ಮೂಳೆ ಸವೆತಕ್ಕೆ ದೇವಲೋಕದ ಪಾರಿಜಾತ ದಿವ್ಯೌಷಧಿ

By Web DeskFirst Published Jul 12, 2019, 3:33 PM IST
Highlights

ಪಾರಿಜಾತ ಹೂವು ತನ್ನ ಪರಿಮಳದಿಂದ ಖ್ಯಾತಿ ಪಡೆದಿದೆ. ಈ ಹೂವಿನಿಂದ ಅರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹಲವು ಅನಾರೋಗ್ಯವೂ ದೂರವಾಗುತ್ತದೆ. 
 

ಕೃಷ್ಣನಿಗೆ ಅತ್ಯಾಪ್ತವಾದ ಪಾರಿಜಾತವನ್ನು ದೇವಲೋಕದ ಹೂವೆನ್ನುತ್ತಾರೆ. ಸಂಜೆ ಹೊತ್ತಿಗೆ ಅರಳಿ ಮುಂಜಾನೆ ನೆಲ ಪೂರ್ತಿ ಹರಡುವ ಕೇಸರಿ ಮತ್ತು ಬಿಳಿ ಬಣ್ಣದ ಈ ಹೂವಿನ ಸುಗಂಧಕ್ಕೆ ಮಾರು ಹೋಗದವರೇ ಇಲ್ಲ. ಈ ಸುಂದರ ಹೂವಿಗೆ ಹಲವು ರೋಗಗಳನ್ನು ದೂರ ಮಾಡುವ ಶಕ್ತಿಯೂ ಇದೆ. 

ಪಾರಿಜಾತದಿಂದ ಏನೆಲ್ಲಾ ಪ್ರಯೋಜಗಳಿವೆ ನೋಡೋಣ... 

ಜಾಂಡಿಸ್ 

ಜಾಂಡಿಸ್ ಇರುವವರು ಪ್ರತಿದಿನ ಈ ಎಲೆ ರಸ ಕುಡಿದರೆ ಉತ್ತಮ. ಬೇರೆ ಬೇರೆ ಔಷಧಿಗಳನ್ನು ಸೇವಿಸುವ ಬದಲು ಇದನ್ನು ಮಾಡಿ ಕುಡಿಯಬಹುದು.. 

ಮಲಬದ್ಧತೆ

ಸಾಮಾನ್ಯವಾಗಿ ಎಲ್ಲರನ್ನೂ ಕಾಡೋ ರೋಗವಿದು. ಆಹಾರದ ಜೀವನಕ್ರಮದಲ್ಲಿ ಏರುಪೇರಾದಾಗ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ ಪಾರಿಜಾತ ಎಲೆ ರಸವನ್ನು ಔಷಧಿಯಾಗಿ ಉಪಯೋಗಿಸಿ. 

ದೇವರ ಪೂಜೆಗೆ ಹೂವುಗಳನ್ನೇಕೆ ಬಳಸುತ್ತೇವೆ?

ಜೀರ್ಣಕ್ರಿಯೆ 

ಜೀರ್ಣ ಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಪಾರಿಜಾತದ ಬೀಜದ ಪುಡಿಯನ್ನೂ ನೀರಿನೊಂದಿಗೆ ಬೆರೆಸಿ ಸೇವಿಸಿ. ಸಮಸ್ಯೆಯಿಂದ ಮುಕ್ತರಾಗಿ. 

ಗಂಟು, ಕೀಲು ನೋವು

ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಬೇಕು, ಅದನ್ನು ಒಂದು ಗ್ಲಾಸ್ ನೀರಿಗೆ ಹಾಕಿ, ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯ ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಇದರಿಂದ ವಯಸ್ಸಾಗುತ್ತಿದ್ದಂತೆ ಕಾಣಿಸುವ ಎಲ್ಲಾ ಗಂಟು ನೋವೂ ದೂರವಾಗುತ್ತವೆ. 

ಮೂಳೆ ಸವೆತ

ಪಾರಿಜಾತ ಎಲೆ ಕಷಾಯ ಮೂಳೆ ಸವೆದು ಹೋಗಿರುವ ಕಾರ್ಟಿಲೆಜ್ ಎಂಬ ಅಂಶವನ್ನು ಮತ್ತೆ ಉತ್ಪಾದಿಸುತ್ತದೆ. 

ಯಾವ ದೇವರಿಗೆ ಯಾವ ಹೂ ಶ್ರೇಷ್ಠ?

ಡೆಂಗ್ಯೂ 

ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಸಾಮಾನ್ಯ. ಇದೊಂದು ಮಹಾಮಾರಿಯೂ ಹೌದು. ಪಾರಿಜಾತ ಎಲೆಗಳ ಕಷಾಯ ಡೆಂಗ್ಯೋ ಜ್ವರಕ್ಕೂ ಉಪಯುಕ್ತ. 

click me!