ಇಂಜಿನಿಯರಿಂಗ್ ಓದೋಕೆ ಅಂತ ಪಾಲಕರು ಕಳಿಸಿದ್ರೆ ಪ್ರೀತಿ ಅಂತಾ ಸುತ್ತಾಡಿದ್ರು. ಈಗ ಪ್ರೀತಿ ಬೇಡ ಓದಬೇಕು ಎಂದವಳನ್ನು, ತನ್ನ ಮಾಜಿ ಪ್ರೇಮಿಯೇ ಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ.
ಹಾಸನ (ನ.16): ಇಬ್ಬರೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದವರು. ಓದುವಾಗಲೇ ಪ್ರೀತಿ ಪ್ರೇಮದ ಪಾಶಕ್ಕೆ ಸಿಲುಕಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ, ಪ್ರೀತಿ ಮಾಡಿದವನೇ ತನ್ನ ಪ್ರೇಯಸಿಯನ್ನು ಕುಂತಿಬೆಟ್ಟಕ್ಕೆ ಕರೆದೊಯ್ದು ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಪ್ರೀತಿಸಿದ ಯುವಕನೇ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ದುರ್ಘಟನೆ ಹಾಸನದ ಅಗಿಲೆ ಬಳಿಯ ಕುಂತಿಬೆಟ್ಟದಲ್ಲಿ ನಡೆದಿದೆ. ಸುಚಿತ್ರಾ (21) ಕೊಲೆಯಾದ ಪ್ರಿಯತಮೆ ಆಗಿದ್ದಾಳೆ. ತೇಜಸ್ ಕೊಲೆ ಮಾಡಿದ ಪ್ರಿಯಕರನಾಗಿದ್ದಾನೆ. ಈ ಇಬ್ಬರೂ ಹಾಸನದ ಬಳಿಯಿರುವ ಮೊಸಳೆ ಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಆದರೆ, ಲವ್ ಬ್ರೇಕಪ್ ಆಗಿತ್ತು ಎಂದು ತಿಳಿದುಬಂದಿದೆ. ನಾನು ನಿನ್ನೊಂದಿಗೆ ಮಾತನಾಡಬೇಕು ಎಂದು ಆಕೆಯನ್ನು ಹತ್ತಿರದಲ್ಲಿಯೇ ಇರುವ ಕುಂತಿ ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಬಿಸಾಡಿ ಬಂದಿದ್ದಾನೆ.
ಹಾಸನಾಂಬೆ ಪವಾಡದಲ್ಲಷ್ಟೇ ಅಲ್ಲ, ಆದಾಯದಲ್ಲೂ ಶ್ರೀಮಂತೆ: ಕೇವಲ 12 ದಿನದಲ್ಲಿ 8.72 ಕೋಟಿ ಆದಾಯ ಗಳಿಕೆ
ಕೊಲೆಯಾದ ಪ್ರಿಯತಮೆ ಸುಚಿತ್ರಾ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಗಿದ್ದಳು. ಇನ್ನು ಕೊಲೆ ಆರೋಪಿ ತೇಜಸ್ ಈಕೆಗಿಂತ ಸೀನಿಯರ್ ಬ್ಯಾಚ್ ಆಗಿದ್ದು ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಆದರೆ, ಈತನನ್ನು ಪ್ರೀತಿ ಮಾಡಲು ಸುಚಿತ್ರಾ ನಿರಾಕರಿಸಿದ್ದಳಂತೆ. ಹೀಗಾಗಿ, ಪ್ರೇಮ ವೈಫಲ್ಯದಿಂದ ಪ್ರಿಯತಮೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೂಲತಃ ಹಾಸನ ತಾಲ್ಲೂಕು ಶಂಕರನಹಳ್ಳಿಯವನಾದ ತೇಜಸ್, ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದನು. ಇನ್ನು ತನ್ನ ಜೂನಿಯರ್ ಸುಚಿತ್ರಾ ಪ್ರೀತಿಸಲು ನಿರಾಕರಿಸಿದ್ದಕ್ಕೆ ಅಗಿಲೆ ಬಳಿಯ ಕುಂತಿ ಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಹಳ್ಳಿಯಿಂದ ಬೆಂಗಳೂರಿಗೆ ಬಂದ ಹುಡ್ಗೀರೇ ಹುಷಾರ್: ಸರ್ಕಾರಿ ಕೆಲಸದ ಆಮಿಷವೊಡ್ಡಿ ವಂಚಿಸುವ ಗ್ಯಾಂಗ್‌ನಿಂದ ದೂರವಿರಿ!
ಸುಚಿತ್ರಾಳನ್ನು ಇಂದು ಮುಂಜಾನೆ ತನ್ನೊಟ್ಟಿಗೆ ಕರೆದೊಯ್ದಿದ್ದ ತೇಜಸ್, ಅಲ್ಲಿ ಆಕೆಯನ್ನು ಬರ್ಬರವಾಗಿ ಕೊಲೆಗೈದು ಒಬ್ಬನೇ ವಾಪಸ್ ಬಂದಿದ್ದಾನೆ. ಅಲ್ಲಿಗೆ ಹೋದವರು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಯುವತಿಯ ಮಾಹಿತಿ ಕಲೆಹಾಕಿದಾಗ ಇಂಜಿನಿಯರಿಂಗ್ ವಿದ್ಯಾರ್ಥಿನಿ ಎಂಬುದು ಗೊತ್ತಾಗಿದೆ. ನಂತರ, ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಸ್ನೇಹಿತರನ್ನು ವಿಚಾರಿಸಿದಾಗ ಆಕೆಯನ್ನು ಬೆಳಗ್ಗೆ ತೇಜಸ್ ಕರೆದೊಯ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಆತನ ಮೊಬೈಲ್ ನಂಬರ್ ಟ್ರೇಸ್ ಮಾಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಘಟಕೆ ಸಂಬಂಧ ಪೊಲೀಸರು ಆರೋಪಿ ತೇಜಸ್‌ನನ್ನು ವಿಚಾರಣೆ ಮಾಡುತ್ತಿದ್ದಾರೆ. ಕೊಲೆ ಘಟನೆಗೆ ಸಂಬಂಧಿಸಿದಂತೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.