ವಿಶ್ವ ಆತ್ಮಹತ್ಯೆ ತಡೆ ದಿನ : ನಮ್ಮ ಪಾತ್ರವೇನು?

By Web Desk  |  First Published Sep 10, 2019, 9:15 AM IST

ಸೆಪ್ಟೆಂಬರ್‌ 10, ವಿಶ್ವ ಆತ್ಮಹತ್ಯೆ ತಡೆ ದಿನ. ಇಂತಹದ್ದೊಂದು ಹೆಸರು ಕೇಳುವಾಗಲೇ ವಿಚಿತ್ರವೆನಿಸಿದರೂ ಸಾಮಾನ್ಯ ಆರೋಗ್ಯವಂತ(ಮಾನಸಿಕ, ದೈಹಿಕ) ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಎನ್ನುವುದನ್ನು ತಿಳಿದರೆ ಪ್ರಸ್ತುತ ಈ ದಿನದ ಅಗತ್ಯತೆ ಅರಿವಾಗುತ್ತದೆ. ಹುಟ್ಟು ತನ್ನ ಆಯ್ಕೆ ಆಗದಿದ್ದಾಗ ಸಾವನ್ನು ತನ್ನಿಷ್ಟದಂತೆ ಆಯ್ಕೆ ಮಾಡುವುದು ಅಪರಾಧವೂ, ಪ್ರಕೃತಿಗೆ ವಿರುದ್ಧವೂ ಹೌದಲ್ಲವೇ? ‘ತಾನೂ’ ಸಮಾಜದ ಒಂದು ಅಂಗವಾಗಿರುವುದರಿಂದ ವ್ಯವಸ್ಥೆಯ ಸಮಸ್ಥಿತಿಗೆ, ಸಹಜತೆಗೆ ಭಂಗ ಉಂಟಾಗುವುದರ ಕುರಿತು ತಿಳುವಳಿಕೆ ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ.


ನಂದಿನಿ ವಿಶ್ವನಾಥ ಹೆದ್ದುರ್ಗ

ಕಾಲೇಜು ಹಾಸ್ಟೆಲ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಗಳ ಶವದ ಮುಂದೆ ಅವಳ ಪೋಷಕರು ಎದೆ ಬಡಿದುಕೊಂಡು ಅಳುತ್ತಿದ್ದಾರೆ. ಅದನ್ನು ನೋಡುತ್ತಿದ್ದ ಆ ಗುಂಪಿನ ಒಬ್ಬ ಹುಡುಗಿಗೆ ಏನೋ ಸ್ಫೂರ್ತಿ ಸಿಕ್ಕಂತಾಗಿದೆ. ಅಕಸ್ಮಾತ್‌ ರಾಸಾಯನಿಕವೊಂದನ್ನು ಅಲ್ಪಪ್ರಮಾಣದಲ್ಲಿ ಸೇವಿಸಿ ಆದ ಏರುಪೇರಿಗೆ ಎಂಟು ವರ್ಷದ ಮಗುವಿನ ಸುತ್ತ ಇಡೀ ಕುಟುಂಬ ನಿಂತಿದೆ. ಅದೇ ಹುಡುಗ ಹದಿನಾಲ್ಕರಲ್ಲಿ ತಂದೆಯ ಸಣ್ಣ ಮಾತಿಗೆ ವಿಷ ಸೇವಿಸಿದ್ದಾನೆ. ಗಂಡನಿಂದ ಸದಾ ಅಸಡ್ಡೆ, ಅನಾದರಗಳನ್ನೇ ಅನುಭವಿಸಿದ ಇವಳಿಗೆ ಸತ್ತು ಪಾಠ ಕಲಿಸುವ ಹಟ ಶುರುವಿಟ್ಟಿದೆ.

Tap to resize

Latest Videos

ಖಿನ್ನತೆ ಗೆಲ್ಲುವುದು ಹೇಗೆ? ದೀಪಿಕಾ ಕೊಟ್ಟ ಮದ್ದಿದು!

