ವಿಶ್ವದ 10 ಸಿರಿವಂತರಲ್ಲಿ ಒಬ್ಬರಾದ ಮುಕೇಸ್ ಅಂಬಾನಿ ಈ ವಿಚಿತ್ರ ಖಾಯಲಿ ಬಗ್ಗೆ ನಿಮಗೊತ್ತಾ?

Suvarna News   | Asianet News
Published : Aug 10, 2020, 05:12 PM ISTUpdated : Sep 01, 2022, 10:58 AM IST
ವಿಶ್ವದ 10 ಸಿರಿವಂತರಲ್ಲಿ ಒಬ್ಬರಾದ ಮುಕೇಸ್ ಅಂಬಾನಿ ಈ ವಿಚಿತ್ರ ಖಾಯಲಿ ಬಗ್ಗೆ ನಿಮಗೊತ್ತಾ?

ಸಾರಾಂಶ

ಮುಕೇಶ್‌ ಅಂಬಾನಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬುದು ಈಗ ಎಲ್ಲರಿಗೆ ಗೊತ್ತಾಗಿದೆ. ಇಂಥ ಮನುಷ್ಯನಿಗೆ ದುಬಾರಿ ಯಾಚ್, ಕಾರು, ಜೆಟ್‌ಗಳನ್ನು ಖರೀದಿಸಿ ಸಂಗ್ರಹಿಸುವ ಖಯಾಲಿಯಿದೆ, ಅವರ ಬಳಿ ಯಾಚ್ ಬೆಲೆ ಎಷ್ಟು ಗೊತ್ತಾ?  

ಮುಕೇಶ್‌ ಅಂಬಾನಿ ಈಗ ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ. ಬಿಲ್‌ ಗೇಟ್ಸ್‌, ಎಲಾನ್ ಮಸ್ಕ್, ಝುಕರ್‌ಬರ್ಗ್‌ ಮುಂತಾದವರೆಲ್ಲ ಈ ಲಿಸ್ಟಿನಲ್ಲಿ ಅಂಬಾನಿಯ ಆಸುಪಾಸಿನಲ್ಲಿದ್ದಾರೆ. ಮುಂಬಯಿಯಲ್ಲಿರುವ ಅಂಟಿಲ್ಲಾ ಹೋಪ್‌, ಈ ಕುಬೇರನ ಅರಮನೆ, ಇದರಲ್ಲಿ ಎಷ್ಟು ಫ್ಲೋರುಗಳಿವೆ, ಎಷ್ಟು ರೂಮುಗಳಿವೆ ಎಂಬುದು ಸ್ವತಃ ಅಂಬಾನಿಗೇ ಗೊತ್ತಿದೆಯೋ ಇಲ್ಲವೋ. ಇಂಥ ಶ್ರೀಮಂತನಿಗೆ ಇರುವ ಒಂದು ವಿಚಿತ್ರ ಖಯಾಲಿ ಎಂದರೆ ದುಬಾರಿ ಕಾರು ಕಂಡ ಕೂಡಲೇ ಖರೀದಿಸುವುದು. ಒಂದು ಲೆಕ್ಕಾಚಾರದ ಪ್ರಕಾರ ಇವರ ಬಳಿ ಈಗ ಇರುವ ದುಬಾರಿ ಕಾರುಗಳ ಸುಖ್ಯೆ ಹತ್ತಿರತ್ತಿರ ಇನ್ನೂರು. ಈ ಕಾರುಗಳನ್ನು ನಿಲ್ಲಿಸಲು, ಸರ್ವಿಸ್‌ ಮಾಡಲೆಂದೇ ಅಂಟಿಲ್ಲಾ ಬಿಲ್ಡಿಂಗ್‌ನಲ್ಲಿ ಅಂಬಾನಿ ಆರು ಫ್ಲೋರ್‌ಗಳ ಗ್ಯಾರೇಜ್‌ ಹೊಂದಿದ್ದಾರೆ! 

