
ಸಕ್ಕರೆ ಬದಲು ನಾವು ದಿನ ನಿತ್ಯ ಬೆಲ್ಲ ಬಳಸಿದರೆ ಹಲವು ರೀತಿಯಲ್ಲಿ ಒಳ್ಳೆಯದು. ಇದರಿಂದ ಅರೋಗ್ಯವೂ ವೃದ್ಧಿಯಾಗುತ್ತದೆ. ಸಂಸ್ಕರಿತ ಸಕ್ಕರೆಗಿಂತ ಬೆಲ್ಲದಲ್ಲಿ ಪೋಷಕಾಂಶವೂ ಹೆಚ್ಚು. ಈ ಬೆಲ್ಲದಿಂದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು. ಹೇಗೆ?
- ಬೆಲ್ಲದಲ್ಲಿರುವ ಹಲವು ಪೋಷಕಾಂಶಗಳು ಕೂದಲು ಮತ್ತು ಚರ್ಮ ಆರೋಗ್ಯಕರವಾಗಿರಲು ಸಹಕರಿಸುತ್ತದೆ.
- ಬೆಲ್ಲದಲ್ಲಿರುವ ಗ್ಲಿಕೊಲಿಕ್ ಆ್ಯಸಿಡ್ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಿ, ಸ್ಕಿನ್ ಹೊಳೆಯುವಂತೆ ಮಾಡುತ್ತದೆ.
- ಮುಖದ ಮೇಲಿನ ಸುಕ್ಕುಗಳು, ರಿಂಕಲ್, ಏಜ್ ಸ್ಪಾಟ್, ಮೊಡವೆ ಕಲೆ, ಕಪ್ಪಾದ ಚರ್ಮ ಈ ಎಲ್ಲಾ ಸಮಸ್ಯೆಗಳಿಗೂ ಬೆಲ್ಲದ ಫೇಸ್ ಪ್ಯಾಕ್ ಮದ್ದು.
ಹೊಳೆಯುವ ತ್ವಚೆ
ಗ್ಲಿಕೊಲಿಕ್ ಆ್ಯಸಿಡ್ ಅನ್ನು ಸ್ಕಿನ್ ಕೇರ್ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದರಿಂದ ಸ್ಕಿನ್ ಕಂಡೀಷನ್ ಉತ್ತಮವಾಗುತ್ತದೆ. ಬೆಲ್ಲದಲ್ಲಿ ಗ್ಲಿಕೊಲಿಕ್ ಆ್ಯಸಿಡ್ ಹೆಚ್ಚಿದ್ದು, ಎರಡು ಚಮಚ ಬೆಲ್ಲದ ಪುಡಿ, ಎರಡು ಚಮಚ ಜೇನು ಮತ್ತು ಒಂದು ಚಮಚ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿ. 10 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆಯಬೇಕು.
ಕಂದು ಕಲೆ ನಿವಾರಣೆಗೆ
ಗ್ಲಿಕೊಲಿಕ್ ಆ್ಯಸಿಡ್ ಮುಖದ ಮೇಲಿನ ಕಂದು ಕಲೆಗಳನ್ನೂ ನಿವಾರಿಸುತ್ತದೆ. ಇದಕ್ಕಾಗಿ ಒಂದು ಚಮಚ ಬೆಲ್ಲದ ಪುಡಿ, ಒಂದು ಚಮಚ ಟೊಮೇಟೊ ಜ್ಯೂಸ್, ಅರ್ಧ ಚಮಚ ನಿಂಬೆ ರಸ ಬೆರೆಸಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ ಮತ್ತು ಗ್ರೀನ್ ಟೀ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, 15 ನಿಮಿಷ ಬಿಟ್ಟು ತೊಳೆಯಿರಿ.
ಹಣೆ ಮೇಲೆ ತಿಲಕ: ವೈಜ್ಞಾನಿಕ ಕಾರಣವೇನು?
ಫೈನ್ ಲೈನ್
ಗ್ಲಿಕೊಲಿಕ್ ಆ್ಯಸಿಡ್ ಸ್ಕಿನ್‌ನಲ್ಲಿ ಕಾಣಿಸಿಕೊಂಡು, ಯುಂಗ್ ಆಗಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ ಇಂದು ಚಮಚ ದ್ರಾಕ್ಷಿ ಪಲ್ಪ್, ಒಂದು ಚಮಚ ಬ್ಲಾಕ್ ಟೀ, ಅರಿಶಿನ ಪುಡಿ, ಬೆಲ್ಲದ ಪುಡಿ, ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ ಸುಂದರ ತ್ವಚೆ ಪಡೆಯಿರಿ.
ಮುಖದ ಕಾಂತಿ ಹೆಚ್ಚಿಸುತ್ತೆ ಈ ಫೇಸ್ ಮಾಸ್ಕ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.