ಹದಿಹರೆಯದ ಸಮಸ್ಯೆಗಳು, ಪ್ರೇಮ ವೈಫಲ್ಯ, ನಂಬಿಕೆ ದ್ರೋಹ, ಐಡೆಂಟಿಟಿಯ ಕೊರತೆ, ಅತಿಯಾದ ನಿರೀಕ್ಷೆ, ದಾಂಪತ್ಯ ಸಮಸ್ಯೆ, ಮಧ್ಯ ವಯಸ್ಸಿನಲ್ಲಿ ಕಾಡುವ ಒಂಟಿತನ, ಆತ್ಮಿಯರ ಅಗಲಿಕೆ, ಅನಾರೋಗ್ಯ, ಅಟೆನ್ಷನ್‌ ಸೀಕಿಂಗ್‌ ಸ್ವಭಾವ, ಬಾಲ್ಯದ ಕಹಿ ನೆನಪು, ಅತೀ ವೇಗದ ಒತ್ತಡ, ಮಾದಕ ಪದಾರ್ಥ ಸೇವನೆ, ಉದ್ಯೋಗದಲ್ಲಿ ಸೋಲು, ಕೈಸಾಲ, ಬ್ಯಾಂಕ್‌ ಸಾಲಕ್ಕೆ ಹೆದರಿ ನೇಣಿಗೆ ಶರಣಾದ ಆ ರೈತನಿಗೆ ರಾಜಕಾರಣಿಗಳು, ಸರ್ಕಾರ ನೀಡಿದ ಪರಿಹಾರವೇ ಇಪ್ಪತ್ತೈದು ಲಕ್ಷ ಮೀರಿದೆ. ಸತ್ತು ಸಾಲ ತೀರಿಸುವ ಆಸೆ ಇವನಿಗೆ ಜಾಗೃತವಾಗುತ್ತಿದೆ. ಬಡ್ಡಿ-ಚಕ್ರ ಬಡ್ಡಿ, ಬ್ಯಾಂಕ್‌ ಸಾಲ, ದಿವಾಳಿತನದಂತಹ ಸಂಗತಿಗಳು ಹೀಗೆ ನಾನಾ ರೀತಿಯ ವಿಷಯಗಳು ಆತ್ಮಹತ್ಯೆಗೆ ಕಾರಣಗಳು.

ಆತ್ಮಹತ್ಯೆ ತಡೆಗೆ ನಮ್ಮ ಪಾತ್ರ

* ಯಾವುದೋ ಒಬ್ಬ ವ್ಯಕ್ತಿ ಖಿನ್ನನಾಗಿದ್ದಾನೆಂದರೆ, ಸಾವಿನ ಕುರಿತು ಮಾತಾಡುತ್ತಿದ್ದಾನೆಂದರೆ ಅವರನ್ನು ಒಂದೆರಡು ಗಂಟೆ, ದಿನಗಳ ಮಟ್ಟಿಗೆ ನಮ್ಮ ಆಪ್ತ ಪರಿಧಿಯೊಳಗೆ ಇಟ್ಟುಕೊಳ್ಳುವುದು.

* ನೋವಿಗೆ ಸಮಯ ಕೊಡುವ, ಸಮಸ್ಯೆಗೆ ಕಿವಿಯಾಗುವ ಕನಿಷ್ಠ ಹೃದಯವಂತಿಕೆ ತೋರಿಸೋದು.

* ಬೊಗಸೆ ಪ್ರೀತಿಯ ಮಾತು, ಹಿಡಿ ನಂಬಿಕೆ, ಎದೆ ತುಂಬುವಷ್ಟುಸುರಕ್ಷೆಯ ಭಾವ ನೀಡುವುದಕ್ಕೆ ಬ್ಯಾಂಕ್‌ ಬ್ಯಾಲೆನ್ಸ್‌, ಯೂನಿವರ್ಸಿಟಿಯ ಪಾಠ ಬೇಕಿಲ್ಲ.