ಮುಕೇಶ್‌ ಅಂಬಾನಿ ಬಳಿ ಇರುವ ಅತ್ಯಂತ ದುಬಾರಿ ವಾಹನ ಅಂದ್ರೆ ಯಾಚ್. ಇದು ಪ್ರಯಾಣಕ್ಕಷ್ಟೇ ಅಲ್ಲ, ಪಾರ್ಟಿ ಮಾಡೋಕೂ ಲಾಯಕ್ಕಾಗಿದೆ. 58 ಮೀಟರ್‌ ಉದ್ದ, 38 ಮೀಟರ್‌ ಅಗಲದ ಈ ಯಾಚ್, ಸೋಲಾರ್ ಗ್ಲಾಸ್‌ ರೂಫ್‌ ಹೊಂದಿದೆ. ಮೂರು ಡೆಕ್‌ಗಳಿವೆ. ಈ ಡೆಕ್‌ಗಳಲ್ಲಿ ಪಿಯಾನೊ ಬಾರ್, ಲಾಂಜ್‌ ಸ್ವಿಮ್ಮಿಂಗ್‌ ಪೂಲ್‌, ಡೈನಿಂಗ್‌ ಏರಿಯಾ, ರೀಡಿಂಗ್‌ ರೂಮ್‌, ಗೆಸ್ಟ್‌ಗಳಿಗೆ ಸೂಟ್‌, ಇವೆಲ್ಲ ಇವೆ. ಇದರ ಬೆಲೆ ನಿಖರವಾಗಿ ಗೊತ್ತಿಲ್ಲ. ಆದರೆ 600 ಕೋಟಿ ರೂಪಾಯಿಗೆ ಒಂದು ಪೈಸೆಯೂ ಕಡಿಮೆ ಇರಲಾರದು!

ಇನ್ನೊಂದು ಇಂಥದೇ ಬೃಹತ್‌ ಆಸ್ತಿ ಎಂದರೆ ಫಾಲ್ಕನ್‌ 900 ಇಎಕ್ಸ್‌ ಜೆಟ್‌ ವಿಮಾನ. ಇದರ ಬೆಲೆ ಸುಮಾರು 323 ಕೋಟಿ ರೂಪಾಯಿ. ಯಾವುದೇ ಒಂದು ಸಾಧಾರಣ ದೇಶದ ಅಧ್ಯಕ್ಷನ ವಿಮಾನದ ಸೌಲಭ್ಯಗಳಿಗೆ ಏನೇನೂ ಕಡಿಮೆಯಿಲ್ಲದ ಸೌಲಭ್ಯಗಳು ಇದರಲ್ಲಿವೆ. ಸ್ಯಾಟ್ಲೈಟ್‌ ಟಿವಿ, ಇಂಟರ್ನೆಟ್‌ ಕನೆಕ್ಷನ್‌, ಗೇಮ್‌ ಕಂಟ್ರೋಲ್ ಕ್ಯಾಬಿನ್‌, ಮ್ಯೂಸಿಕ್‌ ಸಿಸ್ಟಮ್‌, ಅಂಬಾನಿಗೊಂದು ಕಚೇರಿ, ವೈರ್‌ಲೆಸ್‌ ಕಮ್ಯುನಿಕೇಶನ್‌ ವ್ಯವಸ್ಥೆಗಳೆಲ್ಲ ಇದರಲ್ಲಿ ಇವೆ.
ಅವರ ಬಳಿ ಇರೋ ಕಾರುಗಳ ಒಟ್ಟು ಬೆಲೆ ಕೆಲವು ನೂರು ಕೋಟಿ ಆಗಬಹುದು. ಇದರಲ್ಲೆಲ್ಲ ಮೊದಲಿಗೆ ಕಣ್ಮನ ಸೆಳೆಯುವ ಕಾರು ಅಂದ್ರೆ ಮರ್ಸಿಡಿಸ್ ಮೇಬ್ಯಾಚ್ 62 ಕಾರು. ಇದು ಅಂಬಾನಿಗೆ ಅವರ ಪತ್ನಿ ನೀತಾ ಅಂಬಾನಿ ಬರ್ತ್‌ಡೇಗೆ ಕೊಟ್ಟ ಗಿಫ್ಟ್. ಅದನ್ನು ನೀತಾ, ಮುಕೇಶ್‌ಗೆ ಬೇಕಾದಂತೆ ಕಸ್ಟಮೈಸ್‌ ಮಾಡಿಸಿಕೊಟ್ಟಿದ್ದಾರೆ. 250 ಕಿಲೋಮೀಟರ್‌ ಸ್ಪೀಡಲ್ಲಿ ಈ ಕಾರನ್ನು ಚಲಾಯಿಸಿದರೂ ಒಳಗಿದ್ದವರಿಗೆ ಒಂದಿಂಚು ಅಲುಗಾಟವೂ ಗೊತ್ತಾಗೋಲ್ಲ. ಇದರ ಬೆಲೆ ಸುಮಾರು 5.15 ಕೋಟಿ ರೂಪಾಯಿ.

ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಶ್ರೀಮಂತ 
ಬೆಂಟ್ಲೇ ಕಂಪನಿಯ ಬೆಂಟಾಯ್ಗಾ ಹೊಸ ಕಾರನ್ನು ಭಾರತದಲ್ಲಿ ಮೊದಲಾಗಿ ಖರೀದಿಸಿದ ಖ್ಯಾತಿ ಮುಕೇಶ್‌ಗೆ. ಗ್ರೀನ್‌ ಕಲರ್‌ನ ಈ ಬೆಂಟ್ಲೇ ಕಾರಿನ ಬೆಲೆ ಸುಮಾರು 7,65 ಕೋಟಿ. ಅಂಬಾನಿ ಸ್ವತಃ ಇದನ್ನು ಚಲಾಯಿಸುವದನ್ನು ಇಷ್ಟಪಡುತ್ತಾರೆ ಮತ್ತು ಇದು 301 ಕಿಲೋಮೀಟರ್‌ವರೆಗೂ ಸುಲಭವಾಗಿ ಹೋಗಬಲ್ಲದು. ಮುಕೇಶ್ ಬಳಿ ಇರುವ ಇನ್ನೊಂದು ಐಷಾರಾಮಿ ಕಾರು ಅಂದ್ರೆ ಬಿಎಂಡಬ್ಲ್ಯು 760 ಎಲ್‌ಐ. ಇದು ಸುರಕ್ಷಿತ ಬುಲೆಟ್‌ ಪ್ರೂಫ್ ಕೋಟಿಂಗ್ ಕವಚ ಹೊಂದಿದೆ. ಇದರ ಒಂದೊಂದು ಬಾಗಿಲಿನ ತೂಕವೇ 150 ಕಿಲೋ! ಇದನ್ನ ತಂದು ತನ್ನ ಗ್ಯಾರೇಜಿನಲ್ಲಿ ನಿಲ್ಲಿಸಲು 8.5 ಕೋಟಿ ರೂ. ಕೊಟ್ಟಿದ್ದಾರೆ ಅಂಬಾನಿ. ಅತಿ ವೇಗದಲ್ಲಿ ಹೋಗುತ್ತಿರುವಾಗ ಕಾರಿನ ಟೈರು ಪಂಕ್ಚರ್ ಆಗಿ ಅಥವಾ ಬ್ಲಾಸ್ಟ್‌ ಆಗಿ ಫ್ಲಾಟ್‌ ಆದರೂ ಅದರಲ್ಲೇ ಸಲೀಸಾಗಿ ಸುರಕ್ಷಿತ ಅಂತರಕ್ಕೆ ಓಡಿಸಬಹುದು.  

