Raichuru; ಗ್ರಾಮ ಪಂಚಾಯತ್‌ಗೆ ಬರದ ಪಿಡಿಒ ವಿರುದ್ಧ ಸದಸ್ಯರ ಪ್ರತಿಭಟನೆ

By Suvarna News  |  First Published Jul 1, 2022, 11:47 AM IST
  • ಗ್ರಾ.ಪಂ.ಗಳಿಗೆ ನಿತ್ಯ ಬರಲು ಪಿಡಿಒಗಳು ಹಿಂದೇಟು!
  • ಪಿಡಿಒಗಳ ನಡೆ ಖಂಡಿಸಿ ಪ್ರತಿಭಟನೆ ಇಳಿದ ಗ್ರಾ.ಪಂ.ನ ಸದಸ್ಯರು
  • ರಾಯಚೂರು ಜಿಲ್ಲೆ ಸಿಂಧನೂರಿನ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ
  • ತಾಲೂಕಿನ 30 ಗ್ರಾ.ಪಂ‌.ನ 625 ಸದಸ್ಯರಿಂದ ಪ್ರತಿಭಟನೆ
  • ಪಿಡಿಒ ಮತ್ತು ಇಒ ನಡೆ ಖಂಡಿಸಿ ಹೋರಾಟಕ್ಕೆ ಇಳಿದ ಗ್ರಾಮ ಪಂಚಾಯತ್ ಗಳ ಸದಸ್ಯರು

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜು.1): ಸಿಂಧನೂರು ತಾಲೂಕಿನಲ್ಲಿ 30 ಗ್ರಾಮ ಪಂಚಾಯತ್ ಗಳು ಇವೆ. 30 ಗ್ರಾಮಗಳಲ್ಲಿ 626 ಗ್ರಾಮ ಪಂಚಾಯತ್ ಸದಸ್ಯರು ಇದ್ದಾರೆ. ಕಳೆದ ಒಂದು ವರ್ಷಗಳಿಂದ ಸಿಂಧನೂರು ತಾಲೂಕಿನಲ್ಲಿ ಪಿಡಿಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಿಂಧನೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ಗ್ರಾಮ ಪಂಚಾಯತಿ ಸದಸ್ಯರುಗಳೊಂದಿಗೆ ನಿರ್ಲಕ್ಷತನ ಮತ್ತು ಅಸಡ್ಡೆ ತನದಿಂದ ನಡೆದುಕೊಳ್ಳುತ್ತಾ ತಮ್ಮಗಳ ದುರ್ನಡತೆಯನ್ನು ತೋರುತ್ತಿದ್ದು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಕೊಡದೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಕೊಡದೆ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.

Latest Videos

undefined

ಗ್ರಾಮ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟ ನೀಡಿದಾಗ ಪಿಡಿಒಗಳು ಪಂಚಾಯತ್ ಕಾರ್ಯಾಲಯದಲ್ಲಿ ಲಭ್ಯವಿಲ್ಲದಿರುವುದು ಕಂಡು ಬರುತ್ತದೆ ಕೆಲವೊಂದು ಬಾರಿ ಸಿಬ್ಬಂದಿ ಕೂಡಾ ಸಿಗದೆ ಇದು ಸದಸ್ಯರಿಗೆ ತುಂಬಾ ಬೇಸರ ಮತ್ತು ನೊವಿನ ಸಂಗತಿಯಾಗಿದೆ. 

