ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಕೊಟ್ಟ ಘಟನೆ ಬಿಹಾರದ ಬೇಗುಸರೈನಲ್ಲಿ ನಡೆದಿದೆ. ಇಬ್ಬರು ಮಕ್ಕಳನ್ನೂ ನಾನೇ ನೋಡಿಕೊಳ್ಳುತ್ತೇನೆ ಎಂದೂ ಪತಿ ಹೇಳಿದ್ದಾನೆ.
ಬೇಗುಸರಾಯ್ (ನವೆಂಬರ್ 16, 2023): ಮದುವೆಯಾದರೂ ಗಂಡ ಅಥವಾ ಹೆಂಡತಿ ಹಳೆಯ ಬಾಯ್‌ಫ್ರೆಂಡ್ / ಗರ್ಲ್‌ಫ್ರೆಂಡ್ ಮರೆಯಲಾಗದೆ ಹಲವರು ಪರಿತಪಿಸುತ್ತಿರುತ್ತಾರೆ. ಆದರೆ, ಇನ್ನು ಹಲವರು ಮದ್ವೆಯಾಗಿದ್ದರೂ ಅವರ ಜತೆ ಸಂಬಂಧದಲ್ಲಿರುತ್ತಾರೆ. ಇದೇ ರೀತಿ, ಬಾಯ್‌ಫ್ರೆಂಡ್ ಜತೆ ಸಂಬಂಧದಲ್ಲಿದ್ದ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆಯಾಗಲು ಹೇಳಿ ತಾನು ಬಿಟ್ಟುಕೊಟ್ಟಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.
ಹೌದು, ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಕೊಟ್ಟ ಘಟನೆ ಬೇಗುಸರೈನಲ್ಲಿ ನಡೆದಿದೆ. ಮಹಿಳೆ ಇಬ್ಬರು ಪುಟ್ಟ ಮಕ್ಕಳ ತಾಯಿಯೂ ಆಗಿದ್ದಾರೆ. ಆದರೆ, ಆ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತೇನೆ. ಇದರಿಂದ ತನ್ನ ಹೊಸ ಜೀವನ ಸಂಗಾತಿಯೊಂದಿಗೆ ತನ್ನ ಹೆಂಡತಿಗೆ ಹೊರೆಯಾಗಬಾರದು ಎಂದು ಸಹ ಪತಿ ಹೇಳಿದ್ದಾನೆ. ಬಿಹಾರದ ಬೇಗುಸರೈ ಜಿಲ್ಲೆಯ ದಹಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ: ಭಾರತದಂಥ ಸುಸಂಸ್ಕೃತ ದೇಶದಲ್ಲೂ LIVE IN RELATIONSHIPS ಶುರುವಾಗಿದ್ದು ಹೇಗೆ?
24 ವರ್ಷದ ಅಜಯ್ ಕುಮಾರ್ 2018 ರಲ್ಲಿ ಕಾಜಲ್ (22) ಅವರನ್ನು ವಿವಾಹವಾದರು. ಅವರ ಮದುವೆಯು ಸಡಗರದಿಂದ ನಡೆಯಿತು. ಆದರೆ, ಮದುವೆಯ ನಂತರವೂ ಕಾಜಲ್ ಜಿಲ್ಲೆಯ ಮನ್ಸೂರ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಘಾಪುರ ಗ್ರಾಮದ ನಿವಾಸಿ ರಾಜ್ ಕುಮಾರ್ ಠಾಕೂರ್ ಅವರೊಂದಿಗೆ ಸಂಪರ್ಕದಲ್ಲಿದ್ದರು.
ಮದುವೆಗೂ ಮುನ್ನವೇ ಕಾಜಲ್ ಮತ್ತು ರಾಜ್ ಕುಮಾರ್ ಪ್ರೀತಿಸುತ್ತಿದ್ದರು. ಆದರೆ, ಕಾಜಲ್ ಎರಡು ಮಕ್ಕಳ ತಾಯಿಯಾದ ನಂತರವೂ ಅವರ ನಡುವಿನ ಸಂಬಂಧ ರಹಸ್ಯವಾಗಿ ಮುಂದುವರೆದಿದೆ. ಅಲ್ಲದೆ, ಮದುವೆಯ ನಂತರವೂ ರಾಜ್ ಜೊತೆಗಿನ ಸಂಬಂಧವನ್ನು ಮುರಿಯಲು ಸಾಧ್ಯವಾಗಲಿಲ್ಲ ಎಂದು ಕಾಜಲ್ ಘೋಷಿಸಿದ್ದರು.
ಇದನ್ನೂ ಓದಿ: ಈ ದಂಪತಿ ಜೀವನದಲ್ಲಿ ಆಲ್ಕೋಹಾಲ್ ವಿಲನ್, ಸಂಸಾರವೇ ನುಚ್ಚು ನೂರು!
ಇನ್ನು, ಈ ಸಂಬಂಧ ಮಾತನಾಡಿದ ಪತಿ ಅಜಯ್, ಸೋಮವಾರ ಕಾಜಲ್ ಅವರ ಕುಟುಂಬ ಸದಸ್ಯರು ರೊಮ್ಯಾನ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಅಜಯ್ ಬುಧವಾರ ಹೇಳಿದ್ದಾರೆ. "ಈ ಘಟನೆಯ ಬಗ್ಗೆ ನನ್ನ ಕುಟುಂಬ ಸದಸ್ಯರು ಹೇಳಿದಾಗ ನಾನು ಮೊದಲು ಆಘಾತಕ್ಕೊಳಗಾಗಿದ್ದೆ. ಆದರೆ, ನಾನು ಅವಳನ್ನು ನನ್ನ ವೈವಾಹಿಕ ಬಂಧದಿಂದ ಮುಕ್ತಗೊಳಿಸಲು ನಿರ್ಧರಿಸಿದೆ. ಅವಳು ಠಾಕೂರ್ ಜೊತೆ ಸಂಬಂಧ ಹೊಂದಿದ್ದರಿಂದ ಅವಳೊಂದಿಗೆ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಹಳ್ಳಿಯ ದೇವಸ್ಥಾನದಲ್ಲಿ, ಅವರ ಮದುವೆಯನ್ನು ಸಹ ಏರ್ಪಡಿಸಿದೆ. ನನ್ನ ಕುಟುಂಬ ಸದಸ್ಯರು ಮತ್ತು ಸ್ಥಳೀಯರ ಕೋಪದಿಂದ ಅವಳನ್ನು ರಕ್ಷಿಸಿದೆ" ಎಂದೂ ಬೇಗುಸರೈ ಜಿಲ್ಲೆಯ ರಸಲ್‌ಪುರ ಪಂಚಾಯತ್‌ಗೆ ಸೇರಿದ ಅಜಯ್ ಹೇಳಿದರು.
ರಸಲ್‌ಪುರ ಪಂಚಾಯತ್‌ನ ಸರಪಂಚ್ ರಾಮ್ ಸಹರ್ ಸಾಹ್ನಿ ಅವರು ರಾಜ್ ಕುಮಾರ್ ಜೊತೆ ಕಾಜಲ್ ಅವರ ಮದುವೆಯ ಬಗ್ಗೆ ಕುಟುಂಬದ ನಿರ್ಧಾರವಾಗಿರುವುದರಿಂದ ಗ್ರಾಮಸ್ಥರು ಸಹ ಅದನ್ನು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.