ಪ್ರತಿ ದಿನ ಗಾಸಿಪ್ ಮಾಡಲೆಂದೇ 52 ನಿಮಿಷ ಮೀಸಲಿಡುತ್ತೇವಂತೆ! ವಯಸ್ಸಾದವರಿಗಿಂತ ಯುವಕರೇ ಹೆಚ್ಚಾಗಿ ಗಾಸಿಪ್‌ಗಳಲ್ಲಿ ಮುಳುಗಿರುತ್ತಾರೆ |
ಒಂದಷ್ಟುಜನರು ಒಟ್ಟಿಗೇ ಸೇರಿದ್ದಾರೆ, ಏನೋ ಗುಸುಗುಸು ಮಾತನಾಡುತ್ತಿದ್ದಾರೆ ಎಂದರೆ ಅಲ್ಲಿ ಗಾಸಿಪ್ ನಡೀತಿದೆ ಎಂದು ಭಾವಿಸುವುದು ಮಾಮೂಲಿ. ಆದರೆ ಜನರು ದಿನದಲ್ಲಿ ಸರಾಸರಿ 52 ನಿಮಿಷ ಇನ್ನೊಬ್ಬರ ಬಗ್ಗೆ ಗುಸುಗುಸು ಮಾತನಾಡಿಯೇ ಅಥವಾ ಗಾಸಿಪ್ ಮಾಡಿಯೇ ಕಾಲ ಹರಣ ಮಾಡುತ್ತಾರೆಂದು ಸಮೀಕ್ಷೆಯೊಂದು ಹೇಳಿದೆ.
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ-ರಿವರ್ ಸೈಡ್ ಕೈಗೊಂಡ ಸಮೀಕ್ಷೆಯಲ್ಲಿ ಈ ಅಚ್ಚರಿಯ ಫಲತಾಂಶ ವ್ಯಕ್ತವಾಗಿದೆ. ಮೊದಲಿಗೆ ಯಾರು ಹೆಚ್ಚು ಗಾಸಿಪ್ ಮಾಡುತ್ತಾರೆ, ಯಾವ ವಿಷಯದ ಬಗ್ಗೆ ಹೆಚ್ಚು ಗುಸುಗುಸು ಮಾತನಾಡಲಾಗುತ್ತದೆ ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು.
undefined
ಈ ಸಮೀಕ್ಷೆ ಫಲಿತಾಂಶದಲ್ಲಿ ಅಚ್ಚರಿಯ ಅಂಶಗಳು ಹೊರಬಂದಿದ್ದು, ವಯಸ್ಸಾದವರಿಗಿಂತ ಯುವಕರೇ ಹೆಚ್ಚಾಗಿ ಗಾಸಿಪ್‌ಗಳಲ್ಲಿ ಮುಳುಗಿರುತ್ತಾರೆ ಎಂದು ತಿಳಿದುಬಂದಿದೆ. ಮತ್ತು ಕಡಿಮೆ ಆದಾಯ ಇರುವವರಿಗಿಂತ ಹೆಚ್ಚು ಆದಾಯ ಇರುವವರು, ಶ್ರೀಮಂತರು ಜಾಸ್ತಿ ಗಾಸಿಪ್ ಮಾಡುತ್ತಾರೆಂಬ ಅಂಶ ಬಯಲಾಗಿದೆ. ಅದರಲ್ಲೂ ಅಂತರ್ಮುಖಿಗಳಿಗಿಂತ ಬಹಿರ್ಮುಖಿಗಳು ಅಂದರೆ ವಾಚಾಳಿ ಗುಣವಿರುವವರು ಹೆಚ್ಚು ಬೇರೊಬ್ಬರ ಬಗ್ಗೆಯೇ ಮಾತನಾಡಿ ಸಮಯ ವ್ಯರ್ಥ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಸಮೀಕ್ಷೆಗೆ 18ರಿಂದ 58 ವಯಸ್ಸಿನೊಳಗಿನ 467 ಜನರನ್ನು (269 ಮಹಿಳೆಯರು ಮತ್ತು 198 ಪುರುಷರು) ಒಳಪಡಿಸಲಾಗಿತ್ತು. ಸ್ವಯಂ ಪ್ರೇರಿತರಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೆ ಪೋರ್ಟಬಲ್ ಲಿಸನಿಂಗ್ ಡಿವೈಸ್ ಅನ್ನು ಅಳವಡಿಸಲಾಗಿತ್ತು.