ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

By Web Desk  |  First Published Sep 10, 2019, 9:57 AM IST

ತುಂಬಾ ಜನರ ತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದ ನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್‌ ಹಾಕ್ತಾ ಇರಬೇಕು... ಆದರೆ ವಾಸ್ತವವೇ ಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು.


ಎಸ್‌.ಕೆ ಪಾಟೀಲ್‌

ಶ್ರೀಗಂಧ ತನ್ನ ಬೀಜಗಳ ಮೂಲಕ ನಿಮಗೆ ಹಣ ತಂದುಕೊಡುತ್ತದೆ. ಏನಿಲ್ಲವೆಂದರೂ ಒಂದು ಎಕರೆಯಲ್ಲಿ ಹಾಕಿದ ಶ್ರೀಗಂಧದಿಂದ ಪ್ರತಿವರ್ಷ ಬೀಜ ಮಾರಾಟದಿಂದಲೇ ಅಂದಾಜು ಎರಡು ಲಕ್ಷ ಆದಾಯ ಇದೆ. ಎಲ್‌.ಐ.ಸಿ ಯ ಮನಿ ಬ್ಯಾಕ್‌ ಪಾಲಿಸಿಯ ಹಾಗೆ ಪ್ರತಿ ವರ್ಷ ಬೀಜದ ರೂಪದಲ್ಲಿ ಶ್ರೀಗಂಧ ಮರಳಿ ದುಡ್ಡು ಕೊಡುತ್ತಾ ಇರುತ್ತದೆ.

Tap to resize

Latest Videos

undefined

ಕೃಷಿ ಕ್ಷೇತ್ರದ ಸಾಧಕಿ ಕವಿತಾ ಮಿಶ್ರಾರವರ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಕಂಪ್ಯೂಟರ್‌ ಸೈನ್ಸ್‌ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ ಓದಿರುವ ಇವರು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ತಮ್ಮ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ, ಆ ಬರಡು ಭೂಮಿಯನ್ನ ಸ್ವರ್ಗಮಾಡಿದ್ದಾರೆ. 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಸೀಬೆ, 150 ನೇರಳೆ, 150 ಬೆಟ್ಟದ ನಲ್ಲಿಕಾಯಿ, 150 ನುಗ್ಗೆ, 100 ಕರಿಬೇವು, 100 ಮಲ್ಲಿಗೆ, 100 ತೆಂಗು, 450 ಸೀತಾಫಲ... ಜೊತೆಗೆ ಮೂಸಂಬಿ, ಸಪೋಟ, ಬಾರೇಹಣ್ಣು, ಮತ್ತಿ, ರಕ್ತಚಂದನ, ಕಾಫಿ, ಮೆಣಸು, ಅರಿಷಿಣ.. ಸೇರಿದಂತೆ ನಾನಾ ಬಗೆಯ ಗಿಡಗಳನ್ನು ಬೆಳೆದಿದ್ದಾರೆ! ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಯಲ್ಲಿರುವ ತಮ್ಮ ಜ್ಞಾನವನ್ನು ತಮ್ಮದೇ ವಿಶಿಷ್ಟಶೈಲಿಯಲ್ಲಿ ರೈತರಿಗೆ ಹಂಚುವ ಮೂಲಕ ನೂರಾರು ರೈತರು ಕೃಷಿಯತ್ತ, ಅದರಲ್ಲೂ ಶ್ರೀಗಂಧ ಕೃಷಿಯತ್ತ ವಾಲುವಂತೆ ಮಾಡಿದ್ದಾರೆ. ಜೊತೆಗೆ ಉತ್ತಮ ಗುಣಮಟ್ಟದ ಶ್ರೀಗಂಧದ ಸಸಿಗಳನ್ನು ತಯಾರಿಸಿ ರೈತರಿಗೆ ಒದಗಿಸುವ ಕವಿತಾ ಮಿಶ್ರಾರವರನ್ನು ಹತ್ತಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

ಕಬ್ಬಿಗೆ ಆಗದಿರಲ್ಲಿ ಕಬ್ಬಿಣದ ಕೊರತೆ; ಈ ರೀತಿ ನಿಗವಹಿಸಿ!

