ಯಾವುದೇ ಸರ್ಕಾರ ಇದ್ದರೂ ಭ್ರಷ್ಟಾಚಾರ ಮಾಡಿದ್ದರೆ ತಪ್ಪು. ಭ್ರಷ್ಟಾಚಾರ ಆಗಿರುವ ವೇಳೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು ಎನ್ನುವುದನ್ನು ನಂತರ ನೋಡೋಣ. ಭ್ರಷ್ಟಾಚಾರ ಆಗುವಾಗ ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ಇರಲಿಲ್ಲವೇ? ಭ್ರಷ್ಟಾಚಾರ ಆಗಿರುವುದನ್ನು ಬೇರೆ ದೇಶದ ನ್ಯಾಯಾಲಯ ನಮಗೆ ಹೇಳಬೇಕಾ? ಎಂದ ಸಚಿವ ಸಂತೋಷ ಲಾಡ್
ಅಳ್ನಾವರ(ನ.23): ನಿಮ್ಮ ದೇಶದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಬೇರೆ ದೇಶದ ನ್ಯಾಯಾಲಯ ನಮಗೆ ಹೇಳಬೇಕೆ ಎಂದು ಸಚಿವ ಸಂತೋಷ ಲಾಡ್ ಗೌತಮ ಅದಾನಿ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಇದ್ದರೂ ಭ್ರಷ್ಟಾಚಾರ ಮಾಡಿದ್ದರೆ ತಪ್ಪು. ಭ್ರಷ್ಟಾಚಾರ ಆಗಿರುವ ವೇಳೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು ಎನ್ನುವುದನ್ನು ನಂತರ ನೋಡೋಣ. ಭ್ರಷ್ಟಾಚಾರ ಆಗುವಾಗ ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ಇರಲಿಲ್ಲವೇ? ಭ್ರಷ್ಟಾಚಾರ ಆಗಿರುವುದನ್ನು ಬೇರೆ ದೇಶದ ನ್ಯಾಯಾಲಯ ನಮಗೆ ಹೇಳಬೇಕಾ? ಎಂದರು.
ಸೌರ ವಿದ್ಯುತ್ ಗುತ್ತಿಗೆ ನೀಡುವಲ್ಲಿ ಕೇಂದ್ರದ ಸೌರವಿದ್ಯುತ್ ನಿಗಮದ ಒಳ ಒಪ್ಪಂದ ಇದೆ. ಈ ವಿಷ ಯದಲ್ಲಿ ರಾಜಕೀಯ ಹೇಳಿಕೆ ಬೇಡ. ಆದರೆ, ಬಿಜೆಪಿ ಯವರು ಈ ಬಗ್ಗೆ ಮಾತನಾಡಬೇಕಲ್ಲವೇ? ಎಲ್ಲ ಬಿಜೆಪಿ ವಕ್ತಾರರು ಅದಾನಿ ಪರವಾಗಿಯೇ ಮಾತನಾಡುತ್ತಾರೆ. ಬಿಜೆಪಿ ವಕ್ತಾರರಿಗೂ ಅದಾನಿಗೂ ಏನು ಸಂಬಂಧ? ಅದಾನಿಗೆ ಅಮೆರಿಕದ ನ್ಯಾಯಾಲಯ ವಾರೆಂಟ್ ನೀಡಿದೆ. ಬೇರೆ ದೇಶದ ನ್ಯಾಯಾಲಯ ಹೇಳಿದ್ದನ್ನು ಭಾರತ ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಎಂದರು.
ಬಿಜೆಪಿ ಕಾಲದಲ್ಲೂ ವಕ್ಫ್ ನೋಟಿಸ್ ನೀಡಲಾಗಿದೆ: ಸಚಿವ ಸಂತೋಷ್ ಲಾಡ್
ರಾಹುಲ್ ಗಾಂಧಿ ಹತ್ತು ವರ್ಷಗಳ ಹಿಂದೆಯೇ ಅದಾನಿ ಭ್ರಷ್ಟ ಉದ್ಯಮಿ ಎಂದಿದ್ದರು. ಅದು ಈಗ ಪ್ರಪಂಚಕ್ಕೆ ಸಾಬೀತಾಗಿದೆ. ಬಿಜೆಪಿ ಇನ್ನಾದರೂ ಪಾಠ ಕಲಿಯಬೇಕು. ಎಲ್ಲದಕ್ಕೂ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನು ಹೊಣೆ ಮಾಡಬಾರದು. ಈಗ ಅಲ್ಲಿರುವ ಟ್ರಂಪ್ ಸರ್ಕಾರ ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಚಿರಪರಿಚಿತ. ಮೋದಿಯವರು ಟ್ರಂಪ್ ಮೂ ಲಕ ಹೇಳಿಸಬಹುದಿತ್ತಲ್ಲವೇ? ಎಂದ ಲಾಡ್, ಕರ್ನಾಟಕದಲ್ಲಿ ಭ್ರಷ್ಟಾಚಾರ ಇದೆ ಎಂದು ಮೋದಿ ಹೇಳಿದ್ದರು. ಅದಾನಿ ಪ್ರಕರಣದಲ್ಲಿ ಅವರೇನು ಹೇಳುತ್ತಾರೆ. ಇದರ ಬಗ್ಗೆ ಚರ್ಚೆ ಮಾಡುತ್ತಾರಾ? ಸುಮ್ಮನೆ ಸಿನಿಮಾ ಓಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ಬಗ್ಗೆ ಕಿಡಿಕಾರಿದರು.
