ವಿವಾಹದಲ್ಲಿ ಯುವಜನತೆ ನಂಬಿಕೆ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಡೈವೋರ್ಸ್ ಸಂಖ್ಯೆ ಕೂಡಾ ಹೆಚ್ಚಿದೆ. ಜಾಗತಿಕವಾಗಿ 1960ರಿಂದೀಚೆಗೆ ಡೈವೋರ್ಸ್ ರೇಟ್ ಶೇ.251.8ರಷ್ಟು ಹೆಚ್ಚಿದೆ.
ನೀವಿದಕ್ಕೆ ಕಾಕತಾಳೀಯ ಎನ್ನುತ್ತೀರೋ, ಅಥವಾ ಏನಾದರೂ ಸಂಬಂಧವಿದೆಯೋ ತಿಳಿಯದು, ಆದರೆ, ಅಭಿವೃದ್ಧಿಯಾದ ದೇಶಗಳಲ್ಲೇ ಡೈವೋರ್ಸ್ ರೇಟ್ ಕೂಡಾ ಜಾಸ್ತಿ. ದೇಶದ ಅಭಿವೃದ್ಧಿಯಾದಂತೆಲ್ಲ ಸಂಬಂಧಗಳು ಕ್ಷೀಣಿಸುತ್ತವೆಯೇ?
ಮದುವೆ ಎನ್ನುವುದು ವ್ಯಕ್ತಿಗೆ ಸಂಬಂಧಿಸಿದ, ಕುಟುಂಬಗಳಿಗೆ ಸಂಬಂಧಿಸಿದ, ಸಂಸ್ಕೃತಿ, ಧಾರ್ಮಿಕತೆ, ನಂಬಿಕೆ, ಜೀವಿಸುವ ಸ್ಥಳಕ್ಕೆ ಸಂಬಂಧಿಸಿದುದಾದರೂ, ಇದೀಗ ಇದೊಂದು ಹಟಮಾರಿ ಜಾಗತಿಕ ವಿಷಯವಾಗಿದೆ. ದಾಖಲೆಗಳ ಪ್ರಕಾರ, ವಿವಾಹ ಹಾಗೂ ಡೈವೋರ್ಸ್ ಸಂಖ್ಯೆಯಲ್ಲಿ ನಾಟಕೀಯ ಬದಲಾವಣೆಗಳು ಕಂಡುಬಂದಿದ್ದು ಇದಕ್ಕೆ ಪ್ರಮುಖ ಕಾರಣಗಳಾಗಿ ಚಟಗಳು, ದೈಹಿಕ ಹಾಗೂ ಮಾನಸಿಕ ದೌರ್ಜನ್ಯ, ದಾಂಪತ್ಯ ವಂಚನೆ, ಸಾಮರಸ್ಯದ ಕೊರತೆ ನಿಲ್ಲುತ್ತವೆ.
undefined
ಅಧ್ಯಯನಗಳ ಪ್ರಕಾರ, ಜಾಗತಿಕವಾಗಿ ಈ ದೇಶಗಳಲ್ಲಿ ಡೈವೋರ್ಸ್ ಸರಾಸರಿ ಸಂಖ್ಯೆ ಕಡಿಮೆಯಿದ್ದು, ಅದರಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದರೂ ಕೂಡಾ ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಡೈವೋರ್ಸ್ ಸಂಖ್ಯೆ ದುಪ್ಪಟ್ಟಾಗಿದೆ ಎಂಬುದೂ ಗಮನಾರ್ಹ.
