Asianet Suvarna News Asianet Suvarna News

ಇಲ್ಲಿ ನಿಮಗೆ ಕಾಣೋ ನಂಬರ್ ಯಾವುದು? ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆದ ಬ್ರೇನ್‌ ಟೀಸರ್‌!

ನಿಮಗೆ ಇಲ್ಲಿ ಕಾಣುತ್ತಿರುವ ಬ್ರೇನ್‌ ಟೀಸರ್‌ ಹರಿಹರಿಸೋದು ಸುಲಭ ಅಂತಾ ಕಾಣ್ತಿದ್ಯಾ? ಆದರೆ, ಹೆಚ್ಚಿನವರಿಗೆ ಇದರಲ್ಲಿರುವ ನಂಬರ್‌ ಯಾವುದು ಅನ್ನೋದು ಹುಡುಕೋದೆ ಬಹಳ ಕಷ್ಟವಾಗುತ್ತಿದೆ.
 

hidden number brain teaser is easy or tough People cant decide this san
Author
First Published Oct 21, 2023, 6:35 PM IST

ಬೆಂಗಳೂರು (ಅ.21): ಈ ಬ್ರೇನ್‌ ಟೀಸರ್‌ಅನ್ನು ಪರಿಹಾರ ಮಾಡೋದು ತೀರಾ ಸುಲಭವೇ ಅಥವಾ ಕಷ್ಟವೇ?  ಸೋಶಿಯಲ್‌ ಮೀಡಿಯಾದಲ್ಲಿ ಇಂಥದ್ದೊಂದು ಚರ್ಚೆ ಬಹಳ ಜೋರಾಗಿ ಆಗುತ್ತದೆ. ಅದಕ್ಕೆ ಕಾರಣ, ಎಕ್ಸ್‌ನಲ್ಲಿ ಪೋಸ್ಟ್‌ ಆಗಿರುವ ಬ್ರೇನ್‌ ಟೀಸರ್‌ಅನ್ನು ಪರಿಹಾರ ಮಾಡುವ ಪ್ರಯತ್ನದಲ್ಲಿ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಡಗಿಕೊಂಡಿರುವ ನಂಬರ್‌ ಯಾವುದು ಎನ್ನುವ ಪಜಲ್‌ಅನ್ನು ಪರಿಹರಿಸಲು ಜನ ಕಷ್ಟಪಡುತ್ತದ್ದಾರೆ. ಇನ್ನೂ ಕೆಲವರು ಇದರಲ್ಲೇನಿದೆ ಮಹಾ ನನಗೆ ಇದರಲ್ಲಿರುವ ನಂಬರ್‌ ಮೊದಲ ನೋಟದಲ್ಲಿಯೇ ಸಿಕ್ಕಿದೆ ಎಂದು ಹೇಳಿದ್ದಾರೆ. ಅದಲ್ಲೆ, ಅತ್ಯಂತ ಕ್ವಿಕ್‌ ಆಗಿ ಇದರಲ್ಲಿ ಅಡಗಿರುವ ನಂಬರ್‌ಅನ್ನೂ ಅವರು ಹೇಳಿದ್ದಾರೆ. ಇನ್ನೂ ಕೆಲವರು ಇದರಲ್ಲಿರುವ ನಂಬರ್‌ ಯಾವುದು ಎನ್ನುವುದನ್ನು ನೋಡುತ್ತಾ ನನಗೆ ತಲೆನೋವು ಬರಲು ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. ಮೊದಲ ನೋಟದಲ್ಲಿಯೇ ಈ ಪಜಲ್‌ ಅನ್ನು ಪರಿಹಾರ ಮಾಡಲು ನಿಮಗೆ ಸಾಧ್ಯವಿದೆಯೇ ಅನ್ನೋದನ್ನು ನೀವೂ ಕೂಡ ಟ್ರೈ ಮಾಡಬಹುದು.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿರುವ ಈ ಚಿತ್ರದಲ್ಲಿ ಅತ್ಯಂತ ಸರಳ ಶೀರ್ಷಿಕೆ ನೀಡಲಾಗಿದೆ. 'ಕಣ್ಣುಗಳಿಗೆ ಪರೀಕ್ಷೆ. ಇಲ್ಲಿ ನಿಮಗೆ ಕಾಣುವ ನಂಬರ್‌ ಯಾವುದು? ಎನ್ನುವ ಸಾಲಿನೊಂದಿಗೆ, ಕಪ್ಪು ಹಾಗೂ ಬಿಳಿ ಪಟ್ಟಿಯ ಅಡಿಯಲ್ಲಿ ಅಡಗಿರುವ ನಂಬರ್‌ನ ಚಿತ್ರವನ್ನು ಹಾಕಲಾಗಿದೆ. ಪಟ್ಟಿಗಳ ಹಿಂದೆ ಅಡಗಿರುವ ಸಂಖ್ಯೆಗಳನ್ನು ಕಂಡುಹಿಡಿಯುವುದೇ ಟ್ರಿಕ್‌ ಆಗಿದೆ.

ಈ ಬ್ರೈನ್ ಟೀಸರ್ ಸವಾಲಿಗೆ ನೀವು ಸಿದ್ಧರಿದ್ದೀರಾ?

