ತಾಲೂಕಿನ ಕೆರೆಹಾಡಿಯಲ್ಲಿನ ಕುಂದುಕೊರತೆಗಳನ್ನು ಚರ್ಚಿಸಲು ವಿಶೇಷ ಗ್ರಾಮಸಭೆ ನಡೆಯಿತು.
ಎಚ್.ಡಿ. ಕೋಟೆ (ಡಿ. 10): ತಾಲೂಕಿನ ಕೆರೆಹಾಡಿಯಲ್ಲಿನ ಕುಂದುಕೊರತೆಗಳನ್ನು ಚರ್ಚಿಸಲು ವಿಶೇಷ ಗ್ರಾಮಸಭೆ ನಡೆಯಿತು.
ಸಭೆಯಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸುತ್ತಾ, ಕೆರೆಹಾಡಿಯ (Forest) ಹಕ್ಕು ಸಮಿತಿ ಸದಸ್ಯರಾದ ರವಿ ಮಾತನಾಡಿ, ನಮ್ಮ ಹಾಡಿಗೆ ಕುಡಿಯುವ (Water ), ರಸ್ತೆ ದುರಸ್ತಿ, ಶೌಚಾಲಯ, ವಿದ್ಯುತ್, ವಾಸಿಸಲು ಮನೆ ಇಲ್ಲದಿರುವುದು, ಅರಣ್ಯ ಹಕ್ಕು-2006 ಬಂದು 16 ವರ್ಷ ಕಳೆದರೂ ಇನ್ನೂ ನಮಗೆ ಹಕ್ಕುಗಳು ಸಿಗದಿರುವುದು, ಕಾಡಿನೊಳಗೆ ನಮ್ಮ ಜಮ್ಮಾ ದೇವರನ್ನು ಪೂಜಿಸಲು ಅನುಮತಿ ನೀಡದಿರುವುದು, ಅಂಗನವಾಡಿ ಕೇಂದ್ರ ಇಲ್ಲ ಎಂದು ಕೆರೆಹಾಡಿಯ ಕುಂದು ಕೊರತೆಗಳ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು.
undefined
ತಾಲೂಕು ಜಲಜೀವನ್ ಮಿಷನ್ ಸಂಯೋಜಕ ಗೋಪಾಲಸ್ವಾಮಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, 2024ರ ಒಳಗೆ ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಶೇ. 90 ಬರಿಸಲಿದ್ದು, ಇನ್ನುಳಿದ ಶೇ. 10 ವೆಚ್ಚವನ್ನು ನೀರನ್ನು ಬಳಸುವ ಗ್ರಾಹಕರು ಬರಿಸಬೇಕಾಗುತ್ತದೆ. ಅದರಲ್ಲೂ ನಮ್ಮ ಉದ್ದೇಶವೇನೆಂದರೆ ಎಚ್.ಡಿ. ಕೋಟೆ ತಾಲೂಕಿನಲ್ಲಿರುವ 120 ಹಾಡಿಗಳಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು. ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಗ್ರಾಪಂ ಪಿಡಿಒ ಸ್ವಾಮಿ ಮಾತನಾಡಿ, ನಮ್ಮ ಗ್ರಾಪಂನಿಂದ ಕೊಟ್ಟಿಗೆ, ಶೌಚಾಲಯ, ಜಾಬ್ ಕಾರ್ಡ್, ಮನೆಗಳು, ವಿದ್ಯುತ್ ಮತ್ತು ರಸ್ತೆಗಳನ್ನು ನಿರ್ಮಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಶೀಘ್ರದಲ್ಲೆ ಅನುಷ್ಠಾನಗೊಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಪ. ವರ್ಗಗಳ ಇಲಾಖೆಯ ಕಾಲ್ಯಾಣಾಧಿಕಾರಿ ನಾರಾಯಣ ಸ್ವಾಮಿ ಮಾತನಾಡಿ, ಕೆರೆಹಾಡಿಗೆ ಸಿಸಿಡಿ ಯೋಜನೆಯಡಿ 16 ಮನೆಗಳು ಮಂಜೂರಾಗಿದ್ದು, ಶೀಘ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಮನೆ ನಿರ್ಮಾಣ ಮಾಡಿಕೊಡುತ್ತೇವೆಂದು ತಿಳಿಸಿದರು. ಎ ಫಾರಂ ಮತ್ತು ಸಿ ಫಾರಂಗಳನ್ನು ಆದಷ್ಟುಬೇಗ ಎ.ಸಿ. ಕಮಿಟಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಹಾಡಿಯ ಯಜಮಾನ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿಸರ್ಗ ಸಂಸ್ಥೆಯ ಸಂಯೋಜಕರಾದ ದಿವ್ಯ, ಗುರುದೇವಾರಾಧ್ಯ, ಮಹದೇವು, ಪೀಪಲ್ ಟ್ರೀ ಸಂಸ್ಥೆಯ ಜವರೇಗೌಡ, ರುದ್ರಪ್ಪ, ಆನೆಮಾಳ ಹಾಡಿಯ ರಾಮು, ಚೆಲುವಯ್ಯ, ಬಳ್ಳೆಹಾಡಿಯ ಮಾಸ್ತಿ, ಮಾಳದ ಹಾಡಿಯ ಯಜಮಾನರು, ಅರಣ್ಯ ಹಕ್ಕು ಸಮಿತಿಯ ಸದಸ್ಯರು, ಕೆರೆಹಾಡಿಯ ಗ್ರಾಮಸ್ಥರು ಭಾಗವಹಿಸಿದ್ದರು.