ವರದಿ ಕೇಳಿದ್ದಾರೆ:
ಎಲ್ಲ ಸಚಿವರ ಪ್ರಗತಿ ವರದಿ ಕೇಳಿದ್ದು ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಅಲ್ಲ ಎ ದು ಸ್ಪಷ್ಟಪಡಿಸಿರುವ ಲಾಡ್, ಸಚಿವರು ತಮ್ಮ ಇಲಾಖೆಗಳ ಅಭಿವೃದ್ಧಿಯಲ್ಲಿ ಏನೇನು ಮಾಡಿದ್ದಾರೆ ಎಂಬುದರ ವರದಿ ಕೇಳಲಾಗಿದೆ. ಸಂಪುಟ ವಿಸ್ತರಣೆ, ರಚನೆ ಹೈಕ ಮಾಂಡ್‌ಗೆ ಬಿಟ್ಟಿದ್ದು. ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಸಾಲಮನ್ನಾ: ಲಾಡ್-ರೈತ ಮುಖಂಡ ಜಟಾಪಟಿ
ಅಳ್ಳಾವರ: ರೈತರ ಸಾಲಮನ್ನಾ ವಿಚಾರದಲ್ಲಿ ಶುಕ್ರವಾರ ಇಲ್ಲಿಯ ಹುಲಿಕೇರಿಯ ಇಂದಿರಮ್ಮನ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ಸಚಿವ ಸಂತೋಷ ಲಾಡ್ ಅವ ರೊಂದಿಗೆ ರೈತ ಮುಖಂಡ ನೋರ್ವ ವಾಗ್ವಾದ ನಡೆಸಿರುವ ಪ್ರಸಂಗ ನಡೆಯಿತು.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಅಲ್ಲಿ ರೈತರ ಈ 2 ಲಕ್ಷ, ಮಹಾರಾಷ್ಟ್ರದಲ್ಲಿ ಕಾಂಗ್ರೆ ಸ್ ಸರ್ಕಾರವಿದ್ದಾಗ ಕ 3 ಲಕ್ಷವರೆಗೆ ಸಾಲಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರವಿದ್ದು ಸಾಲಮಾನ್ನಾ ಏತಕ್ಕೆ ಮಾಡುತ್ತಿಲ್ಲ ಎಂದು ರೈತ ಮುಖಂಡ ರವಿರಾಜ ಕಂಬಳಿ, ಲಾಡ್ ಅವರನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ತುಸು ತಾಳ್ಮೆ ಕಳೆದುಕೊಂಡಂತೆ ಕಂಡ ಲಾಡ್, ರೈತ ಮುಖಂಡನ ಜತೆಗೆ ಏರುಧ್ವನಿಯಲ್ಲಿ ತಿರುಗೇಟು ನೀಡಿ, ಇಲ್ಲಿ ಮಾಧ್ಯಮದವರು ಇದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ೯ 73 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಎಷ್ಟು ಸಾಲ ಮನ್ನಾ ಮಾಡಿದೆ ಹೇಳಿ? ಎಂದು ಪ್ರಶ್ನಿಸಿದರು.
ವಕ್ಫ್ ಅಷ್ಟೇ ಅಲ್ಲ, ಮುಜುರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ: ಸಂತೋಷ್ ಲಾಡ್
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಅವಧಿಯಲ್ಲಿ ಈ 8,165 ಕೋಟಿ ಸಾಲಮನ್ನಾ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಪ್ರತಿ ರೈತನ 50 ಸಾವಿರ ಸಾಲಮನ್ನಾ ಮಾಡಿದೆ ಎಂದರು. ಸರ್, ಇದೆಲ್ಲವು ಹಳೆ ಕಥೆ. ಈಗ ಬೇಡ ಎಂದು ರೈತ ಮುಖಂಡ ಕಂಬಳಿ ಹೇಳುವ ತಡವೇ, ಕೈ ಸರ್ಕಾರ ಮಾಡಿದ್ದನ್ನು ರೈತರು ಏತಕ್ಕೆ ಹೇಳುವುದಿಲ್ಲ. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಿರಿ. ರಾಜಕೀಯ ಮಾತನಾಡಬೇಡಿ. ಬಿಜೆಪಿ ಸರ್ಕಾರದ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಎಂದು ಹೇಳಿತ್ತು. ಆದರೆ, ಮಾಡಿಲ್ಲ ಅಂದರು.
ರೈತರು ಸಾಲಮನ್ನಾ ಮಾಡಿ ಎಂದು ಮನವಿ ಮಾಡಿದರೆ, ಒಪ್ಪೋಣ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವುದು ಬೇಡ. 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಕೇಂದ್ರದಲ್ಲಿ 11 ವರ್ಷದಿಂದ ಆಡಳಿತ ದಲ್ಲಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡಿದೆ ಹೇಳಿ? ಎಂದು ಪ್ರಶ್ನಿಸಿದರು.