ಒಂದು ದಿನದ ಹಿಂದೆ ಈ ಪೋಸ್ಟ್‌ಅನ್ನು ಶೇರ್‌ ಮಾಡಿಕೊಳ್ಳಲಾಗಿದೆ. ಅಂದಿನಿಂದ ಇದು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಇಲ್ಲಿಯವರೆಗೂ ಟ್ವೀಟ್‌ಗೆ 6 ಮಿಲಿಯನ್ ವೀವ್ಸ್‌ಗಳು ಬಂದಿವೆ. ಹಾಗೂ ಈ ನಂಬರ್‌ಗಳು ನಿರಂತರವಾಗಿ ಏರಿಕೆ ಆಗುತ್ತಿದೆ. ಅದಲ್ಲದೆ, ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಇದಕ್ಕೆ ಬಂದಿವೆ.

ಇದರಲ್ಲಿ ಕಷ್ಟವೇನಿದೆ, ಅತ್ಯಂತ ಸರಳವಾಗಿ ಇದನ್ನು ಪರಿಹರಿಸಬಹುದು ಎನ್ನುವ ಕಾಮೆಂಟ್‌ನೊಂದಿಗೆ, ಇನ್ನೂ ಕೆಲವರು ಇದರಲ್ಲಿ ಯಾವ ನಂಬರ್‌ ಇದೆ ಅನ್ನೋದೇ ಗೊತ್ತಾಗುತ್ತಿದೆ. ನೋಡಿ ನೋಡಿ ತಲೆನೋವು ಬಂತಷ್ಟೇ ಎನ್ನುವವರೆಗೆ ಕಾಮೆಂಟ್‌ಗಳು ಬಂದಿದೆ. ಇನ್ನೂ ಕೆಲವರು ಈ ಪಜಲ್‌ಅನ್ನು ಪರಿಹರಿಸೋದು ಹೇಗೆ, ಯಾವ ರೀತಿಯಲ್ಲಿ ನೋಡಿದರೆ ನಂಬರ್ ಕಾಣುತ್ತದೆ ಅನ್ನೋದನ್ನು ಹಂಚಿಕೊಂಡಿದ್ದಾರೆ.

ಬ್ರೇನ್‌ ಟೀಸರ್‌ಗೆ ಬಂದಿರುವ ಪ್ರತಿಕ್ರಿಯೆಗಳು:  "ಇದನ್ನು ನೋಡಿದ ನಂತರ ನನಗೆ ತಲೆತಿರುಗುತ್ತಿದೆ. ಅಲ್ಲಿ ಯಾವ ಸಂಖ್ಯೆ ಇದೆ?" ಎಂದು ಎಕ್ಸ್‌ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿರುವ ನಂಬರ್‌ಗಳು ಹುಡುಕಲು ಹೋಗಿ ನನ್ನ ಕಣ್ಣುಗಳಿಗೆ ತುಂಬಾ ಆಯಾಸ ನೀಡುತ್ತಿದ್ದೇನೆ ಎಂದು ಅನಿಸಿದೆ. ನನಗೆ ಬೇರೇನೂ ದಾರಿ ಕಾಣುತ್ತಿಲ್ಲ. ಹಾಗಾಗಿ ನಂಬರ್‌ಅನ್ನು ಊಹೆ ಮಾಡುತ್ತಿದ್ದೇನೆ. ಇದರಲ್ಲಿ 4 ಅಥವಾ 9 ನಂಬರ್‌ ಇರಬಹುದು ಎಂದು ತಮಾಷೆಯಾಗಿ ಟ್ವೀಟ್‌ ಮಾಡಿದ್ದಾರೆ. 

ಪ್ರಜ್ವಲ್‌ ದೇವರಾಜ್‌ ಜೊತೆ ನಟಿಸಿದ್ದ ನಟಿ ಆಸ್ಪತ್ರೆಗೆ ದಾಖಲು, ಮೂಗಿಗೆ ಟ್ಯೂಬ್ ಹಾಕಿರುವ ಫೋಟೋ ವೈರಲ್‌

ನೀವು ಈ ಚಿತ್ರವನ್ನು ಸ್ವಲ್ಪ ಮಟ್ಟಿಗೆ ಮೇಲಕ್ಕೆ ಹಿಡಿದು, ಕೆಳಗಡೆಯಿಂದ ಚಿತ್ರವನ್ನು ವೀಕ್ಷಿಸಿದಾಗ ಇದರಲ್ಲಿರುವ ನಂಬರ್‌ ಕಾಣುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇದರಲ್ಲಿರುವ 17ನೇ ನಂಬರ್‌ಅನ್ನು ಕಾಣಲು ಜನರಿಗೆ ಕಷ್ಟವಾಗುತ್ತಿದೆಯೇ? ಎಂದು ಇನ್ನೊಬ್ಬರು ಬರೆದಿದ್ದರೆ. 'ಇದು 17. ನೀವು ಚಿತ್ರವನ್ನು ಸ್ವಲ್ಪ ರೀತಿಯ ತ್ವರಿತಗತಿಯಲ್ಲಿ ಸರಿಸಿದರೆ ನೀವು ಸಂಖ್ಯೆಯನ್ನು ಕಾಣಬಹುದು' ಎಂದು ಬರೆದಿದ್ದಾರೆ.

World Cup 2023: ಶುಬ್ಮನ್ ಗಿಲ್‌ಗೆ ಚಿಯರ್ ಮಾಡಿದ ಸಾರಾ ತೆಂಡೂಲ್ಕರ್ ವೀಡಿಯೋ ವೈರಲ್‌

Follow Us:
Download App:
  • android
  • ios