ಮಹಾರಾಷ್ಟ್ರ ಎಲೆಕ್ಷನ್‌ ರಿಸಲ್ಟ್‌: ಗೆಲುವಿ‌ನ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ತಪ್ಪಿದ‌ ಭಾರೀ ದುರಂತ!

By Girish Goudar  |  First Published Nov 23, 2024, 11:06 PM IST

ಬೆಂಕಿ ಹೊತ್ತಿಕೊಂಡ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್‌‌ನಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಚಂದಘಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 


ಬೆಳಗಾವಿ(ನ.23):  ಗೆಲುವಿ‌ನ ಸಂಭ್ರಮಾಚರಣೆ ವೇಳೆ ಏಕಾಏಕಿ ಬೆಂಕಿ ಹೊತ್ತಿದ ಘಟನೆ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಘಡ ತಾಲೂಕಿನ ‌ಮಹಾಗಾಂವ್ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಮಹಾರಾಷ್ಟ್ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಕೊಲ್ಲಾಪುರ ಜಿಲ್ಲೆಯ ಚಂದಘಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಗೆದ್ದು ಬೀಗಿದ್ದಾರೆ. ಬಿಜೆಪಿ ಟಿಕೆಟ್ ಮಿಸ್ ಆಗಿದಕ್ಕೆ ಶಿವರಾಜ್ ಪಾಟೀಲ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿ ಆಗಿದ್ದರೂ ಗೆದ್ದು ಬೀಗಿದಕ್ಕೆ ಶಿವರಾಜ್ ಪಾಟೀಲ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. 

Latest Videos

undefined

Rajajinagar Fire: ಬರ್ತ್‌ಡೇಗೆ ಮುನ್ನ ಮಸಣದ ದಾರಿ ಹಿಡಿದ ಪ್ರಿಯಾ!

ಕೊಲ್ಲಾಪುರ ಜಿಲ್ಲೆಯ ಚಂದಘಡ ತಾಲೂಕಿನ ‌ಮಹಾಗಾಂವ್ ಗ್ರಾಮದಲ್ಲಿ ಇಂದು ವಿಜಯೋತ್ಸವ ಆಚರಿಸಿದ್ದಾರೆ. ನೂತನ ಶಾಸಕ ಶಿವರಾಜ್ ಮೇಲೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜೆಸಿಬಿಯಿಂದ ಗುಲಾಲ್ ಸುರಿದು ಸಂಭ್ರಮಪಟ್ಟಿದ್ದಾರೆ. 

ಇದಕ್ಕೂ ಮುನ್ನ ಶಿವರಾಜ್ ಪಾಟೀಲಗೆ ಮಹಿಳೆಯರು ಆರತಿ ಮಾಡಿದ್ದಾರೆ. ಈ ಸಂಗತಿ‌ ಗಮನಿಸದೇ ಜೆಸಿಬಿಯಿಂದ ಶಿವರಾಜ್ ಮೇಲೆ ಗುಲಾಲ್ ಸುರಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಹಲವು ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಬೆಂಕಿ ಹೊತ್ತಿಕೊಂಡ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್‌‌ನಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಚಂದಘಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ರಾಜಾಜಿನಗರದಲ್ಲಿ ಅಗ್ನಿ ಅವಗಢ; ಧಗಧಗನೆ ಉರಿದ ಎಲೆಕ್ಟ್ರಿಕ್‌ ಶೋ ರೂಮ್‌, ಯುವತಿ ಸಜೀವ ದಹನ

ಬೆಂಗಳೂರು: ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿ ಮಂಗಳವಾರ ಅಗ್ನಿ ಅವಗಢ ಸಂಭವಿಸಿದ್ದು, ಎಲೆಕ್ಟ್ರಿಕ್‌ ಶೋ ರೂಮ್‌ ಧಗಧಗನೆ ಉರಿದ ಘಟನೆ ನ.19 ರಂದು ನಡೆದಿತ್ತು. 

ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ. ಎಲೆಕ್ಟ್ರಿಕ್ ಬೈಕ್ ಶೂ ರೂಂ ನಲ್ಲಿ ಅಗ್ನಿ ಅವಘಡ ನಡೆದಿದ್ದು, 20 ವರ್ಷದ ಪ್ರಿಯಾ ಎನ್ನುವ ಸಿಬ್ಬಂದಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಳು. ಎಲೆಕ್ಟ್ರಿಕ್ ಬೈಕ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಬೆನ್ನಲ್ಲಿಯೇ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿತ್ತು. ಬೈಕ್ ಹೊತ್ತಿ ಉರಿದ ಪರಿಣಾಮ ಶೋ ರೂಮ್‌ ಧಗಧಗನೆ ಉರಿಯುತ್ತಿರುವ ವಿಡಿಯೋ ವೈರಲ್‌ ಆಗಿದೆ. 

ಶೋ ರೂಂ ಒಳಗೆ ಒಬ್ಬ ಯುವತಿ ಸಿಲುಕಿದ್ದು ಆಕೆಯನ್ನು ಹೊರತರುವ ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಿಲ್ಲ. ಇದರಿಂದಾಗಿ ಸ್ಥಳಕ್ಕೆ ಆಂಬ್ಯುಲೆನ್ಸ್ ಕೂಡ ಕರೆಸಿಕೊಳ್ಳಲಾಗಿತ್ತು. ಬೆಂಕಿಗಾಹುತಿಯಾದ ಯುವತಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಕಾರ್ಯಾಚರಣೆ ವೇಳೆಯಲ್ಲಿಯೇ ಸಿಬ್ಬಂದಿ ತಿಳಿಸಿದ್ದರು. 20 ವರ್ಷದ ಪ್ರಿಯಾ ಶೋ ರೂಮ್‌ನಲ್ಲಿ ಬೈಕ್‌ ಸೇಲ್ಸ್ ಗರ್ಲ್‌ ಹಾಗೂ ರಿಸಪ್ಶನಿಸ್ಟ್‌  ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್‌‌ನಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಚಂದಘಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಬೈ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ, ಪ್ರಯಾಣಿಕರ ಸೇವೆ ತಾತ್ಕಾಲಿಕ ಸ್ಥಗಿತ!

ರಾಜಾಜಿನಗರದಲ್ಲಿರುವ ಮೈ ಇವಿ ಶೋರೂಂನಲ್ಲಿ ಪ್ರಿಯಾ ಕೆಲಸ ಮಾಡುತ್ತಿದ್ದಳು. ಮಂಗಳವಾರ ಸಂಜೆಯ ವೇಳೆಗೆ ಅವಗಢ ಸಂಭವಿಸಿದೆ. ಎಲೆಕ್ಟ್ರಿಕ್‌ ಬೈಕ್‌ ಒಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದ್ದರಿಂದ ಅಗ್ನಿ ಅವಗಢ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡ ರಭಸಕ್ಕೆ ಶೋ ರೂಮ್‌ನಲ್ಲಿದ್ದ ಎಲ್ಲಾ ಬೈಕ್‌ಗಳು ಭಸ್ಮವಾಗಿದೆ.

73 ಎಲೆಕ್ಟ್ರಿಕ್ ಬೈಕ್ ಗಳು ಬೆಂಕಿಗಾಹುತಿಯಾಗಿದೆ. 23 ವರ್ಷದ ಪ್ರಿಯಾ ಎಂಬಾಕೆಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂಜೆ 5.30 ಕ್ಕೆ ಇವಿ ಬೈಕ್ ಶೋ ರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಸಿಬ್ಬಂದಿಗಳೆಲ್ಲ ಹೊರ ಬಂದಿದ್ದರು. ಆದರೆ, ಪ್ರಿಯಾ ಮಾತ್ರ ಶೋ ರೂಮ್‌ ಒಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕದ ದಳದ ಸಿಬ್ಬಂದಿಗೆ ಕರೆ ಮಾಡಿದ್ದರು. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಪ್ರಿಯಾ ಸುಟ್ಟು ಕರಕಲಾಗಿದ್ದಾಳೆ.

click me!