Konkani Sign Board Controversy; ಕೊಂಕಣಿ ಬೋರ್ಡ್ ವಿವಾದ ಹುಟ್ಟು ಹಾಕಿದ ಕಾರವಾರ

ಪಿಡಿಒಗಳು ತಿಂಗಳಲ್ಲಿ 4-5 ದಿನಗಳು ಮಾತ್ರ ಪಂಚಾಯತ್  ಹಾಜರ್: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗಬೇಕು ಎಂಬ ಮಹಾದಾಸೆಯಿಂದ  ಸರ್ಕಾರ ಕೋಟಿ ಕೋಟಿ ಹಣವನ್ನು ಗ್ರಾ.ಪಂ.ಗಳಿಗೆ ನೀಡುತ್ತಿದೆ. ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕಾಗಿ ಪಂಚಾಯತ್ ‌ಅಭಿವೃದ್ಧಿ  ‌ನೇಮಕ ಮಾಡಲಾಗಿದೆ. ನೇಮಕಗೊಂಡ ಪಿಡಿಒಗಳು ನಿತ್ಯ ಗ್ರಾಮ ಪಂಚಾಯತ್ ಗೆ ಬರಬೇಕು. ಪಂಚಾಯತ್ ಮಟ್ಟದಲ್ಲಿನ‌ ಸದಸ್ಯರೊಂದಿಗೆ ಸೇರಿ ಅಭಿವೃದ್ಧಿ ಕೆಲಸಗಳು ‌ಮಾಡಬೇಕು. ಆದ್ರೆ ಸಿಂಧನೂರು ‌ತಾಲೂಕಿನ ಬಹುತೇಕ ‌ಗ್ರಾಮ ಪಂಚಾಯತ್ ‌ಗಳಲ್ಲಿ ಪಿಡಿಒಗಳು ಒಂದು ತಿಂಗಳಲ್ಲಿ 4-5 ದಿನ ಮಾತ್ರ ಕೆಲಸಕ್ಕೆ ಬರುತ್ತಿದ್ದು, ಪಂಚಾಯತ್ ಗೆ ಬಂದ ಪಿಡಿಒಗಳು ‌ಗ್ರಾಮ ಪಂಚಾಯತ್ ‌ನಲ್ಲಿ ಒಂದು ಅಥವಾ ಎರಡು ಗಂಟೆಗಳ ಅವಧಿ ಮಾತ್ರ ಇದ್ದು ಮತ್ತೆ ಹೋಗುತ್ತಿದ್ದಾರೆ.

 ಇದರಿಂದಾಗಿ ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ನೀಗಿಸಲು ಮತ್ತು ಸಾರ್ವಜನಿಕರ ಕೆಲಸಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಪಿಡಿಒಗಳು ಕೈಗೆ ಸಿಗದೇ ಹೋಗುತ್ತಿರುವ ಬಗ್ಗೆ  ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಹತ್ತಿರ ತೋಡಿಕೊಳ್ಳುತ್ತಿದ್ದಾರೆ. ಪಿಡಿಒಗಳ ನಡೆ ವಿರುದ್ಧ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ರು. ಉಪಯೋಗವಾಗುತ್ತಿಲ್ಲವೆಂದು ಗ್ರಾಮ ಪಂಚಾಯತ್ ಸದಸ್ಯರು ‌ಆರೋಪಿಸಿದರು‌.

