ಮನೆಯಲ್ಲಿ ನೀವೂ ಮಾಡಬಹುದು ವಿವಿಧ ಬಗೆಯ ದಾಲ್ ಕಮಾಲ್!

By Web Desk  |  First Published Aug 31, 2019, 3:20 PM IST

ದಾಲ್ ಎಂಬುದು ಒಂದೇ, ಆದರೆ, ವೈವಿಧ್ಯ ಭಾರತದಲ್ಲಿ ಎಲ್ಲದರಲ್ಲೂ ವೆರೈಟಿ ಸಿಗುತ್ತದೆ. ಒಂದೊಂದು ರಾಜ್ಯದಲ್ಲಿ ದಾಲ್‌ಗೆ ಅಲ್ಪಸ್ವಲ್ಪ ಬದಲಾವಣೆ ತಂದು ಹೊಸ ರುಚಿ ನೀಡಿದ್ದನ್ನು ಕಾಣಬಹುದು. ನಾವು ಆ ಎಲ್ಲ ವೆರೈಟಿ ಕಲಿತುಕೊಂಡರೆ ರುಚಿ ವಿಭಿನ್ನ, ಊಟ ಸಂಪನ್ನ ಆಗುತ್ತದೆ. 


ಉತ್ತರ ಭಾರತದಿಂದ ದಕ್ಷಿಣಕ್ಕೆ ದೌಡಾಯಿಸಿರುವ ದಾಲ್ ಇಲ್ಲೂ ತನ್ನ ಕಮಾಲ್ ತೋರಿಸಿದೆ. ತಿಂಡಿಗೆ ನಾನ್, ಚಪಾತಿ, ರೋಟಿಯೊಂದಿಗೆ, ಊಟಕ್ಕೆ ಜೀರಾ ರೈಸ್, ಗೀ ರೈಸ್, ಅನ್ನದ ಜೊತೆಗೆ ಹೊಂದಿಕೊಂಡು ಹೋಗುವ ದಾಲ್ ಯಾವುದೇ ಹೊತ್ತಿಗೆ ಬೇಕಾದರೂ ಮಾಡಬಹುದು. ಮಾಡಲು ಸುಲಭ, ತಿನ್ನಲು ರುಚಿ, ಪೋಷಕಾಂಶಗಳ ಕಣಜ... ಮತ್ತಿನ್ನೇಕೆ ತಡ? ಬಗೆ ಬಗೆಯ ದಾಲ್ ತಯಾರಿಸಿ ಸ್ಪೆಶಲ್ ಊಟಕ್ಕೆ ಸಜ್ಜಾಗಿ.

ಸಿಂಪಲ್ ದಾಲ್

Latest Videos

undefined

ಇದು ಬಹು ಜನ ಪ್ರಿಯ ಹಾಗೂ ಬಹುತೇಕ ಭಾರತೀಯರ ಮನೆಗಳಲ್ಲಿ ತಯಾರಿಸುವ ದಾಲ್. ತೊಗರಿಬೇಳೆ, ಚನ್ನಾವನ್ನು ಪ್ರೆಶರ್ ಕುಕರ್‌ನಲ್ಲಿ 3 ವಿಶಲ್ ಬರಿಸಿ. ಕೆಂಪು ಮೆಣಸಿನ ಕಾಯಿ, ಇಂಗು, ಜೀರಿಗೆ ಒಗ್ಗರಣೆ ರೆಡಿ ಮಾಡಿಕೊಂಡು ಅದಕ್ಕೆ ಈರುಳ್ಳಿ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದು ಮಿಕ್ಸಿ ಮಾಡಿದ ತೊಗರಿಬೇಳೆ ಹಾಗೂ ಚನ್ನಾವನ್ನು ಸೇರಿಸಿ. ಸ್ವಲ್ಪ ಉಪ್ಪು, ಅರಿಶಿನ ಬೆರೆಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಪರಿಮಳಯುಕ್ತ ದಾಲ್ ರೆಡಿ. 

ಕಡುಬು, ಲಾಡು, ಮೋದಕ... ಮಾಡಿ ತಂದೆ ವಿನಾಯಕ!

ದಾಲ್ ತಡ್ಕಾ

ಊಟಕ್ಕೆ ಯಾವುದೇ ಸೈಡ್ ಡಿಶ್ ಮಾಡಲು ಮೂಡ್ ಇಲ್ಲದಿದ್ದಾಗ ಮಾಡಲು ಬಲು ಸುಲಭವಾದ ದಾಲ್ ತಡ್ಕಾ ಮೊರೆ ಹೋಗಬಹುದು. ಹೆಸರು ಬೇಳೆ, ಶುಂಠಿ ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೋ ಜೊತೆಗೊಂದಿಷ್ಟು ಮಸಾಲೆ ಬಿದ್ದರೆ ಈ ಉತ್ತರ ಭಾರತದ ಡಿಶ್ ಸಿದ್ಧವಾಗುತ್ತದೆ. ಇದು ಅನ್ನ, ರೊಟ್ಟಿ, ನಾನ್ ಜೊತೆಗೆ ಚೆನ್ನಾಗಿ ಹೊಂದುತ್ತದೆ. 

