ಮೊಟ್ಟೆ ನಕಲಿಯೋ, ಅಸಲಿಯೋ? ಟಚ್ ಮಾಡಿದ್ರೆ ಗೊತ್ತಾಗುತ್ತೆ ನೋಡಿ...

By Web DeskFirst Published Jul 12, 2019, 2:20 PM IST
Highlights

ಇತ್ತೀಚಿಗೆ ದೇಶದಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆಯೂ  ಮಾರಲಾಗುತ್ತಿದೆ. ಇಂಥ ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರುವುದು ಗ್ಯಾರಂಟಿ. ಅಷ್ಟಕ್ಕೂ ಅಸಲಿ, ನಕಲಿ ವ್ಯತ್ಯಾಸ ಕಂಡು ಹಿಡಿಯುವುದು ಹೇಗೆ?

ಎಲ್ಲೆಡೆ ಕಲುಷಿತ ಆಹಾರದ್ದೇ ಕಾರುಬಾರು. ಇದಕ್ಕೆ ಮೊಟ್ಟೆ, ಅಕ್ಕಿಯೂ ಹೊರತಲ್ಲ.  ಆರೋಗ್ಯಕ್ಕೆ ಮಾರಕವಾಗಿರುವ ಇದನ್ನು ಒಮ್ಮೆ ನೋಡಿದರೆ ನಕಲಿಯೋ ಅಥವಾ ಅಸಲಿಯೋ ಎಂದು ಕಂಡು ಹಿಡಿಯುವುದು ಕಷ್ಟ. 

ಆದುದರಿಂದ ಇವನ್ನು ಸೇವಿಸುವಾಗ ಕೇರ್‌ಫುಲ್ ಆಗಿರಬೇಕು.  ನಕಲಿ -ಅಸಲಿ ಮೊಟ್ಟೆ ಕಂಡು ಹಿಡಿಯಲು ಇಲ್ಲಿವೆ ಸಿಂಪಲ್ ಟ್ರಿಕ್ಸ್..

ಅತೀ ಹೆಚ್ಚು ಮೊಟ್ಟೆ, ಅನಾರೋಗ್ಯಕ್ಕೆ ದಾರಿ

ಹೊಳಪು 

ನಕಲಿ ಮೊಟ್ಟೆ ತುಂಬಾ ಹೊಳೆಯುತ್ತದೆ. ನೈಜ ಮೊಟ್ಟೆಗಷ್ಟು ಹೊಳಪಿರೋಲ್ಲ. 

ಬೆಂಕಿ

ನಕಲಿ ಮೊಟ್ಟೆಯನ್ನು ಬೆಂಕಿ ಬಳಿ ತೆಗೆದುಕೊಂಡು ಹೋದ ಕೂಡಲೇ ಬೆಂಕಿ ಹತ್ತುತ್ತದೆ. ಪ್ಲಾಸ್ಟಿಕ್ ಅಂಶ ಇದರಲ್ಲಿ ಹೆಚ್ಚಿದ್ದು, ಬೆಂಕಿ ಹೊತ್ತಿಕೊಳ್ಳುತ್ತದೆ.



ಟಚ್ ಮಾಡಿ

ಮೊಟ್ಟೆಯನ್ನು ಕೈಯಲ್ಲಿ ಸ್ವಲ್ಪ ಒತ್ತಿ. ಅದು ತುಂಬಾ ರಫ್ ಆಗಿದ್ದರೆ ನಕಲಿ. ಅಸಲಿ ಮೊಟ್ಟೆ ಪದರ ಸ್ಮೂತ್ ಆಗಿರುತ್ತದೆ. 

ಶಬ್ದ

ನಕಲಿ ಮೊಟ್ಟೆಯನ್ನು ಅಲ್ಲಾಡಿಸಿದರೆ ಶಬ್ದ ಬರುತ್ತದೆ. ಆದರೆ ಅಸಲಿ ಮೊಟ್ಟೆಯಲ್ಲಿ ಶಬ್ದ ಬರುವುದಿಲ್ಲ. 

ಮೊಟ್ಟೆಯ ಬಿಳಿ ಭಾಗ ಬೆಸ್ಟೋ, ಹಳದಿಯೋ?

ಮಿಕ್ಸ್  ಆದರೆ... 

ಮೊಟ್ಟೆಯನ್ನು ಒಡೆದು ಸ್ವಲ್ಪ ಹಿಟ್ಟು ಬಿಟ್ಟಾಗ ಬಿಳಿ ಮತ್ತು ಹಳದಿ ದ್ರವ ಜೊತೆಯಾಗಿ ಮಿಕ್ಸ್ ಆದರದು ನಕಲಿ. ಈ ಎರಡು ದ್ರವಗಳನ್ನು ಒಂದೇ ಕೆಮಿಕಲ್ ಬಳಸುವುದರಿಂದ ಅವು ಬೇಗ ಮಿಕ್ಸ್ ಆಗುತ್ತವೆ.. 

click me!