 ಸರ್ಕಾರದ ‌ಯೋಜನೆಗಳು ಗ್ರಾಮ ಪಂಚಾಯತ್ ಸದಸ್ಯರಿಗೆ ಪಿಡಿಒಗಳು ತಿಳಿಸುವುದೇ ಇಲ್ಲ: ಗ್ರಾಮ ಮಟ್ಟದಲ್ಲಿ ಆಯ್ಕೆಗೊಂಡ ಗ್ರಾಮ ಪಂಚಾಯತ್ ಸದಸ್ಯರಿಗೆ ಪಿಡಿಒಗಳು ಸರ್ಕಾರದ ಯೋಜನೆಗಳು ತಿಳಿಸಬೇಕು. ‌ಆದ್ರೆ ತಿಂಗಳಲ್ಲಿ 4-5 ದಿನಗಳ ಕಾಲ ಪಂಚಾಯತ್ ಗೆ ಬರುವ ಪಿಡಿಒ ಗ್ರಾಮ ಪಂಚಾಯತಿಯಲ್ಲಿ ಕಾಲ ಕಾಲಕ್ಕೆ ಬರುವ 15ನೇ ಹಣಕಾಸು ಯೋಜನೆ, ನರೇಗಾ ಯೋಜನೆ, ಕರವಸೂಲ ಆದಾಯ, ನೀರು ಮತ್ತು ನೈರ್ಮಲ್ಯಯೋಜನೆ, ಅಂಗವಿಕಲ ಅನುದಾನ, ಜೆ.ಜೆ.ಎಂ ಯೋಜನೆ, ಎಸ್.ಎಲ್.ಎಮ್.ಡಬ್ಲ್ಯೂ, ವಾಹನ ಅನುದಾನ, ಶಾಸನ ಬದ್ಧ ಅನುದಾನ, ಸದಸ್ಯರ ಗೌರವಧನ, ಸ್ವಚ್ಛ ಭಾರತ ಅನುದಾನ ಹಾಗೂ ಇಂತಹ ಸರ್ಕಾರದ ಆದೇಶ ಮತ್ತು ಸುತ್ತೋಲೆಯ ಮಿಷಿನ್ ಪ್ರಕಾರ ಇನ್ನೂ ಹಲವಾರು ಅನುದಾನಗಳು ಗ್ರಾಮ ಪಂಚಾಯತಿಗೆ ಬರುತ್ತಿದ್ದು, ಇವುಗಳ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಹಿತಿ ನೀಡದೆ ಮತ್ತು ಗ್ರಾಮ ಪಂಚಾಯತಿಯಲ್ಲಿ ಕಡ್ಡಾಯವಾಗಿ ಕಡತಗಳ ಪಟ್ಟ 34 ನಮೂನೆಯ ರಜಿಸ್ಟರ್ ಕ್ಯಾಷ್ ಪುಸ್ತಕ, ಓಚರ್ ಗಳನ್ನು ಸರಿಯಾದ ರೀತಿಯಲ್ಲಿ ನಮಗೆ ಮಾಹಿತಿ ಕೊಡದೆ ಮತ್ತು ನಾವುಗಳು ಕೇಳಿದರೆ ಹಾಲಿಕೆ ಉತ್ತರ ಕೊಟ್ಟು ಪಿಡಿಒಗಳು ಹೋಗುತ್ತಿದ್ದಾರೆ.

4ದಿನಕ್ಕೆ ಕೆಲಸ ಕಡಿತ ಸೇರಿದಂತೆ ಜುಲೈ 1 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆ

ನಮಗೆ ಮಾಹಿತಿ ‌ಇಲ್ಲದೆ ಇರುವುದರಿಂದ ಜನರು ಮನೆಗಳಿಗೆ ‌ಬಂದು ನಮಗೆ ಚಿಮ್ಮಾರಿ ಹಾಕಿ ಹೋಗುತ್ತಿದ್ದಾರೆ. ಈ ಬಗ್ಗೆ ಇಒ ಮತ್ತು ಸಿಇಒಗೆ ದೂರು ನೀಡಿದ್ರು. ಅಧಿಕಾರಿಗಳು ಪಿಡಿಒ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲವೆಂದು ಗ್ರಾಮ ಪಂಚಾಯತ್ ನ ಸದಸ್ಯರು ಆರೋಪಿಸಿದರು.