 

 

ಒಮ್ಮೆ ಹಾಕಿದ ಚಪ್ಪಲ್ ಮತ್ತೊಮ್ಮೆ ಹಾಕಲ್ಲ, ಬೀಟ್‌ರೋಟ್‌ ಜ್ಯೂಸ್ ಮಿಸ್ ಮಾಡಲ್ಲ: ಇವು ನೀತಾ ಅಂಬಾನಿ ವಿಚಿತ್ರ ಅಭ್ಯಾಸ
ಇದಲ್ಲದೇ 7.6 ಕೋಟಿ ರೂ. ಬೆಲೆಯ ರೋಲ್ಸ್‌ರಾಯ್ಸ್‌ ಫ್ಯಾಂಟಮ್‌, ರೋಲ್ಸ್‌ರಾಯ್ಸ್ ಕುಲಿನನ್‌, ಆಸ್ಟನ್‌ ಮಾರ್ಟಿನ್‌ ರ್ಯಾಪಿಡ್ಮುಕೇಶ್‌ ಅಂಬಾನಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬುದು ಈಗ ಎಲ್ಲರಿಗೆ ಗೊತ್ತಾಗಿದೆ. ಇಂಥ ಮನುಷ್ಯನಿಗೆ ದುಬಾರಿ ಯಾಚ್, ಕಾರು, ಜೆಟ್‌ಗಳನ್ನು ಖರೀದಿಸಿ ಸಂಗ್ರಹಿಸುವ ಖಯಾಲಿಯಿದೆ, ಅವರ ಬಳಿ ಯಾಚ್ ಬೆಲೆ ಎಷ್ಟು ಗೊತ್ತಾ?
, ಮರ್ಸಿಡಿಸ್‌ ಬೆಂಜ್‌ ಎಸ್‌ ಗಾರ್ಡ್‌ (ಇದನ್ನು ಹೊಂದಿದ ಮೊದಲ ಭಾರತೀಯ ಅಂಬಾನಿ. ಬೆಲೆ 11 ಕೋಟಿ), ಬೆಂಟ್ಲೇ ಫ್ಲೈಯಿಂಗ್‌ ಸ್ಪರ್‌- ಇತ್ಯಾದಿ ಕಾರುಗಳೂ ಅವರ ಬಳಿ ಇವೆ.  ಮುಂಬಯಿಯಲ್ಲಿ ಇವರ ಕ್ಯಾರವಾನ್‌ ಹೋಗ್ತಾ ಇದ್ದರೆ ಹತ್ತಾರು ಐಷಾರಾಮಿ ಕಾರುಗಳು ಹಿಂದಿನಿಂದ ಹೋಗುವುದನ್ನು ಕಾಣಬಹುದಂತೆ. ಯಾವುದರಲ್ಲಿ ಅಂಬಾನಿ ಇದ್ದಾರೆ ಎಂಬದು ಯಾರಿಗೂ ಗೊತ್ತೇ ಆಗುವುದಿಲ್ಲ.

ವೈರಲ್‌ ಆಗಿವೆ ಮುಖೇಶ್‌ ಅಂಬಾನಿ ಸೊಸೆಯ ಪೋಟೋಸ್  

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿರುಕು ಬಿಟ್ಟ ಹಿಮ್ಮಡಿಗೆ ಉಳಿದ ಮೇಣದಬತ್ತಿಯಿಂದ ಈ ಕ್ರೀಂ ತಯಾರಿಸಿ, ನಂತ್ರ ಮ್ಯಾಜಿಕ್ ನೋಡಿ
Fashion Tips for New Year 2026: ಹೊಸ ವರ್ಷದಲ್ಲಿ ಹೊಸ ಲುಕ್’ಗಾಗಿ ಈ ಫ್ಯಾಷನ್ ಟಿಪ್ಸ್ ಫಾಲೋ ಮಾಡಿ