ಈಗ ಈ ಶ್ರೀಗಂಧದ ಬೀಜದ ವಿಷಯಕ್ಕೆ ಬಂದರೆ, ಕವಿತಾ ಮಿಶ್ರಾ ಅವರು ಈಗಾಗಲೆ ಶ್ರೀಗಂಧದಿಂದ ಆದಾಯ ಪಡೆಯುತ್ತಿದ್ದಾರೆ. ಒಂದು ಎಕರೆಗೆ ಸುಮಾರು 250 ಶ್ರೀಗಂಧದ ಮರಗಳನ್ನು ನೆಡಬಹುದು. ಅದರ ಜೊತೆ ಶ್ರೀಗಂಧಕ್ಕಿಂತ ಕಡಿಮೆ ಎತ್ತರ ಬೆಳೆಯುವ ಯಾವುದಾದರೂ ಇತರೆ ಗಿಡಗಳನ್ನು ಹಾಕಬಹುದು. ಎಲ್ಲ ರೀತಿಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉಪ ಆದಾಯ ಪಡೆಯಬಹುದು. ಶ್ರೀಗಂಧವನ್ನು 15 ವರ್ಷ ಮೇಲ್ಪಟ್ಟು ಕಟಾವು ಮಾಡಬಹುದು, ಅಲ್ಲಿಯವರೆಗೆ ಇತರ ಮಿಶ್ರ ಬೆಳೆ ಹಾಗೂ ಶ್ರೀಗಂಧದ ಬೀಜದಿಂದ ಹಣ ಗಳಿಸಬಹುದು. ಹೆಚ್ಚು ನೀರು, ಗೊಬ್ಬರ , ಕಾಳಜಿ ಬೇಡದ ಶ್ರೀಗಂಧ ನಾಟಿ ಮಾಡಿದ ಮೂರು ವರ್ಷದಿಂದ ಬೀಜ ಕೊಡಲು ಆರಂಭಿಸುತ್ತದೆ. ಮೊದಲ ಕೆಲವು ವರ್ಷ ಕಡಿಮೆ ಬೀಜಗಳು ದೊರಕುತ್ತವೆ, ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಒಂದು ಗಿಡದಿಂದ ಒಂದೆರಡು ಕೆ.ಜಿ ಯಿಂದ ಹಿಡಿದುಎಂಟ್ಹತ್ತು ಕೆ.ಜಿಯವರೆಗೆ ಬೀಜಗಳು ದೊರೆಯುತ್ತವೆ. ಬೆಲೆಯ ಬಗ್ಗೆ ಹೇಳಬೇಕೆಂದರೆ, ಒಂದು ಕೆ.ಜಿ ಬೀಜಕ್ಕೆ 500 ರಿಂದ ಹಿಡಿದು 1200 ರವರೆಗೆ ಇದೆ. ಔಷಧಿ ತಯಾರಿಸುವ ಕಂಪನಿಗಳು ಸದ್ಯ ಕೆಜಿಗೆ 1000ರು. ನಂತೆ ಕೊಳ್ಳುತ್ತಿದ್ದಾರೆ. ಒಂದು ಎಕರೆಗೆ 250 ಗಿಡ, ಒಂದು ಗಿಡದಿಂದ ಕೇವಲ ಒಂದೇ ಕೆ.ಜಿ ಬೀಜದಂತೆ ಲೆಕ್ಕ ಮಾಡಿದರೂ, ಬೀಜದಿಂದಲೇ ಎರಡು ಲಕ್ಷ ಆದಾಯ ಗಳಿಸಬಹುದು.