ನಾವು ಗ್ರಾಮ ಪಂಚಾಯತ್ ಸದಸ್ಯರು ಆಗಿದೇ ತಪ್ಪಾಗಿದೆ: ಜನರು ಮತ ನೀಡಿ ನಮಗೆ ಗ್ರಾಮ ಪಂಚಾಯತ್ ಸದಸ್ಯರು ಮಾಡಿದ್ದಾರೆ. ಗ್ರಾಮದಲ್ಲಿ ಚರಂಡಿ ತುಂಬಿ ಹೋಗಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ರಸ್ತೆಯಲ್ಲಿ ‌ಚರಂಡಿ ನೀರು ಹರಿಯುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಗೆ ಹೋಗಿ ಹೇಳಿ ಕೆಲಸ ಮಾಡಿಸಬೇಕು ಅಂದ್ರೆ ಪಂಚಾಯತ್ ನಲ್ಲಿ ಪಿಡಿಒಗಳೇ ಸಿಗುವುದಿಲ್ಲ. ಪಂಚಾಯತ್ ಸಿಬ್ಬಂದಿಗೆ ಹೇಳಿದ್ರೆ ಪಿಡಿಒಗೆ ಹೇಳಿ ಎಂದು ಹೇಳುತ್ತಾರೆ. ಜನರು ಮನೆಗೆ ಬಂದು ಬೈದು ಹೋಗುತ್ತಾರೆ. ನೀನು ಮೇಬರ್ ಆಗಿ ಉಪಯೋಗ ಇಲ್ಲ. ಕೆಲಸ ಮಾಡಲು ಆಗಲ್ಲ ಅಂದ್ರೆ ಮೇಬರ್ ಯಾಕೆ ಆಗಿದೀಯಾ? ಅಂತ ಮನಬಂದಂತೆ ಬೈಯಲು ಶುರು ಮಾಡುತ್ತಿದ್ದಾರೆ. ಆಗ ನಾವು ಮೇಬರ್ ಆಗಿದ್ದು ಏಕೆ ಅನ್ನಿಸುತ್ತಿದೆ ಎಂದು ಸದಸ್ಯರು ಪ್ರತಿಭಟನೆಯಲ್ಲಿ ತಮ್ಮ ನೋವು ಹೇಳಿಕೊಂಡರು.

 ಮಾಸಿಕ ಸಭೆಯಲ್ಲಿ ಮಾಹಿತಿ ನೀಡಲು ಮುಂದಾಗದ್ದ ಪಿಡಿಒಗಳು: ಕೇವಲ ಒಂದು ಪಂಚಾಯತ್ ನ ಕಥೆಯಲ್ಲ ಇದು‌‌. ರಾಯಚೂರು ಜಿಲ್ಲೆಯ ಬಹುತೇಕ ‌ಗ್ರಾಮ ಪಂಚಾಯತ್ ಗಳಲ್ಲಿ ಪಿಡಿಒಗಳು ಪಂಚಾಯತ್ ಗೆ ಹೋಗುವುದೇ ಇಲ್ಲ. ‌ಪಂಚಾಯತ್ ಗಳಿಗೆ ಹೋದರೂ ಪಿಡಿಒಗಳು ಗ್ರಾಮ ಪಂಚಾಯತಿಯಲ್ಲಿ ನಡೆಯುವ ಲೆಕ್ಕ ಪತ್ರ, ಅನುದಾನ ಬಂದದ್ದು ಖರ್ಚಾಗಿದ್ದು ಮತ್ತು ಕಾಮಗಾರಿಯ ಹಂತ, ಓಚರುಗಳು ಫಲಾನುಭವಿಗಳಿಗೆ ಹಂಚಿಕೆ ಮಾಡಿದ ವಿವರಗಳನ್ನು ಗ್ರಾಮ ಪಂಚಾಯತ್ ಸದಸ್ಯರಿಗೆ ತಿಳಿಸಬೇಕು. ಆದ್ರೆ ಪಿಡಿಒಗಳು ತಿಂಗಳು ಮಾಸಿಕ ಸಭೆಯಲ್ಲಿಯೂ ಅಧ್ಯಕ್ಷರು ಕೇಳಿದ ಮಾಹಿತಿಯನ್ನು ನೀಡದೇ ನಾನಾ ನೆಪಗಳು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ‌ಕೆಲಸಗಳು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಗಳೇನು? 

