ಮಗು ಒಂದೇ ಮನೇಲಿರುತ್ತಾ? ಹಾಗಾದ್ರೆ ಈ ವಿಷ್ಯ ಗಮನದಲ್ಲಿರಲಿ...

By Web Desk  |  First Published Jul 12, 2019, 2:30 PM IST

ಬೆಂಗಳೂರಿನಂಥ ನಗರದಲ್ಲಿ ಪತಿ-ಪತ್ನಿಯರಿಬ್ಬರೂ ದುಡಿಯುವುದು ಅನಿವಾರ್ಯ. ಕ್ರೀಚಿನಲ್ಲಿ ಮಗುವನ್ನು ಬಿಟ್ಟು ಹೋಗುವಷ್ಟು ದುಡಿಮೆ ಇರೋಲ್ಲ. ಮನೆಯಲ್ಲಿಯೇ ಕೂಡಿ ಹಾಕೋದೂ ಇದೆ. ಹಾಗ್  ಮಾಡೋವಾಗ ಇರಲಿ ಎಚ್ಚರ...


ಇತ್ತೀಚಿಗೆ ಜನರು ಸಣ್ಣ ಕುಟುಂಬವನ್ನು ಇಷ್ಟಪಡುತ್ತಾರೆ. ಗಂಡ ಹೆಂಡತಿ ಮತ್ತು ಮಗು. ಆದರೆ ಮಗುವಿನ ಭವಿಷ್ಯಕ್ಕಾಗಿ ಸಾಮಾನ್ಯವಾಗಿ ಇಬ್ಬರಿಗೂ ದುಡಿಮೆ ಅಗತ್ಯ. ದಂಪತಿ ಕೆಲಸಕ್ಕೆ ಹೋದಾಗ ಮಗುವನ್ನು ಬೇಬಿ 

ಸಿಟ್ಟಿಂಗ್, ಕಿಂಡರ್ ಗಾರ್ಡನ್‌ನಲ್ಲಿ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಮಕ್ಕಳನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗುವ ಪರಿಸ್ಥಿತಿಯೂ ಇರುತ್ತದೆ. ಆ ಸಂದರ್ಭದಲ್ಲಿ ಏನು ಮಾಡಬೇಕು?

ಗ್ಯಾಸ್ ಆಫ್ ಮಾಡಿ 

ನೀವು ಕೂಡು ಕುಟುಂಬದಲ್ಲೇ ಇರಲಿ ಅಥವಾ ಸಣ್ಣ ಕುಟುಂಬದಲ್ಲೇ ಇರಲಿ ಮಕ್ಕಳು ಮನೆಯಲ್ಲಿ ಒಂಟಿಯಾಗಿದ್ದರೆ ಅಡುಗೆ ಮನೆಯಲ್ಲಿ ಗ್ಯಾಸ್ ನಾಬ್ ಪೂರ್ತಿಯಾಗಿ ಆಫ್ ಮಾಡಿ. ಸುರಕ್ಷತೆ ದೃಷ್ಟಿಯಲ್ಲಿ ಇದು ಉತ್ತಮ. 

Latest Videos

ನವಜಾತ ಶಿಶುವಿಗೆ ಈ ಉಡುಗೊರೆಗಳು ಬೆಸ್ಟ್!

ಕರೆಂಟ್ ಸಾಕೆಟ್ 

ಮಕ್ಕಳಿಗೆ ಮತ್ತು ಮನೆಗೆ ಅಪಾಯ ತಂದೊಡ್ಡುವ ವಸ್ತುಗಳನ್ನು ದೂರವಿಡಿ. ಅದರಲ್ಲೂ ವಿದ್ಯುತ್ ಸಾಕೆಟ್ ಅಥವಾ ವಿದ್ಯುತ್ ತಂತಿ ಮಕ್ಕಳ ಕೈಗೆ ಎಟುಕದಂತೆ ನೋಡಿಕೊಳ್ಳಿ. ಹೊರಗೆ ಹೋಗುವಾಗ ಸ್ವಿಚ್‌ಗೆ ಟೇಪ್ ಹಚ್ಚಿ, ಅದನ್ನು ಮುಟ್ಟಲೂ  ಸಾಧ್ಯವಾಗದಂತೆ ನೋಡಿಕೊಳ್ಳಿ. 

 ಅಡುಗೆ ಕೋಣೆಯಲ್ಲಿ ಚಾಕು, ಕತ್ತರಿ, ಬ್ಲೇಡ್ ಮೊದಲಾದ ವಸ್ತುಗಳನ್ನು ಮಕ್ಕಳ ಕೈಗೆ ಸಿಗುವಂತಿಡಬೇಡಿ. ಎತ್ತರ ಜಾಗದಲ್ಲಿಡಿ. 

ಇದೆಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ತುಂಬಾ ಸಮಯದವರೆಗೆ ಒಬ್ಬಂಟಿಯಾಗಿ ಬಿಡಲೂಬಾರದು. ಒಬ್ಬಂಟಿಯಾಗಿದ್ದರೆ ಮಕ್ಕಳಲ್ಲಿ ಒಂದು ರೀತಿಯ ಭಯ ಮೂಡುತ್ತದೆ. ನೀವು ಎಲ್ಲಿಗೆ ಹೋಗುವುದಿದ್ದರೂ ಮಕ್ಕಳನ್ನು ಜೊತೆಗೇ ಕರೆದುಕೊಂಡು ಹೋಗಿ. 

ಸೂಪರ್ ಪೇರೆಂಟ್‌ ಆಗೋಕೆ ಸೂಪರ್ ಟಿಪ್ಸ್‌!

ಇನ್ನು ಮಕ್ಕಳಿಗೆ ಎಮರ್ಜನ್ಸಿಯಲ್ಲಿ ಏನು ಮಾಡಬೇಕು? ಸಹಾಯಕ್ಕೆ ಯಾರನ್ನು ಕರಿಯಬೇಕು ಅನ್ನೋದನ್ನು ತಿಳಿಸಿ. ಜೊತೆಗೆ ಎಮರ್ಜನ್ಸಿ ನಂಬರ್ ಕೂಡ ಅವರಿಗೆ ನೀಡಿ. ಅವುಗಳನ್ನು ಮಕ್ಕಳಿಗೆ ಕಾಣುವಂತೆ ಎಲ್ಲಾದರೂ  ಬರೆದಿಡಿ. ಮಕ್ಕಳನ್ನು ಒಬ್ಬಂಟಿಯಾಗಿ ಬಿಡುವಾಗ ಪೂರ್ತಿಯಾಗಿ ಕೋಣೆಯಲ್ಲಿ ಬಂದ್ ಮಾಡಬೇಡಿ. ಅವರು ಅಗತ್ಯ ಬಂದಾಗ ಸಹಾಯಕ್ಕೆ ಯಾರನ್ನಾದರೂ ಕರೆಯುವಂಥ ವಾತಾವರಣ ಸೃಷ್ಟಿಸಿಡಿ.

click me!