-- ಆನ್‌ಲೈನ್ ಅನುಮತಿ ಪಡೆಯಬಹುದು-
ಕಾಕನಕೋಟೆ ವನ್ಯಜೀವಿ ಸಂರಕ್ಷಣ ಅಧಿಕಾರಿ ಕೆ.ಎಲ್. ಮಧು ಮಾತನಾಡಿ, ಅರಣ್ಯದೊಳಗೆ ಆದಿವಾಸಿಗಳು ಎಷ್ಟುಕ್ಲಿಷ್ಟಪರಿಸ್ಥಿತಿಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬುದು ನಮಗೆ ಮನವರಿಕೆಯಾಗಿದೆ. ನೀವುಗಳು ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಆಯಾ ಇಲಾಖೆಯಿಂದ ಆನ್‌ಲೈನ್ ಮೂಲಕ ಅನುಮತಿ ಪಡೆದು ಮಂಜೂರು ಮಾಡಿಸಿಕೊಳ್ಳಬಹುದು. ಇದರಲ್ಲಿ ನಮ್ಮ ಅಭ್ಯಂತರವೇನು ಇಲ್ಲ ಎಂದು ತಿಳಿಸಿ ಕಾಡಿನೊಳಗೆ ಸೌದೆ, ಸೊಪ್ಪು, ಕಿರು ಅರಣ್ಯ ಉತ್ಪನ್ನಗಳು, ದೇವರು ಹಾಗೂ ನಿಮ್ಮ ಸ್ಮಶಾನಕ್ಕೆ ಹೋಗಿ ಪೂಜೆ ಮಾಡಲು ನಮ್ಮ ತಕರಾರು ಇಲ್ಲವೆಂದು ತಿಳಿಸಿದರು.
ಕರ್ನಾಟಕದ ನೀರು
ಅಥಣಿ(ಡಿ.03): ಮಹಾರಾಷ್ಟ್ರ ಸರ್ಕಾರ ನೀರು ನೀಡದೆ ಕಡೆಗಣಿಸಿದೆ. ನಮ್ಮನ್ನು ಕರ್ನಾಟಕ್ಕೆ ಸೇರಿಸಿಕೊಳ್ಳಿ ಎಂದಿದ್ದ ಮಹಾರಾಷ್ಟ್ರದ ಜತ್ ತಾಲೂಕಿನ ಜನರಿಗೆ ಇದೀಗ ಕರ್ನಾಟಕ ನೀರು ನೀಡಿದೆ. ಮಾನವೀಯ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೃಷ್ಣಾ ನದಿಯ ತುಬಚಿ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಜತ್ ತಾಲೂಕಿನ 28 ಗ್ರಾಮಗಳಿಗೆ ನೀರು ಹರಿಸಿದೆ.
ಪ್ರಸ್ತುತ ಈ ನೀರು ಈಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನೊಂದಿಗೆ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರದ ಸಂಖ ಗ್ರಾಮವನ್ನು ದಾಟಿ ಮುಂದೆ ಹೋಗುತ್ತಿದೆ. ಜತ್ ತಾಲೂಕಿನ ಹಲವಾರು ಗ್ರಾಮಗಳಲ್ಲಿರುವ ಕೆರೆಗಳಿಗೆ ಈ ನೀರು ಹೋಗಲಿದೆ. ಈ ಮೂಲಕ ಅಲ್ಲಿನ ಜನರಿಗೆ, ದನಕರುಗಳಿಗೆ ಕುಡಿಯಲು ಅನುಕೂಲವಾಗಲಿದೆ.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ
ಜತ್ತ ತಾಲೂಕಿನ ಸಂಕ ಮತ್ತು ತಿಕ್ಕುಂಡಿ ಗ್ರಾಮಕ್ಕೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಕಳೆದ ಎರಡು ದಿನಗಳಿಂದ ನೀರು ಬಿಟ್ಟಿರುವುದು ಜತ್ ತಾಲೂಕಿನಲ್ಲಿರುವ ಜನರಿಗೆ ಬಹಳಷ್ಟು ಅನುಕೂಲವಾಗಿದೆ.
ಸಿಂಧೂರ ಗ್ರಾಮ ಕೂಡ ಕರ್ನಾಟಕಕ್ಕೆ:
ಇನ್ನು ಜತ್ತ ತಾಲೂಕಿನ ಸಿಂಧೂರು ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೂ ಒಂದೇ ಕನ್ನಡ ಶಾಲೆ ಇದೆ. ಅಲ್ಲಿಯ ಮಕ್ಕಳು ಕರ್ನಾಟಕದ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ಕಲಿಯಲು ಹೋಗುತ್ತಿದ್ದಾರೆ. ಹಾಗಾಗಿ ಅತೀ ಶೀಘ್ರದಲ್ಲಿ ಕರ್ನಾಟಕ ಸೇರುವ ಬಗ್ಗೆ ಗ್ರಾಪಂನಲ್ಲಿ ಠರಾವು ಬರೆಯಲಾಗುವುದು ಎಂದು ಸಿಂಧೂರು ಜನರು ತಿಳಿಸಿದ್ದಾರೆ.