ಮಾನಸಿಕ ಬಳಲಿಕೆಯಿಂದ ಹೊರ ಬರಲು ಟಿಪ್ಸ್‌!

* ವ್ಯಕ್ತಿಗೆ ಸಾಮಾಜಿಕ ಸಂಸ್ಕಾರ-ಬದ್ಧತೆ, ಕೌಟುಂಬಿಕ ಜವಾಬ್ದಾರಿ, ವೈಯಕ್ತಿಕ ಮಹತ್ವದ ಕುರಿತು, ತಿಳುವಳಿಕೆ ಸಿಕ್ಕರೆ ಅರ್ಧದಷ್ಟುಆತ್ಮಹತ್ಯೆಗಳು ನಿಲ್ಲುತ್ತವೆ.

* ಖಿನ್ನತೆಯಂಥ ಕಾಯಿಲೆಗೆ ಆಸ್ಪತ್ರೆಗಳಿವೆ.

* ಸಮುದಾಯದ ಸಂಪರ್ಕ, ಸಂವಹನದ ಜೊತೆಗೆ ಹವ್ಯಾಸ, ಸೃಜನಾತ್ಮಕ ಚಟುವಟಿಕೆ, ಸಮಸ್ಯೆ ನಿವಾರಣೆಗೆ ಮನಸ್ಸು ತಯಾರಿಡುವುದು.

* ಯಶಸ್ಸೇ ಬದುಕಲ್ಲ ಎನ್ನುವ ಸರಳ ಸೂತ್ರವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಆರೋಗ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದು.

* ಒಂದು ಸ್ಪರ್ಶ, ಒಂದು ಅಪ್ಪುಗೆ ಜೀವವೊಂದರ ಆಯುಃಪೂರ್ತಿಗೆ ಕಾರಣವಾಗುವುದಾದರೆ ಎದೆಯ ಕದ ತೆಗೆದು ನೋವಿಗೆ ಕಿವಿಯಾಗಬಹುದಲ್ಲವೇ.?

ಹತಾಶೆ ಮತ್ತು ನಿರಾಶೆಯ ಮನಸ್ಸಿನ ಒಂದು ಕ್ಷಣದ ಸಂಗತಿಯಾದ ಆತ್ಮಹತ್ಯೆ ಇಂತಹ ಹಲವು ಅಸ್ವಸ್ಥ, ಖಿನ್ನ ಮನಸ್ಸುಗಳಿಗೆ ಪ್ರೇರಣೆ. ಸತ್ತು ಜಗತ್ತಿಗೆ ತನ್ನ ಪ್ರಾಮುಖ್ಯತೆ ತಿಳಿಸುವ ಹುಚ್ಚಾಟದಲ್ಲಿ ಕೊನೆಯಾಗುವ ಜೀವಕ್ಕೆ ತಾನೇನು ಸಾಧಿಸಿದೆನೆಂದೂ ತಿಳಿಯದ ಅವಸ್ಥೆ ಇದು.

ಇದೇ ಸೆಪ್ಟೆಂಬರ್‌ ಹತ್ತು ವಿಶ್ವ ಆತ್ಮಹತ್ಯೆ ತಡೆ ದಿನ. ಇಂತಹದ್ದೊಂದು ಹೆಸರು ಕೇಳುವಾಗಲೇ ವಿಚಿತ್ರವೆನಿಸಿದರೂ ಸಾಮಾನ್ಯ ಆರೋಗ್ಯವಂತ(ಮಾನಸಿಕ, ದೈಹಿಕ) ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಎನ್ನುವುದನ್ನು ತಿಳಿದರೆ ಪ್ರಸ್ತುತ ಈ ದಿನದ ಅಗತ್ಯತೆ ಅರಿವಾಗುತ್ತದೆ.