  • ಪಿಡಿಒಗಳು ನಿತ್ಯ ಗ್ರಾಮ ಪಂಚಾಯತ್ ಗೆ ಬರಬೇಕು.
  • ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನ ಗ್ರಾಮಗಳಿಗೆ ಪಿಡಿಒಗಳು ಓಡಾಟ ಮಾಡಬೇಕು.
  • ನರೇಗಾ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಸರ್ಕಾರದ ಲೇಬರ್ ಬಜೆಟ್ ಪ್ರಕಾರ ಕಾಲ- ಕಾಲಕ್ಕೆ ಅನುಮೋದನೆ ಕೊಡಬೇಕು.
  • 15ನೇ ಹಣಕಾಸಿನ ಕ್ರಿಯಾ ಯೋಜನೆಯಲ್ಲಿ ಸರ್ಕಾರದ ಸುತ್ತೋಲೆಯ ಪ್ರಕಾರ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು.
  • ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ಗ್ರಾಮ ಪಂಚಾಯತ್ ಗಳ ಕ್ರಿಯಾ ಯೋಜನೆ ಬದಲು ಮಾಡಲು ಸರ್ಕಾರದ ಆದೇಶ ತೋರಿಸಿ ಬದಲಾವಣೆ ಮಾಡಬೇಕು.
  • 15ನೇ ಹಣಕಾಸಿನಲ್ಲಿ ಬಳಕೆಯಾದ ಹಣವನ್ನು ಇ -ಗ್ರಾಮ್ ಸ್ವರಾಜನ ತಂತ್ರಾಂಶದಲ್ಲಿ ಪೇಮೆಂಟ್ ಓಚರುಗಳಲ್ಲಿ ಕೊಷನ್ ಮಾರ್ಕ್ ಹಾಕುತ್ತಿದ್ದು, ಇದರ ಸ್ಪಷ್ಟ ಮಾಹಿತಿ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ನಮೂದಿಸಬೇಕು. 
  • 9 ಮತ್ತು 11 ನಮೂನೆಯನ್ನು (ಇ-ಸ್ವತ್ತು) ನೀಡುವುದರಲ್ಲಿ ಸಾರ್ವಜನಿಕರಿಗೆ ವರ್ಷಗಟ್ಟಲೇ ಗ್ರಾ.ಪಂ.ಗಳಿಗೆ ಅಲೆದಾಡಿಸುತ್ತಿದ್ದು ಅಂತಹ ಪಿ.ಡಿ.ಓ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು‌.
  • ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಹಾಜರಾತಿಯಲ್ಲಿ ಬಯೋಮೆಟ್ರಿಕ್ ಬಳಸಲು ಆದೇಶ ಮಾಡಬೇಕು.
  • ಪ್ರತಿ ತಿಂಗಳು ಸಾಮಾನ್ಯ ಸಭೆಯಲ್ಲಿ ‌ಕಡ್ಡಾಯವಾಗಿ ಪಿಡಿಒಗಳು ಹಾಜರ್ ಇರಬೇಕು. ಸಭೆಯ ನಡುವಳಿಯನ್ನು ಪ್ರತಿ ಸದಸ್ಯರಿಗೆ ಕೊಡಬೇಕು.
  • ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ರಜೆಯ ಮೇಲೆ ಹೋಗುವ ಮುನ್ನ ಪಂಚಾಯತಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಸಿಂಧನೂರು ಇವರಿಗೆ ಮಾಹಿತಿ ನೀಡಿ ರಜೆ ಪತ್ರವನ್ನು ಸಲ್ಲಿಸಿ ಅನುಮತಿ ಪಡೆದು ಹೋಗಬೇಕು.

ಇತ್ತ ಗ್ರಾಮ ಪಂಚಾಯತ್ ನಲ್ಲಿ  ಹತ್ತಾರು ವಸತಿ ಯೋಜನೆ ಅಡಿಯಲ್ಲಿ ಜನತಾ ಮನೆ ಮಂಜೂರು ಆಗಿವೆ. 
ಪಿ.ಡಿ.ಓ ಗಳು ಮನೆ ಇಲ್ಲದವರಿಗೆ ಮನೆಗಳು ನೀಡಬೇಕು. ಆದ್ರೆ ರಾಜಕೀಯ ಒತ್ತಡಕ್ಕೆ ಅಥವಾ ಹಣದ ಆಮಿಷಕ್ಕೆ ಬಲಿಯಾಗಿ ಮನೆಗಳು ವಾಸಕ್ಕಾಗಿ ಇದ್ದಂತಹವರಿಗೆ ಮಂಜೂರು ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಗ್ರಾಮ ಪಂಚಾಯತ್ ಸದಸ್ಯರು  ಆಗ್ರಹಿಸಿದರು.

click me!