ಶ್ರೀಗಂಧದ ಭದ್ರತೆಯ ವಿಷಯದಲ್ಲೂ ಮೊದಲಿನ ಹಾಗೆ ಆತಂಕಪಡಬೇಕಿಲ್ಲ, ಈಗ ತಂತ್ರಜ್ಞಾನ ಸಾಕಷ್ಟುಮುಂದುವರೆದಿದೆ. ಇ ಸೆಕ್ಯೂರಿಟಿ ಅಳವಡಿಸಿ ಮನೇಲಿ ಕೂತ್ಗೊಂಡು ತೋಟ ಕಾಯಬಹುದು. ಇ-ಪ್ರೊಟೆಕ್ಷನ್‌ನಲ್ಲಿ ಶ್ರೀಗಂಧದ ಮರಗಳಿಗೆ ಒಂದು ಮೈಕ್ರೋಚಿಪ್‌ ಅಳವಡಿಸಲಾಗುವುದು, ಕಳ್ಳ ಮರದ ಹತ್ತಿರ 2 ಅಡಿ ದೂರದಲ್ಲಿ ಸುಳಿದಾಡಿದರೂ ಸೈರನ್‌ ಕೂಗುತ್ತದೆ. ಅಷ್ಟೇ ಅಲ್ಲ ಸಮೀಪದ ಪೊಲೀಸ್‌ ಠಾಣೆಗೂ ಲಿಂಕ್‌ ಹೊಂದಿ ಅಲ್ಲೂ ಸೈರನ್‌ ಹೊಡೆದು ಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅಕಸ್ಮಾತ್‌ ಕಳ್ಳ ಕದ್ದೊಯ್ದರೂ ಕದ್ದ ಮಾಲು ಎಲ್ಲಿದೆ ಎಂಬುದನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಮಾರುಕಟ್ಟೆಬಗ್ಗೆಯೂ ಚಿಂತಿಸಬೇಕಿಲ್ಲ. ಹೊರಗೆ ಮಾರಾಟ ಮಾಡಲಾರದವರು ಕೆಎಸ್‌ಡಿಎಲ್‌ಗೇ ಮಾರಬಹುದು.

ಅಡಿಕೆ ಮರ ಏರಲು ಬಂತು ಹೈಟೆಕ್ ಯಂತ್ರ, ಭಟ್ಟರ ಸಂಶೋಧನೆಗೆ ಮಹೀಂದ್ರಾ ಮೆಚ್ಚುಗೆ

ಮಾಹಿತಿಯ ಆಗರ ಕವಿತಾ ಮಿಶ್ರಾ

ತೋಟದಲ್ಲೇ ಮನೆ ಮಾಡಿಕೊಂಡು ಹತ್ತಾರು ಮರಗಿಡಗಳ ಜೊತೆಗೆ ಹಸು, ಕುರಿ, ಕೋಳಿ ಸಾಕಾಣಿಕೆ ಕೂಡ ಮಾಡುತ್ತಿರುವ ಕವಿತಾರವರು ಇಂಗ್ಲಿಷ್‌, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲರು. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಅದನ್ನು ರೈತರಿಗೆ ವರ್ಗಾಯಿಸಿ ಅವರ ಮನ ಬದಲಿಸಬಲ್ಲರು. ತಮ್ಮಲ್ಲೇ ಶ್ರೀಗಂಧದ ಸಸಿ ತಯಾರು ಮಾಡುವ ಇವರು ಅವುಗಳನ್ನು ಕೇವಲ 35 ರೂ.ನಂತೆ ಮಾರಾಟ ಮಾಡುತ್ತಾರೆ. ಜೊತೆಗೆ ಅಪಾರ ತಾಂತ್ರಿಕ ಮಾಹಿತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಜೆ 7 ರಿಂದ 9 ಗಂಟೆಯವರೆಗೆ ಅವರನ್ನು ಮೊಬೈಲ್‌ ಸಂಖ್ಯೆ 9448777045 ಸಂಪರ್ಕಿಸಬಹುದು.

click me!