ಹುಟ್ಟು ತನ್ನ ಆಯ್ಕೆ ಆಗದಿದ್ದಾಗ ಸಾವನ್ನು ತನ್ನಿಷ್ಟದಂತೆ ಆಯ್ಕೆ ಮಾಡುವುದು ಅಪರಾಧವೂ, ಪ್ರಕೃತಿಗೆ ವಿರೋದ್ಧವೂ ಹೌದಲ್ಲವೇ? ‘ತಾನೂ’ ಸಮಾಜದ ಒಂದು ಅಂಗವಾಗಿರುವುದರಿಂದ ವ್ಯವಸ್ಥೆಯ ಸಮಸ್ಥಿತಿಗೆ, ಸಹಜತೆಗೆ ಭಂಗ ಉಂಟಾಗುವುದರ ಕುರಿತು ತಿಳುವಳಿಕೆ ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ. ಇದರ ಹೊಣೆ ಸಮಾಜದ್ದೇ ಆಗಿದ್ದರೂ ಪ್ರಮುಖವಾಗಿ ಪೋಷಕ ಮತ್ತು ಶಿಕ್ಷಕ ವರ್ಗದ್ದಾಗಿರುತ್ತದೆ.

ಡಿಪ್ರೆಷನ್ ಇದೆ ಎನ್ನೋದು ಗೊತ್ತಾಗೋದು ಹೇಗೆ?

ವಿಶ್ವ ಸಂಸ್ಥೆ ಹೇಳುವುದೇನು?

ಜಗತ್ತಿನ ಸಾವಿನ ಕಾರಣಗಳಲ್ಲಿ ಆತ್ಮಹತ್ಯೆಗೆ 13ನೇ ಸ್ಥಾನವಿದೆ. ಅದಲ್ಲದೆ ಆತ್ಮಹತ್ಯೆಯಿಂದ ಪ್ರತೀ ವರ್ಷ ವಿಶ್ವದಲ್ಲಿ ಸಾಯುತ್ತಿರುವವರ ಸಂಖ್ಯೆ ಹತ್ತು ಲಕ್ಷದಷ್ಟು. ಇದು ಭಾರತದಲ್ಲಿ ವರ್ಷಕ್ಕೆ ಸರಿಸುಮಾರು ಒಂದು ಲಕ್ಷ ಮಂದಿ ಎಂದು ವಿಶ್ವ ಸಂಸ್ಥೆ ತನ್ನ ವರದಿ ನೀಡಿದೆ. ಯಾವುದೇ ಜಾತಿ, ವಯಸ್ಸು, ವರ್ಗ, ವರ್ಣಗಳ ಭೇದವಿಲ್ಲದೆ ಮುಂದುವರಿದ ಹಾಗೆ ಜಗತ್ತೇ ಎದುರಿಸುತ್ತಿರುವ ಅತೀ ಅಪಾಯಕಾರಿ ಪಿಡುಗು ಈ ಆತ್ಮಹತ್ಯೆ

ಆತ್ಮಹತ್ಯೆಯ ಮುನ್ಸೂಚನೆ

ಯಾರೋ ಒಬ್ಬ ಸಾವಿನ ಕುರಿತು, ನಶ್ವರತೆಯ ಕುರಿತು, ನೇರ ಆತ್ಮಹತ್ಯೆಯ ಕುರಿತೇ ಮತ್ತೆಮತ್ತೆ ಮಾತಾಡುತ್ತಿದ್ದಾನೆಂದರೆ ಅದನ್ನು ಕೇಳುವ ಸಮಾಜದ ದೃಷ್ಟಿಹೇಗಿರಬೇಕು.? ಸಾಯುವವರು ಹೇಳಿ ಸಾಯುವುದಿಲ್ಲ ಎನ್ನುವಂಥ ಅಸಡ್ಡೆಯ ಮನಸ್ಸಿನೊಂದಿಗೆ ಸುಮ್ಮನಾಗಿಬಿಡುವುದು ಎಷ್ಟುಸರಿ.?