Divorce ಬಳಿಕ ಹ್ಯಾಪಿಯಾಗಿರಲು ಇಲ್ಲಿದೆ ಮಾರ್ಗದರ್ಶಿ ಸೂತ್ರ
ಅತಿ ಕಡಿಮೆ ಡೈವೋರ್ಸ್ ರೇಟ್ ಇರುವ ದೇಶಗಳಿವು
1. ಭಾರತ
ಭಾರತದಲ್ಲಿ ಡೈವೋರ್ಸ್ ಸಂಖ್ಯೆ ಶೇ.1ಕ್ಕಿಂತಾ ಕಡಿಮೆ. ಅಂದರೆ 1000 ವಿವಾಹಿತ ಜೋಡಿಗಳಲ್ಲಿ 13 ಜೋಡಿಗಳು ವಿಚ್ಚೇದನ ಪಡೆಯುತ್ತಾರೆ. ಹಾಗಂತ ಇದೇನು ಭಾರಿ ಖುಷಿ ಪಡುವ ಸಂಗತಿಯಲ್ಲ. ಏಕೆಂದರೆ ಇಲ್ಲಿ ಸಮಾಜಕ್ಕೆ ಹೆದರಿ, ಆರ್ಥಿಕ, ಸಮುದಾಯಿಕ, ನೈತಿಕ ಮುಂತಾದ ಕಾರಣಗಳಿಂದಾಗಿ ವಿವಾದಾತ್ಮಕ ವಿವಾಹವೇ ಆಗಿದ್ದರೂ ಅಲ್ಲೇ ಅನುಭವಿಸುತ್ತಾರೆಯೇ ಹೊರತು ವಿಚ್ಚೇದನದ ಮೊರೆ ಹೋಗುವವರು ವಿರಳ.
2. ಚಿಲಿ
ಭಾರತದಂತೆಯೇ ಚಿಲಿಯಲ್ಲಿ ಕೂಡಾ ಡೈವೋರ್ಸ್ ಕೇಳುವವರನ್ನು ಹುಬ್ಬೆತ್ತಿ ನೋಡಲಾಗುತ್ತದೆ. ಅವಮಾನಿಸಲಾಗುತ್ತದೆ. ಆದ್ದರಿಂದ ಇಲ್ಲಿ ಡೈವೋರ್ಸ್ ಸಂಖ್ಯೆ ಶೇ.3ರಷ್ಟಿದೆ.
3. ಕೊಲಂಬಿಯಾ
ಕೊಲಂಬಿಯಾದಲ್ಲಿ ಶೇ.9ರಷ್ಟು ವಿಚ್ಚೇದನಗಳಾಗುತ್ತವೆ. ಹಾಗಂತ ಕೊಲಂಬಿಯಾದ ಜೋಡಿಗಳೆಲ್ಲ ಸಂತೋಷದಿಂದ ಸುಖವಾಗಿ ಬಾಳುತ್ತಿದ್ದಾರೆ ಎಂದೇನು ಅರ್ಥವಲ್ಲ.
4. ಮೆಕ್ಸಿಕೋ
ಮೆಕ್ಸಿಕೋದಲ್ಲಿ ಡೈವೋರ್ಸ್ ಪಡೆಯುವುದು ಸುಲಭ. ಬಹಳ ಬೇಗ ವಿಚ್ಚೇದನ ಸಿಗುತ್ತದೆ. ಇದೇ ಕಾರಣಕ್ಕಾಗಿ ಇಲ್ಲಿ ಡೈವೋರ್ಸ್ ಸಂಖ್ಯೆ ಜಾಸ್ತಿ ಇರಬೇಕಿತ್ತಾದರೂ, ಇಲ್ಲಿನ ಜನರು ಕ್ಯಾಥೋಲಿಕ್ ಚರ್ಚ್ ಮೇಲೆ ವಿಪರೀತ ನಂಬಿಕೆ ಇಟ್ಟಿರುವ ಕಾರಣದಿಂದ ಡೈವೋರ್ಸ್ ಸಂಖ್ಯೆ ಸ್ವಲ್ಪ ಕಡಿಮೆಯೇ ಎಂದು ಹೇಳಬೇಕು. ಇಲ್ಲಿ ಡೈವೋರ್ಸ್ ರೇಟ್ ಶೇ.15ರಷ್ಟಿದೆ.
ಹಾಗಿದ್ದರೆ, ಡೈವೋರ್ಸ್ ರೇಟ್ ಹೆಚ್ಚಿರುವ ದೇಶಗಳ್ಯಾವುವು ನೋಡೋಣ...
1. ಲಕ್ಸೆಂಬರ್ಗ್
ಕೇವಲ 5 ಲಕ್ಷ ಜನಸಂಖ್ಯೆ ಹೊಂದಿರುವ ಲಕ್ಸೆಂಬರ್ಗ್ ಯೂರೋಪ್‌ನ ಅತಿ ಸಣ್ಣ ದೇಶಗಳಲ್ಲೊಂದು. ಹೆಚ್ಚಿನ ಕೊಳ್ಳುವಿಕೆ ಸಾಮರ್ಥ್ಯ ಹಾಗೂ ಮುಂದುವರಿದ ಆರ್ಥಿಕತೆಯನ್ನು ಈ ದೇಶ ಕೊಚ್ಚಿಕೊಳ್ಳುತ್ತದಾದರೂ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಡೈವೋರ್ಸ್‌ಗಳು ನಡೆಯುವ ದೇಶ ಎಂಬುದು ಇದಕ್ಕೊಂದು ಕಪ್ಪು ಚುಕ್ಕೆ. ಇಲ್ಲಿ ನೂರರಲ್ಲಿ ಬರೋಬ್ಬರಿ 87 ಮದುವೆಗಳು ವಿಚ್ಚೇದನದಲ್ಲಿ ಅಂತ್ಯ ಕಾಣುತ್ತವೆ.
