JDS ಕಾರ್ಯಕರ್ತ ಹತ್ಯೆ: ಅಂತಿಮ ದರ್ಶನ ವೇಳೆ ಕುಮಾರಸ್ವಾಮಿ ಕಣ್ಣೀರು

By Web Desk  |  First Published Dec 25, 2018, 4:44 PM IST

ಮಂಡ್ಯ ಜಿಲ್ಲೆಯ ತೊಪ್ಪನಹಳ್ಳಿ ಗ್ರಾಮಕ್ಕೆ ತೆರಳಿ ಹತ್ಯೆಯಾದ ಜೆಡಿಎಸ್ ಕಾರ್ಯಕರ್ತ​ ಪ್ರಕಾಶ್ ಅಂತಿಮ ದರ್ಶನ ಪಡೆದಿದ್ದು, ಮಾಧ್ಯಮಗಳ ಜೊತೆ ಪ್ರಕಾಶ್ ಬಗ್ಗೆ ಮಾತನಾಡಲು ಬಂದ ಸಿಎಂ ಮಾತಿಗೂ ಮುಂಚೆ ಭಾವುಕರಾದರು. 


ಮಂಡ್ಯ, [ಡಿ.25]: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ತೊಪ್ಪನಹಳ್ಳಿ ಗ್ರಾಮಕ್ಕೆ ತೆರಳಿ ಹತ್ಯೆಯಾದ ಜೆಡಿಎಸ್ ಕಾರ್ಯಕರ್ತ​ ಪ್ರಕಾಶ್ ಅಂತಿಮ ದರ್ಶನ ಪಡೆದರು.

 ಬಳಿಕ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ  ಪ್ರಕಾಶ್ ಅಗಲಿಕೆ ನೆನೆದು ಸಿಎಂ ಕಣ್ಣೀರು ಹಾಕಿದರು.ಪ್ರಕಾಶ್ ವ್ಯಕ್ತಿತ್ವ ಜನರಿಗೆ ಗೊತ್ತಿದೆ. ನಮ್ಮ‌ ಪಕ್ಷದ ಕಾರ್ಯಕರ್ತ ಅನ್ನೋದಕ್ಕಿಂತ ಪ್ರಕಾಶ್ ಜನಪರ ಕಾಳಜಿವುಳ್ಳ ವ್ಯಕ್ತಿಯಾಗಿದ್ರು. ಇಂತಹ ವ್ಯಕ್ತಿಯನ್ನು ಕಳೆದುಕೊಂಡು ನನಗೆ ನೋವಾಗಿದೆ ಎಂದು ಭಾವುಕರಾದರು.

Latest Videos

undefined

ಮಂಡ್ಯ JDS​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

ಎರಡು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಜೋಡಿ ಹತ್ಯೆಯಾದಾಗ .ನಾನು ಈ ಗ್ರಾಮಕ್ಕೆ ಬಂದಿದ್ದೆ. ಆಗ ಪ್ರಕಾಶ್ ಕೊಲೆಯಾದ ವ್ಯಕ್ತಿಗಳ ಕುಟುಂಬದ ಪರ ನಿಂತಿದ್ದ. ಅದೇ ಕಾರಣ ಇವತ್ತು ಪ್ರಕಾಶ್ ಕೊಲೆಯಾಗಲು ಕಾರಣ ಅನ್ಸತ್ತೆ ಅವತ್ತು ಕೊಲೆ ಮಾಡಿದವ್ರೆ ಇಂದು ಪ್ರಕಾಶ್ ಹತ್ಯೆ ಮಾಡಿದ್ದಾರೆ ಅನ್ನೋ‌ ಮಾಹಿತಿ ಇದೆ ಎಂದರು.

ನಿನ್ನೆ ನಾನು ಬಿಜಾಪುರದಲ್ಲಿದ್ದಾಗ ಪ್ರಕಾಶ್ ಸಾವಿನ ಸುದ್ದಿ ಬಂತು. ಆಗ ಮನಸ್ಸಿಗೆ ಅಘಾತವಾಗಿ ಉದ್ವೇಗದಿಂದ ಹಂತಕರನ್ನು ಶೂಟೌಟ್ ಮಾಡಿ ಎಂದಿದ್ದೆ. ನಾನು ಮುಖ್ಯಮಂತ್ರಿಯಾಗಿ ಆ ಮಾತು ಹೇಳಲಿಲ್ಲ ಪ್ರಜೆಯಾಗಿ ಆ ಮಾತು ಹೇಳಿದೆ.

ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಪ್ರಜೆಯಾಗಿ ಬಹಳ ನೋವಿನಿಂದ ಈ ಮಾತು ಹೇಳ್ತಿದ್ದೀನಿ. ಯಾಕಂದ್ರೆ ಕೊಲೆಮಾಡುವ ಹಂತಕರು ಬೇಲ್ ಮೇಲೆ ಆಚೆ ಬರ್ತಾರೆ ಎಂದು ಭಾವುಕರಾಗಿ ಮಾತನಾಡಿದರು.

ಬೇರೆ ಪಕ್ಷದ ಕಾರ್ಯಕರ್ತ ಹತ್ಯೆಯಾಗಿದ್ರೆ ಸಿಎಂ ಶೂಟೌಟ್ ಅಂತಿದ್ರಾ?

ಶೂಟೌಟ್ ಹೇಳಿಕೆಯನ್ನು ಬಿಜೆಪಿಯವರು ನಮ್ಮ‌ ಕಾರ್ಯಕರ್ತರು ಸತ್ತರೆ ಈ ಕಾಳಜಿ‌ ಇರಲ್ಲ ಅಂತಾರೆ. ಆದ್ರೆ ನನಗೆ ಯಾರ ಹತ್ಯೆಯಾದಾಗಲು ಮನಸ್ಸು ತಡೆಯಲ್ಲ. ನನ್ನ ಆಡಳಿತ ಅವಧಿಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು ಭಾವನಾತ್ಮಕವಾಗಿ ಹೇಳಿದರು.

ಈ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. ಕುಟುಂಬಸ್ಥರಿಗೆ ನೋವಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಕಾಶ್ ಗೆ ಸಂತಾಪ ಸೂಚಿಸಿದರು.

click me!