ಮಾನಸಿಕ ಆರೋಗ್ಯ ತಜ್ಞರು ಹೇಳುವ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ತಾನಾಗಿಯೇ ಬಹಳಷ್ಟುಸೂಚನೆಗಳನ್ನು ಕೊಡುತ್ತಾನೆ. ಪದೇಪದೇ ಬದುಕಿಗೆ ಅರ್ಥವಿಲ್ಲ, ಬದುಕೋಕ್ಕೆ ಇಷ್ಟವಿಲ್ಲ ಎನ್ನುವುದು. ತೀರ ಒಳ್ಳೆಯವರಾಗಿ ನಡೆದುಕೊಳ್ಳಲಾರಂಭಿಸುವುದು. ಇಡೀ ಪರಿಚಿತ ವರ್ಗಕ್ಕೆ ಸಾವಿನ ಸೂಚನೆ ಕೊಡುವಂತಹ ಸಂದೇಶ ಕಳುಹಿಸುವುದು. ಶ್ರೀಮಂತರಿದ್ದರೆ ಆಸ್ತಿಪಾಸ್ತಿ ದಾನ ಮಾಡುವುದು. ಸಾಲವಿದ್ದರೆ ಹೇಗಾದರೂ ತೀರಿಸಿಬಿಡುವುದು ಅಥವಾ ಮಕ್ಕಳಿಗೆ ಅದರ ಕುರಿತು ಹೇಳುವುದು, ಒಂಟಿಯಾಗಿರುವುದು. ಆತ್ಮಹತ್ಯೆಗೆ ಸುಲಭ ಮಾರ್ಗಗಳನ್ನು ಹುಡುಕುವುದು, ಗೆಳೆಯರೊಡನೆ ಚರ್ಚಿಸುವುದು, ಮಾದಕ ವ್ಯಸನಿಯಾಗುವುದು, ಈ ಎಲ್ಲಾ ಲಕ್ಷಣಗಳು ಒಂದು ಸೀಮಿತ ಅವಧಿಯಲ್ಲಿ ಅತೀ ಎನಿಸುವಷ್ಟಾಗುವುದು ಆತ್ಮಹತ್ಯೆಯ ಮುನ್ಸೂಚನೆ.

ಮನಸ್ಸಿನ ಸಮಸ್ಯೆಗೊಂದು ಪರಿಹಾರ!

ಸಮಾಜದ ಸ್ವಾಸ್ಥ್ಯ ಕೆಡಿಸುವ ಲೈವ್‌ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವವರು ಕೆಲವೊಮ್ಮೆ ಏಕಾಏಕಿ ನಿರ್ಧಾರ ತೆಗೆದುಕೊಂಡು ಬದುಕಿಗೆ ವಿಮುಖವಾಗುತ್ತಿರುವುದರ ಬಗ್ಗೆ ಪರೋಕ್ಷವಾಗಿಯಾದರೂ ಹೇಳಿರುತ್ತಾರೆ. ಡೆತ್‌ ನೋಟ್‌ ಬರೆದಿಡುವುದು ಕೂಡ ಸಾಮಾನ್ಯ ಸಂಗತಿ. ಇತ್ತೀಚೆಗೆ ಲೈವ್‌ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ಇಡೀ ಸಮಾಜದ ಮನಸ್ಸು ಕೆಡಿಸುವುದಕ್ಕೆ ಕಾರಣವಾಗಿವೆ. ಸೋಷಿಯಲ… ಮೀಡಿಯಾಗಳಲ್ಲಿ ಕ್ರೂರ ವಿಚಾರಗಳು ಮತ್ತು ಸಾವಿನ ಸನ್ನಿವೇಶಗಳ ವೈಭವೀಕರಣ, ಪಬ್‌ಜೀ, ಬ್ಲೂವೇಲ್‌ ನಂತಹ ಅಪಾಯಕಾರಿ ಆಟಗಳು, ಸೌಂದರ್ಯ-ಅಂಗಾಂಗ ಮತ್ತು ಲೈಂಗಿಕ ಸಾಮರ್ಥ್ಯದ ಅಸಹಜ ಮಾಹಿತಿಗಳು ಕೂಡ ಬದುಕನ್ನು ಕೊನೆಗೊಳಿಸುತ್ತಿವೆ. ಗಂಡ ಸಂಜೆ ಸಿನೆಮಾಗೆ ಕರೆದೊಯ್ಯಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡವ ಬದುಕಿಗೆ ಬೆನ್ನು ತೋರಿದವ, ಹೇಡಿ, ಎದುರಿಸಲಾರದವನು, ಸತ್ತದ್ದೇ ಒಳ್ಳೆಯದಾಯಿತು ಎನ್ನುವವರೂ ಇದ್ದಾರೆ. ಇದು ಮನುಷ್ಯನ ವಿಕೃತ ಮನಸ್ಸಿನ ಕುರಿತು ಅಸಹಜವೆನಿಸುತ್ತದೆ.

