ಸುಮ್ ಸುಮ್ನೆ ತುರಿಸೋ ತಲೆಗೆ ಇಲ್ಲಿದೆ ಮನೆ ಮದ್ದು....

By Web Desk  |  First Published Jun 10, 2019, 11:54 AM IST

ತಲೆ ತುರಿಕೆ ಎಂದರೆ ಅದೊಂದು ಇರಿಟೇಟಿಂಗ್ ಸಮಸ್ಯೆ. ಅದು ಒಣ ಚರ್ಮದಿಂದ, ಎಣ್ಣೆ ಚರ್ಮದಿಂದ, ತಲೆಯಲ್ಲಿ ಹೊಟ್ಟು ಇದ್ದರೆ ಹೀಗೆ ಹಲವಾರು ಕಾರಣದಿಂದ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಹೇಗೆ ಬರುತ್ತೆ, ಇದನ್ನು ಕಡಿಮೆ ಮಾಡಲು ಏನು ಮಾಡಬೇಕು ಅನ್ನೋದನ್ನು ನೋಡೋಣ... 
 


ತಲೆಯಲ್ಲಿ ತುರಿಕೆ ಕಾಣಿಸಿಕೊಂಡರೆ ಅದರರ್ಥ ನಿಮ್ಮ ಜೀವನ ಶೈಲಿ ಬದಲಾಗಬೇಕು. ಇದರ ಜೊತೆಗೆ ಡಯಾಬಿಟೀಸ್, ಮೊದಲಾದ ಕಾರಣದಿಂದಲೂ ತುರಿಕೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಂಡು ಬಂದರೆ ಒಂದು ಸಲ ಶ್ಯಾಂಪೂ ಹಾಕಿ ತೊಳೆದರೆ ಕಡಿಮೆಯಾಗಬಹುದು. ಆದರೆ ಮತ್ತೆ ಸಮಸ್ಯೆ ಕಾಡುತ್ತದೆ. ಇಲ್ಲಿ ಒಂದಿಷ್ಟು ಮನೆ ಮದ್ದು ಇವೆ. ಅವುಗಳನ್ನು ಪಾಲಿಸಿದರೆ ತುರಿಕೆ ಕಡಿಮೆಯಾಗೋದು ಗ್ಯಾರಂಟಿ. 

ಬಾಚಣಿಕೆಯನ್ನು ಬೇರೆಯವರಿಗೆ ನೀಡಬೇಡಿ 

ನಿಯಮಿತವಾಗಿ ತಲೆಗೆ ಸ್ನಾನ ಮಾಡಿ. ಬಾಚುವಾಗ ಮಾತ್ರ ನಿಮ್ಮದೇ ಬಾಚಣಿಕೆಯಲ್ಲಿ ಬಾಚಿ. ಬೇರೆಯವರದ್ದನ್ನು ನೀವೂ ಬಳಸಬೇಡಿ, ನಿಮ್ಮದನ್ನು ಇನ್ನೊಬ್ಬರಿಗೂ ಕೊಡಬೇಡಿ. 

Tap to resize

Latest Videos

ಕಾಂತಿಯುತ ಕೂದಲ ಮಂತ್ರ ಕಿಚನ್‌ನಲ್ಲಿದೆ!

ಯೋಗ ಮಾಡಿ

ಯೋಗ ಮಾಡಿದರೆ ಮನಸ್ಸು ಮತ್ತು ದೇಹ ನಿರಾಳವಾಗುತ್ತದೆ. ಇದರಿಂದ ನೆತ್ತಿಯ ತುರಿಕೆ ಮಾಯವಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ. 

ಈ ಆಹಾರಕ್ಕೆ ನೋ ಹೇಳಿ

ಸೇವಿಸೋ ಆಹಾರ ಅರೋಗ್ಯ ಮತ್ತು ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ನೆತ್ತಿ ತುರಿಕೆ ಹೆಚ್ಚಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಸಂಗ್ರಹಿಸಿಟ್ಟ ಆಹಾರ, ಸಕ್ಕರೆ ಅಂಶ, ಆಲ್ಕೋಹಾಲ್ ಕಡಿಮೆ ಮಾಡಿ. ಇದರಿಂದ ತುರಿಕೆ ಕಡಿಮೆಯಾಗುತ್ತದೆ. 

ಕೂದಲ ರಕ್ಷಣೆಗೇನು ಮಾಡಬೇಕು?

ಟೀ ಟ್ರೀ ಆಯಿಲ್ 

ಟೀ ಟ್ರೀ ಆಯಿಲ್‌ನಲ್ಲಿರುವ ಆ್ಯಂಟಿ ಮೈಕ್ರೋಬಯಾಲ್ ಅಂಶಗಳು ಬ್ಯಾಕ್ಟಿರಿಯಾ, ವೈರಸನ್ನು ನಿವಾರಿಸುತ್ತದೆ. ಇದರಿಂದ ತುರಿಕೆ ನಿವಾರಣೆಯಾಗಿ ಕೂದಲು ಸಧೃಢವಾಗಿ ಬೆಳೆಯುತ್ತದೆ. 

click me!