ಡೈವೋರ್ಸ್ ಅವಧಿಯಲ್ಲಿ 2ನೇ ಮದುವೆ ಆಗಬಹುದು
2. ಸ್ಪೇನ್
ಈ ದೇಶದಲ್ಲಿ ಕ್ಯಾಥೋಲಿಕರ ಸಂಖ್ಯೆ ಹಾಗೂ ಧರ್ಮದಲ್ಲಿ ನಂಬಿಕೆ ಹೆಚ್ಚಿದ್ದರೂ ವಿಚ್ಚೇದನದ ಸಂಖ್ಯೆ ಶೇ.65ರಷ್ಟು ಇರುವುದು ಆಶ್ಚರ್ಯವೇ ಸರಿ. ಇದರಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪಾತ್ರ ಕೂಡ ಇರಬಹುದು.
3. ಫ್ರಾನ್ಸ್
ಫ್ರಾನ್ಸ್‌ನಲ್ಲಿ ಅದರಲ್ಲೂ ರೊಮ್ಯಾನ್ಸ್ ರಾಜಧಾನಿ ಎಂದೇ ಹೆಸರಾಗಿರುವ ಪ್ಯಾರಿಸ್‌ನಲ್ಲೇ ಡೈವೋರ್ಸ್ ಸಂಖ್ಯೆ ಹೆಚ್ಚಿರುವುದು ವಿಪರ್ಯಾಸವೇ ಸರಿ. ಇಲ್ಲಿ ಶೇ.55ರಷ್ಟು ವಿವಾಹಗಳು ವಿಚ್ಚೇದನದಲ್ಲಿ ಕೊನೆಯಾಗುತ್ತವೆ.
4. ರಷ್ಯಾ
ಪ್ರತಿ ಒಂದು ಸೆಕೆಂಡಿಗೆ ರಷ್ಯಾದ ಒಂದು ಜೋಡಿ ಡೈವೋರ್ಸ್ ಪಡೆಯುತ್ತಾರೆಂದರೆ ಅಚ್ಚರಿಯಾದೀತಲ್ಲವೇ? ಇಲ್ಲಿ 3ರಲ್ಲಿ 1 ಭಾಗದಷ್ಟು ವಿವಾಹಗಳು ಮೊದಲ 5 ವರ್ಷದೊಳಗೆ ಡೈವೋರ್ಸ್‌ನಿಂದ ಮುರಿದು ಬೀಳುತ್ತವೆ. ಇಲ್ಲಿನ ಡೈವೋರ್ಸ್ ರೇಟ್ ಶೇ.51ರಷ್ಟಿದೆ.
5. ಯುನೈಟೆಡ್ ಅಮೆರಿಕ
ಇಲ್ಲಿನ ಡೈವೋರ್ಸನ್ನು ಎರಡು ರೀತಿಯಾಗಿ ವಿಂಗಡಿಸಲಾಗಿದೆ. ಫಾಲ್ಟ್ ಡೈವೋರ್ಸ್ ಪಡೆದ ಜೋಡಿಗಳು ಕಾನೂನುಬದ್ಧವಾಗಿ ಮರುಮದುವೆಯಾಗುವಂತಿಲ್ಲ. ನೋ ಫಾಲ್ಟ್ ಜೋಡಿಗಳು ಯಾರ ಮೇಲೂ ಆರೋಪ ಹೊರಿಸದೆ ಸಾಮರಸ್ಯದ ಕೊರತೆ ಹೇಳಿ ಬೇರೆಯಾಗಬಹುದು. ಅಂದ ಹಾಗೆ ಇಲ್ಲಿ ಡೈವೋರ್ಸ್ ರೇಟ್ ಶೇ.46ರಷ್ಟಿದೆ.