ಅನುವಂಶೀಯ ಕಾಯಿಲೆ

ಅಚ್ಚರಿಯ ವಿಷಯವೆಂದರೆ ಬಹಳಷ್ಟುಅನುವಂಶೀಯ ಕಾಯಿಲೆಗಳಂತೆ ಆತ್ಮಹತ್ಯೆಯ ಮನಸ್ಥಿತಿ ಸಹ ಜೈವಿಕವಾಗಿ, ಫ್ಯಾಮಿಲಿ ಹಿಸ್ಟರಿಯೊಂದಿಗೆ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತದೆ. ಮನಸ್ಸನ್ನು ಖುಷಿಯಲ್ಲಿಡುವ ಸೆರಟಾನಿನ್‌, ಮೆಲಟಾನಿನ್‌, ಡೊಪಮೈನ್‌ಗಳಂತ ಹಾರ್ಮೋನುಗಳ ಏರುಪೇರಾದಾಗ ವ್ಯಕ್ತಿಯ ಖಿನ್ನತೆಗೆ ಕಾರಣವಾಗಿ, ಸೂಕ್ತ ವೈದ್ಯಕೀಯ ಉಪಚಾರ ಕೊಡಿಸದಿದ್ದಾಗ ಆತ್ಮಹತ್ಯೆ ಸಂಭವಿಸಬಹುದು.

ಬದುಕಿನ ಮೌಲ್ಯ, ಪ್ರೀತಿಯನ್ನು ಪ್ಲೇ ಮಾಡಿ

ಮಕ್ಕಳಿಗೆ ಹೇಗಿರಬೇಕು, ಏನಾಗಬೇಕು ಎನ್ನುವ ಪೋಷಕ ಮನಸ್ಸಿಗೆ ತಾವು ಹೇಗಿದ್ದರೆ ಮಕ್ಕಳು ಹೀಗೆಯೇ ಇರುತ್ತಾರೆ ಎನ್ನುವುದನ್ನು ಅರಿಯಲು ಸ್ವಪೋಷಿತ ಹಿರಿಮೆ ಅಡ್ಡಿ ಮಾಡುತ್ತದೆ. ಕುಟುಂಬಕ್ಕೆ ಒಂದು ಮಗುವಿನ ಆಗಮನವಾಗುತ್ತಿದ್ದ ಹಾಗೇ ಕೆಲವು ಅನಿವಾರ್ಯ ಬದಲಾವಣೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಮೌಲ್ಯಾಧಾರಿತ ಜೀವನ, ಸಮಯ ಪಾಲನೆ, ಪ್ರೀತಿ ಮತ್ತು ನಂಬಿಕೆ, ಸುರಕ್ಷತೆಯ ಭಾವನೆಯನ್ನು ಒದಗಿಸುವುದು ಸದ್ಯ ಪೋಷಕರಿಗೆ ಇರಲೇಬೇಕಾದ ಕ್ವಾಲಿಟಿ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬಂತಹ ಕಾಲದಲ್ಲಿ ನಾವಿದ್ದೇವೆ. ನಮ್ಮನ್ನು ಮೀರಿಸುವವರಿಲ್ಲ ಎನ್ನುವ ಇಂದಿನ ಪೋಷಕ ವರ್ಗ ಮೌಲ್ಯವನ್ನೂ, ಪ್ರೀತಿಯನ್ನು ಕೇವಲ ಫಾರ್ವರ್ಡ್‌ ಮಾಡಲಿಕ್ಕೆ ಸೀಮಿತಗೊಳಿಸಿದ್ದಾರೆ.

