

ಈ ರೀತಿಯಾಗಿ ನೋಡಿದಾಗ ಪಝಲ್‌ನ ಉತ್ತರ ನಿಸ್ಸಂದೇಹವಾಗಿ 126 ಆಗಿರುತ್ತದೆ. ನೀವು ಕಂಡುಕೊಂಡ ಉತ್ತರವೇನು ಎಂಬುದನ್ನು ಕಾಮೆಂಟ್‌ನಲ್ಲಿ ತಿಳಿಸಿ.

ನಿಮ್ ಕಣ್ಣಿನ ದೃಷ್ಟಿ ಎಷ್ಟು ಶಾರ್ಪ್‌, ಈ ಚಿತ್ರ ನೋಡಿ ಟೆಸ್ಟ್ ಮಾಡ್ಕೊಳ್ಳಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್