ಮದುವೇನಾ? ಹಾಗಾದ್ರೆ ಚರ್ಮವನ್ನು ಹೀಗೆ ರಕ್ಷಿಸಿಕೊಳ್ಳಿ..

By Suvarna NewsFirst Published Dec 16, 2018, 9:15 AM IST
Highlights

ಮದುವೆ ಎಂದರೆ ಯಾರಿಗಿರೋಲ್ಲ ಸಂಭ್ರಮ ಹೇಳಿ ? ಶಾಪಿಂಗ್, ಕೌನ್ಸೆಲಿಂಗ್, ಕೇರಿಂಗ್ ಎಲ್ಲವನ್ನೂ ಮಾಡಬೇಕು. ಆ ಮಹತ್ವದ ದಿನದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ನೀವೇ ಆಗೋದ್ರಿಂದ ನಿಮ್ಮ ತ್ವಚೆ ಬಗ್ಗೆಯೂ ಇರಲಿ ಕಾಳಜಿ. ಹೇಗೆ? 

ಮದುವೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಕಾಳಜಿ ಹೆಚ್ಚಾದಷ್ಟು ಆತಂಕವೂ ಹೆಚ್ಚುತ್ತದೆ. ಆದರೆ ಕೆಲವೊಂದು ತಪ್ಪುಗಳು ಮದುವೆಯ ದಿನದಂದು ಎದ್ದು ಕಾಣುತ್ತದೆ. ಅಂಥ ಅನಾಹುತ ತಡೆಯಲು ಇಲ್ಲಿವೆ ಟಿಪ್ಸ್...

ಸಾಮಾನ್ಯವಾಗಿ ಮದುವೆಗೆ ಒಂದು ವಾರ ಇದ್ದಂತೆ ಬ್ಯೂಟಿ ಪಾರ್ಲರ್‌ಗೆ ಮದುವೆಯ ಹೆಣ್ಣು ಹೋಗುತ್ತಾಳೆ. ಮದುವೆಗೆ ಕೆಲವು ದಿನಗಳ ಮುಂಚೆಯೇ ಸೌಂದರ್ಯ ಕಾಳಜಿ ಆರಂಭಿಸಿದರೆ, ಆ ಲುಕ್ಕೇ ಬೇರೆ. ಆಗಲೇ ಅರಿಶಿಣ - ಮೆಹಂದಿ ಶಾಸ್ತ್ರಗಳ ಸಮಯದಲ್ಲಿಯೂ ಮುಖಕ್ಕೆ ಕಳೆ ಕಟ್ಟುವುದು. ಜತೆಗೆ ಚರ್ಮದ ಸೌಂದರ್ಯ ಶಾಶ್ವತವಾಗಿ ಹೆಚ್ಚುತ್ತದೆ. ಹಾಗಾದರೆ ಏನು ಮಾಡಬೇಕು?

ತ್ವಚೆಯ ಸೌಂದರ್ಯ ಕೆಡಿಸುವ ಆಹಾರಗಳಿವು

  • ಯಾವುದೆ ರೀತಿಯ ಚರ್ಮ ಚಿಕಿತ್ಸೆ ಪಡೆಯುತ್ತಿದ್ದರೆ, ಮದುವೆಗೆ ಒಂದು ತಿಂಗಳಿದ್ದಂತೆ ನಿಲ್ಲಿಸಿ. ಏಕೆಂದರೆ ಇವುಗಳ ಫಲ ಕಾಣಿಸಿಕೊಳ್ಳಲು ಸಮಯ ತೆಗೆದುಕೊಳುತ್ತದೆ. 
  • ಮುಖದಲ್ಲಾಗುವ ಮೊಡವೆಯನ್ನು ಮುಟ್ಟುತ್ತಿರಬೇಡಿ, ಮೊಡವೆ ಕಳೆ ಇದ್ದಲ್ಲಿ ಸ್ಪಾಟ್ ಟ್ರೀಟ್ಮೇಂಟ್ ತೆಗೆದುಕೊಳ್ಳಿ. ಇದರಿಂದ ಯಾವ ಹಾನಿಯೂ ಇಲ್ಲ. ಇದರ ಬಗ್ಗೆ ಭಯವಿದ್ದರೆ ಚಿಂತೆ ಬೇಡ. ಮನೆಯಲ್ಲೇ ಸಿಗುವ ಆಲೋವೆರಾ ಜೆಲ್ ಬಳಸಿದರೂ ಕಲೆ ಮಾಯವಾಗುತ್ತದೆ. 


     
  • ಯಾವುದೇ ಹೊಸ ದುಬಾರಿ ಕ್ರೀಮ್ ಪ್ರಯೋಗಿಸಲು ಮುಂದಾಗಬೇಡಿ. ನಿಮ್ಮ ತ್ವಚೆಯನ್ನೇ ಇದು ಹಾಳು ಮಾಡಿಬಿಡಬಹುದು. ಮಾಯಶ್ಚೈಸರ್ ಬೇಕಾದರೆ ಬಳಸಿ. ಬದಲಾಗಿ ಮನೆಯಲ್ಲಿಯೇ ಸಿಗೋ ಹಾಲಿನ ಕೆನೆ, ಕಡಲೆ ಹಿಟ್ಟು, ಹಣ್ಣಿನ ರಸ, ಅರಿಶಿಷ ಇವುಗಳಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಬೆಸ್ಟ್. 
  • ಕಣ್ಣಿಗೆ ತಂಪಾಗುವಷ್ಟು ನಿದ್ರೆ ಮಾಡಿ. ಮಲಗುವಾಗ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನಿಂದ ದೂರವಿರಿ. 
  • ಆಲ್ಕೋಹಾಲ್ ಕುಡಿಯುವುದನ್ನು ಕಡಿಮೆ ಮಾಡಿ. ಸಂಪೂರ್ಣವಾಗಿ ಬಿಟ್ಟರಂತೂ ಮನಸ್ಸು ಹಾಗೂ ದೇಹಕ್ಕೆ ಒಳಿತು. 
  • ಆದಷ್ಟು ಹೆಚ್ಚೆಚ್ಚು  ನೀರು ಕುಡಿಯಿರಿ. 

 ತ್ವಚೆಗಾಗಿ ಸಮಂತಾ ಕುಡಿಯೋ ಡ್ರಿಂಕ್ಸ್ ಇವು

click me!