ಬಾಣಂತಿಗೇಕೆ ಬೇಸರವಾಗುತ್ತದೆ? ಖಿನ್ನತೆ ಬಗ್ಗೆ ಹುಷಾರ್

ಶಿಕ್ಷಣ, ಮಾಧ್ಯಮಗಳ ಜವಾಬ್ದಾರಿ

ಶಿಕ್ಷಣ ವ್ಯವಸ್ಥೆಯಲ್ಲಿ ರಾರ‍ಯಂಕ್‌, ಟಾಪರ್‌, ಬೆಸ್ಟ್‌ಗಳ ರೇಸಿಗೆ ಮುಗ್ಧ, ಪ್ರೇಮಮಯಿ ಮಗು ನಿಲ್ಲಲಾರದು. ಬಿದ್ದ ಮಗುವನ್ನು ಎತ್ತಿ ಒಟ್ಟಿಗೆ ಓಡಿದ ಮಗುವಿನ ವಿಡಿಯೋ ಫಾರ್ವರ್ಡ್‌ ಮಾಡಬಹುದೇ ಹೊರತು ಪದಕ ಸಿಗುವುದು ಗೆದ್ದ ಮಗುವಿಗೆ ಮಾತ್ರ. ಮೌಲ್ಯಯುತವಾದ ಶಿಕ್ಷಣಕ್ಕೆ ಕೆಲ ಶಿಕ್ಷಕರು ಒತ್ತುಕೊಟ್ಟರೂ ವ್ಯವಸ್ಥೆಯ ಒತ್ತಡ ಬೇರೆಯದೇ ದಿಕ್ಕಿನಲ್ಲಿ ಇರುವುದು ಅವರ ನಿರಾಸೆಗೂ ಕಾರಣವಾಗುತ್ತದೆ. ಸದ್ಯದ ಸಮಾಜವನ್ನು ಆಳುತ್ತಿರುವ ಮೀಡಿಯಾಗಳ ಪಾತ್ರ ಈ ವಿಷಯದಲ್ಲಿ ಮಹತ್ವದ್ದು. ಅದರಲ್ಲೂ ದೃಶ್ಯ ಮಾಧ್ಯಮಗಳು ಆತ್ಮಹತ್ಯೆಯೊಂದನ್ನ ಚುಟುಕಾಗಿ ಹೇಳುವ ಎಲ್ಲಾ ಅವಕಾಶಗಳನ್ನು ಒಗೆದು ಹಂತಹಂತವಾಗಿ ವಿವರಿಸಿ, ಹೇಗೆ ಹೆಚ್ಚು ಯಶಸ್ವಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದೆನ್ನುವ ಮಾಹಿತಿ ಕೊಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಲೈವ್‌ ಆತ್ಮಹತ್ಯೆಯನ್ನು ಬಿತ್ತರಿಸುವುದನ್ನೂ, ಸೋಷಿಯಲ… ಮೀಡಿಯಾಗಳಲ್ಲಿ ಹರಡದಂತೆ ನೋಡಿಕೊಳ್ಳುವುದು ಕೂಡ ಯಾವುದೋ ಬಲಹೀನ ಮನಸ್ಸಿನ ಉಳಿವಿಗೆ ಕಾರಣವಾಗಬಲ್ಲದು.

click me!