ಚನಾ ದಾಲ್

ಬಹಳ ನ್ಯೂಟ್ರಿಶಿಯಸ್ ಹಾಗೂ ರುಚಿಕರ ಎಂದೇ ಹೆಸರಾಗಿರುವ ಕಡಲೆಬೇಳೆ ಬಳಸಿ ಚನಾದಾಲನ್ನು 10 ನಿಮಿಷದಲ್ಲಿ ರೆಡಿ ಮಾಡಿಬಿಡಬಹುದು. ಇದಕ್ಕಾಗಿ ಬೇಕಾಗಿದ್ದು ಹೆಚ್ಚಿಟ್ಟ ಈರುಳ್ಳಿ, ಹಸಿಮೆಣಸು, ಇಂಗು, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಗೂ ಸ್ವಲ್ಪ ಉಪ್ಪು ಅಷ್ಟೇ. ಕಡಲೆಬೇಳೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಈ ತರಕಾರಿಗಳನ್ನು ಮಸಾಲೆಯೊಂದಿಗೆ ಫ್ರೈ ಮಾಡಿ. ಬೇಯಿಸಿದ ಚನಾ ದಾಲ್ ಸೇರಿಸಿ, ಪರಿಮಳಕ್ಕೆ ತುಪ್ಪ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಔಷಧೀಯ ಅಶ್ವಗಂಧದಿಂದ ಅಡುಗೆ ಮಾಡುವುದು ಹೀಗೆ!

ಮ್ಯಾಂಗೋ ದಾಲ್

ಹಸಿ ಮಾವಿನಕಾಯಿ, ತೊಗರಿ ಬೇಳೆ ಹಾಗೂ ಮಸಾಲೆಯ ಮಿಕ್ಸ್ ಮಜಾವೇ ಮ್ಯಾಂಗೋ ದಾಲ್. ಬೇಯಿಸಿದ ತೊಗರಿಬೇಳೆಗೆ ಹಸಿ ಮಾವಿನ ಕಾಯಿಯ ತುರಿ ಹಾಕಿ. ಬಾಣಲೆಯಲ್ಲಿ ಜೀರಿಗೆ, ಸಾಸಿವೆ, ಕೆಂಪು ಮೆಣಸು, ಕರಿಬೇವು, ಇಂಗು, ಉಪ್ಪು, ಅರಿಶಿನ, ಕೆಂಪುಮೆಣಸಿನ ಪುಡಿಯನ್ನು ಒಂದೊಂದಾಗಿ ಫ್ರೈ ಮಾಡುತ್ತಾ ಹೋಗಿ ಕಡೆಯಲ್ಲಿ ತೊಗರಿಬೇಳೆ ಮಾವಿನ ಮಿಕ್ಸ್ಚರ್‌ನ್ನು ಹಾಕಿ, ಬೇಳೆಯನ್ನು ಸೌಟಿನಲ್ಲೇ ಸಾಧ್ಯವಾದಷ್ಟು ನುರಿಯಿರಿ. ಮೇಲಿನಿಂದ ತುಪ್ಪ ಹಾಕಿ. ಮ್ಯಾಂಗೋ ದಾಲ್ ರೆಡಿ. 

ದಾಲ್ ಸೂಪ್

ನಾವು ಹುಷಾರು ತಪ್ಪಿದಾಗ ತಾಯಂದಿರು ಮಾಡಿಕೊಡುವ ಸಿಂಪಲ್ ದಾಲ್ ಇದು. ತೂಕ ಕಳೆದುಕೊಳ್ಳುವ ಇಚ್ಛೆ ಇದ್ದರೆ, ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಅಂಥವರು ಈ ದಾಲ್ ಸೇವಿಸುವುದು  ಉತ್ತಮ. ಏಕೆಂದರೆ ದಾಲ್ ಸುಲಭವಾಗಿ ಜೀರ್ಣವಾಗುತ್ತದಲ್ಲದೆ, ಹೊಟ್ಟೆಯನ್ನೂ ತುಂಬಿಸುತ್ತದ. ಜೊತೆಗೆ, ಹೇರಳ ಎನರ್ಜಿ ನೀಡುತ್ತದೆ. ನೀವು ಮಾಡಬೇಕಾದುದು ಇಷ್ಟೆ, ಸ್ವಲ್ಪ ಹೆಚ್ಚಿನ ನೀರಿನೊಂದಿಗೆ ತೊಗರಿ ಬೇಳೆ ಬೇಯಲು ಹಾಕಿ ಉಪ್ಪು ಅರಿಶಿನ ಸೇರಿಸಿ. ಅದು ಬೇಯುವಾಗ ತುಪ್ಪ,  ಸ್ವಲ್ಪ ಇಂಗು, ಜೀರಿಗೆ, ತುರ್ದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ. ಇದು ನೀರುನೀರಾಗಿ ಬೇಯುವಾಗ ಒಗ್ಗರಣೆ ಹಾಕಿ ಸ್ವಲ್ಪ ಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಸೂಪ್‌ನಂತೆ ಸೇವಿಸಿ. 
 

click me!